ಪ್ರಚಲಿತ

ಅಗಲಿದ ಮಹಾನ್ ಚೇತನ! ಇಂದಿಗೂ ಕೇರಳದಲ್ಲಿ ಚಿಂತಕರೆಂದರೆ ಯಾರು ಎಂದು ಕೇಳಿದರೆ ಬಹಳಷ್ಟು ಜನರು ಹೇಳುವ ಹೆಸರೇ ಹಿರಿಯ ಆರೆಸ್ಸೆಸ್ ಪ್ರಚಾರಕ ಪದ್ಮವಿಭೂಷಣ ಪಿ ಪರಮೇಶ್ವರನ್ ಅವರದ್ದು!

ಕೇರಳ ಉಳಿಯಬೇಕಿತ್ತು, ಕಮ್ಯುನಿಸ್ಟರ ರಕ್ತದಾಹದ ಮಧ್ಯೆ ನಿಜವಾದ ಸಾಮಾಜಿಕ ಕ್ರಾಂತಿ ಆಗಬೇಕಿತ್ತು!

೧೯೨೭ರಲ್ಲಿ ಹುಟ್ಟಿದ ಪರಮೇಶ್ವರನ್‌ಜೀ ಇತಿಹಾಸದ ಪದವೀಧರರು. ೧೯೫೭ರಲ್ಲಿ ಭಾರತೀಯ ಜನಸಂಘಕ್ಕೆ ಸೇರ್ಪಡೆಯಾದರು. ೬೮ರಲ್ಲಿ ಕೇರಳ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದರು. ಮುಂದೆ ಅಖಿಲ ಭಾರತೀಯ ಕಾರ್ಯದರ್ಶಿಗಳಾದರು. ಜನಸಂಘದ ಅಧ್ಯಕ್ಷರೂ ಆದರು. ತುರ್ತುಪರಿಸ್ಥಿತಿಯ ನಂತರ ರಾಜಕೀಯದಿಂದ ವಿಮುಖರಾಗಿ ತವರು ನೆಲ ಕೇರಳಕ್ಕೆ ಮರಳಿದರು. ಏಕೆಂದರೆ ಮತ್ತೊಮ್ಮೆ ಯಾರೂ ಕೇರಳವನ್ನು ಹುಚ್ಚರ ಸಂತೆ ಎಂದು ಕರೆಯುವುದು ಪರಮೇಶ್ವರನ್ ಅವರಿಗೆ ಇಷ್ಟವಿರಲಿಲ್ಲ. ಕಮ್ಯುನಿಸ್ಟರು ರಕ್ತ ಚೆಲ್ಲುವಲ್ಲೇ ಮಾಡುವ ಅನೇಕ ಕೆಲಸಗಳು ಬಾಕಿ ಉಳಿದಿದ್ದವು. ಅದರ ಫಲವೇ ಇಂದಿನ ಕೇರಳ. ಕೇರಳ ಇಂದು ದೇವರ ಸ್ವಂತ ನಾಡಾಗಿ ಉಳಿಯಲು ಪರಮೇಶ್ವರನ್ ಕೇರಳಕ್ಕೆ ಮರಳಲೇ ಬೇಕಿತ್ತು.ಹಿರಿಯ ಆರೆಸ್ಸೆಸ್ ಪ್ರಚಾರಕ ಪಿ ಪರಮೇಶ್ವರನ್ ಕುರಿತು ಬರೆಯುತ್ತಾ ಹಿರಿಯ ಪತ್ರಕರ್ತರು, ಲೇಖಕರೂ ಆದ ಸಂತೋಷ್ ತಮ್ಮಯ್ಯ ಅವರು ಸೊಗಸಾದ ಉದಾಹರಣೆ ಒಂದನ್ನು ನೀಡುತ್ತಾರೆ.

ಒಮ್ಮೆ ಗುರುವೊಬ್ಬರು, ಇನ್ನು ತಾನು ಕಲಿಸಿದ್ದು ಸಾಕು ಎಂದುಕೊಂಡು ಶಿಷ್ಯನನ್ನು ಕರೆದು ಪರೀಕ್ಷೆಗೊಡ್ಡುತ್ತಾರೆ. ಕಠಿಣ ಲಕ್ಷ್ಯಕ್ಕೆ ಗುರಿ ಇಡಲು ಆತನಿಗೆ ಸೂಚಿಸುತ್ತಾರೆ. ಶಿಷ್ಯ ಆಯಕಟ್ಟಿನ ಜಾಗದಲ್ಲಿ ನಿಂತು ಲಕ್ಷ್ಯಕ್ಕೆ ಬಾಣ ಹೂಡುತ್ತಾನೆ. ಲಕ್ಷ್ಯ ಛೇದನವಾಗುತ್ತದೆ. ಶಿಷ್ಯ ಆನಂದಿತನಾಗುತ್ತಾನೆ. ಆದರೆ ಗುರು ಭೇಷ್ ಅನ್ನಲಿಲ್ಲ. ಕಲಿಸುವುದಿನ್ನೂ ಉಳಿದಿದೆ ಎಂದುಕೊಂಡ ಗುರು ಶಿಷ್ಯನನ್ನು ಕರೆದು ಮತ್ತೊಂದು ಗುರಿ ತೋರುತ್ತಾರೆ. ಮತ್ತು ಆ ಗುರಿಯನ್ನು ಇನ್ನೇನು ಆಗಲೋ ಈಗಲೋ ಮುರಿದು ಬೀಳಲಿರುವ ಸೇತುವೆ ಮೇಲಿಂದ ನಿಂತು ಬಾಣ ಹೂಡುವಂತೆ ಹೇಳುತ್ತಾರೆ. ಆ ಸೇತುವೆಯನ್ನು ನೋಡುತ್ತಲೇ ಶಿಷ್ಯನ ಮೈ ಜುಮ್ಮೆನ್ನುತ್ತದೆ. ಏಕೆಂದರೆ ಅಲ್ಲಿಂದ ಬಾಣ ಹೂಡುವುದು ಹಾಗಿರಲಿ, ಏರುವುದೇ ದುಸ್ತರ, ಏರಿದರೂ ತನ್ನ ಭಾರವನ್ನೂ ಕೂಡಾ ಆ ಸೇತುವೆ ಸಹಿಸಿಕೊಳ್ಳದು. ಶಿಷ್ಯ ಬಾಣ ಹೂಡಲು ಹಿಂಜರಿಯುತ್ತಾನೆ. ಗುರು ಲಕ್ಷ್ಯ ಮುಟ್ಟುವುದಕ್ಕಿಂತಲೂ ಎಲ್ಲಿಂದ ಬಾಣ ಹೂಡಿದೆ ಎನ್ನುವುದೂ ಕೂಡಾ ಮುಖ್ಯ, ತನ್ನ ಕಾಲ ಬುಡ ಗಟ್ಟಿಯಾಗಿದ್ದಾಗ ಎಲ್ಲವೂ ಗಟ್ಟಿಯಾಗಿರುತ್ತದೆ ಎಂಬ ಗುಟ್ಟನ್ನು ಶಿಷ್ಯನಿಗೆ ಭೋದಿಸುತ್ತಾರೆ. ಶಿಷ್ಯನ ಅಹಂಕಾರ ಕುಗ್ಗುತ್ತದೆ.

ಪರಮೇಶ್ವರನ್ ಅವರ ಪರಿಸ್ಥಿತಿ ಕೇರಳದ ಉಸ್ತುವಾರಿ ವಹಿಸಿಕೊಂಡಾಗ ಆ ಶಿಷ್ಯನಂತೆ ಆಗಿತ್ತು. ರಾಕ್ಷಸರಂಥಾ ಕಮ್ಯುನಿಸ್ಟರ ಮಧ್ಯೆ ನಿರಂತರ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಕೇರಳದ ಆರೆಸ್ಸೆಸ್ಸಿಗರು ಶ್ರದ್ಧೆಯಿಂದ ಕಾರ್ಯನಿರ್ವಹಿಸ ಬೇಕಿತ್ತು. ಒಂದೆಡೆ ಅರಬ್ ರಾಷ್ಟ್ರೀಯವಾದಿಗಳ ಅಬ್ಬರ, ಇನ್ನೊಂದೆಡೆ ಕಮ್ಯುನಿಸ್ಟ ಪ್ರೇರಿತ ಹತ್ಯೆಗಳು. ಆರೆಸ್ಸೆಸ್ ನೆಲಕಚ್ಚಿ ಮಣ್ಣಾಗುವ, ನೆಪ ಹೇಳುವ ಎಲ್ಲಾ ಅವಕಾಶಗಳೂ ಕೇರಳದಲ್ಲಿತ್ತು. ಬೆಳಗ್ಗೆ ಶಾಖೆಗೆ ಹೋದ ಹುಡುಗ ಮನೆಗೆ ಮರಳುವ ನಂಬಿಕೆ ಸ್ವತಃ ಆ ಹುಡುಗನಿಗೇ ಇರುವುದಿಲ್ಲ, ಆತನನ್ನು ಶಾಖೆಗೆ ಕಳುಹಿಸಿದ ಮನೆಯವರಿಗೂ ಆ ನಂಬಿಕೆ ಇರುವುದಿಲ್ಲ. ಅಂಥಹ ಕೇರಳದ ಶಾಖೆಗಳ ಪ್ರಮಾಣ ಇಡೀ ದೇಶದಲ್ಲೇ ಹೆಚ್ಚು! ಅಲ್ಲದೆ ಶತಮಾನಗಳ ಕಾಲ ನಿರಂತರ ಮತಾಂಧರ, ವ್ಯಾಪಾರಿಗಳ ನೇರ ಆಕ್ರಮಣಗಳಿಗೆ ತುತ್ತಾದರೂ ಕೇರಳ ಇನ್ನೂ ಕೇರಳವಾಗಿಯೇ ಇದೆ! ದೇವರ ಸ್ವಂತ ನಾಡಾಗಿಯೇ ಇದೆ. ಶ್ರೀಮಂತವಾಗಿಯೇ ಇದೆ.

ಕಮ್ಯುನಿಸ್ಟ್ ಆಡಳಿತವಿದ್ದರೂ ಕೇರಳದಲ್ಲಿ ಸಂಸ್ಕೃತಿ ಗಾಢವಾಗಿಯೇ ಇದೆ. ಇದಕ್ಕೆಲ್ಲಾ ಒಂದೇ ಒಂದು ಕಾರಣ ಕೇರಳದ ಆರೆಸ್ಸೆಸ್ ಸ್ವಯಂಸೇವಕರ ದಣಿವರಿಯದ ಶ್ರಮ. ಧರ್ಮಕ್ಕಾಗಿ ಪ್ರಾಣವನ್ನಾದರೂ ಕೊಟ್ಟೇನು ಎಂಬ ಧೈರ್ಯ. ಈ ಗುಣವೇ ಇಂದಿನ ವಿಷಮ ಪರಿಸ್ಥಿತಿಯಲ್ಲೂ ರಾಜ್ಯವನ್ನು ದೇವರ ಸ್ವಂತ ನಾಡಾಗಿಯೇ ಕಾಪಾಡಿದೆ.ಕೇರಳದ ಸ್ವಯಂಸೇವಕರಲ್ಲಿ ಅಂಥ ಗುಣವನ್ನು ರೂಪಿಸಿದ ಹಲವು ವ್ಯಕ್ತಿತ್ವಗಳಿದ್ದವು. ಹೋರಾಟದ ವಾತಾವರಣದಲ್ಲಿ ಪ್ರತಿರೋಧ ಮತ್ತು ಆಕ್ರೋಶ ಮಾತ್ರ ಹುಟ್ಟುತ್ತದೆ. ಮತ್ತು ಅವು ಯಾರ ಪ್ರೇರಣೆಯಿಲ್ಲದೆಯೂ ಹುಟ್ಟುತ್ತವೆ ಎಂಬುದನ್ನು ಕೇರಳದ ಆರೆಸ್ಸೆಸ್ ನಾಯಕರು ಅರಿತಿದ್ದರು. ಪ್ರತಿರೋಧ ಮತ್ತು ಆಕ್ರೋಶ ಸಂಘಟನೆಯನ್ನು ಬಲಪಡಿಸಬಹುದೇ ಹೊರತು ಕೇರಳವನ್ನು ರೂಪಿಸಲಾರದು ಎಂಬ ಸತ್ಯ ಅವರಿಗೆ ತಿಳಿದಿತ್ತು. ಹಾಗಾಗಿ ಹೋರಾಟದ ಹಾದಿಯಲ್ಲಿಯೂ ಸ್ವಯಂಸೇವಕರಲ್ಲಿ ಚಿಂತನೆಯನ್ನು ರೂಪಿಸಿದ ಹಲವು ಮಹಾನ್ ನಾಯಕರು ಕೇರಳದಲ್ಲಿ ಹುಟ್ಟಿದರು.

ಒಂದು ಕಾಲಕ್ಕೆ ನಾರಾಯಣಗುರುಗಳು ರಾಜ್ಯದಲ್ಲಿ ಮಾಡಿದ್ದ ಸಾಮಾಜಿಕ ಕ್ರಾಂತಿಯನ್ನೂ ಜನ ಮರೆತು ಸಾಕ್ಷಾತ್ ನಾರಾಯಣ ಗುರುಗಳನ್ನೇ ಚೌಕಟ್ಟಿನಲ್ಲಿಟ್ಟು ಪೂಜಿಸಲಾರಂಭಿಸಿದ್ದರು. ಮತ್ತೆ ನಾರಾಯಣ ಗುರುಗಳ ಚಿಂತನೆಗೆ ಜೀವ ಕೊಟ್ಟವರೂ ಆರೆಸ್ಸೆಸ್ ಕಾರ್ಯಕರ್ತರು. ಅದೇ ಹೊತ್ತಿಗೆ ಮಹಾರಾಷ್ಟ್ರದಿಂದ ಬಂದ ಪಿ. ಮಾಧವಜೀ ಎಂಬ ಆರೆಸ್ಸೆಸ್ ಮುಖಂಡರೊಬ್ಬರು ನಾರಾಯಣಗುರುಗಳ ಚಿಂತನೆಯಾಧಾರದಲ್ಲಿ ತಂತ್ರ ವಿದ್ಯಾಪೀಠ ಸ್ಥಾಪಿಸಿ ಹಿಂದುಳಿದವರನ್ನು ಅರ್ಚಕರನ್ನಾಗಿ ನೇಮಕ ಮಾಡುವ ಕಾರ್ಯಕ್ಕಿಳಿದರು. ಎಂದಿನಂತೆ ಕಮ್ಯುನಿಸ್ಟರು ವಿರೋಸಿದರೆ, ಅವರ ಜೊತೆಗೆ ನಾರಾಯಣ ಗುರುಗಳನ್ನು ಜಾತಿ ಮುಖಂಡರನ್ನಾಗಿ ಕಟ್ಟಿಹಾಕಿದ ಜನಗಳೂ ವಿನಾ ಕಾರಣ ಮಾಧವಜೀ ಧೋರಣೆಯನ್ನು ವಿರೋಸಲಾರಂಭಿಸಿದರು! ಎಂ.ಎ ಕೃಷ್ಣನ್ ಎಂಬ ಮತ್ತೊಬ್ಬರು ಪ್ರಚಾರಕರ ಶ್ರಮದಿಂದ ಇಂದು ಕೇರಳದಲ್ಲಿ ಕೃಷ್ಣವೇಷ ಧರಿಸಿದ ಮಕ್ಕಳ ಮೆರವಣಿಗೆಗಳು ವರ್ಷಕ್ಕೆ ಸುಮಾರು ಮೂರು ಸಾವಿರದಷ್ಟು ನಡೆಯುತ್ತವೆ. ಇದರ ಪ್ರೇರಣೆಯಿಂದ ಬಾಲಗೋಕುಲಂ ಎಂಬ ಪ್ರಕಲ್ಪವೇ ಅಸ್ತಿತ್ವಕ್ಕೆ ಬಂದಿದೆ.

ಈ ಬಾಲಗೋಕುಲಂನ ಸೆಳೆತ ಹೇಗಿತ್ತು ಎಂದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳೂ ಇದರಲ್ಲಿ ಭಾಗವಹಿಸುತ್ತಾರೆ. ಇದರಿಂದ ಕಣ್ಣು ಕೆಂಪಾಗಿಸಿಕೊಂಡ ಕಮ್ಯುನಿಸ್ಟರು ಬಾಲಸಂಗಮಂ ಆರಂಭಿಸಿದರು! ಕೇರಳದಲ್ಲಿ ಆರೆಸ್ಸೆಸ್ ಆಡಳಿತದಿಂದ ದೂರವಿರವಿರಬಹುದು, ಆದರೆ ಸಮಾಜಕ್ಕೆ ಹತ್ತಿರದಲ್ಲಿದೆ. ಅದಕ್ಕೆ ಕಾರಣ ಆರೆಸ್ಸೆಸ್ ಎಂತಹಾ ಸಂಘರ್ಷದ ಪರಿಸ್ಥಿತಿಯಲ್ಲೂ ಮರೆಯದ ತಮ್ಮ ತತ್ವ ಸಿದ್ಧಾಂತಗಳು.ಕೇರಳದಲ್ಲಿ ಅಂಥ ಚಿಂತನೆಯನ್ನು ಹುಟ್ಟುಹಾಕಿದ ಮತ್ತೊಬ್ಬ ಮಹಾವ್ಯಕ್ತಿ ಪಿ. ಪರಮೇಶ್ವರನ್.ಕೇರಳದಲ್ಲಿ ಹಲವು ಸಾಮಾಜಿಕ ಬದಲಾವಣೆಗೆ ಕಾರಣರಾದವರು ಪರಮೇಶ್ವನ್‌ಜೀ. ಕೇರಳದಂಥ ವಿಚಿತ್ರ ಸಾಮಾಜಿಕ ವಾತಾವರಣದಲ್ಲಿ ಆರೆಸ್ಸೆಸಿಗೆ ಪ್ರತಿರೋಧ ಮತ್ತು ಅಸ್ತಿತ್ವಗಳೇ ಮುಖ್ಯವಾಗುತ್ತಿದ್ದ ಹೊತ್ತಲ್ಲಿ ಸಾಮಾಜಿಕ ಚಿಂತಕನಾಗಿ ಸಮಸ್ತ ಕೇರಳದ ಭಾವನೆಗಳನ್ನು ಪುನರುಜ್ಜೀವಿತಗೊಳಿಸಿದ ಮಹಾತ್ಮ ಪಿ.ಪರಮೇಶ್ವರನ್‌ಜೀ. ಇವರು ಆರೆಸ್ಸೆಸಿಗೆ ಮಾತ್ರವಲ್ಲ, ಸಮಸ್ತ ಕೇರಳಕ್ಕೇ ಮರುಭೂಮಿಯಲ್ಲಿ ದಿಢೀರನೆ ಸಿಕ್ಕ ನೀರಿನ ಸೆಲೆಯಂತೆ ಆದರು. ಏಕೆಂದರೆ ಪಿ.ಪರಮೇಶ್ವರನ್ ಆರೆಸ್ಸೆಸಿನ ಪ್ರಚಾರಕರಾದರೂ ಕೇರಳದ ಖ್ಯಾತ ಚಿಂತಕ ಎಂದೇ ಹೆಸರಾದವರು. ಕೇರಳದಲ್ಲಿ ಅವರನ್ನು ಬರೆಯದ ಪತ್ರಿಕೆಗಳಿಲ್ಲ, ಮಾತಾಡಿಸದ ಟಿವಿಗಳಿಲ್ಲ. ಹೊಗಳದ ಕಮ್ಯುನಿಸ್ಟನೂ ಇಲ್ಲ. ಇಂಥ ಚಿಂತಕ ಆರೆಸ್ಸೆಸ್ ಬಿಟ್ಟರೆ ಇನ್ನಾವ ಸಂಘಟನೆಯಲ್ಲಿ ಸಿಗಲು ಸಾಧ್ಯ ಹೇಳಿ? ಪರಮೇಶ್ವನ್‌ಜೀ ದಕ್ಷಿಣದ ಗಡಿಯಿಂದ ಉತ್ತರದ ಕಾಸರಗೋಡಿನವರೆಗೂ ಮನೆಮನೆಗಳಲ್ಲಿ ಮಾತಾಡಿಕೊಳ್ಳುವಂತಾಗಲು ಮುಖ್ಯ ಕಾರಣ ಅವರ ಚಿಂತನೆಯ ಆಳ ಮತ್ತು ಅವರ ಬದುಕು. ಸ್ವಂತದ್ದೆನ್ನುವುದು ಏನೂ ಇಲ್ಲದ, ಕನಿಷ್ಟ ಮನೆಯೂ ಇಲ್ಲದ ಅವರು ಕೆಲವೇ ವರ್ಷಗಳಲ್ಲಿ ಕೇರಳದ ಸ್ವರೂಪವನ್ನೇ ಬದಲಾಯಿಸಿತು.

ಪಿ.ಪರಮೇಶ್ವನ್ ಜೀ ಎಂದರೆ ಒಂದು ಗ್ರಂಥಾಲಯ. ಹಲವು ಮೌಲ್ಯಗಳ, ಭಾರತೀಯ ತತ್ತ್ವಗಳ ಖಜಾನೆ. ಅವರ ಸಾಧನೆಗಳ ಪಟ್ಟಿಯನ್ನು ಮಾಡತೊಡಗಿದರೆ ಅದೇ ಒಂದು ಸಂಪುಟವಾದೀತು. ಕಳೆದ ಆರು ದಶಕಗಳಿಂದ ಅವರು ಉಸಿರಾಡಿದ್ದು ಸಮಾಜವನ್ನು. ಧರ್ಮವನ್ನು ಮತ್ತು ಭಾರತವನ್ನು ಮಾತ್ರ.ಕೇರಳದಲ್ಲಿ ಕರ್ಕಟಕಂ ಮಾಸ ಎಂದರೆ ಅಪಶಕುನ. ಮಲಯಾಳಿಗಳ ಪಾಲಿಗೆ ಕರ್ಕಟಕಂ ಮಾಸವೆಂದರೆ ಅಶುಭ ಮಾಸ. ಎಷ್ಟೋ ಸಾವಿರ ವರ್ಷಗಳಿಂದ ಅವರಲ್ಲಿ ಬಲಿತಿದ್ದ ಭಾವನೆ, ಪದ್ಧತಿಯಾಗಿ ಬದಲಾಗಿಬಿಟ್ಟಿತ್ತು. ಕೆಲವು ಆಚರಣೆಗಳನ್ನು ಮಾಡಬಾರದೆಂಬ ನಿಯಮ ಸೇರಿಹೋಗಿತ್ತು. ಶುಭ ಸಮಾರಂಭಗಳು ನಡೆಯಬಾರದೆಂಬ ಕಟ್ಟಳೆಗಳನ್ನು ಹಾಕಿಕೊಳ್ಳಲಾಗಿತ್ತು. ಕೇರಳದಲ್ಲಿ ಎಂಥೆಂಥಾ ಸುಧಾರಕರು ಬಂದರೂ ಈ ಅಶುಭ ಮಾಸವನ್ನು ಶುಭ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೆ ಕೆಲವು ವರ್ಷಗಳಿಂದೀಚೆಗೆ ಕರ್ಕಟಕಂ ಮಾಸದ ಬಗೆ ಇದ್ದ ಆ ಭಾವನೆ ಬದಲಾಗಿದೆ. ಅಶುಭವೆಂದುಕೊಳ್ಳುತ್ತಿದ್ದ ಕರ್ಕಟಕಂ ತಿಂಗಳೀಗ ಕೇರಳದಲ್ಲಿ ರಾಮಾಯಣ ಮಾಸಂ. ಕೇರಳದ ಪ್ರತೀ ಹಿಂದೂ ಮನೆ, ಪ್ರತೀ ಸಣ್ಣ ಮತ್ತು ದೊಡ್ಡ ದೇವಸ್ಥಾನಗಳಲ್ಲಿ ಕರ್ಕಟಕಂ ಮಾಸ ಪೂರ್ತಿ ರಾಮಾಯಣ ಪಠಣ ಆರಂಭವಾಗುತ್ತದೆ. ತಿಂಗಳಾಂತ್ಯಕ್ಕೆ ಪಠಣ ಮುಗಿಯುತ್ತದೆ. ಹಲವು ಸಂಘ ಸಂಸ್ಥೆಗಳು ಸಾರ್ವಜನಿಕ ರಾಮಾಯಣ ಪಠಣವನ್ನು ಆಯೋಜಿಸುತ್ತವೆ. ರಾಮಾಯಣ ಪಠನದಿಂದ ಈ ವೊದಲು ಜನರಲ್ಲಿ ಮನೆಮಾಡಿದ್ದ ಅಶುಭ ಎಂದುಕೊಂಡಿದ್ದ ಎಲ್ಲಾ ನಿಯಮಗಳೂ ಮಾಯವಾಗಿವೆ. ಕ್ಯಾಲೆಂಡರಿನಲ್ಲಿ ಕೂಡಾ ಕರ್ಕಟಕಂ ತಿಂಗಳನ್ನು ರಾಮಾಯಣ ಮಾಸಂ ಎಂದು ಛಾಪಿಸಲಾಗುತ್ತದೆ. ಈ ಬದಲಾವಣೆಗೆ ಕಾರಣರಾದವರು ಪಿ.ಪರಮೇಶ್ವರನ್ ಜೀ.

ಭಾರತೀಯ ವಿಚಾರ ಕೇಂದ್ರದ ನಿರ್ದೇಶಕರಾಗಿ ಕೇರಳದ ಬೌದ್ಧಿಕ ವಲಯವನ್ನು ವಿಸ್ತರಿಸುವ ಕಾರ್ಯಕ್ಕೂ ಪರಮೇಶ್ವರನ್‌ಜೀ ಇಳಿದರು. ಭಾರತೀಯ ವಿಚಾರ ಕೇಂದ್ರ ಇಂದು ಕೇರಳದ ವೈಚಾರಿಕ ಮತ್ತು ಸಂಶೋಧನಾ ಕ್ಷೇತ್ರದ ಕಾಶಿ ಎಂದೇ ಖ್ಯಾತವಾಗಿದೆ. ಜಾತಿ ತಾರತಮ್ಯವಿಲ್ಲದೆ, ಸಿದ್ಧಾಂತಗಳ ಹಂಗಿಲ್ಲದೆ ವಿಚಾರ ಕೇಂದ್ರದಲ್ಲಿ ಪ್ರತೀ ವರ್ಷ ಸಾವಿರಾರು ಯುವಕರು ಇತಿಹಾಸ, ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ, ಶಿಕ್ಷಣ, ಪರಿಸರ, ಅಭಿವೃದ್ಧಿ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ. ಕೇರಳಾದ್ಯಂತ ವಿಚಾರ ಕೇಂದ್ರದ ೩೦ ಘಟಕಗಳಿವೆ. ಮಾರ್ಕ್ಸ್ ಮತ್ತು ವಿವೇಕಾನಂದ, ಮಾರ್ಕ್ಸ್ ನಿಂದ ಮಹರ್ಷಿವರೆಗೆ, ಹಿಂದೂ ರಾಷ್ಟ್ರದ ಹೃದಯಬಡಿತ ಸಹಿತ ೧೨ ಪುಸ್ತಕಗಳನ್ನು ಬರೆದಿರುವ ಪರಮೇಶ್ವರನ್ ಅವರ ಎಲ್ಲಾ ಪುಸ್ತಕಗಳು ಕೇರಳದ ಚಿಂತಕ ವಲಯದಲ್ಲಿ ಚರ್ಚೆಗೊಳಗಾಗಿವೆ. ಆದರೆ ಯಾವ ಪುಸ್ತಕಗಳೂ ವಿವಾದಗಳಾಗಿಲ್ಲ. ಕಳೆದ ೧೫ ವರ್ಷಗಳಿಂದ ವಿವೇಕಾನಂದ ಕೇಂದ್ರದ ಅಧ್ಯಕ್ಷರಾಗಿರುವ ಪರಮೇಶ್ವರನ್ ಕೇಂದ್ರವನ್ನು ರಾಷ್ಟ್ರಕಟ್ಟುವ ಅಸ್ತ್ರವಾಗಿ ಮಾರ್ಪಡಿಸಿದರು. ಕೇರಳ ಮತ್ತು ತಮಿಳುನಾಡುಗಳಲ್ಲಿ ವಿವೇಕಾನಂದ ಕೇಂದ್ರದ ಚಟುವಟಿಕೆಗಳಿಂದ ಮತಾಂತರದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ.

ಉತ್ತರದ ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಅಂಡಾಮಾನ್‌ಗಳಲ್ಲೂ ವಿವೇಕಾನಂದ ಕೇಂದ್ರ ಶಾಲೆಗಳನ್ನು, ಬಾಲವಾಡಿಗಳನ್ನು, ವನವಾಸಿ ಕ್ಷೇತ್ರಗಳಲ್ಲಿ ಆನಂದಾಲಯಗಳನ್ನು ನಡೆಸುತ್ತಿದೆ. ಇವೆಲ್ಲವೂ ಒಬ್ಬ ಪಿ. ಪರಮೇಶ್ವರನ್‌ಜೀ ಅವರ ಕನಸ್ಸು. ಕೇರಳದ ಕೌಡಿಯಾರ್ ಉದ್ಯಾನವನ್ನು ಗುತ್ತಿಗೆ ತೆಗೆದುಕೊಂಡು ವಿವೇಕಾನಂದ ಕೇಂದ್ರ ಅದನ್ನು ವಿವೇಕಾನಂದ ಉದ್ಯಾನವನ್ನಾಗಿ ರೂಪಿಸುತ್ತಿದೆ. ವಿವೇಕಾನಂದರು ಮಲಗುತಿದ್ದ ಗ್ರಾನೈಟಿನ ಮಂಚವನ್ನು ಸುಂದರಂ ಪಿಳ್ಳೈ ಅವರ ಕುಟುಂಬಸ್ಥರಿಂದ ತಂದು ಅದನ್ನು ಪ್ರೇರಣೆಯ ವಸ್ತುವನ್ನಾಗಿ ಮಾಡುವ ಹೊಣೆಯನ್ನೂ ವಹಿಸಿಕೊಂಡಿದೆ. ಇವೆಲ್ಲದರ ಹಿಂದಿನ ಚಿಂತನೆ ಪರಮೇಶ್ವರನ್‌ಜೀಯವರದ್ದು. ಇಂಥ ಪರಮೇಶ್ವನ್‌ಜೀ ಎಲ್ಲೇ ಮಾತಾಡಲು ನಿಂತರೂ ಸಭಿಕರು ವಿವೇಕಾನಂದರನ್ನು ತಮಗರಿವಿಲ್ಲದಂತೇ ಆವಾಹಿಸಿಕೊಳ್ಳುತ್ತಾರೆ. ಇಂತಹ ಪರಮೇಶ್ವರನ್‌ಜೀ ಅವರಿಗೆ ೯೦ ವರ್ಷವಾದಾಗ ಕೇರಳದ ಸ್ವಯಂಸೇವಕರು ತಮ್ಮ ಪ್ರೀತಿಯ ಪರಮೇಶ್ವರನ್‌ಜೀ ಅವರಿಗೆ ನವತಿ ಉತ್ಸವವನ್ನು ಆಯೋಜಿಸಿದ್ದರು. ವರ್ಷಪೂರ್ತಿ ಉತ್ಸವ ನಡೆಯಿತು. ಈ ಎಲ್ಲಾ ಪ್ರೀತಿ-ಗೌರವಕ್ಕೆ ಮುರುಕು ಸೇತುವೆ ಮೇಲಿಂದ ಲಕ್ಷ್ಯಕ್ಕೆ ಬಾಣ ಹೂಡಿದ ಪರಮೇಶ್ವರನ್ ಅವರಲ್ಲದೆ ಇನ್ಯಾರು ಅರ್ಹರು?

ಇಂದು ಈ ಮಹಾನ್ ಚೇತನ ತಮ್ಮ ಇಹ ಲೋಕದ ಕಾರ್ಯಗಳನ್ನು ಮುಗಿಸಿ ಭಗವಂತನ ಸಾಮೀಪ್ಯ ಪಡೆದಿದ್ದಾರೆ, ಅವರ ಜೀವನ ನಮಗೆಲ್ಲಾ ಆದರ್ಶವಾಗಲಿ!
ಸದ್ಗತಿ, ಓಂ ಶಾಂತಿ

ಆಕರ: samvaada.org

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

Chapter 20:

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

Chapter 21:

ಅಧ್ಯಾಯ 21: ಸಂಘದ ನೇತಾರರು ಒಂದು ಮಾತನಾಡಲಿ ಅದನ್ನು ವಿವಾದಕ್ಕೆ ಎಳೆಯೋಣ ಎಂಬ ಉದ್ದೇಶವನ್ನು ಇಟ್ಟುಕೊಂಡ ಪತ್ರಿಕೆಗಳು ಆರೆಸ್ಸೆಸ್ ನ ಮಹತ್ತರವಾದ ಸಾಧನೆಗಳ ಬಗ್ಗೆ ಮಾತನಾಡುವುದೇ ಇಲ್ಲ!

Chapter 22:

ಅಧ್ಯಾಯ 22: ಆರೆಸ್ಸೆಸ್ ಪ್ರಚಾರಕರೆಂದರೆ ಭೈರಾಗಿಗಳು, ಸಂತರಂತೆ ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟು ತಮ್ಮದೆಲ್ಲವನ್ನು ದೇಶ ಕಟ್ಟುವ ಕಾಯಕಕ್ಕೆ ಸಮರ್ಪಿಸಿ ಬಿಡುತ್ತಾರೆ! ಮೈ ಚ ಜಯದೇವ್ ಕೂಡ ಹಾಗೇ ಬದುಕಿದವರು!

Chapter 23:

ಅಧ್ಯಾಯ 23: ದೇಶಪ್ರೇಮಿಗಳಿಗೆ ಭಾರತ ದರ್ಶನ ಮಾಡಿಸಿದ ಮಹಾನುಭಾವ! ಸರಳತೆ, ಸಜ್ಜನಿಕೆ, ಅದ್ಭುತ ವಾಕ್ಪಟುತ್ವ, ಅವರೇ ಶ್ರೀ ವಿದ್ಯಾನಂದ ಶೆಣೈ!

Chapter 24:

ಅಧ್ಯಾಯ 24: ವಿದ್ಯಾ ಭಾರತಿ ಹಾಗೂ ಏಕಲ್ ವಿದ್ಯಾಲಯಗಳು! ಆರೆಸ್ಸೆಸ್ ಹೇಗೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದಿತು, ಇಲ್ಲಿದೆ ಮಾಹಿತಿ!

Chapter 25:

ಅಧ್ಯಾಯ 25: ಬದಲಾವಣೆ ಜಗದ ನಿಯಮ! ಸಂಘವೂ ಹೊಸಹರಿವುಗಳಿಗೆ ಒಡ್ಡಿಕೊಳ್ಳುತ್ತಾ, ತನ್ನ ಸಿದ್ಧಾಂತಕ್ಕೆ ಲೇಶವೂ ಚ್ಯುತಿ ಬಾರದ ಹಾಗೆ ಬದಲಾಗುತ್ತಿದೆ! ಜನರೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದೆ!

Chapter 26:

ಅಧ್ಯಾಯ 26: ವಕೀಲ್ ಸಾಬ್ ಎಂಬ ಕರ್ಮ ಯೋಗಿ! ಸಹಕಾರ ಭಾರತಿಯ ಮೂಲಕ ದೇಶದ ಸಾಮಾನ್ಯ ಜನರ ಜೀವನವನ್ನು ತಟ್ಟಿದ ಮಹಾನ್ ಚೇತನ!

-Dr.Sindhu Prashanth

Tags

Related Articles

FOR DAILY ALERTS
Close