ಪ್ರಚಲಿತ

ಪಿಣರಾಯಿ ವಿಜಯನ್ ನ ಕೇರಳದಲ್ಲಿ ಮರ್ಯಾದಾ ಹತ್ಯೆ? ಮದುವೆಯಾದ ಮರುಘಳಿಗೆಯೆ ದಲಿತ ಕ್ರೈಸ್ತ ವರನನ್ನು ಅಪಹರಿಸಿ ಹತ್ಯೆಗೈದ ಮೇಲ್ಜಾತಿಯ ಕ್ರೈಸ್ತರು!!

ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಮೇಲೂ ಆತ ದಲಿತನೆ? ತಥಾಕಥಿತ ಕ್ರೈಸ್ತ ‘ಸಹಿಸ್ಣು’ ಮತದಲ್ಲಿ ಮರ್ಯಾದಾ ಹತ್ಯೆಯೆ? ಸಮಾನತೆ ಸಾರುವ ಮತದಲ್ಲಿ ಮೇಲ್ಜಾತಿ-ಕೀಳ್ಜಾತಿ ಬೇಧವೆ? ಪಿಣರಾಯಿ ವಿಜಯನ್ ನಂತಹ ಕಮ್ಮಿನಿಷ್ಟರ ದಕ್ಷ ಆಡಳಿತವಿರುವ, ಪರ್ಕಟ್ ಗಳಿಗೆ ಉಸಿರಾಡಲು ಮುಕ್ತ ವಾತಾವರಣವಿರುವ ದೇಶದ ಏಕೈಕ ಸಹಿಷ್ಣು ರಾಜ್ಯ, ದೇವರ ಭೂಮಿಯಲ್ಲಿ “ಮೇಲ್ಜಾತಿಯ ಕ್ರೈಸ್ತ”ನಿಂದ “ದಲಿತ ಕ್ರೈಸ್ತನ” ಹತ್ಯೆಯೆ? ಏನಾಗ್ತಿದೆ ಕೇರಳದಲ್ಲಿ? #”ಜಸ್ಟ್ ಆಸ್ಕಿಂಗ್” …..

ಕೊಟ್ಟಾಯಂ ನಿವಾಸಿ ಕೆವಿನ್ ಪಿ ಜೋಸೆಫ್, ಎಂಬ “ದಲಿತ ಕ್ರಿಶ್ಚಿಯನ್” ವ್ಯಕ್ತಿಯೊಬ್ಬ “ಉನ್ನತ ಜಾತಿಯ ಕ್ರಿಶ್ಚಿಯನ್” ಕುಟುಂಬಕ್ಕೆ ಸೇರಿದ ಹುಡುಗಿಯನ್ನು ಮದುವೆಯಾದ ಕಾರಣ ಆಕೆಯ ಸಂಬಂಧಿಕರಿಂದ ಕೊಲ್ಲಲ್ಪಟ್ಟನು ಎಂದು ಭಾವಿಸಲಾಗಿದೆ. ನ್ಯಾಯಾಲಯದಲ್ಲಿ ವಿವಾಹದ ಕೆಲವೇ ಗಂಟೆಗಳ ಬಳಿಕ ಕೆವಿನ್ನನ್ನು ಆತನ ಮನೆಯಿಂದ ಸಶಸ್ತ್ರ ತಂಡವೊಂದು ಅಪಹರಿಸಿ ಕೊಲೆಗೈದಿದೆ. ಶನಿವಾರ ನಡೆದ ಈ ಘಟನೆ ಮರ್ಯಾದಾ ಹತ್ಯೆ ಆಗಿರಬಹುದು ಎಂದು ಭಾವಿಸಲಾಗುತ್ತಿದೆ. ಕೆವಿನ್ ನ ಹೆಂಡತಿ ನೀನು ಪ್ರಕಾರ ಈ ಅಪಹರಣ ಮತ್ತು ಕೊಲೆಯನ್ನು ಆಕೆಯ ಮನೆಯವೆರೆ ನಡೆಸಿದ್ದು ಎನ್ನಲಾಗುತ್ತಿದೆ. ಕೆವಿನ್ ಒಬ್ಬ ದಲಿತ ಕ್ರಿಶ್ಚಿಯನ್ ಮತ್ತು ಹುಡುಗಿಯ ತಂದೆ ಒಬ್ಬ ಉನ್ನತ ಕ್ರಿಶ್ಚಿಯನ್, ಹಾಗೂ ಆಕೆಯ ತಾಯಿ ಮುಸ್ಲಿಮರಾಗಿದ್ದಾರೆ.

ಕೆವಿನ್ ಮತ್ತು ನೀನು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ಬಯಸಿದ್ದರು. ಆದರೆ ನೀನುವಿನ ಸಹೋದರ ಈ ಮದುವೆ ನಡೆಯಕೂಡದೆಂದು ತಾಕೀತು ಮಾಡಿದ್ದ. ಅದಾಗ್ಯೂ ಕೆವಿನ್ ಮತ್ತು ನೀನು ಕೋರ್ಟಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ವಿವಾಹ ನಡೆದ ಕೆಲವೇ ಘಂಟೆಗಳ ಒಳಗೆ ಹತ್ತು ಜನರ ಗುಂಪೊಂದು ಕೆವಿನ್ ಮನೆಗೆ ನುಗ್ಗಿ, ಧಾಂಧಲೆ ಎಬ್ಬಿಸಿ ಆತನನ್ನು ಮತ್ತು ಸ್ನೇಹಿತ ಅನೀಶ್ ನನ್ನುಅಪಹರಿಸಿ ಕೊಲೆ ಮಾಡಿದೆ ಎಂದು ಕೆವಿನ್ ಪತ್ನಿ ದೂರು ದಾಖಲಿಸಿದ್ದಾರೆ. ಪೋಲಿಸರು ಕೇಸು ದಾಖಲಿಸಿಕೊಂಡು ಒಬ್ಬ ಆರೋಪಿ ಮತ್ತು ಒಂದು ಇನ್ನೋವಾ ಕಾರನ್ನು ವಶ ಪಡಿಸಿಕೊಂಡಿದ್ದಾರೆ. ಘಟನೆಯಲ್ಲಿ DYFI ನ ಇಬ್ಬರು ಸದಸ್ಯರು ಕೂಡಾ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತನ ಹೆಂಡತಿ ಅಪಹರಣದ ಕೇಸು ದಾಖಲಿಸಿದ್ದರೂ ಪೋಲೀಸರು ಆರಂಭದಲ್ಲಿ ಕ್ರಮ ಕೈಗೊಳ್ಳದಿರಲು ಪಿಣರಾಯಿ ವಿಜಯನ್ ಭೇಟಿ ಸಂಧರ್ಭದಲ್ಲಿ ಹೆಚ್ಚುವರಿ ಪೋಲೀಸರಿಲ್ಲದ್ದೆ ಕಾರಣ ಎಂದು ಹೇಳಲಾಗಿದೆ. ದೇವರ ರಾಜ್ಯದಲ್ಲಿ ಏನಾಗುತ್ತಿದೆ ಎನ್ನುವುದು ಈಗಲಾದರೂ ತಿಳಿಯಿತೆ ಬುದ್ದಿಜೀವಿಗಳೆ? ಜನರ ರಕ್ಷಣೆಗೆ ನಿಯುಕ್ತಿ ಆಗಿರಬೇಕಾಗಿದ್ದ ಆರಕ್ಷಕರು ಮುಖ್ಯ ಮಂತ್ರಿಗೆ ಭದ್ರತೆ ಒದಗಿಸಲು ಹೋಗಿದ್ದ ಕಾರಣ ಅನ್ಯಾಯವಾಗಿ ಒಬ್ಬ ಬಡಪಾಯಿಯ ಜೀವ ಹೋಯಿತು.

ಇದು ಕಮೂನಿಷ್ಟರ ದಕ್ಷ ಆಡಳಿತದ ಮಾದರಿ!! ಘಟನೆ ಕಮೂನಿಷ್ಟ್ ಆಡಳಿತದಲ್ಲಿ ನಡೆದದ್ದು ಹಾಗೆ ಮಾಧ್ಯಮಗಳು “ಸೈಲೆಂಟ್ ಮೋಡ್”! ಒಂದು ವೇಳೆ ಭಾಜಪ ಆಡಳಿತದಲ್ಲಿ ನಡೆದಿದ್ದರೆ “ವೈಲೆಂಟ್ ಮೋಡ್” ಆನ್!! ಕ್ರೈಸ್ತರಿಂದ ದಲಿತ ಕ್ರೈಸ್ತನ ಹತ್ಯೆ ಆಗಿದ್ದು ಆದ್ದರಿಂದ ಜಾತ್ಯಾತೀತರದ್ದು “ನೋ ಕಮೆಂಟ್ಸ್”. ಇನ್ನು ಜಸ್ಟ್ ಆಸ್ಕಿಂಗ್ ಉಗಾಂಡದಲ್ಲಿ ಉಸಿರಾಡುತ್ತಿರಬಹುದು ಸುದ್ದಿ ತಿಳಿದಿಲ್ಲ.

ಸನಾತನ ಧರ್ಮದಲ್ಲಿ ಮೇಲ್ಜಾತಿ-ಕೀಳ್ಜಾತಿ ಮಾಡುತ್ತಾರೆ, ನಾವು ನಿಮಗೆ ಸಮಾನವಾಗಿ ನೋಡುತ್ತೇವೆ, ನಮ್ಮ “ದೇವರು ಕರೆಯುತ್ತಾನೆ” ನಮ್ಮಲ್ಲಿಗೆ ಬನ್ನಿ ಎಂದು ದಲಿತರ ತಲೆ ನೇವರಿಸುವ ಮಿಶನರಿಗಳ ನಿಜ ರೂಪದ ಅರಿವಾಯಿತೆ ಮಹಾ ಜನಗಳೆ? ಒಬ್ಬ ದಲಿತ, ಕ್ರೈಸ್ತ ಮತಕ್ಕೆ ಮತಾಂತರ ಹೊಂದಿದ ಮೇಲೂ ಆತ ದಲಿತನೆ. ಆತನನ್ನು ಕ್ರೈಸ್ತರು ತಮ್ಮವನೆಂದು ಒಪ್ಪಿಕೊಳ್ಳುವುದಿಲ್ಲ. ಅಲ್ಲಿ ದಲಿತರಿಗೆ ಪೌರೋಹಿತ್ಯವಿಲ್ಲ, ಅನೇಕ ಸ್ಥಳಗಳಲ್ಲಿ ದಲಿತರಿಗೆ ಪ್ರತ್ಯೇಕ ಸಮಾಧಿ ಸ್ಥಳಗಳಿವೆ. ಕ್ರೈಸ್ತರಲ್ಲಿ ಜಾತಿ ಬೇಧ ಇಲ್ಲವೆನ್ನುವ ಮಂಕರಿಗೆ ಇನಾದರೂ ಬುದ್ದಿ ಬರುವುದೆ? ಹೀಗೆ ಮಿಶನರಿಗಳ ಪೂಸಿಗೆ ಮನಸೋತು ಮತಾಂತರ ಹೊಂದಿದ ಹಲವರು ಅಲ್ಲಿ ಕಿರುಕುಳ ತಾಳಲಾರದೆ ಮತ್ತೆ ಮಾತೃಧರ್ಮಕ್ಕೆ “ಘರ್ ವಾಪಸಿ” ಮಾಡಿದ್ದಾರೆ.

2008 ರ ವರದಿಯ ಪ್ರಕಾರ ತಮಿಳುನಾಡಿನಲ್ಲಿ 1,000 ದಲಿತ ಕ್ರಿಶ್ಚಿಯನ್ನರು ಸನಾತನ ಧರ್ಮಕ್ಕೆ ಮರಳಿದ್ದಾರೆ. ಹಾಗಾದರೆ “ಕರೆಯುತ್ತಾನೆ” ಮತದಲ್ಲಿ ಅವರೆಷ್ಟು ಬೇಸತಿದ್ದರೆನ್ನುವುದನ್ನು ಯೋಚಿಸಿ ನೋಡಿ. ಇನ್ನಾದರೂ ಎಚ್ಚೆತ್ತುಕೊಳ್ಳಿ ಸರ್ವರನ್ನೂ ಸಮಭಾವದಿಂದ ಕಾಣುವ ಒಂದೇ ಧರ್ಮ ಸನಾತನ….. ಮಾತೃ ಧರ್ಮವನ್ನು ತೊರೆಯುವುದು ಮಾತೆಯನ್ನು ತೊರೆದಂತೆಯೆ ಅರಿತುಕೊಳ್ಳಿ…

-ಶಾರ್ವರಿ

Tags

Related Articles

Close