ಪ್ರಚಲಿತ

ಕಾಳಧನದ ವಿರುದ್ದ ಮೋದಿಯವರ ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ ಸರ್ಜಿಕಲ್ ಸ್ಟ್ರೈಕ್ ಸಕ್ಸಸ್!! ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿಯಿಂದಾಗಿ ನೇರ ತೆರಿಗೆ ಸಂಗ್ರಹಣೆಯು 7 ವರ್ಷಗಳಲ್ಲಿ ಅತ್ಯಧಿಕ ಮಟ್ಟಕ್ಕೆ ಏರಿಕೆ!!

ಅಯ್ಯೋ ದೇವರೇ !! ಇಲ್ಲಿವರೆಗೆ ಮೋದಿ ನೋಟ್ ಬ್ಯಾನ್ ಮಾಡಿ ಜನರ ಜೇಬಿಗೆ ಕತ್ತರಿ ಕಾದಿದ್ರಪ್ಪೋ… ಮೋದಿ ಜಿ.ಎಸ್.ಟಿ ತಂದು ದೇಶದ ಸಣ್ಣ ವ್ಯಾಪಾರಿಗಳನ್ನು ಬೀದಿಗೆ ಬಿಸಾಕಿದ್ರು ಕಣ್ರಪ್ಪೋ…. ನೋಟ್ ಬ್ಯಾನ್ ಮೋದಿಯ ಬಹುದೊಡ್ಡ ಹಗರಣ ನೋಡ್ರಪ್ಪೋ…..ಜಿ.ಎಸ್.ಟಿ ಮೋದಿ ಮಾಡಿದ ತಪ್ಪು ಕೇಳ್ರಪ್ಪೋ ಎಂದು ದಿನ ಬೆಳಗಾದರೆ ಮೋದಿಗೆ ಬಯ್ಯುತ್ತಾ ನಾಲಗೆ ತುರಿಕೆ ಕಡಿಮೆ ಮಾಡಿಕೊಳ್ಳುತ್ತಿದ್ದ “ಪಿಡಿ ಗ್ಯಾಂಗ್” ಇನ್ನು ಮೋದಿಯನ್ನು ಬಯ್ಯಲು ಯಾವ ಅಸ್ತ್ರ ಉಪಯೋಗಿಸುವುದು ಕಣ್ರೀ? ಮೋದಿಯನ್ನು ವಿರೋಧ ಮಾಡಲು, ಅವರಿಗೆ ಬಯ್ಯಲು ಇವೆರಡು ವಿಚಾರಗಳು ಇದ್ದವು ಈಗ ಅದಕ್ಕೂ ಕಲ್ಲು ಹಾಕಿದ್ರಾ ಮೋದಿ? ಇನ್ನೇನಿದ್ದರೂ “ಹದಿನೈದು ಲಕ್ಷ ಬಂತಾ? ಯಾವಾಗ ಬರುತ್ತೆ?” ಅಂತ ಪಿಡ್ಡಿಗಳು ಬೊಗಳುತ್ತಾ ಕಾಲ ಕಳೆಯಬೇಕಷ್ಟೆ. “ಭಕ್ತರ” ಹಣೆಬರಹ ಚೆನ್ನಾಗಿದ್ದು ಮೋದಿ ದಯದಿಂದ ಆ ಹದಿನೈದು ಲಕ್ಷಗಳೂ ಬಂದು ಬಿಟ್ಟರೆ, ಪಿಡಿ ಗುಲಾಮರ ಬಾಯಿಗೆ ಶಾಶ್ವತ ಬೀಗ!!

ಕೇಂದ್ರದ ಹಣಕಾಸು ಸಚಿವಾಲಯ 2017-18ರ ಹಣಕಾಸಿನ ವರ್ಷದಲ್ಲಿ ಸಂಗ್ರಹಣೆಯಾದ ನಿವ್ವಳ ನೇರ ತೆರಿಗೆಯನ್ನು ಪ್ರಕಟಿಸಿದೆ. 2017-18ರ ಆರ್ಥಿಕ ವರ್ಷಕ್ಕೆ ನಿವ್ವಳ ನೇರ ತೆರಿಗೆ ಸಂಗ್ರಹವು 10 ಲಕ್ಷ ಕೋಟಿ ರೂ.ಗಳನ್ನು ಮೀರಿದೆ. ಇದು ಸರಕಾರವು ಬಜೆಟ್ನಲ್ಲಿ ಅಂದಾಜಿಸಿದ 9.8 ಲಕ್ಷ ಕೋಟಿ ಮೊತ್ತಕ್ಕಿಂತಲೂ ಅಧಿಕವಾಗಿದೆ. ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ಕಳೆದ 7 ವರ್ಷಗಳಲ್ಲೇ ಇಷ್ಟು ಮೊತ್ತದ ತೆರಿಗೆ ಸಂಗ್ರಹಣೆ ಆಗಿರುವುದು ಇದೇ ಮೊದಲು. ತೆರಿಗೆ ಸಂಗ್ರಹಣೆಯು 18% ಏರಿಕೆ ಕಂಡು ಬಂದಿದೆ. ಅಲ್ಲಿಗೆ ಕಾಳಧನದ ವಿರುದ್ದ ಮೋದಿಯವರ ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ ಸರ್ಜಿಕಲ್ ಸ್ಟ್ರೈಕ್ ಸಕ್ಸಸ್!! ಮೋದಿ-ಜೇಟ್ಲಿ ಧಾಂಡಿಗರ ಸ್ಟ್ರೈಕ್ ರೇಟಿಗೆ ವಿಶ್ವ ಬ್ಯಾಂಕ್, ಮೂಡಿಗಳ ಮೂಡೇ ಔಟಾಗಿದೆ!! ಅರ್ಥ ಶಾಸ್ತ್ರದ ಅಮರ್ಥ್ಯ ಸೇನರೆಲ್ಲ ಮಕಾಡೆ ಮಲಗಿದ್ದಾರೆ. ಭಾರತದ ಜಿ.ಡಿ.ಪಿ ಉಸೇನ್ ಬೋಲ್ಟ್ ವೇಗದಲ್ಲಿ ಓಡಿ ದಾಖಲೆ ಸೃಷ್ಟಿಸುತ್ತಿದೆ!!

ಹಣಕಾಸು ಕಾರ್ಯದರ್ಶಿ ಹನ್ಸ್ ಮುಖ್ ಆಧಿಯಾ ಅವರ ಪ್ರಕಾರ ಹಿಂದಿನ ವಿತ್ತ ವರ್ಷದ ತಾತ್ಕಾಲಿಕ ಅಂಕಿ ಅಂಶಗಳು ನೇರ ತೆರಿಗೆ ಸಂಗ್ರಹಣೆಯಲ್ಲಿ 17.1% ಏರಿಕೆ ಕಂಡುಬಂದು 9.95 ಲಕ್ಷ ಕೋಟಿ ರೂಪಾಯಿ ತೆರಿಗೆ ಹಣ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಈಗ ನಿವ್ವಳ ಅಂಕಿ ಅಂಶಗಳು ಅಂದಾಜುಗಳನ್ನು ಮೀರಿದೆ!! ಅಂದರೆ ಸರಕಾರದ ಅಂದಾಜಿಗಿಂತಲೂ 0.9% ಹೆಚ್ಚು ತೆರಿಗೆ ಸಂಗ್ರಹಣೆಯಾಗಿದೆ. ಇದರರ್ಥ ಭ್ರಷ್ಟಾಚಾರ ಗಣನೀಯವಾಗಿ ಕಡಿಮೆ ಆಗಿದೆ ಎಂದಲ್ಲವೆ? ಹಿಂದೆ ಸರಕಾರಕ್ಕೆ ಕೋಟ್ಯಂತರ ರುಪಾಯಿಯ ಪಂಗನಾಮ ಹಾಕುತ್ತಿದ್ದವರು ಈಗ ಅನಿವಾರ್ಯವಾಗಿಯಾದರೂ ತೆರಿಗೆ ಕಟ್ಟುತ್ತಿದ್ದಾರೆ ಎನ್ನುವುದು ಅಂಕಿ ಅಂಶಗಳಿಂದ ತಿಳಿಯಬಹುದು. ಡಿಮೋನೊಟೈಸೇಷನ್ ನಂತರದ ವರ್ಷಗಳಲ್ಲಿ ನೇರ ತೆರಿಗೆ ಆದಾಯದಲ್ಲಿ ದೃಢವಾದ ಬೆಳವಣಿಗೆ ಸರ್ಕಾರದ ವಿವಿಧ ತೆರಿಗೆ ನೀತಿಗಳ ಧನಾತ್ಮಕ ಪ್ರಭಾವದ ಸೂಚಕವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಜಗತ್ತಿನ ದೊಡ್ಡಣ್ಣ ಚಿಕ್ಕಣ್ಣಗಳೂ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಇಂತಹ ನಿರ್ಧಾರಗಳಿಂದ ಅವರ ರಾಜಕೀಯ ಭವಿಷ್ಯ ಮಣ್ಣು ಮುಕ್ಕಬಹುದು. ಆದರೆ ಮೋದಿ ಮಾತ್ರ ತಮ್ಮ ರಾಜಕೀಯ ಭವಿಷ್ಯ ನೋಡಲಿಲ್ಲ ಬದಲಾಗಿ ದೇಶದ ಭವಿಷ್ಯ ನೋಡಿದರು.

ದೇಶಕ್ಕಾಗಿ ನಿಂದನೆ, ಅಪಮಾನ, ಟೀಕೆ, ಟಿಪ್ಪಣಿಗಳ ಕಾರ್ಕೋಟ ವಿಷವನ್ನು ಕುಡಿದ ಮೋದಿ ಅವರ ತ್ಯಾಗ ವ್ಯರ್ಥವಾಗಲಿಲ್ಲ. ದೇಶದ ಜನರಿಗೆ ಮೋದಿ ಎಂದೂ ಮೋಸ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಮೋದಿಯವರದ್ದು ದೂರದರ್ಶಿ ವ್ಯಕ್ತಿತ್ವ ಹಾಗಾಗಿ ನೋಟ್ ಬ್ಯಾನ್, ಜಿ.ಎಸ್.ಟಿ ಅಂತಹ ನಿರ್ಣಯಗಳನ್ನು ದೂರಗಾಮಿ ಪರಿಣಾಮಗಳಿಗಾಗಿಯೆ ತೆಗೆದುಕೊಳ್ಳಲಾಗಿದೆ. ಬೀಜ ಬಿತ್ತಿದ ಮರುದಿನವೆ ಫಲ ಸಿಗುವುದಿಲ್ಲ. ಅದು ಗಿಡವಾಗಿ, ಮರವಾಗಿ ಬೆಳೆದ ನಂತರ ಹೂ ಬಿಟ್ಟು, ಕಾಯಿ ಹಣ್ಣಾಗಿ ಮಾಗಿದ ಮೇಲೆ ತಿನ್ನಲು ಯೋಗ್ಯವಾಗುತ್ತದೆ. ಯಾವುದಕ್ಕೂ ತಾಳ್ಮೆ ಬೇಕು. ಎಪ್ಪತ್ತು ವರ್ಷಗಳಲ್ಲಿ ಇಡಿಯ ದೇಹಕ್ಕೆ ಹಬ್ಬಿದ ರೋಗ ಒಂದು ಸರ್ಜರಿಯಿಂದ ದಿನ ಬೆಳಗಾಗುವುದರೊಳಗೆ ಸರಿಯಾಗಲಾರದು. ಅದಕ್ಕೆ ಹತ್ತು-ಹನ್ನೆರಡು ಸರ್ಜರಿಗಳಾದರೂ ಬೇಕು. ವೃಣ ಗುಣವಾಗಲು ಐದು-ಹತ್ತು ವರ್ಷಗಳು ಬೇಕು. ಇಂತಹ ಸರ್ಜರಿಗಳನ್ನು ಮಾಡಲು ಮೋದಿಯವರನ್ನು ಮತ್ತೆ ಮತ್ತೆ ಚುನಾಯಿಸೋಣ. ದೇಶವನ್ನು ರೋಗ ಮುಕ್ತವಾಗಿಸಿ ಸ್ವಸ್ಥವಾಗಿಸೋಣ….2019 ಮತ್ತೊಮ್ಮೆ ಮೋದಿ..

-ಶಾರ್ವರಿ

Tags

Related Articles

Close