ಪ್ರಚಲಿತ

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

ಅಧ್ಯಾಯ 7: ಅದೊಂದು ಬಹು ಆಯಾಮಗಳಿದ್ದ ಸಂಬಂಧ, ಕೆಲವು ಭಿನ್ನಾಭಿಪ್ರಾಯ, ಕೆಲ ವಿಷಯಗಳ ಬಗ್ಗೆ ಮೆಚ್ಚುಗೆ ಇತ್ತು! ದ್ವೇಷ ಮಾತ್ರ ಖಂಡಿತ ಇರಲಿಲ್ಲ.

ಆರೆಸ್ಸೆಸ್ ಅಂಬೇಡ್ಕರರನ್ನು ಗೌರವಿಸುವುದು ಇತ್ತೀಚಿನ ಬೆಳೆವಣಿಗೆ ಎಂದು ಪ್ರತಿಪಾದಿಸುವವರು ಒಂದು ವಿಷಯದ ಬಗ್ಗೆ ಮೌನವಹಿಸುತ್ತಾರೆ. ಅಂಬೇಡ್ಕರರ ವಿಚಾರ ಧಾರೆಗಳು ಕಾಂಗ್ರೆಸ್ ಗಿಂತ, ಆರೆಸ್ಸೆಸ್ ನ ಸಿದ್ಧಾಂತಕ್ಕೆ ನಿಕಟವಾಗಿದ್ದವು… ರಾಮಚಂದ್ರ ಗುಹಾ ರಂತಹ ಭಾರತದ ಇತಿಹಾಸಜ್ಞರು ಆಯ್ದ ಕೆಲವು ವಿಷಯಗಳನ್ನು ಮಾತ್ರವೇ ಚರ್ಚಿಸಿ, ಅಂಬೇಡ್ಕರ್ ಆರೆಸ್ಸೆಸ್ ವಿರೋಧಿಯಾಗಿದ್ದರು ಎಂದು ತಮ್ಮ ಪುಸ್ತಕಗಳಲ್ಲಿ ಬರೆದುಕೊಳ್ಳುತ್ತಾರೆ.

ಹೌದು, ಆರೆಸ್ಸೆಸ್ ವಿಚಾರ ಧಾರೆಯ ಬಗ್ಗೆ ಅಂಬೇಡ್ಕರರಿಗೆ ಸಂಪೂರ್ಣ ಸಮ್ಮತಿ ಇರಲಿಲ್ಲ. ಆದರೆ ಅಂಬೇಡ್ಕರ್ ಹೇಳಿದರು ಎನ್ನಲಾಗುವ ಮಾತುಗಳನ್ನು ಅವರು ಯಾವ ಸನ್ನಿವೇಶದಲ್ಲಿ ಹೇಳಿದರು ಎಂಬುದನ್ನು ಮುಚ್ಚಿಟ್ಟು, ಎಡಪಂಥೀಯ ಧೋರಣೆಯ ಇತಿಹಾಸಜ್ಞರು ತಮ್ಮದೇ ಷರಾ ಬರೆದುಬಿಡುತ್ತಾರೆ.
ಉದಯ್ ಮಹೂರ್ಕರ್, ಭಾರತ ಪ್ರಖ್ಯಾತ ಪತ್ರಕರ್ತರು, ಈ ವಿಷಯವಾಗಿ ಹೀಗೆಂದು ಬರೆಯುತ್ತಾರೆ,

ಅಂಬೇಡ್ಕರ್ ಹಾಗೂ ಆರೆಸ್ಸೆಸ್ ವಿಷಯದಲ್ಲಿ ಮೂರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.ಆರೆಸ್ಸೆಸ್ ಎಲ್ಲಿಯೂ ಕೂಡ ಅಂಬೇಡ್ಕರರನ್ನು ದ್ವೇಷಿಸುವ ಮಾತುಗಳನ್ನು ಆಡಿದ ಉದಾಹರಣೆಯೇ ಇಲ್ಲ.1956 ರಲ್ಲಿ ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಶರಣಾದಾಗ, ಆರೆಸ್ಸೆಸ್ ಗೆ ಅವರ ಪ್ರತಿ ಇದ್ದ ಗೌರವ ಇನ್ನೂ ಹೆಚ್ಚಾಗಿದ್ದು ಸುಳ್ಳಲ್ಲ. ಅನ್ಯ ಮತಗಳ ಆಮಿಷಕ್ಕೆ ಒಡ್ಡಿಕೊಳ್ಳದೆ ಭಾರತದಲ್ಲಿಯೇ ಹುಟ್ಟಿದ ಧರ್ಮವನ್ನು , ಆಯ್ದುಕೊಂಡ ಅಂಬೇಡ್ಕರ್ ಬಗ್ಗೆ ಆರೆಸ್ಸೆಸ್ ನಾಯಕರಿಗೆ ವಿಶೇಷವಾದ ಗೌರವ ಬೆಳೆಯಿತು.

ರಾಮಚಂದ್ರ ಗುಹಾ ಹೆಸರಿಸುವ ಲೇಖನಗಳು ಹೆಚ್ಚಾಗಿ 1956 ರ ಮೊದಲಿನದಾಗಿದ್ದು, ಅವುಗಳು ಆಧಾರದಲ್ಲಿ ಅಂಬೇಡ್ಕರ್ ಬಗ್ಗೆ ಆರೆಸ್ಸೆಸ್ ಗೆ ವಿಶೇಷ ಒಲವು ಇರಲಿಲ್ಲ ಎಂದು ಮಾಡಿಸುವುದು ಸರಿಯಲ್ಲ.ಎಡ ಪಂಥೀಯ ಲೇಖಕರು, ಬಹು ಮುಕ್ಯವಾದ ಒಂದು ವಿಷಯದ ಬಗ್ಗೆ ಮಾತನಾಡುವುದೇ ಇಲ್ಲ. ಅದುವೇ ಇಸ್ಲಾಂ ಹಾಗೂ ಮುಸ್ಲಿಂರ ಬಗ್ಗೆ ಬಾಳಾಸಾಹೇಬ ಅಂಬೇಡ್ಕರರ ನಿಲುವು.ತಮ್ಮ Thoughts of Pakisthan(1941) ಹಾಗೂ Pakisthan or Partition of India(1945) ಪುಸ್ತಕದಲ್ಲಿ ತಮ್ಮ ಅಸಮಾಧಾನವನ್ನು ಅಂಬೇಡ್ಕರ್ ಈ ರೀತಿ ವ್ಯಕ್ತಪಡಿಸಿದ್ದಾರೆ.

“ಭಾರತದಲ್ಲಿರುವ ಶೇಕಡಾ 90 ರಷ್ಟು ಮುಸ್ಲಿಮರು, ಮುಸ್ಲಿಂ ಲೀಗ್ ನ ಬೆಂಬಲಕಿದ್ದು, ಅವರೆಲ್ಲರೂ ಪಾಕಿಸ್ತಾನ ಬೇಕೆಂಬ ಕನಸನ್ನು ಹೊತ್ತವರೆ ಆಗಿದ್ದಾರೆ. ಇದೇ ಮುಸ್ಲಿಮರು 1945-46 ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಅನ್ನು ಬೆಂಬಲಿಸಿದ ಕಾರಣ, ಕಾಂಗ್ರೆಸ್ ಕೇವಲ 3% ಮತಗಳನ್ನು ಮಾತ್ರ ಪಡೆಯುವುದಕ್ಕೆ ಸೀಮಿತವಾಯಿತು “ಅಂಬೇಡ್ಕರ್ ರವರ ಈ ನಿಲುವುಗಳಲ್ಲಿ ಹಾಗೂ ಸಾವರ್ಕರ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದ ಮುಸ್ಲಿಮರ ಬಗೆಗಿನ ನಿಲುವಿಗೆ ಹೆಚ್ಚೇನೂ ವ್ಯತ್ಯಾಸವಿಲ್ಲ. ಸರಿಯಾಗಿ ನೋಡಿದರೆ, ಅಂಬೇಡ್ಕರ್, ಸಾವರ್ಕರ್ ಗಿಂತ ಕಠಿಣ ನಿಲುವನ್ನು ಮುಸ್ಲಿಂರ ಬಗ್ಗೆ ಹೊಂದಿದ್ದರು.

ಎಡ ಪಂಥೀಯ ಇತಿಹಾಸಜ್ಞರು ಈ ವಿಷಯವನ್ನು ಮುಚ್ಚಿಡುವ ಕಾರಣವೇನು?
ಬುದ್ಧಿಜೀವಿಗಳು ಈ ಸತ್ಯವನ್ನು ಒಪ್ಪಿಕೊಳ್ಳದೆ ಇರಲು ಬಹುದೊಡ್ಡ ಕಾರಣ ತಂತಮ್ಮ ಸ್ವಾರ್ಥ ಸಾಧನೆ. ಅಂಬೇಡ್ಕರ್ ಹೆಸರಿನಲ್ಲಿ, ದಲಿತ ಮುಸ್ಲಿಂ ಇಬ್ಬರನ್ನೂ ಒಂದೇ ಛತ್ರಿಯ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿರುವ ಎಡ ಪಂಥೀಯ ಲೇಖಕರು, ಅಂಬೇಡ್ಕರ್ ಮುಸ್ಲಿಮರ ಬಗ್ಗೆ ಹೊಂದಿದ್ದ ಕಟು ನಿಲುವನ್ನು ಬಹಿರಂಗಗೊಳಿಸಿದ ಮರುಕ್ಷಣ ಅವರೇ ಕಟ್ಟಿದ ಐಕ್ಯತೆಯ ಹೆಸರಿನ ಗಾಳಿ ಗೋಪುರ ಕುಸಿದು ಬೀಳುವ ಸಂಭವವಿದೆ.

ಆರೆಸ್ಸೆಸ್ ಹಾಗೂ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತಗಳಲ್ಲಿ ಸಿಗುವ ಸಾಮ್ಯತೆ:
ಅಂಬೇಡ್ಕರ್ ಜಾತಿ ಪದ್ಧತಿಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. ಆರೆಸ್ಸೆಸ್ ನಲ್ಲಿ ಜಾತಿ ಎಂಬ ವಿಷಯ ಎತ್ತುವುದೇ ಅಪರಾಧ. 1949 ರಲ್ಲಿ ಪುಣೆಯ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿದ ಅಂಬೇಡ್ಕರರಿಗೆ ಇದೊಂದು ಆಶ್ಚರ್ಯಕರ ಸಂಗತಿಯಾಗಿ ತೋರಿತು. ಸಮಾನ ನಾಗರಿಕ ಸಂಹಿತೆಯ ಪರವಾಗಿದ್ದ ಅಂಬೇಡ್ಕರರಿಗೆ ಆರೆಸ್ಸೆಸ್ ನಲ್ಲಿ ಜಾತಿಯ ಪ್ರಸ್ತಾಪವೇ ಆಗದಿರುವುದು ಬಹಳವಾಗಿ ಹಿಡಿಸಿತ್ತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾವಣೆಯನ್ನು ನಡೆಸುವುದಕ್ಕೆ ಹಲವಾರು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚುನಾವಣೆಯಿಂದ ಜಾತಿ ಆಧಾರದಲ್ಲಿ ವ್ಯಕ್ತಿಯೊಬ್ಬ ಅಧಿಕಾರ ಹಿಡಿಯುವ ಸಾಧ್ಯತೆ ಇದ್ದ ಕಾರಣ ಅದನ್ನು ಬಲವಾಗಿ ವಿರೋಧಿಸಿದ ಪ್ರಮುಖರಲ್ಲಿ ಇಬ್ಬರು – ಬಾಳಾಸಾಹೇಬ ಅಂಬೇಡ್ಕರ್ ಹಾಗೂ ಗುರೂಜಿ ಗೊಳ್ವಾಲ್ಕರ್ ತಮ್ಮ Thoughts on Pakistan ಪುಸ್ತಕದಲ್ಲಿ ಅಂಬೇಡ್ಕರ್ ಬರೆದ ಸಾಲುಗಳು ಹೀಗಿವೆ,
“ಮುಸ್ಲಿಂ ದಾಳಿಕೋರರು ಭಾರತಕ್ಕೆ ಸುಮ್ಮನೆ ಬರಲಿಲ್ಲ. ಹಿಂದೂಗಳ ಪರವಾಗಿ ದ್ವೇಷದ ಜಪ ಮಾಡುತ್ತಲೇ ಕಾಲಿಟ್ಟವರು ಅವರು”.
“ಭಾರತದ ಮುಸಲ್ಮಾನರು ಎಂದಿಗೂ ಭಾರತ ಮೊದಲು ನಂತರ ನನ್ನ ಮತ ಎಂದು ಹೇಳಿದ ಉದಾಹರಣೆಯೇ ಇಲ್ಲ. ದೇಶಕ್ಕೆ ಕೊಡುಗೆ ನೀಡುವಲ್ಲಿ ಹಿಂದ ಬಿದ್ದ ಇದೇ ಸಮುದಾಯ, ಜಗತ್ತಿನ ಬೇರೆ ಮುಸ್ಲಿಂ ರಾಷ್ಟ್ರಗಳ ಏಳಿಗೆಗೆ ಇಲ್ಲಿದ್ದುಕೊಂಡೇ ಕೆಲಸ ಮಾಡುತ್ತಿವೆ ಎಂದರೆ ಅರ್ಥವೇನು? ಇಸ್ಲಾಂ ಎಂದಿಗೂ ಈ ದೇಶವನ್ನು ಮಾತೃಭೂಮಿ ಎಂದು ಒಪ್ಪಿಕೊಳ್ಳಲು ಮುಸ್ಲಿಮರಿಗೆ ಬಿಡುವುದಿಲ್ಲ. ಬಹುಶಃ ಇದೇ ಕಾರಣದಿಂದ ಮೌಲಾನ ಮೊಹಮ್ಮದ್ ಅಲಿ, ತನ್ನನ್ನು ಮರಣಾನಂತರ ಜೆರುಸಲೇಮ್ ನಲ್ಲಿ ಹೂಳಬೇಕು ಎಂದು ಕೇಳಿಕೊಂಡರು”

ಅಂಬೇಡ್ಕರ್ – ಮನುಸ್ಮೃತಿ – ಬ್ರಾಹ್ಮಣ ವಾದ:
ಅಂಬೇಡ್ಕರ್ ಮನುಸ್ಮೃತಿ ಸುಟ್ಟದ್ದು ಸತ್ಯ. ಅಂಬೇಡ್ಕರ್ ಅಸ್ಪೃಶಯತೆಯನ್ನು ತೊಡೆದು ಹಾಕಲು ಜೀವನವಿಡೀ ಶ್ರಮಿಸಿದ್ದು ಸತ್ಯ.
ಆದರೆ ಅವರೊಬ್ಬ ಬ್ರಾಹ್ಮಣ ದ್ವೇಷಿ ಎಂಬ ಮಾತು ಮಾತ್ರ ಖಂಡಿತ ನಿಜವಿಲ್ಲ. ಅಂಬವಾಡೇಕರ್ ಆಗಿದ್ದ ಅವರು ಅಂಬೇಡ್ಕರ್ ಎಂದು ತನ್ನ ಹೆಸರನ್ನು ಬದಲಾಯಿಸಿ ಕೊಂಡದ್ದೇ ತಮ್ಮ ದೇವೃಕೆ ಬ್ರಾಹ್ಮಣ ಶಿಕ್ಷಕರಾಗಿದ್ದ ಅಂಬೇಡ್ಕರ್ ಅವರ ನೆನಪಿನಲ್ಲಿ.ಇಲ್ಲಿ ಗಮನ ಹರಿಸಬೇಕಾದ ಸಂಗತಿ ಎಂದರೆ, ಮನು ಬರೆದ ಅಷ್ಟೂ ನಿಯಮಾವಳಿಗಳು ಹಿಂದೂ ಧರ್ಮವನ್ನು, ಅನುಸರಿಸುವ ಹಿಂದೂಗಳಿಗಾಗಿ. ಹಿಂದೂ ಧರ್ಮದ ಸಿದ್ಧಾಂತಗಳ ಅರಿವಿದ್ದವರಿಗೆ, ಹಿಂದೂ ಧರ್ಮ ಹೇಗೆ ಪ್ರತಿಯೊಂದು ಹಂತದಲ್ಲೂ ಬದಲಾವಣೆಗೆ ತನ್ನನು ಒಡ್ಡಿಕೊಂಡಿದೆ ಎಂಬುದರ ಅರಿವು ಇರುತ್ತದೆ. ಮನು ಸ್ಮೃತಿಯಲ್ಲಿ ಹೇಳಿರುವ ಎಷ್ಟೋ ವಿಷಯಗಳಲ್ಲಿ ಪರಾಶರ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾ ತನ್ನ ಸ್ಮೃತಿಯಲ್ಲಿ ಎಷ್ಟೋ ಬದಲಾವಣೆಯನ್ನು ಸೂಚಿಸಿದ್ದಾನೆ.

ಎಷ್ಟೆಲ್ಲಾ ಪ್ರಾಚೀನ ಕಾಲದ ಉದಾಹರಣೆ ಏಕೆ?
ಹಿಂದೂ ಸಂಸ್ಕೃತಿಯನ್ನು ಬಾಧಿಸಿದ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಪ್ರಯತ್ನ ಪಟ್ಟ ಹಲವು ಯತಿ ಮುನಿಗಳು ಬ್ರಾಹ್ಮಣರೇ ಆಗಿದ್ದರು. ಇವರ್ಯಾರ ಬಗ್ಗೆಯೂ ಅಂಬೇಡ್ಕರರು ಎಂದಿಗೂ ಕೆಟ್ಟ ಮಾತುಗಳು ಆಡಿಲ್ಲ.ಇನ್ನೊಂದು ಕುತೂಹಲಕಾರಿ ಅಂಶವನ್ನು ಇತ್ತೀಚಿನ ಇತಿಹಾಸಜ್ಞರು ಗಮನಿಸಿದ್ದಾರೆ. ಅಂಬೇಡ್ಕರ್ ಜೀವಿಸಿದ ಕಾಲಘಟ್ಟದಲ್ಲಿ ಇದ್ದ ಮನುಸ್ಮೃತಿಯ ಒಂದೇ ಒಂದು ಹಸ್ತ ಪ್ರತಿಯೆಂದರೆ ಅದು ಕಲ್ಕತ್ತಾ ಹಸ್ತ ಪ್ರತಿ. 300 ವರ್ಷಗಳಷ್ಟು ಹಳೆಯದಾದ ಕಲ್ಕತ್ತಾ ಹಸ್ತಪ್ರತಿ ಆಂಗ್ಲ ಅಧಿಕಾರಿ ಒಬ್ಬನಿಂದ ತರ್ಜುಮೆ ಮಾಡಲ್ಪತ್ತಿದ್ದು.

ನಂತರದ ಕಾಲಘಟ್ಟದಲ್ಲಿ, ಭಾರತದಲ್ಲಿ ಬೇರೆ ಬೇರ್ ಸ್ಥಳಗಳಿಂದ ಹಲವಾರು ಮನುಸ್ಮೃತಿಯ ಹಸ್ತಪ್ರತಿಗಳು ಲಭ್ಯವಾದವು. ಇವುಗಳಲ್ಲಿ ಯಾವುದೂ ಕಲ್ಕತ್ತಾ ಹಸ್ತಿಪ್ರತಿಗೆ ಹೊಂದಾಣಿಕೆ ಆಗಲೇ ಇಲ್ಲ. ಆದರೆ ಸಿಕ್ಕಿದ ಅಷ್ಟೂ ಪ್ರತಿಗಳು ಒಂದಕ್ಕೊಂದು ತಾಳೆಯದವು.ಆಂಗ್ಲರ ಕೈಗೆ ಸಿಕ್ಕ ನಮ್ಮ ಪ್ರಾಚೀನ ಹಸ್ತಪ್ರತಿಗಳು ತಪ್ಪಾದ ರೀತಿಯಲ್ಲಿ ಭಾಷಾಂತರಕ್ಕೆ ಒಳಪಟ್ಟವು. ಇದರಿಂದ ಬ್ರಿಟಿಷರು ಅಂದುಕೊಂಡದನ್ನು ಸಮರ್ಥವಾಗಿ ಸಾಧಿಸಿಬಿಟ್ಟರು, ಹಿಂದೂ ಧರ್ಮದ ಬಗ್ಗೆ ದ್ವೇಷ, ಅಸಡ್ಡೆ .ಅಂಬೇಡ್ಕರ್ ರಂತಹ ಎಷ್ಟೋ ಗ್ರಂಥಗಳ ಓದಿಕೊಂಡ ಜ್ಞಾನಿಗೆ ನಿಜವಾದ ಹಸ್ತ ಪ್ರತಿ ದೊರೆತಿದ್ದ ಪಕ್ಷದಲ್ಲಿ ಮನುಸ್ಮೃತಿಯ ಬಗ್ಗೆ ಅವರಿಗಿದ್ದ ಅಭಿಪ್ರಾಯ ಬಡಲಾಗಿತಿತ್ತೋ ಏನೋ!

ಇಂತಹ ಎಷ್ಟೋ ಸತ್ಯಾಂಶಗಳನ್ನು ಮುಚ್ಚಿಟ್ಟು, ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ ಬೆಂಬಲಿತ ಇತಿಹಾಸಜ್ಞರು ಆರೆಸ್ಸೆಸ್ ವಿರುದ್ಧವಾಗಿ ವ್ಯವಸ್ಥಿತವಾಗಿ ಸಂಚನ್ನು ರೂಪಿಸಿ, ಸಂಘವನ್ನು ಹಳಿಯಲು ಪ್ರಯತ್ನಿಸುತ್ತಿದ್ದಾರೆ. ಸತ್ಯವನ್ನು ಅರಿಯುವುದು ಬಹು ಸುಲಭ, ಓದಬೇಕು, ಎಲ್ಲರ ಅಭಿಮತವನ್ನು ಓದಬೇಕು. ಇತಿಹಾಸವನ್ನು ಅರಿಯಲು ಬೇರೊಬ್ಬರ ಮೇಲೆ ಅವಲಂಬಿತರಾದಾಗ ಮಾತ್ರ ತಪ್ಪು ತಿಳುವಳಿಕೆಗಳು ಮೂಡುವುದು.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

Chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

-Dr.Sindhu Prashanth

Tags

Related Articles

FOR DAILY ALERTS
Close