ಪ್ರಚಲಿತ

ಕಾಂಗ್ರೆಸ್ ದೇಶಕ್ಕೆ ಯಾಕೆ ಮಾರಕ ಗೊತ್ತಾ..?

ದೇಶಕ್ಕೆ ಅಪಾಯಕಾರಿ ಅನಿಸೋವಂತಹ ನಡೆ ಪ್ರದರ್ಶನ ಮಾಡೋದ್ರಲ್ಲಿ ಕಾಂಗ್ರೆಸ್ ಪಕ್ಷ‌ದ ನಾಯಕರು ಒಂದು ಕೈ ಮೇಲೆ ಅನ್ನೋದಿಕ್ಕೆ ಮತ್ತೆ ಪುಷ್ಟಿ ಸಿಕ್ಕಿದೆ.

ನಿಮ್ಮೆಲ್ಲರಿಗೂ ಕಾಂಗ್ರೆಸ್‌ನ ‘ಯುವ’ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ‘ಭಾರತ್ ಜೋಡೋ’ ಯಾತ್ರೆ‌ಯ ಹೆಸರಿನಲ್ಲಿ ನಾಟಕ ಗೊತ್ತಿರಬಹುದು. ಈ ಯಾತ್ರೆ ಮಧ್ಯಪ್ರದೇಶ‌ದಲ್ಲಿ ನಡೆದ ಸಂದರ್ಭದಲ್ಲಿ ಭಾರತದ ಶತ್ರು ರಾಷ್ಟ್ರ ಅಂತಲೇ ಗುರುತಿಸಿಕೊಂಡಿರುವ ‘ಪಾಪಿಸ್ತಾನ’ದ ಪರ ಘೋಷಣೆ ಕೂಗಲಾಗಿದೆ. ಈ ಆರೋಪದ ಮೇಲೆ ಅಲ್ಲಿನ ಕಾಂಗ್ರೆಸ್ ಪಕ್ಷದ ಮಾಧ್ಯಮ ಮುಖ್ಯಸ್ಥ ಪಿಯೂಷ್ ಬಾಬೆಲೆ ಮತ್ತು ಐಟಿ ಮುಖ್ಯಸ್ಥ ಅಭಯ್ ತಿವಾರಿ ವಿರುದ್ಧ ಪ್ರಕರಣ ಸಹ ದಾಖಲಾಗಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಭಾರತ್ ಜೋಡೋ ಯಾತ್ರೆ‌ಯ ಹೆಸರಿನಲ್ಲಿ ದೇಶ ವಿರೋಧಿ ಕೃತ್ಯಗಳನ್ನು ನಡೆಸ್ತಾ ಇದೆ ಅಂತಲೂ ಆರೋಪಿಸಲಾಗಿದೆ. ಆ ಮೂಲಕ ನಿಜವಾದ ಭಾರತೀಯರ ಮನಸ್ಸಿಗೆ ನೋವುಂಟು ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ದೇಶಕ್ಕೆ ಮಾರಕ ಅನ್ನೋದಿಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ..

ದೇಶಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಕಥೆ ಹೀಗಾದ್ರೆ, ಕರ್ನಾಟಕದ ನಾಯಕರಿಗೆ ದೇಶಭಕ್ತಿ ಅಂದ್ರೆ ಏನು ಅಂತಲೇ ಗೊತ್ತಿಲ್ಲ ಅಂತ ಕಾಣಿಸುತ್ತೆ. ಕಾಂಗ್ರೆಸ್ ನಡೆಸಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಗೀತೆ ಹಾಡದಂತೆ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿರುವ ವಿಡಿಯೋ ಒಂದು ವೈರಲ್ ಆಗಿದೆ. ಆ ಮೂಲಕ ತಮ್ಮ ಮುಖಕ್ಕೆ, ಪಕ್ಷಕ್ಕೆ ಮಸಿ ಬಳಿದುಕೊಳ್ಳೋ ಕೆಲಸವನ್ನು ಸಿದ್ದರಾಮಯ್ಯ ಅವರು ತಾವೇ ಮಾಡಿಕೊಂಡಿರೋದು ಹಾಸ್ಯಾಸ್ಪದ‌ವೂ ಹೌದು. ಖಂಡನಾರ್ಹ ನಡೆಯೂ ಹೌದು.

ಸದಾ ಕಾಲ ಓಲೈಕೆ ರಾಜಕಾರಣದಲ್ಲೇ ಜನರ ಹಾದಿ ತಪ್ಪಿಸೋಕೆ ನೋಡ್ತಾ ಇರುವ ಕಾಂಗ್ರೆಸ್ ಪಕ್ಷ, ಹಿಂದೂ ವಿರೋಧಿ, ದೇಶ ವಿರೋಧಿ ನಡೆಯ ಮೂಲಕ ಭಾರತಕ್ಕೆ ಅವಮಾನ ಮಾಡುತ್ತಿದೆ ಅಂತಲೇ ಹೇಳ್ಬಹುದು.

ಇನ್ನೊಂದು ಗಂಭೀರ ಮತ್ತು ತಮಾಷೆ ವಿಷಯ ಏನಂತಂದ್ರೆ, ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಆಗೋ ಹಾಗೆ ಹೇಳಿಕೆಗಳನ್ನು ಕೊಡೋ ಕಾಂಗ್ರೆಸ್, ನಡೆದುಕೊಳ್ಳೋ ಕಾಂಗ್ರೆಸ್, ಎಲೆಕ್ಷನ್ ಬಂತು ಅಂದ್ರೆ ಸಾಕು. ಹಿಂದೂಗಳನ್ನು ಸೆಳೆಯೋದಿಕ್ಕೆ ತರಹೇವಾರಿ ಕಸರತ್ತುಗಳನ್ನು ಪ್ರದರ್ಶನ ಮಾಡುತ್ತೆ. ಇದಕ್ಕೂ ಸಾಕ್ಷಿ ಇದೆ. ಇತ್ತೀಚೆಗೆ ರಾಹುಲ್ ಗಾಂಧಿ ದೇವಸ್ಥಾನ ಸುತ್ತಿದ್ದು, ಆರತಿ ಎತ್ತಿದ್ದು, ಧ್ಯಾನ ಮಾಡಿದ್ದು ಹಿಂದೂಗಳ ಓಟ್‌ಗಾಗಿ ಮಾಡ್ತಾ ಇರೋ ಗಿಮಿಕ್ ಅನ್ನೋದು ಸಹ ಅಷ್ಟೇ ಸತ್ಯ.

ಇಂತಹ ನಾಯಕರಿಗೆ, ಇಂತಹ ಪಕ್ಷಕ್ಕೆ ಮತ ನೀಡುವ ಮೊದಲು ಆಲೋಚಿಸಿ. ನಮ್ಮ ದೇಶಕ್ಕೆ, ನಮಗೆ ಅಪಾಯಕಾರಿ ಅನಿಸುವ ಇಂತಹವರಿಂದ ಅಭಿವೃದ್ಧಿ ಅಸಾಧ್ಯ. ಪಾಕಿಸ್ತಾನ‌ ಪರ ಘೋಷಣೆ ಕೂಗಿದವರು ಉಗ್ರರಿಗೂ ಬೆಂಬಲ ನೀಡಿಯಾರು. ಹಿಂದೂಗಳೇ ಮತ ನೀಡುವ ಮುನ್ನ ಆಲೋಚಿಸಿ..

Tags

Related Articles

Close