ಪ್ರಚಲಿತ

ಶಿಕ್ಷಣದಲ್ಲೂ ಧರ್ಮ ಹುಡುಕಿತಾ ಕಾಂಗ್ರೆಸ್: ಕೈ ಕರ್ಮಕಾಂಡಕ್ಕೆ ಇಲ್ಲಿದೆ ಸಾಕ್ಷಿ

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ. ಸರ್ವ ಧರ್ಮಗಳ ಜನರು, ಎಲ್ಲಾ ಜಾತಿಗಳ ಜನರು ಇಲ್ಲಿ ಶಾಂತಿ ನೆಮ್ಮದೆಯಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಕಾಂಗ್ರೆಸ್‌ನಂತಹ ಕೆಲವು ರಾಜಕೀಯ ಪಕ್ಷಗಳು ಜನರನ್ನು ಧರ್ಮದ ಆಧಾರದಲ್ಲಿ, ಜಾತಿಯ ಆಧಾರದಲ್ಲಿ ಬೇರ್ಪಡಿಸಲು ಪ್ರಯತ್ನ ಮಾಡುತ್ತಿರುವುದು ದುರಂತ.

ಕೆಲ ಸಮಯದ ಹಿಂದಷ್ಟೇ ದೇಶದಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಾರಂಭಿಸಿವೆ. ಈ‌ಚುನಾವಣೆಗೂ ಮೊದಲು ಎಲ್ಲಾ ಪಕ್ಷಗಳು ತಮಗೆ ಅಧಿಕಾರ ಸಿಕ್ಕಲ್ಲಿ ನಾವು ಏನನ್ನೆಲ್ಲಾ ಮಾಡುತ್ತೇವೆ?, ನಮ್ಮಿಂದ ಏನೆಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಬಹುದು ಎನ್ನುವ ಭರವಸೆಗಳನ್ನು ‘ಪ್ರಣಾಳಿಕೆಯ’ ಹೆಸರಿನಲ್ಲಿ ನೀಡಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಭಾರತೀಯ ಜನತಾ ಪಕ್ಷ ದೇಶದ ಅಭಿವೃದ್ಧಿಯ ಹಿನ್ನಲೆಯಲ್ಲಿ ತಮಗೆ ಅಧಿಕಾರ ದೊರೆತಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳುವ ಮೂಲಕ ಸಕಾರಾತ್ಮಕ ದಾರಿಯಲ್ಲಿ ಜನರಿಂದ ಮತ ಪಡೆಯುವ ದೃಷ್ಟಿಯಿಂದ ಪ್ರಣಾಳಿಕೆ ಪ್ರಕಟಿಸಿತು.

ಆದರೆ ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಪ್ರಣಾಳಿಕೆಯ ತುಂಬಾ ಅಲ್ಪಸಂಖ್ಯಾತರ ಓಲೈಕೆಯ ಬಗೆಗೆಯೇ ಭರವಸೆ ನೀಡಿತ್ತು. ಅಲ್ಪಸಂಖ್ಯಾತ ಮು#ಸಲ್ಮಾನ ಓಲೈಕೆಯ ನಡುವೆ, ಅವರಿಗೆ ಮೀಸಲಾತಿ ಕಲ್ಪಿಸಿ ಕೊಡುವ ಹಿನ್ನಲೆಯಲ್ಲಿ ಬಹು ಸಂಖ್ಯಾತರನ್ನು ಮೂಲೆಗುಂಪು ಮಾಡಿತ್ತು. ಮಾತ್ರವಲ್ಲದೆ, ಹಿಂದೂಗಳಲ್ಲಿ ಹಿಂದುಳಿದ ವರ್ಗಗಳು, ಎಸ್‌ಸಿ, ಎಸ್‌ಟಿ ವರ್ಗದ ಜನರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿತ್ತು. ಆ ಮೂಲಕ ತಮ್ಮ ಹಿಂದೂ ವಿರೋಧಿ ನೀತಿಯನ್ನು ಜಗತ್ತಿನ ಎದುರು ತೆರೆದಿಟ್ಟಿತ್ತು.

ಇಂತಹ ಒಡೆದು ಆಳುವ ನೀತಿಯನ್ನು ಹೊಂದಿದ ಕಾಂಗ್ರೆಸ್ ಪಕ್ಷ ಮತ್ತು ಇತರ ಇಂಡಿ ಒಕ್ಕೂಟದ ಸ್ನೇಹಿತ ರಾಷ್ಟ್ಕಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ತರತಮ. ನೀತಿಯ‌ ವಿರುದ್ಧ ಅವರು ಕೆಂಡಕಾರಿರುವುದಾಗಿದೆ. ದೆಹಲಿಯ ಜಾಮಿಯಾ ಮಿಲಿಯಾ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈ ಮೊದಲು ದಲಿತರಿಗೆ, ಹಿಂದುಳಿದ ವರ್ಗಗಳಿಗೆ,‌ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯುತ್ತಿತ್ತು. ಆದರೆ ಕಾಂಗ್ರೆಸ್ ಅದಕ್ಕೆ ಕಲ್ಲು ಹಾಕಿದೆ ಎಂದು ಹೇಳಿದ್ದಾರೆ.

2011 ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಜಾಮಿಯಾ ಮಿಲಿಯಾ ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಮಅಲ್ಪಸಂಖ್ಯಾತ ವರ್ಗದ ಶಿಕ್ಷಣ ಸಂಸ್ಥೆ ಎಂದು ಘೋಷಿಸಿತು. ಅಲ್ಲಿ 50% ಗಳಷ್ಟು ಮೀಸಲಾತಿಯನ್ನು ಮುಸಲ್ಮಾನರಿಗೆ ಮೀಸಲಿಡುತ್ತಿದೆ. 2011 ರ ಮೊದಲು ಎಲ್ಲಾ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಆ ವಿ ವಿ ಯಲ್ಲಿ ದೊರೆಯುತ್ತಿತ್ತು. ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಮಲಿನಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ದೇಶದ ಮುಸಲ್ಮಾನರನ್ನು ತನ್ನ ಸಿದ್ಧಾಂತ, ತನ್ನ ದೇಶ ವಿರೋಧಿ ಸಂಚಿನ ದಾಳವಾಗಿ ಬಳಕೆ ಮಾಡುತ್ತಿದ್ದು, ಆ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುವ, ಹಿಂಸಾಚಾರ ನಡೆಸುವ ತನ್ನ ಗುರಿಯನ್ನು ಸಾಧಿಸುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಸಹ ಧರ್ಮದ ಆಧಾರದಲ್ಲಿ ಒಡೆಯಲು ನಿರ್ಧಾರ ಮಾಡಿರುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ಹಿಂದೂ ವಿರೋಧಿ ನೀತಿಗಳ ಮೂಲಕ ಅನ್ಯಾಯ ಎಸಗುತ್ತಿದ್ದು, ಮನೆಹಾಳು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಮೂಲಕವೇ ಜನರು ತಕ್ಕ ಶಾಸ್ತಿ ಮಾಡಬೇಕಿದೆ.

Tags

Related Articles

Close