ಪ್ರಚಲಿತ

224 ಬಿಜೆಪಿ ಅಭ್ಯರ್ಥಿಗಳೊಂದಿಗೆ ಕನ್ನಡಿಭಿಮಾನವನ್ನು ತೆರೆದಿಟ್ಟ ಮೋದಿ!! ಕನ್ನಡಾಂಬೆಗೆ ನಮೋ ಎಂದ ಪ್ರಧಾನಿ!!

ಚುನಾವಣೆ ನಡೆಯಲು ಇನ್ನೇನೂ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇಡೀ ದೇಶದ ಜನರ ಚಿತ್ತ ಕರ್ನಾಟಕದತ್ತ ಇದೆ!! ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ . ಇದಕ್ಕಾಗಿ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದೆ. ಆಡಳಿತರೂಢಿ ಪಕ್ಷ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದರೆ, ಇತ್ತ ಬಿಜೆಪಿ ದೇಶಾದ್ಯಂತ ಗೆದ್ದು , ಕರ್ನಾಟಕದಲ್ಲೂ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ… ಇದಕ್ಕಾಗಿ ಪ್ರಧಾನ ನರೇಂದ್ರ ಮೋದಿಯವರು 224 ಕ್ಷೇತ್ರಗಳ ಅಭ್ಯರ್ಥಿಗಳ ಜೊತೆಯೂ ಇಂದು ಟೆಲಿಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ!!

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕವಿಧಾನಸಭೆ ಚುನಾವಣೆಗೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯಿಂದ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ ಆಪ್‍ನಲ್ಲಿ ಸಂವಾದ ನಡೆಸಿದ್ದಾರೆ!! ಕನ್ನಡದಲ್ಲೇ ಮಾತು ಆರಂಭಿಸಿ ನಾನೊಬ್ಬ ಕನ್ನಡಿಗ ಎಂದು ಹೇಳುವ ಮೂಲಕ ಇಡೀ ಕನ್ನಡ ಜನತೆಯ ಮನಗೆದ್ದಿದ್ದಾರೆ!!

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ!!

ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಆ ಮೂಲಕ ಅಭ್ಯರ್ಥಿಗಳಿಗೆ ಸಲಹೆ, ಸೂಚನೆ ನೀಡಿದ್ದು ನಾನು ಒಬ್ಬ ಕನ್ನಡಿಗ. ನಾನು ಕರ್ನಾಟಕದ ಬಿಜೆಪಿ ಕಾರ್ಯಕರ್ತ ಎಂದು ಕನ್ನಡದಲ್ಲೇ ಮಾತುಗಳನ್ನಾರಂಭಿಸಿದ ಮೋದಿ ಈ ಬಾರಿ ಕರ್ನಾಟಕದಲ್ಲಿ ಕಮಲ ಅರಳಲಿದೆ ಎಂದರು. ಯುಪಿಎ ಸರ್ಕಾರದ ವೈಫಲ್ಯಗಳನ್ನು ಬಗ್ಗೆ ಹೇಳಿದ್ದು ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಮತಗಳನ್ನು ಕೇಳಬೇಕು ಎಂದರು. ಇನ್ನು 15 ದಿನ ವಿರಮಿಸದೆ ಕಾರ್ಯಕರ್ತರು ಹೋರಾಟ ಮಾಡಬೇಕಿದೆ. ಗೆಲುವು ನಮ್ಮದಾಗಲಿದೆ ಎಂದರು. ಅಭಿವೃದ್ಧಿ ರಾಜಕಾರಣ ಬಿಜೆಪಿಯ ಮೂಲ ಮಂತ್ರ. ಚುನಾವಣೆಯನ್ನು ಕಾರ್ಯಕರ್ತರು ಆತ್ಮಸ್ಥೈರ್ಯದಿಂದ ಎದುರಿಸಬೇಕಾಗಿದೆ. ಕರ್ನಾಟಕಕ್ಕೆ ಬಂದು ನಾನು ಮತಯಾಚಿಸಲಿದ್ದೇನೆ ಎಂದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರವನ್ನು ಬಗ್ಗು ಬಡಿಯುವ ಮೂಲಕ ದೇಶದ ಅಭಿವೃದ್ಧಿ ಕಾರ್ಯವನ್ನು ಮಾಡುವುದೇ ನಮ್ಮ ಮೂಲ ಉದ್ಧೇಶ ಎಂದರು!!

ಅಭ್ಯರ್ಥಿಗಳೊಂದಿಗೆ ಮಾತು ಆರಂಭಿಸಿದ ಮೋದಿ!!

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಮೊದಲ ಪ್ರಶ್ನೆ ಕೇಳಿದ್ದು ‘ಹರಿ ಓಂ ಮೋದಿ ಜಿ .. ಚುನಾವಣೆಗೆ 15 ದಿನ ಇದೆ. ನಮ್ಮಲ್ಲಿ ಬೂತ್ ಕೆಲಸಗಳು ತುಂಬಾ ಚೆನ್ನಾಗಿ ನಡೆಯುತ್ತಿದೆ. ಚುನಾವಣೆಗೆ ನಾವು ಏನು ಕೆಲಸ ಮಾಡಬೇಕು ಎನ್ನುವ ಸಲಹೆ ನೀಡಿ’ ಎಂದರು.

ಉತ್ತರ ನೀಡಿದ ಪಿಎಂ ಮೋದಿ ‘ಕಾರ್ಯಕರ್ತರ ಶಕ್ತಿ ಶಕ್ತಿ ದುಪ್ಪಟ್ಟು ಮಾಡಿ . ಎಷ್ಟು ಪುರುಷ ಕಾರ್ಯಕರ್ತರಿದ್ದಾರೆ ಅಷ್ಟೇ ಮಹಿಳಾ ಕಾರ್ಯಕರ್ತರು ಬೇಕು .10 ಯುವಕರಿದ್ದರೆ 10 ಮಂದಿ ಮಹಿಳೆಯರು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಕಾರ್ಯಕರ್ತರಿಗೆ ಮನೆಗಳನ್ನು ಹಂಚಿ ಕೊಡಿ .15 ದಿನಮತದಾರರ ಸಂಪರ್ಕ ಮಾಡಿ .ಮತದಾನ ಕೇಂದ್ರದ ವರೆಗೆಮತದಾರರನ್ನು ಕರೆದೊಯ್ಯಿರಿ . ಗೆಲುವು ನಮ್ಮದಾಗುತ್ತದೆ. ಶಾಸಕ ಸ್ಥಾನದ ಗೆಲುವಲ್ಲ, ಪ್ರತೀ ಬೂತ್‍ನ ಗೆಲುವು ನಮ್ಮದಾಗಬೇಕು’ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ‘ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರಗಳನ್ನು ಹೇಳಿಕೊಂಡು ಕೇಂದ್ರ ಸರ್ಕಾರ ರೈತರ ಏಳಿಗೆಗಾಗಿ ಏನೆಲ್ಲಾ ಯೋಜನೆಗಳನ್ನು ತಂದಿದೆ’ಎಂದು ಪ್ರಶ್ನಿಸಿದರು.

ಉತ್ತರ ನೀಡಿದ ಪಿಎಂ ಮೋದಿ ‘ಭಾರತ ರೈತ ಪ್ರಧಾನ ದೇಶ ಆಗಬೇಕು. ರೈತರ ಆತ್ಮಹತ್ಯೆ ನಿಲ್ಲಬೇಕು. ಕಡಿಮೆ ಕರ್ಚಿನಲ್ಲಿ ಹೆಚ್ಚು ಬೆಳೆ ಬೆಳೆಯಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ತಂದಿದ್ದೇವೆ. ಹಲವು ರೈತರಿಗೆ ಲಾಭವಾಗಿದೆ. ಹಲವು ಯೋಜನೆಗಳು ರೈತರಿಗೆ ತಲುಪುತ್ತಿಲ್ಲ. ಅವುಗಳನ್ನು ರೈತರಿಗೆ ಮನವರಿಕೆ ಮಾಡಿ, ಲಾಭ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯ’ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ಮತ್ತು ವಿಕಾಸವನ್ನು ಗುರಿಯಾಗಿಸಿಕೊಂಡಿದ್ದೇವೆ. ಆದರೆ ಬೇರೆ ಪಕ್ಷಗಳು ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ. ಮುಖ್ಯವಾಗಿ ಬೂತ್ ಮಟ್ಟದ ಕಾರ್ಯಕರ್ತರೇ ನಮ್ಮ ಪಕ್ಷದ ಬಲ. ಇಡೀ ವಿಶ್ವವೇ ಎದುರಾದರೂ ನಮ್ಮ ಸಂಘಟನೆಯ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಿದರು.

ರಾಜ್ಯದ ರೈತರ ಆತ್ಮಹತ್ಯೆಗೆ ಕಾರಣಗಳು ಹಾಗೂ ಅದಕ್ಕೆ ಪರಿಹಾರ ಕ್ರಮಗಳನ್ನೂ ಪ್ರಧಾನಿ ಮೋದಿ ಸಂವಾದದ ವೇಳೆ ತಿಳಿಸಿದರು. ಇನ್ನು ಗಂಧದ ನಾಡು ಎಂದೇ ಹೆಸರು ಗಳಿಸಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಿದ್ದೆ ಮಾಡುತ್ತಿರುವುದರಿಂದ, ಗಂಧದ ಮಾರುಕಟ್ಟೆ ಆಸ್ಟ್ರೇಲಿಯಾದಲ್ಲಿ ದೊಡ್ಡದಾಗಿದೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಗಂಧದ ಮರ ಬೆಳೆಯಲು ಅನುಕೂಲ ಮಾಡಿಕೊಡುವುದಾಗಿ ಹೇಳಿದರು.

ಕೆಲ ಪಕ್ಷಗಳು ಲಾಲಿಪಾಪ್ ತೋರಿಸಿ ಕರ್ನಾಟಕ ಚುನಾವಣೆ ಗೆಲ್ಲಲು ವ್ಯರ್ಥ ಪ್ರಯತ್ನ ನಡೆಸುತ್ತಿವೆ. ದೇಶ ಕಾಂಗ್ರೆಸ್ ಮುಕ್ತವಾದ ಬಳಿಕವಷ್ಟೇ ರಾಜಕೀಯದ ಸ್ವಚ್ಛವಾಗುತ್ತದೆ ಎಂದು ವಿಡಿಯೋ ಕಾನ್ಫರೆನ್ಸ್ ವೇಳೆ ಮೋದಿ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ. ಅಲ್ಲದೇ ಕರ್ನಾಟಕ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ವೋಟ್ ನೀಡುವ ಮೂಲಕ ರಾಜ್ಯದಲ್ಲಿ ಕಮಲ ಅರಳಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನತ್ತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಮತದಾರರ ವಿಶ್ವಾಸ ಗಳಿಸಿದರೆ ಅಧಿಕಾರ ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು!!

  • ಪವಿತ್ರ
Tags

Related Articles

Close