ಪ್ರಚಲಿತ

ಹಿಂದೂಗಳಿಗೆ ಮಾತಿನಿಂದಲ್ಲ, ಒದ್ದು ಬುದ್ದಿ ಹೇಳಬೇಕು! ಪಾಕಿಸ್ತಾನದ ನಾಯಕನೊಬ್ಬ ಹಾಕಿದ ಪೋಸ್ಟರ್ ಇದು!

ಪಾಕಿಸ್ತಾನದ ರಾಜಕೀಯ ಪಕ್ಷದ ನಾಯಕನೊಬ್ಬ ಹಿಂದೂ ವಿರೋಧಿ ಅವಹೇಳನಕಾರಿ ಪೋಸ್ಟರ್ ನ ವಿವಾದದಲ್ಲಿ ಸಿಲುಕಿದ್ದಾರೆ. ಜಾಲತಾಣಗಳಲ್ಲಿ ಆ ಪೋಸ್ಟರ್‌ ಅನ್ನು ಹರಿಬಿಟ್ಟಾಗ, ತೀವ್ರ ಖಂಡನೆ ವ್ಯಕ್ತವಾದಾಗ, ,”ನನಗೆ ತಪ್ಪಿನ ಅರಿವಾಗಿದೆ” ಎಂದು ಕ್ಷಮೆಯನ್ನೂ ಯಾಚಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದವು!

ಪಾಕಿಸ್ತಾನ ಕ್ಷಮೆಯಾಚಿಸುವ ವಿಷಯ ಯಾಕೋ ನಂಬಲರ್ಹ ಎನಿಸುವುದಿಲ್ಲ ಅಲ್ಲವೇ?! ಸತ್ಯ ವಿಷಯ ಸ್ವಲ್ಪ ವಿಭಿನ್ನವಾಗಿದೆ.

ಪಾಕಿಸ್ತಾನದಲ್ಲಿ ಆಯೋಜಿಸಲಾದ “ಕಾಶ್ಮೀರ ಏಕತಾ ದಿನ” ದ ಸಂದರ್ಭದಲ್ಲಿ ಈಗ ಅಧಿಕಾರ ಹೊಂದಿರುವ ಪಕ್ಷ ” ತಾರೀಕ್ ಏ ಇನ್ಸಾಫ್”( ಪಿಟಿಐ) ನ ಮಹಾಸಚಿವ ಅಕ್ರಮ್ ಉಸ್ಮಾನ್ ರ ಒಂದು ಹಿಂದೂ ವಿರೋಧಿ ಪೋಸ್ಟರ್ ಹಾಕಲಾಗಿತ್ತು. ಅದರಲ್ಲಿ ಹಿಂದೂಗಳು ಬಾತ್ ಸೆ ನಹೀ ಲಾತ್ ಸೆ ಮಾನತೇ(ಹಿಂದೂಗಳು ಮಾತಿನಿಂದ ಅಲ್ಲ ಏಟಿನಿಂದ ಹೇಳಿದ ಹಾಗೆ ಕೇಳುತ್ತಾರೆ) ಎಂದು ಬರೆದಿತ್ತು.

ಇದೇ ಪೋಸ್ಟರ್ ಜಾಲತಾಣಗಳಲ್ಲಿ ಹರಿದಾಡಿ, ಇದರ ಬಗ್ಗೆ ವ್ಯಾಪಕ ಚರ್ಚೆಗಳು ಉಂಟಾದವು. ಆಗ ಅಕ್ರಮ್ ಟ್ವಿಟರ್‌ನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾ, “ಪ್ರಿಂಟರ್ ನಲ್ಲಿ ಏನೋ ತೊಂದರೆಯಾಗಿ ಮೋದಿಯ ಬದಲು ಹಿಂದೂ ಎಂದು ತಪ್ಪಾಗಿ ಬರೆಯಲಾಗಿದೆ. ನಾನು ಎರಡೂ ದೇಶದ ಶಾಂತಿಯುತವಾಗಿ ನೆಲೆಸಿರುವ ಎಲ್ಲಾ ಹಿಂದೂಗಳಲ್ಲಿ ಕ್ಷಮೆ ಯಾಚಿಸುತ್ತೇನೆ.” ಎಂದು ಹೇಳಿದರು.

ಅವರ ಮಾತಿನ ಅರ್ಥವೇನು?! ಹಿಂದೂ ಬದಲಾಗಿ ಮೋದಿ ಇರಬೇಕಿತ್ತು ಎಂದರೇನು ಅರ್ಥ?! ನಮ್ಮ ದೇಶದ ಚುನಾಯಿತ ಪ್ರಧಾನಿ ಬಗ್ಗೆ ಹಾಗೊಂದು ಪೋಸ್ಟರ್ ಹಾಕು ಮನಸ್ಸು ಅವರದ್ದು ಎಂದಾದರೆ ಅದು ನಮ್ಮ ದೇಶಕ್ಕೆ ಹಾಗೂ ಹಿಂದೂಗಳಿಗೆ ಮಾಡಿದ ಅಪಮಾನವಲ್ಲವೆ?! ಇದು ಯಾವ ರೀತಿಯ ಕ್ಷಮೆಯಾಚನೆ?!

ಜಾಲತಾಣಗಳಲ್ಲಿ ಹಿಂದೂ ದ್ವೇಷ ತುಂಬಿದ ವಿರೋಧಿ ಪೋಸ್ಟರ್‌ಗಳನ್ನು ಪ್ರತಿ ದಿನ ಸಾಕಷ್ಟು ನಾವು ನೋಡುತ್ತೇವೆ. ಶಾಹಿನ್‌ಬಾಗ್‌ ನಂತಹ ಪ್ರತಿಭಟನೆಗಳಲ್ಲಿ ಹಿಂದೂ ವಿರೋಧಿ ಮತ್ತು ಇಸ್ಲಾಮಿಕರಣ ಎಂಬ ಅಸ್ತ್ರಗಳನ್ನು ಬಳಸಿ ಸರ್ಕಾರದ ನಿಯಮ ಹಾಗೂ ಕಾಯಿದೆಗಳನ್ನು ಉಲ್ಲಂಘನೆ ಮಾಡಲು ಕಿಡಿಗೇಡಿಗಳು ಪಣ ತೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಇನ್ನೊಂದು ಟ್ವೀಟ್ ಹರಿದಾಡುತ್ತಿದೆ. ಅದರಲ್ಲಿ ಹಿಂದೂಗಳಿಗೆ ಪಾಠ ಕಲಿಸಬೇಕು ಎಂಬ ಸಂದೇಶ ನೀಡುತ್ತಿರುವುದನ್ನು ಕಾಣಬಹುದು. ಈ ಪೋಸ್ಟರ್‌ನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ.

ನೀವೇ ಯೋಚಿಸಿ ದೇಶದ ಈಗಿನ ಪರಿಸ್ಥಿತಿ ಬಗ್ಗೆ! ನಮ್ಮ ದೇಶದಲ್ಲಿ “ಲಾ ಇಲ್ಲಾಹ ಇಲ್ಲಲ್ಲ” ತಾತ್ಪರ್ಯ ನಮ್ಮ ದೇವರು ಬಿಟ್ಟರೆ ಇನ್ನೊಬ್ಬ ದೇವರೇ ಇಲ್ಲ ಎನ್ನುವುದು ಸೆಕ್ಯೂಲರ್, ಅದೇ ಜೈ ಶ್ರಿ ರಾಮ್ ಎಂದು ನಾವು ನಂಬಿದ ದೇವರಿಗೆ ಜೈಟ್ ಕಾರ ಹಾಕಿದರೆ ಅದು ಕೋಮುವಾದ!

ಮೊಹಮ್ಮದ್ ಅಕ್ರಂ ಉಸ್ಮಾನ್ ನ ಆ ಪೋಸ್ಟರ್ ಅನ್ನು ಅನುವಾದಿಸಿದ ವ್ಯಕ್ತಿ ಭಾರತೀಯ ಹಿಂದುವಲ್ಲ ಬದಲಾಗಿ ಆಜಾಕೀಯ ಎಂಬ ಪಾಕಿಸ್ತಾನದ ಒಬ್ಬ ಮಾನವ ಹಕ್ಕು ಕಾರ್ಯಕರ್ತ (ಅವರ ಟ್ವಿಟರ್ ಖಾತೆಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ). ಅವರು ಈ ಪೋಸ್ಟರ್‌ನ್ನು ಅನುವಾದ ಮಾಡುತ್ತ ಈ ರೀತಿ ಬರೆದಿದ್ದಾರೆ, ” ಹಿಂದೂ ಬಾತ್ ಸೆ ನಹೀ , ಲಾತ್ ಸೆ ಮಾನ್‌ತಾ ಹೇ ಮಾನ್ಯ ಅಕ್ರಮ್ ಉಸ್ಮಾನ್, ಜನರಲ್ ಸೆಕ್ರೆಟರಿ PTI , ಲಾಹೋರ್ ” ಎಂದು. ಮೊಹಮ್ಮದ್ ಅಕ್ರಮ್ ಉಸ್ಮಾನ್ ನ ಈ ಪೋಸ್ಟರ್‌ನಲ್ಲಿ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ ಭಾವಚಿತ್ರಗಳನ್ನು ಹಾಕಿದ್ದಾರೆ. ಇದ ರ ಜೊತೆಗೆ ಭಾರತದ ತ್ರಿವರ್ಣ ಧ್ವಜವನ್ನು ಕಾಣಬಹುದು ಅದರಲ್ಲಿ ಕ್ರಾಸ್ ಚಿಹ್ನೆಯನ್ನು ಹಾಕಲಾಗಿದೆ.

ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಹಾಗೂ ಮಾನವ ಹಕ್ಕುಗಳ ಬಗ್ಗೆ ಯಾವಾಗಲೂ ಸವಾಲು ಎದುರಾಗುತ್ತಲೇ ಇದೆ. ಇಷ್ಟೇ ಅಲ್ಲದೇ ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾನೂನು ವಿರೋಧಿ ಪ್ರತಿಭಟನೆಯಲ್ಲಿ ‘ ಜಿನ್ನಾ ವಾಲಿ ಅಜಾ಼ದಿ’ ಎಂದು ಬೊಬ್ಬರಿದವರೂ ಇದ್ದಾರೆ. ಪಾಕಿಸ್ತಾನದಲ್ಲಿ PTI ಪಕ್ಷದ ನಾಯಕನ ಪೋಸ್ಟರ್ ನೋಡಿ ಅಲ್ಲಿ ಹಿಂದೂಗಳ ಜೊತೆಗೆ ಯಾವ ರೀತಿ ನಡೆದು ಕೊಳ್ಳುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.

ಆದರೂ ನಮ್ಮ ಕೆಲವು ಭಾರತೀಯ ನಾಯಕರಿಗೆ ಪಾಕಿಸ್ತಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಇಷ್ಟೆಲ್ಲಾ ವಿಷಯ ಕಂಡು ಅದನ್ನು ಪರಿಗಣಿಸದೇ ಹೋದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ನಮ್ಮ ದೇಶ ಉಳಿಯಬೇಕಾದರೆ ನಾವೆಲ್ಲಾ ಈಗಲೇ ಜಾಗರೂಕರಾಗಿ ಶ್ರಮಿಸೋಣ.ಇಲ್ಲವಾದಲ್ಲಿ ಅಪಾಯ ಎನ್ನುವುದು ಕಟ್ಟಿಟ್ಟ ಬುತ್ತಿ ಹಾಗೂ ಜ್ವಾಲಾಮುಖಿ ಇದ್ದಂತೆ ಯಾವಾಗ ಬೇಕಾದರೂ ಅದು ಸ್ಫೋಟವಾಗಬಹುದು!

Ashwini

Tags

Related Articles

FOR DAILY ALERTS
Close