ಪ್ರಚಲಿತ

ಡ್ರ್ಯಾಗನ್ ಗೆ ಆತಂಕ!! ಚಾಬಹಾರ್ ಬಂದರಿನಿಂದಾಗಿ ತೆರೆದಿದೆ ಮಿಲಿಯನ್ ಡಾಲರ್ ವ್ಯವಹಾರದ ಬಾಗಿಲು!! 

ಭಾರತ – ಇರಾನ್ – ಅಫ್ಘಾನಿಸ್ತಾನ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟನ್ನು ವೃದ್ಧಿಸುವ ಸಲುವಾಗಿ 550 ಕೋಟಿ ವೆಚ್ಚದಲ್ಲಿ ಭಾರತವು ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸಿರುವ ವಿಚಾರ ಗೊತ್ತೇ ಇದೆ!! ಈಗಾಗಲೇ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಎಚ್ಚರಿಕೆ ನೀಡಿದ್ದರ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ – ಜಪಾನ್ ಪ್ರಧಾನಿ ಶಿಂಜೋ ಅಬೆ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಚರ್ಚಿಸಿದ್ದು, ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಬಂದರು ನೆರವಾಗುವಂತೆ ಮಾಡಿದ್ದರು!!

ಇದಕ್ಕೆ ಪುಷ್ಠಿ ನೀಡುವಂತಹ ವಿಚಾರವೊಂದು ಇದೀಗ ಸುದ್ದಿಯಾಗಿದ್ದು, ತೆಹ್ರಾನ್ ಗೆ ಯುಎಸ್ ಅನುದಾನ ನವೀಕರಣಗೊಂಡ ಬೆದರಿಕೆಯ ನಡುವೆಯೂ ಇರಾನ್ ನಲ್ಲಿ ಚಾಬಹಾರ್ ಬಂದರನ್ನು 2019ರ ವೇಳೆಗೆ ಕಾರ್ಯಾರಂಭಗೊಳಿಸಲು ಇದೀಗ ಭಾರತ ಪ್ರಯತ್ನಿಸುತ್ತಿದೆ!! ಇರಾನ್ ನ ಚಾಬಹಾರ್ ಬಂದರಿನ ಸಂಕೀರ್ಣವನ್ನು ನೂತನ ಟ್ರಾನ್ಸ್ ಪೋರ್ಟೆಶನ್ ಕಾರಿಡಾರ್ ಭಾಗವಾಗಿ ಭಾರತದ ಬೆಂಬಲದೊಂದಿಗೆ ಅಭಿವೃದ್ದಿ ಪಡಿಸಲಾಗುತ್ತಿದೆ. ಇದರಿಂದಾಗಿ ಉಭಯ ದೇಶಗಳ ನಡುವೆ ಮಿಲಿಯನ್ ಡಾಲರ್ ವ್ಯವಹಾರದ ಬಾಗಿಲು ತೆರೆಯಲಿದೆಯಲ್ಲದೇ ಪಾಕಿಸ್ತಾನಕ್ಕೆ ಅವಲಂಬಿತಗೊಳ್ಳುವುದು ತಪ್ಪುತ್ತದೆ.

ಹೌದು… ಈಗಾಗಲೇ ಚೀನಾ-ಪಾಕಿಸ್ತಾನದ ಸಹಭಾಗಿತ್ವದಲ್ಲಿ ಬಲೂಚಿಸ್ತಾನದಲ್ಲಿ ನಿರ್ಮಿಸಲಾಗಿರುವ ಗ್ವದಾರ್ ಬಂದರಿಗೆ ಪರ್ಯಾಯವಾಗಿ ಭಾರತ- ಇರಾನ್ ಸಹಭಾಗಿತ್ವದಲ್ಲಿ ಇರಾನ್ ನಲ್ಲಿ ಚಾಬಹಾರ್ ಬಂದರು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಬಂದರು ನೆರವಾಗಲಿದೆ. ಆದರೆ ಈಗ ಭಾರತ ಜಪಾನ್ ನೊಂದಿಗೆ ಚಬಹಾರ್ ಬಂದರು ಅಭಿವೃದ್ಧಿ ಯ ಬಗ್ಗೆ ಚರ್ಚಿಸಿರುವುದು ಚೀನಾಗೆ ಆತಂಕ ಮೂಡಿಸಿದೆ.

Related image

ಹಾಗಾಗಿ ಇದೀಗ ತೆಹ್ರಾನ್ ಗೆ ಯುಎಸ್ ಅನುದಾನ ನವೀಕರಣಗೊಂಡ ಬೆದರಿಕೆಯ ನಡುವೆಯೂ ಇರಾನ್ ನಲ್ಲಿ ಚಾಬಹಾರ್ ಬಂದರನ್ನು 2019ರ ವೇಳೆಗೆ ಕಾರ್ಯಾರಂಭಗೊಳಿಸಲು ಭಾರತ ಪ್ರಯತ್ನಿಸುತ್ತಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. 2015ರ ನೂಕ್ಲಿಯರ್ ಡೀಲ್ ಹಿಂಪಡೆಯುವಿಕೆಯ ಡೊನಾಲ್ಡ್ ಟ್ರಂಪ್ ನಿರ್ಧಾರ ಮತ್ತು ತೆಹ್ರಾನ್ ನೊಂದಿಗೆ ವ್ಯವಹಾರ ವೃದ್ದಿಸಲು ಹಣಕಾಸು ಸಂಸ್ಥೆಗಳಿಗೆ ದಂಡ ವಿಧಿಸುವಿಕೆ ಚಾಬಹಾರ್ ಅಭಿವೃದ್ದಿಗೆ ಸವಾಲಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೇ, ಇದೀಗ ಈ ಬಂದರಿನಿಂದಾಗಿ ಸಿಐಎಸ್ ರಾಷ್ಟ್ರಗಳಿಗೆ ಸುಲಲಿತ ಲಭ್ಯತೆ ಸಿಗಲಿದೆ ಎಂದು ಸಾರಿಗೆ ಸಚಿವ ಗಡ್ಕರಿ ಅಭಿಪ್ರಾಯಿಸಿದ್ದಾರೆ.

ಈಗಾಗಲೇ ಈ ಬಂದರಿನಿಂದ ಕೇವಲ 130 ಕಿ.ಮೀ ದೂರದಲ್ಲಿರುವ ಪಾಕಿಸ್ತಾನದ ಗ್ವಾದರ್‍ನಲ್ಲಿ ಚೀನಾ ಬಂದರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಅಷ್ಟೇ ಅಲ್ಲದೇ, ಭಾರತ ಅಫ್ಘಾನಿಸ್ತಾನಗಳು ತನ್ನ ನೆಲದ ಮೂಲಕ ಸರಕುಗಳ ಸಾಗಣೆ ನಡೆಸದಂತೆ ಪಾಕಿಸ್ತಾನವು ತಡೆಯೊಡ್ಡಿದೆ. ಈಗ ಈ ವಾಣಿಜ್ಯ ಮಾರ್ಗವು ಕಾರ್ಯಾರಂಭ ಮಾಡಿರುವುದರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತವು ಸೆಡ್ಡು ಹೊಡೆದಂತಾಗಿದೆ.

ಭದ್ರತೆ, ವಾಣಿಜ್ಯ ಮತ್ತು ಇಂಧನ, ಎರಡು ಹಂತದ ತೆರಿಗೆ ತಡೆ ಸೇರಿದಂತೆ ಒಂಬತ್ತು ಪ್ರಮುಖ ಒಪ್ಪಂದಗಳಿಗೆ ಈಗಾಗಲೇ ಭಾರತ ಮತ್ತು ಇರಾನ್ ಸಹಿ ಹಾಕಿದ್ದು, ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ದ್ವಿಪಕ್ಷೀಯ ಮಾತುಕತೆಯ ವೇಳೆ ಚರ್ಚಿಸಿದ್ದರು!!

ಆದರೆ ಇದೀಗ ಇರಾನ್ ನ ಚಾಬಹಾರ್ ಬಂದರಿನ ಸಂಕೀರ್ಣವನ್ನು ನೂತನ ಟ್ರಾನ್ಸ್ ಪೋರ್ಟೆಶನ್ ಕಾರಿಡಾರ್ ಭಾಗವಾಗಿ ಭಾರತದ ಬೆಂಬಲದೊಂದಿಗೆ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. ಅಷ್ಟೇ ಅಲ್ಲದೇ, ಇದರಿಂದಾಗಿ ಉಭಯ ದೇಶಗಳ ನಡುವೆ ಮಿಲಿಯನ್ ಡಾಲರ್ ವ್ಯವಹಾರದ ಬಾಗಿಲು ತೆರೆದಿರುವುದರಿಂದಾಗಿ ಪಾಕಿಸ್ತಾನಕ್ಕೆ ಅವಲಂಬಿತಗೊಳ್ಳುವುದು ತಪ್ಪುತ್ತದೆ. ಹಾಗಾಗಿ ಚಾಹಬರ್ ಬಂದರಿನಿಂದಾಗಿ ಡ್ರ್ಯಾಗನ್ ಗೆ ಆತಂಕ ಸೃಷ್ಟಿಯಾಗಿರುವುದಂತೂ ಅಕ್ಷರಶಃ ನಿಜ.

ಮೂಲ:
http://news13.in/archives/104654

– ಅಲೋಖಾ

Tags

Related Articles

Close