ಪ್ರಚಲಿತ

ಕಾಂಗ್ರೆಸ್, ಎಸ್‌ಪಿ ಮೈತ್ರಿ ಬಗ್ಗೆ ಸಿಎಂ ಯೋಗೀಜಿ ಕಿಡಿ ನುಡಿ

ಬಿಜೆಪಿ ರಾಷ್ಟ್ರ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಪಕ್ಷ. ಭಯೋತ್ಪಾದನೆ, ಹಿಂಸಾಚಾರ, ಅಕ್ರಮ ಚಟುವಟಿಕೆಗಳು, ನಕ್ಸಲಿಸಂ, ಹಿಂಸಾಚಾರದ ವಿರುದ್ಧ ಬಿಜೆಪಿ ತನ್ನ ಆಕ್ರೋಶವನ್ನು ಹೊರ ಹಾಕುತ್ತಲೇ ಇರುತ್ತದೆ. ಜೊತೆಗೆ ದೇಶ ವಿರೋಧಿ ಕೃತ್ಯಗಳನ್ನು ನಡೆಸುವವರು, ದೇಶ ವಿರೋಧಿಗಳಿಗೆ ನೆರವು ನೀಡುವ ದುರುಳರ ವಿರುದ್ಧ ಸಹ ಬಿಜೆಪಿ ಕಿಡಿ ಕಾರುತ್ತಿರುತ್ತದೆ.

ದೇಶದ ಹಲವು ಪಕ್ಷಗಳು ದೇಶ ವಿರೋಧಿಗಳಿಗೆ, ದೇಶ ವಿರೋಧಿ ಕೃತ್ಯಗಳನ್ನು ನಡೆಸುವವರಿಗೆ ನೆರವಾಗುವುದು, ಅವರ ಪರ ತಮ್ಮ ನಿಲುವನ್ನು ಪ್ರಕಟಿಸುವ ಕೆಲಸವನ್ನು ಮಾಡುತ್ತವೆ. ಆದರೆ ಬಿಜೆಪಿ ಇಂತಹ ದೇಶ ವಿರೋಧಿಗಳು ಮತ್ತು ದೇಶ ದ್ರೋಹದ ಕೆಲಸಗಳನ್ನು ವಿರೋಧಿಸುತ್ತಲೇ ಬಂದಿದೆ. ಸದೃಢ ದೇಶ ನಿರ್ಮಾಣದ ಸಂಕಲ್ಪದ ಜೊತೆಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನಬಹುದು.

ಕಾಂಗ್ರೆಸ್ ದೇಶದ ಹಳೆಯ ಪಕ್ಷವಾಗಿದ್ದರೂ ಅದರ ನಾಯಕರು ದೇಶದ ವಿರುದ್ಧ ಷಡ್ಯಂತ್ರ ರೂಪಿಸುವ ನಾಲಾಯಕುಗಳ ಜೊತೆಗೆ ಕೈ ಜೋಡಿಸಿ, ದೇಶಕ್ಕೆ ಹಾನಿಯಾಗುವಂತಹ ಕಾರ್ಯಗಳನ್ನು ನಡೆಸುತ್ತಿರುತ್ತಾರೆ. ದೇಶದ ಜನರಿಗೆ ಅನ್ಯಾಯವಾದರೂ ಚಿಂತೆಯಿಲ್ಲ. ಆದರೆ ತಾವು ಮಾತ್ರ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಬೇಕು ಎನ್ನುವ ನಿರ್ಧಾರದ ಜೊತೆಗೆ ದೇಶ ವಿರೋಧಿ ಕುಕೃತ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗುರುತಿಸಿಕೊಳ್ಳುತ್ತಿರುವುದು ದುರಂತವೇ ಹೌದು.

ದೇಶ ವಿರೋಧಿ ಎಸ್‌ಪಿ ಮತ್ತು ಕಾಂಗ್ರೆಸ್ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಮಾತನಾಡಿದ್ದು, ಈ ಎರಡೂ ಪಕ್ಷಗಳು ಭಯೋತ್ಪಾದಕರ ಮಾಸ್ಟರ್ಸ್ ಎಂದು ಹೇಳಿದ್ದಾರೆ. ಮಾಫಿಯಾದ ಪೋಷಕರು ಎನ್ನುವ ಹಣೆಪಟ್ಟಿಯನ್ನು ಸಹ ಈ ಎರಡು ಪಕ್ಷಗಳಿಗೆ ನೀಡಿದ್ದಾರೆ.

2017 ಕ್ಕೂ ಮೊದಲು ಅಪರಾಧಿಗಳು, ಕ್ರಿಮಿನಲ್‌ಗಳು ಸಾರ್ವಜನಿಕರನ್ನು ಶೋಷಣೆ ಮಾಡುತ್ತಿದ್ದರು‌. ಹಣ ಸುಲಿಗೆ ಮಾಡುವ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರುಗಳನ್ನು ಕಾಂಗ್ರೆಸ್, ಎಸ್‌ಪಿ ಪೋಷಣೆ ಮಾಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

ಎಸ್‌ಪಿ ಮತ್ತು ಕಾಂಗ್ರೆಸ್ ಈ ಎರಡೂ ಪಕ್ಷಗಳ ಮೈತ್ರಿಯ ಕಾರಣಕ್ಕೆ ಅನಾಹುತಗಳು ಸಂಭವಿಸುತ್ತಿವೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ, ರಾಜ್ಯದಲ್ಲಿ ಎಸ್‌ಪಿ ಅಧಿಕಾರದಲ್ಲಿ ಇದ್ದಾಗ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ, ಕಾಶಿಯ ಸಂಕಷ್ಟ ಮೋಚನ್, ಅಯೋಧ್ಯೆ, ಲಕ್ನೋ ಮತ್ತು ವಾರಣಾಸಿ ನ್ಯಾಯಾಲಯಗಳ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ರಾಜ್ಯದ ಪ್ರತಿಯೊಬ್ಬ ಮಾಫಿಯಾ ಸದಸ್ಯರು ಸಹ ಎಸ್‌ಪಿಯ ಜೊತೆಗೆ ನಂಟು ಹೊಂದಿದ್ದಾರೆ. ಎಸ್‌ಪಿ ಸಹಾನುಭೂತಿ ಮಾಫಿಯಾ ಸದಸ್ಯರ ಮೇಲೆಯೇ ಹೊರತು ಮಹಿಳೆಯರು ಮತ್ತು ಉದ್ಯಮಿಗಳ ಮೇಲೆ ಅಲ್ಲ ಎಂದು ಅವರು ನುಡಿದಿದ್ದಾರೆ.

Tags

Related Articles

Close