ಪ್ರಚಲಿತ

ಹಿಂದೂ ದೇವರ ಹೆಸರಿಟ್ಟುಕೊಂಡು, ಹಿಂದೂ ಧರ್ಮವನ್ನೇ ಅವಮಾನಿಸಿದರಾ ಕೈ ನಾಯಕ ಪರಮೇಶ್ವರ್

ಹೆಸರು ಪರಮೇಶ್ವರ, ಆದರೆ ಮಾಡುವುದೆಲ್ಲಾ ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ ಮೂಲಕ ಅಪಚಾರ. ಅದೇ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಅಪಾರ. ಅವರ ಓಲೈಕೆಗೆಂದು ಹಿಂದೂಗಳ ಮೇಲೆ ಮಾಡುತ್ತಾರೆ ದುರಾಚಾರ. ಹೌದು, ಇದು ಕಾಂಗ್ರೆಸ್ ನಾಯಕರ ಸದ್ಯದ ಸ್ಥಿತಿ.

ಮತ ಬ್ಯಾಂಕ್‌ಗಾಗಿ ಚುನಾವಣಾ ಸಮಯದಲ್ಲಿ ಹಿಂದೂಗಳನ್ನು ತುಳಿದಿದ್ದಾಯಿತು. ಹಿಂದೂಗಳ ಮೇಲೆ ಸವಾರಿ ಮಾಡಿ, ಅಲ್ಪಸಂಖ್ಯಾತ ವರ್ಗದ ಉದ್ಧಾರಕ್ಕೆ ಕ್ರಮಗಳನ್ನು ತೆಗೆದುಕೊಂಡಾಯಿತು. ಹಿಂದೂ ದೇವಾಲಯಗಳ ಮೇಲೆ ಸವಾರಿ, ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗಾಗಿ ಹಣದ ಹೊಳೆಯನ್ನು ಹರಿಸುವ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ನಾಯಕರು ಮಾಡಿ ಆಯಿತು. ಇಷ್ಟಾದರೂ ನೆಮ್ಮದಿ ಕಾಣದ ಕಾಂಗ್ರೆಸ್ ನಾಯಕ, ಗೃಹ ಸಚಿವ ಪರಮೇಶ್ವರ್ ಹಿಂದೂ ವಿರೋಧಿ ಹೇಳಿಕೆ ನೀಡುವ ಮೂಲಕ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ಕೆಣಕುವ ಮಾನಸಿಕ ಅಸ್ವಸ್ಥತೆ ಹಲವು ಕಾಂಗ್ರೆಸ್ ನಾಯಕರಿಗೆ ಇದೆ. ಆ ಸಾಲಿಗೆ ಪರಮೇಶ್ವರ್ ಸಹ ಸೇರಿದ್ದಾರೆ. ‘ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಅದನ್ನು ಹುಟ್ಟಿಸಿದರು’ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ ಎನ್ನುವ ಮೂಲಕ ಹಿಂದೂ ಧರ್ಮದ ಅಸ್ತಿತ್ವವನ್ನು, ಒಬ್ಬ ಹಿಂದೂ ಧರ್ಮೀಯನಾಗಿಯೇ ಪ್ರಶ್ನೆ ಮಾಡುವ, ಆ ಮೂಲಕ ಮಾತೃ ಧರ್ಮಕ್ಕೆ ಅಪಾರ ಎಸಗುವ ಕೆಲಸವನ್ನು ಜಿ. ಪರಮೇಶ್ವರ್ ಮಾಡಿದ್ದು, ಆ ಮೂಲಕ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ.

ಜಗತ್ತಿನ ಇತಿಹಾಸದಲ್ಲಿ ಹಲವಾರು ಧರ್ಮಗಳು ಹುಟ್ಟಿಕೊಂಡಿವೆ. ಇವೆಲ್ಲದದರಲ್ಲಿಯೂ ಹಿಂದೂ ಧರ್ಮವನ್ನು ಯಾರು, ಯಾವಾಗ ಹುಟ್ಟಿಸಿದರು ಎನ್ನುವುದು ಇನ್ನೂ ಪ್ರಶ್ನಾರ್ಥಕವಾಗಿಯೇ ಇದೆ. ಈ ಸಂದೇಹಕ್ಕೆ ಇನ್ನೂ ಉತ್ತರ ದೊರೆತಿಲ್ಲ ಎನ್ನುವ ಮೂಲಕ ಹಿಂದೂ ಧರ್ಮದ ಬುಡಕ್ಕೆ ಕೈ ಹಾಕುವ ಕಾರ್ಯ ಮಾಡಿದ್ದಾರೆ. ಹಿಂದೂ ಧರ್ಮೀಯರನ್ನು ಕೆರಳಿಸುವ ಮತ್ತು ಇತರ ಹಿಂದೂ ದ್ವೇಷಿಗಳನ್ನು ಓಲೈಕೆ ಮಾಡುವ ಕಾರ್ಯವನ್ನು ಮಾಡಿರುವ ಗೃಹ ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಭಾರತದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಹುಟ್ಟಿರುವುದಕ್ಕೆ ಪುರಾವೆಗಳಿವೆ. ಅದರಂತೆಯೇ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಹೊರ ದೇಶಗಳಿಂದ ಭಾರತಕ್ಕೆ ಬಂದಿರುವುದಕ್ಕೂ ಸಾಕ್ಷಿ ಇದೆ. ಆದರೆ ಹಿಂದೂ ಧರ್ಮದ ಹುಟ್ಟು, ಅದನ್ನು ಹುಟ್ಟಿಸಿದವರು ಯಾರು ಎನ್ನುವುದಕ್ಕೆ ಉತ್ತರ ಇಲ್ಲ ಎನ್ನುವ ಮೂಲಕ ಜಿ. ಪರಮೇಶ್ವರ್ ಉದ್ದಟತನ ಮೆರೆದಿದ್ದಾರೆ.

ಇತರ ಧರ್ಮಗಳ ಓಲೈಕೆಗಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುವುದರಲ್ಲಿ ಕೆಲವು ಹಿಂದೂಗಳೇ ಎತ್ತಿದ ಕೈ. ಮಾತೃ ಧರ್ಮವನ್ನು ಟೀಕಿಸಿ, ಅವಹೇಳನ ಮಾಡಿ ಬೇರೆಯವನ್ನು ಓಲೈಕೆ ಮಾಡುವ ಇಂತಹ ಎಡಚರ ಎಡಬಿಡಂಗಿಗಳಿಂದಲೇ ಹಿಂದೂ ಧರ್ಮದ ಮೇಲೆ ಇತರರು ಸವಾರಿ ಮಾಡುವಂತಾಗಿರುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದೂ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡಿದಂತೆಯೇ ಎಲ್ಲಾದರೂ ಇತರ ಧರ್ಮಗಳ ವಿರುದ್ಧ ಹೇಳಿಕೆ ನೀಡಿದಲ್ಲಿ ಪರಮೇಶ್ವರ್ ಎನ್ನುವ ವ್ಯಕ್ತಿ ಇತಿಹಾಸವಾಗುತ್ತಿದ್ದರು ಎನ್ನುವುದು ಪರಮ ಸತ್ಯ.

ಹಿಂದೂ ಧರ್ಮೀಯರು ಸಹಿಷ್ಣುಗಳು. ಅವರನ್ನು ಏನೇ ಹೇಳಿದರೂ, ಕೆಣಕಿದರೂ ಸುಮ್ಮನಿರುತ್ತಾರೆ ಎನ್ನುವ ಅರಿವಿರುವುದರಿಂದಲೇ ಪರಮೇಶ್ವರ್ ಅಂತಹ ಹುಳುಗಳ ಸಂಖ್ಯೆ ಹೆಚ್ಚುತ್ತಿರುವುದು. ಹಿಂದೂ ಧರ್ಮದ ಬಗ್ಗೆ ಅಪಪ್ರಚಾರವಾಗುತ್ತಿರುವುದು. ಕೇವಲ ಓಟ್‌ಬ್ಯಾಂಕ್‌ಗಾಗಿ ಮಾತೃ ಧರ್ಮವನ್ನೇ ಅವಮಾನಿಸುವ ಪರಮೇಶ್ವರ್ ಅಂತಹವರು ಹಿಂದೂ ಧರ್ಮದಲ್ಲಿರುವುದು ನಮ್ಮೆಲ್ಲರಿಗೂ ಅವಮಾನವೇ ಸರಿ‌.

Tags

Related Articles

Close