ಪ್ರಚಲಿತ

ಲೋಕಸಭಾ ಚುನಾವಣೆಯ ವೇಳೆ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ!! ಬಯಲಾಯಿತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು!!

ಉತ್ತರ ಪ್ರದೇಶ ವಿವಾದಿತ ಕೇಂದ್ರ ಬಿಂದುವಾಗಿರುವುದರ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರದ ವಿಚಾರವಾಗಿ ನಡೆಯುತ್ತಿರುವ ಗಲಭೆಗಳಿಗೆ ಕೊನೆ ಎಂದು ಎಂದೇ ತಿಳಿಯುತ್ತಿಲ್ಲ!! ಆದರೆ ಅಯೋಧ್ಯೆಯ ವಿಚಾರವಾಗಿ ಅಚ್ಚರಿಯ ಸಾಮರಸ್ಯಗಳು ನಡೆದಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಪ್ರತಿಪಾದಿಸಿದ್ದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ, ಮಸೀದಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು!! ಆದರೆ ಇದೀಗ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ ಹತ್ಯೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು ರೂಪಿಸಿದ್ದಾನೆ ಎಂದು ತಿಳಿದು ಬಂದಿದೆ!!

ಸರಯೂ ನದಿ ತೀರದಲ್ಲಿ ಉತ್ತರಪ್ರದೇಶ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ 100 ಮೀಟರ್ ಎತ್ತರದ ಶ್ರೀರಾಮನ ದೇವರ ವಿಗ್ರಹ ಸ್ಥಾಪಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿರುವ ಶಿಯಾ ಮಂಡಳಿ, ವಿಗ್ರಹಕ್ಕೆ ಗೌರವದ್ಯೋತಕವಾಗಿ 10 ಬೆಳ್ಳಿಯ ಬಾಣಗಳನ್ನು ಉಡುಗೊರೆ ನೀಡುವುದಾಗಿ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ಈಗಾಗಲೇ ಘೋಷಿಸಿದೆ!! ಹಾಗಾಗಿ ಪ್ರತಿ ಬಾರಿಯೂ ಸಾಮರಸ್ಯ ಕಾಪಾಡುವಲ್ಲಿ ಹೋರಾಡುತ್ತಿರುವ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ ಯ ಹತ್ಯೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು ರೂಪಿಸಿದ್ದಾನೆ ಎಂದು ತಿಳಿದು ಬಂದಿದೆ!!

1993ರ ಮುಂಬಯಿ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಗೆ ಪಾಕಿಸ್ಥಾನದ ಸಂಪೂರ್ಣ ರಕ್ಷಣೆ ಇದೆ ಎಂದು ಭಾರತ ಈ ತನಕವೂ ಹೇಳಿಕೊಂಡು ಬಂದಿರುವುದನ್ನು ಇತ್ತೀಚೆಗಷ್ಟೇ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿತನಾದ ದಾವೂದ್ ಬಂಟ ಫಾರೂಕ್ ಟಕ್ಲಾ ದೃಢೀಕರಿಸಿದ್ದಾನೆ. ಅಷ್ಟು ಮಾತ್ರವಲ್ಲದೇ ಪಾಕಿಸ್ಥಾನದಲ್ಲಿರುವ ದಾವೂದ್ ಇಬ್ರಾಹಿಂ ಪೂರ್ಣ ವಿವರಗಳನ್ನು ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು!! ಇನ್ನು, ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿರುವ ದಾವೂದ್ ಇಬ್ರಾಹಿಂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ದಾವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ಪರ ವಕೀಲ ಈ ಹೇಳಿಕೆ ನೀಡಿದ್ದರು!!

Image result for dawood ibrahim

ಆದರೆ ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಪ್ರತಿಪಾದಿಸಿದ್ದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ ಹತ್ಯೆಗೆ ಸಂಚು ರೂಪಿಸಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಮೂವರು ಸಹಚರರನ್ನು ಬಂಧಿಸಲಾಗಿದೆ. ಹೌದು… ಬುಲಂದ್ ಶೆರ್ ಪ್ರದೇಶದಲ್ಲಿ ಈ ಮೂವರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಸಲಿಮ್ ಅಹಮದ್ ಅನ್ಸಾರಿ, ಆರಿಫ್, ಅಬ್ರಾರ್ ಅಹಮದ್ ಎಂದು ಗುರುತಿಸಲಾಗಿದೆ. ಈ ಮೂವರೂ ಕೂಡ ದಾವೂದ್ ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ಈ ಸಂಚಿನ ಮೂಲಕ ಮುಂದಿನ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆದಿತ್ತು ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯಷ್ಟೇ ಮದರಸಾ ಶಿಕ್ಷಣವನ್ನು ಪಡೆಯುತ್ತಿರುವ ಅಸಂಖ್ಯಾತ ಮುಸಲ್ಮಾನರು ತಮ್ಮ ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೇ, ಈ ಹಿಂದೆ ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) ಅಧ್ಯಕ್ಷ ಮೌಲಾನಾ ರಾಬಿ ಹಸನ್ ನಾದ್ವಿಗೆ ಪತ್ರ ಬರೆದಿರುವ ರಿಜ್ವಿ “ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಮಿನ ಕಾನೂನಿಗೆ ವಿರುದ್ಧವಾದದ್ದು. ಅಯೋಧ್ಯೆಯ ಬಾಬರಿ ಮಸೀದಿ, ಮಥುರಾದ ಕೇಶವ ಮಂದಿರ, ವಾರಣಾಸಿಯ ವಿಶ್ವನಾಥ ದೇವಾಲಯ, ಅಹಮದಾಬಾದ್ ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಗುಜರಾತ ಬಾತ್ನಾದಲ್ಲಿರುವ ರುದ್ರ ಮಹಾಲಯ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಅದೀನಾ ಮಸೀದಿ, ಮಧ್ಯಪ್ರದೇಶದ ವಿದಿಷಾದ ವಿಜಯಾ ದೇವಿ ಮಂದಿರ ಮತ್ತು ದೆಹಲಿಯ ಕುತುಬ್ ಮಿನಾರ್ ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟು ಮಾತ್ರವಲ್ಲದೇ, ಬೇರೆ ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಂ ಕಾನೂನಿಗೆ ವಿರುದ್ಧವಾದ್ದದ್ದು ಎಂದು ಸಲಹೆ ನೀಡಿರುವ ವಾಸೀಮ್ ರಿಜ್ವಿ ಈ ಹಿಂದೆ ” ರಾಮ ಮಂದಿರ ನಿರ್ಮಾಣಕ್ಕೆ ಜಾತ್ಯತೀತ ಮನಸ್ಥಿತಿಯುಳ್ಳವರು ವಿರೋಧ ವ್ಯಕ್ತಪಡಿಸುವುದಿಲ್ಲ. ಅಯೋಧ್ಯೆ ಹಿಂದುಗಳ ಪವಿತ್ರ ಭೂಮಿ. ಆದ್ದರಿಂದ ಹಿಂದೂಗಳ ಭೂಮಿಯಲ್ಲಿ ಮಸೀದಿ ನಿರ್ಮಿಸಲು ಯಾವುದೇ ಅವಕಾಶವಿಲ್ಲ. ಮಸೀದಿ ನಿರ್ಮಾಣ ಭಯಸುವವರು ಐಸಿಸ್ ನಂತಹ ಭಯೋತ್ಪಾದಕ ಸಂಘಟನೆ ಸೇರಲಿ” ಎಂದು ಹೇಳಿದ್ದರು!!

ಒಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎಂದು ಪಣತೊಟ್ಟಿರುವ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ ಹತ್ಯೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಚು ರೂಪಿಸಿದ್ದು, ಈತನ ಮೂವರು ಸಹಚರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ!! ಸದ್ಯ ಪಾಕ್’ನ ಕರಾಚಿಯಲ್ಲಿ ಪಾತಕಿ ತಲೆಮರೆಸಿಕೊಂಡಿದ್ದು, ಮುಂದಿನ ಲೋಕಸಭೆ ಚುನಾವಣೆಯ ವೇಳೆ ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿದ್ದ ಎನ್ನುವ ವಿಚಾರವೂ ಇದೀಗ ತಿಳಿದು ಬಂದಿದೆ!!

ಮೂಲ: http://kannada.asianetnews.com/news/dawood-men-held-for-planning-to-kill-shia-cleric

– ಅಲೋಖಾ

Tags

Related Articles

Close