ಪ್ರಚಲಿತ

ರಾಹುಲ್ ಗಾಂಧಿಯನ್ನೇ ತಲೆಕೆಳಗೆ ಮಾಡಿದ ದೇವೇಗೌಡರು! ಡಿಕೆಶಿಗೆ ಖಾತೆ ತಪ್ಪಲು ಕಾರಣವೇನು ಗೊತ್ತಾ.? ಪಿಎಮ್ ಆಗಬೇಕಾ, ನನ್ನ ಮಾತು ಕೇಳ್ಕೊಂಡಿರಿ ಅಷ್ಟೆ…

2014ರ ಲೋಕಸಭಾ ಚುನಾವಣೆಯ ನಂತರ ಭಾರತದಲ್ಲಿ ಒಂದು ಅದ್ಭುತವಾದ ವಾತಾವರಣ ನಿರ್ಮಾಣವಾಗಿದೆ. ಶ್ರೀ ನರೇಂದ್ರ ಮೋದಿಯವರು ಪ್ರಧಾನಿ ಪಟ್ಟವನ್ನು ಅಲಂಕರಿಸಿದ ನಂತರ ದೇಶದಲ್ಲಿ ಬದಲಾವಣೆಯ ಗಾಳಿ ಬಹಳ ಜೋರಾಗಿಯೇ ಬೀಸುತ್ತಿದೆ. ಮೋದಿ ಹೋದಲ್ಲೆಲ್ಲಾ ವಿಜಯದ ಪತಾಕೆಯನ್ನು ಹಾರಿಸಿಕೊಂಡೇ ಬರುತ್ತಿದ್ದಾರೆ. ವಿದೇಶವೇ ಇರಲಿ ಸ್ವದೇಶವೇ ಇರಲಿ, ಶೃಂಗ ಸಭೆಯೇ ಇರಲಿ ಸಾರ್ಕ್ ದೇಶದ ಸಭೆಯೇ ಇರಲಿ, ವಿಶ್ವ ಸಂಸ್ಥೆ ಇರಲಿ ವಿಶ್ವ ಒಕ್ಕೂಟವೇ ಇರಲಿ, ಭಾರತದ ಪ್ರಧಾನಿ ಅಲ್ಲಿ ಇದ್ದಾರೆಂದರೆ ಭಾರತಕ್ಕೆ ಸಿಗುತ್ತಿದ್ದ ವಿಶೇಷ ಗೌರವವೇ ಹೆಮ್ಮೆಯ ವಿಚಾರವಾಗಿತ್ತು. ಅತ್ಯಂತ ಕೆಳಮಟ್ಟದಲ್ಲಿದ್ದ ಭಾರತವನ್ನು ಅತ್ಯಂತ ಎತ್ತರದಲ್ಲಿ ಕೊಂಡೊಯ್ದ ಐತಿಹಾಸಿಕ ಕ್ಷಣಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ.

ಆದರೆ ಭಾರತದಲ್ಲಿ ಮಾತ್ರ ವಿರೋಧ ಪಕ್ಷಗಳು ಮೋದಿಯವರ ಕಾಲನ್ನು ಎಳೆಯುವತ್ತಲೇ ಕಾರ್ಯಪ್ರವೃತ್ತವಾಗುತ್ತಿವೆ. ಈ ಹಿಂದೆ ಎಂದು ಕಂಡರಿಯದಂತೆ ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಕೆಲಸ ಮಾಡದಂತೆ ನೋಡಿಕೊಳ್ಳುತ್ತಿವೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಈ ಹಿಂದಿನ ಚುನಾವಣೆಯಲ್ಲೂ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದರು. ಮುಂದಿನ ಲೋಕ ಸಭಾ ಚುನಾವಣೆಯಲ್ಲೂ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಅಭ್ಯರ್ಥಿ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸೋಲನ್ನೇ ಅನುಭವಿಸುತ್ತಿದ್ದಾರೆ ಎಂಬುವುದು ನಗ್ನ ಸತ್ಯವಾಗಿದೆ. ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆದಿದ್ದ 22 ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮಖಾಡೆ ಮಲಗಿದೆ.

ಈ ಕಾರಣಕ್ಕಾಗಿಯೆ ಕರ್ನಾಟಕದಲ್ಲಿ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡು ಭಾರತೀಯ ಜನತಾ ಪಕ್ಷದ ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸು ಈಡೇರದಂತೆ ಶ್ರಮ ವಹಿಸಿದರು. ಕರ್ನಾಟಕ ವಿಧಾನಸಭಾ ಚುಜನವಣೆಯಲ್ಲಿ ಭಾರತೀಯ ಜನತ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ 2ನೇ ಸ್ಥಾನಕ್ಕೆ ಕುಸಿದಿದ್ದ ಕಾಂಗ್ರೆಸ್ ಪಕ್ಷ 3ನೇ ಸ್ಥಾನಕ್ಕೆ ಕುಸಿದಿದ್ದ ಜನತಾ ದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಭಾರತೀಯ ಜನಾತ ಪಕ್ಷವನ್ನು ದೂರವಿಡುವ ಮಹಾ ಕಾರ್ಯಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯೂ ಆಗಿತ್ತು. 

ಆದರೆ ಇದೀಗ ಕಾಂಗ್ರೆಸ್‍ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕರ್ನಾಟಕದಲ್ಲಿ ಖಾತೆ ಹಂಚಿಕೆ ಸಮಸ್ಯೆ ಆರಂಭವಾಗಿದ್ದು ಯಾರಿಗೆ ಯಾವ ಖಾತೆ ಎಂಬುವುದರ ಬಗ್ಗ ಭಾರೀ ಚರ್ಚೆಗಳೇ ನಡೆಯುತ್ತಿವೆ. ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಇಂಧನ ಖಾತೆ ಸಿಗಬೇಕು ಎಂದು ಲಾಬಿ ನಡೆದಿತ್ತು, ಆದರೆ ಈ ಖಾತೆ ಜನತಾ ದಳದ ಶಾಕ ಹಾಗೂ ದೇವೇಗೌಡರ ಪುತ್ರ ರೇವಣ್ಣಗೆ ಸಿಗಬೇಕೆಂದು ಜನತಾ ದಳದ ಹಠ ಆಗಿತ್ತು. ಈ ಕಾರಣದಿಂದಲೇ ಸಂಪುಟ ವಿಸ್ತರಣಾ ಕೆಲಸ ಮುಂದೆ ಮುಂದೆ ಹೋಗಿತ್ತು.

ರಾಹುಲ್ ಗಾಂಧಿಗೆ ದೊಡ್ಡ ಗೌಡರ ಆರ್ಡರ್..!

ಈ ಮಧ್ಯೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಹುಲ್ ಗಾಂಧಿಗೆ ಕರೆ ಮಾಡಿ ರಾಜಕೀಯ ಪಾಠ ಮಾಡಿದ್ದಾರೆ.! ಇಂಧನ ಸಹಿತ ಅನೇಕ ಖಾತೆಗಳನ್ನು ತಮಗೇ ಬಿಟ್ಟುಕೊಡಬೇಕೆಂದು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದರು. ಆದರೆ ರಾಹುಲ್ ಗಾಂಧಿಗೆ ದೇವೇಗೌಡರು ರಾಜಕೀಯ ಪಾಠವನ್ನು ಮಾಡಿದ್ದು ಗೌಡರ ಮಾತಿಗೆ ರಾಗಾ ತಲೆ ತಗ್ಗಿಸಿದ್ದಾರೆ.

ದೂರವಾಣಿ ಮೂಲಕ ರಾಹುಲ್ ಗಾಂಧಿ ಜೊತೆ ಮಾತನಾಡಿದ್ದ ದೇವೇಗೌಡರು ಈ ಬಗ್ಗೆ ಚರ್ಚಿಸಿದ್ದಾರೆ. “ನಿಮಗೆ ಆ ಒಂದು (ಇಂಧನ) ಖಾತೆ ಮುಖ್ಯವೋ ಅಥವಾ ಮುಂದಿನ ಲೋಕಸಭಾ ಚುನಾವಣೆ ಮುಖ್ಯವೋ. ಸುಮ್ಮನೆ ಒಂದು ಖಾತೆಗೆ ಪಟ್ಟು ಹಿಡಿಯಬೇಡಿ. ಒಂದು ಖಾತೆ ಹೋದರೆ ನಿಮ್ಮ ಪಕ್ಷಕ್ಕೆ ಏನೂ ಆಗೋದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡೋದೇ ಮುಖ್ಯವಾಗಿರಿಸಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು 10 ಸ್ಥಾನಕ್ಕೆ ಇಳಿಸುವಂತೆ ನೋಡಿಕೊಳ್ಳಬೇಕು. ಹೀಗಾಗಿ ಈಗ ಸಣ್ಣ ಪುಟ್ಟ ವಿಚಾರಗಳಿಗೆ ಹಠ ಹಿಡಿದರೆ ವ್ಯರ್ಥವಾಗುತ್ತದೆ” ಎಂದು ರಾಹುಲ್ ಗಾಂಧಿ ಬಳಿ ಹೇಳಿದ್ದಾರೆ.

ದೇವೇಗೌಡರ ಮಾತಿಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರೇ ಸುಸ್ತಾಗಿ ಹೋಗಿದ್ದಾರೆ. ದೇವೇಗೌಡರು ಹೇಳಿದ್ದಕ್ಕೆಲ್ಲಾ ಜೈ ಎಂದಿದ್ದಾರೆ. ಯಾಕೆಂದರೆ ರಾಹುಲ್ ಗಾಂಧಿಗೆ ಈ ಮೈತ್ರಿಗಿಂತ ಮುಂದಿನ ಲೋಕಸಭಾ ಚುನಾವಣಾ ಮೈತ್ರಿಯೇ ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕಾದರೆ ಈ ಬಾರಿ ಗೌಡರು ಹೇಳಿದಂತೆ ಕೇಳಲೇಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಇದೀಗ ಡಿಕೆ ಶಿವಕುಮಾರ್ ಅವರನ್ನು ಮನವೊಲಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ.

ಇನ್ನು ಉಳಿದಿರುವ ದಾರಿ ಇಷ್ಟೇ. ಡಿಕೆ ಶಿವಕುಮಾರ್‍ಗೆ ಒಂದು ಖಾತೆಯನ್ನು ನೀಡಿ ನಂತರ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡುವುದು. ಒಂದು ಖಾತೆಯ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಸಧೃಢಗೊಳಿಸಿ ಅಧಿಕ ಸ್ಥಾನಗಳನ್ನು ಗೆಲ್ಲೋದು ರಾಹುಲ್ ಗಾಂಧಿಯ ಲೆಕ್ಕಾಚಾರ. ಆದರೆ ಇದು ಡಿಕೆ ಶಿವಕುಮಾರ್ ಅವರಿಗೆ ಭಾರೀ ಹಿನ್ನೆಡೆಯುಂಟಾಗಿದ್ದು ಮಾತ್ರ ಸುಳ್ಳಲ್ಲ.

  • ಸುನಿಲ್ ಪಣಪಿಲ
Tags

Related Articles

Close