ಪ್ರಚಲಿತ

ಬ್ರೇಕಿಂಗ್! ಪ್ರಧಾನಿ ಮೋದಿ ಮೇಲೆ ಸಿದ್ದರಾಮಯ್ಯ ಕೇಸ್.! ಮಾನ ಇಲ್ಲದವರಿಂದ ಮಾನನಷ್ಟ ಮೊಕದ್ದಮೆ..?

ಪ್ರಧಾನಿ ನರೇಂದ್ರ ಮೋದಿ ಓರ್ವ ಸಾಮಾನ್ಯ ನಾಯಕನಲ್ಲ. ಅವರೋರ್ವ ಸುಂಟರಗಾಳಿ. ಅವರನ್ನು ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ಇಡಿಯ ಕಾಂಗ್ರೆಸ್‍ಗೇ ಸಾಧ್ಯವಿಲ್ಲ ಅನ್ನೋದು ಇದೀಗ ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಕಾಂಗ್ರೆಸ್ ಪಕ್ಷ ಕೆಲಸವಿಲ್ಲದ ಸೋಗಲಾಡಿಗಳನ್ನೆಲ್ಲಾ ಕರೆದುಕೊಂಡು ಬಂದು ದೇಶದ್ರೋಹದ ಕೆಲಸಗಳನ್ನು ಮಾಡುತ್ತಾ ಇರೋದು. 

ಮೋದಿ ಮೇಲೆ ಮಾನನಷ್ಟ ಮೊಕದ್ದಮೆ..?

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹಲವಾರು ಆರೋಪಗಳನ್ನು ಮಾಡಿದ್ದು ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

“ಪ್ರಧಾನಿ ನನ್ನ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ನಾನು 10% ಮುಖ್ಯಮಂತ್ರಿ ಹಾಗೂ ನನ್ನ ಸರ್ಕಾರ 10% ಸರ್ಕಾರ ಎಂದು ಆರೋಪ ಮಾಡುತ್ತಾರೆ. ನಾನು ಭ್ರಷ್ಟಾಚಾರವನ್ನು ನಡೆಸಿದ್ದೇನೆ ಎನ್ನುವುದಕ್ಕೆ ಸಾಕ್ಷಿ ನೀಡಿ. ನನ್ನ ಸರ್ಕಾರವನ್ನು ನಂಗಾನಾಚ್ ಸರ್ಕಾರ, ರುಪಿಯಾ ಸರ್ಕಾರ ಎಂದು ತಮಾಷೆ ಮಾಡುತ್ತೀರಿ. ಯಾವ ಆಧಾರದಲ್ಲಿ ನಾನು ಭ್ರಷ್ಟ ಎಂದು ಬಿಂಬಿಸಿದ್ದೀರಿ.? ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಸಾಕ್ಷ್ಯಗಳನ್ನು ಸಲ್ಲಿಸಬೇಕು.  ಇಲ್ಲವಾದಲ್ಲಿ ನಾನು ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡುತ್ತೇನೆ. ನನ್ನನ್ನು ಕ್ಲೈಂಟ್ ಸಿಎಂ ಎಂದು ಅವಮಾನ ಮಾಡಿದ್ದೀರಿ. ಹೀಗಾಗಿ ನಾನು ಈ ಲೀಗಲ್ ನೋಟೀಸನ್ನು ಕಳಿಸುತ್ತಿದ್ದೇನೆ. ಈ ನೋಟೀಸ್‍ಗೆ ಉತ್ತರಿಸಿ ಹಾಗೂ ನನ್ನ ವಿರುದ್ಧ ನಡೆಸಿದ್ದ ಆರೋಪಗಳು ಸುಳ್ಳು, ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಬಹಿರಂಗವಾಗಿ ಕ್ಷಮೆ ಯಾಚಿಸಿ. ಇಲ್ಲವಾದಲ್ಲಿ ನಾನು 100 ಕೋಟಿ ರೂಗಳಿಗೆ ಮಾನನಷ್ಟ ಮೊಕದ್ದಮೆಯನ್ನು ಹೂಡುತ್ತೇನೆ”…

Image result for modi

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಕಳಿಸಿದ ಲೀಗಲ್ ನೋಟಿಸ್‍ನ ಮುಖ್ಯಾಂಶಗಳು. ಪ್ರಧಾನಿ ನರೇಂದ್ರ ಮೋದಿಯವರ ಸುಂಟರಗಾಳಿ ವೇಗದ ಚುನಾವಣಾ ಭಾಷಣವನ್ನು ತಡೆಯಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿಯ ನೋಟೀಸ್‍ಗಳನ್ನೆಲ್ಲಾ ಜಾರಿಗೊಳಿಸುತ್ತಿದ್ದಾರೆ. ಕಳೆದ ಐದು ವರ್ಷದಿಂದ ಈ ರಾಜ್ಯದಲ್ಲಿ ಭ್ರಷ್ಟಾಚಾರದ ಸರ್ಕಾರವನ್ನು ನಡೆಸಿಕೊಂಡು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ಮಾನವಿಲ್ಲ ಎಂಬುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. 

ತನ್ನ ಸಂಪುಟದ ಸಚಿವರೆಲ್ಲಾ ಭ್ರಷ್ಟಚಾರ ಆರೋಪಗಳನ್ನು ಎದುರಿಸುತ್ತಿರುವುದು ಸುಳ್ಳಾ..? ಡಿಕೆ ಶಿವಕುಮಾರ್ ಭ್ರಷ್ಟಾಚಾರ ನಡೆಸಿದ್ದು ಸುಳ್ಳಾ..? ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ತಾನು ಹೊದಿಸಿಕೊಳ್ಳಲು ಶಾಲು ಹಾಗೂ ಬೆಡ್ ಶೀಟ್ ಮತ್ತು ಬಿಸ್ಕತ್‍ಗೆ ಕೋಟಿ ಕೋಟಿ ಖರ್ಚು ಮಾಡಿದ್ದ ಆರೋಪ ಸುಳ್ಳಾ..? ಮಾಜಿ ಸಚಿವ ಮೇಟಿ ಅತ್ಯಾಚಾರ ನಡೆಸಿದ್ದು ಸುಳ್ಳಾ..? ಸಾಲು ಸಾಲು ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ನಿಮ್ಮ ಸರ್ಕಾರದ ವೈಫಲ್ಯವೇ ಕಾರಣ ಅನ್ನೋದು ಸುಳ್ಳಾ..? ಪ್ರತಿ ಕಾಮಗಾರಿಯ ಅನುದಾನ ಜಾರಿಯಲ್ಲೂ ಕಮಿಷನ್ ಗಿಟ್ಟಿಸಿಕೊಳ್ಳುತ್ತಿರುವುದು ಸುಳ್ಳಾ..?

ಯಾವುದು ಸುಳ್ಳು ಎಂದು ಹೇಳಿ ಮುಖ್ಯಮಂತ್ರಿಗಳೇ..! ಈ ಎಲ್ಲಾ ಪ್ರಕರಣಗಳು ನಿಮ್ಮ ಮೇಲೆ ದಾಖಲಾಗಿಲ್ವೇ? ನೀವೇ ರಚಿಸಿದ ಎಸಿಬಿಯಲ್ಲಿ ನಿಮ್ಮ ಮೇಲೆಯೇ ಬರೋಬ್ಬರಿ 60 ಭ್ರಷ್ಟಾಚಾರ ಪ್ರಕರಣಗಳಿವೆ.! ನೀವು ಭ್ರಷ್ಟ ಅಲ್ಲ ಅಂತ ಹೇಗೆ ಹೇಳಿಕೊಳ್ಳುತ್ತೀರಿ..?ನಿಮ್ಮ ಶಾಸಕರೆಲ್ಲಾ ಗೂಂಡಾಗಿರಿ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಎದುರಿಸುತ್ತಿರುವುದು ಸುಳ್ಳಾ..?

ಇಂತಹಾ ಯಾವುದೇ ಆರೋಪಗಳಿಗೂ ಉತ್ತರ ನೀಡದ ನೀವು ಪ್ರಧಾನಿ ನರೇಂದ್ರ ಮೋದಿ ಮೇಲೆ ವೃಥಾ ಆರೋಪವನ್ನು ಮಾಡೋದನ್ನು ಬಿಟ್ಟು ಬಿಡಿ. ನಿಮ್ಮ ಯೋಗ್ಯತೆಗೆ 100 ಕೋಟಿ ಬೇಕಾ..? ಈಗಾಗಲೇ ಇದ್ದ ಮಾನವನ್ನೆಲ್ಲಾ ನೀವೇ ಹರಾಜು ಹಾಕಿಸಿಕೊಂಡಿದ್ದೀರಿ! ಹೋದಲ್ಲೆಲ್ಲಾ ಮಹಿಳೆಯರಿಂದ ಮುತ್ತಿಕ್ಕಿಸಿದ್ದು ಯಾರು..? ಮಹಿಳೆಯರನ್ನು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ದೂರದಿಂದ ಸೆಲ್ಫಿ ತೆಗಿಸಿಕೊಂಡಿದ್ದ ಮಹಿಳೆಯನ್ನು ಎಳೆದು ತನ್ನತ್ತ ಬರಸೆಳೆದಿದ್ದು ಯಾರು..? ಮಹಿಳೆ ಎಂದೂ ನೋಡದೆ ಮಂಗಳೂರಿನ ಮಾಜಿ ಮೇಯರ್ ಕವಿತಾ ಸನಿಲ್‍ರ ಹೊಟ್ಟೆಗೆ ಬಹಿರಂಗವಾಗಿಯೇ ಕರಾಟೆಯ ನೆಪದಲ್ಲಿ ಗುದ್ದಿದ್ದು ಯಾರು.? ನಾಚಿಗಯಾಗಬೇಡವೇ..? ನಿಮಗೆ ನೂರು ಕೋಟಿಯ ಮಾನವೇ..?

Related image

 

ನಿಮ್ಮ ಮೇಲೆ ಎಷ್ಟು ಕೋಟಿ ದಾಖಲಿಸಬೇಕು..?

ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ನರ ಹಂತಕ ಎಂದು ಬಿಂಬಿಸಿದ್ದೀರಿ. ಗೋದ್ರಾ ಹತ್ಯಾಕಾಂಡದ ವಿಚಾರದಲ್ಲಿ ಮೋದಿ ಪಾತ್ರವಿಲ್ಲ ಎಂಬುವುದು ಸ್ಪಷ್ಟವಾಗಿ ಸುಪ್ರೀಂ ಕೋರ್ಟ್ ಹೇಳಿದ್ದರೂ ಮೋದಿ ಮೇಲೆ ಪುಕ್ಕಟ್ಟೆ ಆರೋಪವನ್ನು ಮಾಡಿದ್ದೀರಿ. ಹಾಗಾದರೆ ಓರ್ವ ಪ್ರಧಾನ ಮಂತ್ರಿಗೆ ಈ ರೀತಿ ಆರೋಪ ಮಾಡುವುದು ನಿಮ್ಮ ಮೇಲೆ ಎಷ್ಟರ  ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಬೇಕು ಸಿದ್ದಣ್ಣ..? ನಿಮ್ಮ ಮಹಾಮಾತೆ ಸೋನಿಯಾ ಮೇಡಂ ಪ್ರಧಾನಿ ಮೋದಿಯವರನ್ನು   “ಸಾವಿನ ವ್ಯಾಪಾರಿ” ಎಂದು ಜರೆದಿದ್ದರು. ಹಾಗಾದರೆ ಸುಳ್ಳು ಹೇಳಿಕೆ ನೀಡಿದ ನಿಮ್ಮ ಆ ಮಹಾಮಾತೆಯ ಮೇಲೆ ಎಷ್ಟರ ಮಾನನಷ್ಟ ಮೊಕದ್ದಮೆಯನ್ನು ಹೂಡಬೇಕು..?

ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ರಾಜಕೀಯ ಜೀವನದ ಕೊನೆಯ ಹಂತದಲ್ಲಿರುವಾಗಲೇ ಪ್ರಧಾನಿ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ. ಮೋದಿ ವಿರುದ್ಧ ಹೂಡುವ ಪ್ರತಿಯೊಂದು    ಬಾಣವೂ ಹಿಂಬಾಣವಾಗಿ ಕಾಂಗ್ರೆಸ್‍ನ್ನು ಮುಗಿಸುತ್ತಿದೆ. ಇದು ಕರ್ನಾಟಕದಲ್ಲೂ ಮರುಕಳಿಸುವ ಎಲ್ಲಾ ಸಾಧ್ಯತೆಗಳೂ ಇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯೇ ಸಾಕ್ಷಿ…

-ಸುನಿಲ್ ಪಣಪಿಲ

Tags

Related Articles

Close