ಅಂಕಣಪ್ರಚಲಿತ

ರಾಮಾಯಣ ಮಹಾಭಾರತದಲ್ಲಿದ್ದ ಸೀಕ್ರೆಟ್ ವಿಮಾನ ಹೇಗಿತ್ತು ಗೊತ್ತೇ?!! ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಆ ವಿಮಾನದ ವರ್ಣನೆ ನಿಜಕ್ಕೂ ಅದ್ಭುತ!!

ವಿಮಾನವನ್ನು ಕಂಡು ಹಿಡಿದವರಲ್ಲಿ ಭಾರತೀಯರೇ ಮೊದಲಿಗರು ಅನ್ನೋದನ್ನು  ಸಂಸ್ಕೃತ ಗ್ರಂಥಗಳು ಈಗಾಗಲೇ ಸಾಬೀತು ಪಡಿಸಿವೆ. ರಾಮಾಯಣ, ಮಹಾಭಾರತಗಳೇ ಇದಕ್ಕೆ ಪುಷ್ಠಿ ನೀಡಿವೆ!! ಆದರೂ ಕೂಡ ವಿಮಾನವನ್ನು ಕಂಡು ಹಿಡಿದವರು ರೈಟ್ ಬ್ರದರ್ಸ್ ಎಂದೇ ಎಲ್ಲರೂ ಹೇಳುತ್ತಾರೆಯೇ ವಿನಾಃ ಭಾರತೀಯರು ಅನ್ನೋದನ್ನು ಎಲ್ಲೂ ಯಾರೂ ಹೇಳೋದಿಲ್ಲ!! ಆದರೆ ರಾಮಾಯಣ ಮಹಾಭಾರತದ ಕಾಲದಲ್ಲಿ ಬಳಕೆಯಾಗಿತ್ತು ಎನ್ನಲಾದ ಸೀಕ್ರೆಟ್ ವಿಮಾನದ ಬಗ್ಗೆ ಭಾರತದಲ್ಲಿ ಸಾಕಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದ್ದು, ಈ ಸೀಕ್ರೆಟ್ ವಿಮಾನದ ಬಗ್ಗೆ ವರ್ಣನೆ ಮಾಡಲಾಗಿದೆ. ಅಷ್ಟಕ್ಕೂ ಆ ಸೀಕ್ರೆಟ್ ಏನು ಗೊತ್ತೇ?

ರಾಮಾಯಣ ಕಾಲದಿಂದಲ್ಲಿಯೇ ಪುಷ್ಪಕ ವಿಮಾನ ಇತ್ತೆಂಬ ಅರಿವು ಭಾರತೀಯರಿಗೆ ತಿಳಿದ ವಿಚಾರವೇ ಆಗಿದೆ. ವೇದ ಭೂಮಿಯಾಗಿದ್ದ ಭಾರತಕ್ಕೆ ವೈಮಾನಿಕ ಶಾಸ್ತ್ರ ಹೊಸದೇನಲ್ಲ. 1895ರಲ್ಲಿ ಚೌಪತಿ ಸಮೀಪ ಶಿವಕರ್ ಬಾಪೂಜಿ ತಲ್ಪಾಡೆಯವರು ರೈಟ್ ಬ್ರದರ್ಸ್‍ಗೂ ಮೊದಲೇ ವಿಮಾನ ಹಾರಿಸಿದ್ದರು ಎನ್ನುವ ಸತ್ಯವನ್ನು ಈಗಾಗಲೇ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಭಾರತದ ಬಡ ಪರಿಸ್ಥಿತಿ, ಬ್ರಿಟಿಷ್ ದಬ್ಬಾಳಿಕೆ ಮತ್ತಿತರ ಕಾರಣಗಳಿಂದಾಗಿ ಈ ವಿಚಾರ ಹೆಚ್ಚು ಪ್ರಚಾರ ಗಿಟ್ಟಿಸಲಿಲ್ಲ ಮತ್ತು ವಿಶ್ವ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ ಎನ್ನಬಹುದು. ಅಗಸ್ತ್ಯ ಮತ್ತು ಭರದ್ವಾಜ ಎಂಬ ವಿಜ್ಞಾನಿಕ ಋಷಿಗಳು, ವಿಮಾನ ನಿರ್ಮಾಣದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದರು ಎಂದು ಅನೇಕ ದಾಖಲೆಗಳಿಂದ ತಿಳಿದುಬಂದಿದೆ.
Image result for aeroplane in vedas

ಹೌದು, ಮಹಾ ಋಷಿ ಭರತ್ ಧ್ವಜರ “ವೈಮಾನಿಕ ಸಂಹಿತೆ”ಯಲ್ಲಿ ಸೀಕ್ರೆಟ್ ವಿಮಾನದ ಬಗ್ಗೆ ವರ್ಣನೆ ಮಾಡಲಾಗಿದೆಯಲ್ಲದೇ ಡಿಜೈನ್ ಹಾಗೂ ಸಿಸ್ಟಮ್ ನ ಸಂಪೂರ್ಣ ಚಿತ್ರವೂ ಇದರಲ್ಲಿದೆ. ಅಷ್ಟು ಮಾತ್ರವಲ್ಲದೇ ವಿಮಾನವನ್ನು ಹೇಗೆ ತಯಾರು ಮಾಡಲಾಗಿತ್ತು, ಅದು ಎಷ್ಟು ಎತ್ತರ, ಎಷ್ಟು ಅಗಲವಾಗಿತ್ತು, ಯಾವುದರಿಂದ ವಿಮಾನವನ್ನು ಮಾಡಲಾಗಿತ್ತು ಅನ್ನೋ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಕೇವಲ ಮಹಾಭಾರತದಲ್ಲಿ ಮಾತ್ರವಲ್ಲದೇ, ರಾಮಾಯಣ ಕಾಲದ ಯಜುರ್ವೇದದಲ್ಲೂ ಈ ಸೀಕ್ರೆಟ್ ವಿಮಾನದ ಬಗ್ಗೆ ವರ್ಣನೆ ಮಾಡಲಾಗಿದೆ.

ಅಷ್ಟಕ್ಕೂ ಭಾರತದ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಆ ಸೀಕ್ರೆಟ್ ಗಳೇನು ಗೊತ್ತಾ?

ರಾಮಾಯಣ ಮಹಾಭಾರತ ಕಾಲದಲ್ಲಿಯೇ ವಿಮಾನ ಇತ್ತು ಎನ್ನುವುದಕ್ಕೇ ಗ್ರಂಥಗಳೇ ಸಾಕ್ಷಿ ಎನ್ನುವುದನ್ನು ನಾವು ಸಾರಿ ಸಾರಿ ಹೇಳಬಹುದು. ಗ್ರಂಥಗಳ ಪ್ರಕಾರ, ಈ ಸೀಕ್ರೆಟ್ ವಿಮಾನದಲ್ಲಿ ಒಟ್ಟು ಮೂರು ಮಹಡಿಗಳಿದ್ದವು. ಇನ್ನೂ ಈ ವಿಮಾನವು ತ್ರಿಕೋನಾಕಾರದಲ್ಲಿದ್ದು, ಒಂದು ವಿಮಾನದಲ್ಲಿ ಒಟ್ಟು ಮೂರು ಜನ ಪ್ರಯಾಣ ಮಾಡಬಹುದಿತ್ತು. ಈ ವಿಮಾನವನ್ನು ಪ್ರಯಾಣ ಹಾಗೂ ಯುದ್ಧದ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ!!

Related image

ಅಷ್ಟು ಮಾತ್ರವಲ್ಲದೇ, ವಿಮಾನ ತಯಾರಿಸಲು ಚಿನ್ನ, ಬೆಳ್ಳಿ ಹಾಗೂ ಇತರೆ ಅಪರೂಪದ ಲೋಹಗಳನ್ನು ಬಳಕೆ ಮಾಡಲಾಗುತ್ತಿತ್ತು. ಅಂದಹಾಗೆ ಪ್ರಾಚೀನ ಭಾರತದಲ್ಲಿದ್ದಂತಹ ವಿಮಾನ ಎಷ್ಟು ಶಕ್ತಿಶಾಲಿ ಹಾಗೂ ಸುರಕ್ಷಿತವಾಗಿತ್ತು ಎಂದರೆ ಈ ವಿಮಾನದಲ್ಲಿ ಸಾಕಷ್ಟು ಯುದ್ಧ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಇಡಬಹುದಾಗಿತ್ತು. ಅಷ್ಟೇ ಅಲ್ಲದೇ, ಎಷ್ಟೇ ಜೋರು ಗಾಳಿ ಅಥವಾ ಮಳೆ ಬಂದರೂ ಇದಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಇಂದಿನ ವಿಮಾನಗಳಿಗೆ ಹೋಲಿಸಿದರೆ 5 ಸಾವಿರ ವರ್ಷಗಳ ಹಿಂದೆ ಇದ್ದತಂಹ ವಿಮಾನವೇ ಉನ್ನತ ಗುಣಮಟ್ಟದ ತಂತ್ರಜ್ಞಾನ ಹೊಂದಿತ್ತು ಎನ್ನಲಾಗಿದೆ.

ಹಿಂದೂ ಗ್ರಂಥಗಳ ಪ್ರಕಾರ ಈ ವಿಮಾನ ಸಂಚಾರ ಮಾಡುತ್ತಿದ್ದ ಬಗೆ ಹೇಗೆ ಗೊತ್ತೇ?

ಪ್ರಾಚೀನ ಸಂಸ್ಕೃತ ಗ್ರಂಥಗಳ ಪ್ರಕಾರ ಭಾರತದಲ್ಲಿ ಒಟ್ಟು ಐದು ರೀತಿಯ ವಿಮಾನಗಳಿದ್ದವು. ಅವು, ಬ್ರಹ್ಮ, ವಿಷ್ಣು, ಕುಬೇರ ಹಾಗೂ ಇಂದ್ರನಿಗೆ ಸೇರಿದ್ದವು. ಇನ್ನು ಈ ಬಗ್ಗೆ ಗ್ರಂಥಗಳಲ್ಲಿ ಪ್ರತ್ಯೇಕವಾದಂತಹ ವರ್ಣನೆಯನ್ನೂ ಕೂಡಾ ನೀಡಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭಾರತೀಯ ಸಂಸ್ಕೃತ ಗ್ರಂಥಗಳಲ್ಲಿ ಇರುವ ಉಲ್ಲೆಖ ಹಾಗೂ ಸೂತ್ರಗಳನ್ನು ಬಳಸಿಕೊಂಡು ಆಧುನಿಕ ಮಿಲಿಟರಿ ಹಾಗು ಯುದ್ಧ ವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಹಿಂದೂ ಗ್ರಂಥಗಳ ಪ್ರಕಾರ, ಸೀಕ್ರೇಟ್ ವಿಮಾನವು ಸೂರ್ಯನ ಶಕ್ತಿಯಿಂದಲೇ ಸಂಚಾರ ಮಾಡುತ್ತಿತ್ತು ಎನ್ನಲಾಗಿದೆ.

Image result for veda oldendays aeroplane

ಇನ್ನು, ಭಾರತೀಯ ಸಂಸ್ಕೃತ ಗ್ರಂಥಗಳಲ್ಲಿ ನೂರಕ್ಕೂ ಹೆಚ್ಚು ವಿಮಾನಗಳ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಇದು ಅಮೇರಿಕಾ ಹಾಗೂ ಇತರೆ ಮುಂದುವರಿದ ದೇಶಗಳು ನಿಬ್ಬೆರಗಾಗುವಂತೆ ಮಾಡಿಬಿಟ್ಟಿದೆ. ಭಾರತೀಯ ಮಹಾನ್ ಋಷಿ ಭರತ್ ಧ್ವಜರ ವೈಮಾನಿಕ ಸಂಹಿತೆಯನ್ನು ಇದುವರೆಗೆ ನೋಡದ ಯೂರೋಪ್ ರಾಷ್ಟ್ರಗಳು, ಈಗ ಅದನ್ನೇ ಜಗತ್ತಿನ ವೈಮಾನಿಕ ಸೈನ್ಸ್ ಬೈಬಲ್ ಎನ್ನುತ್ತಿದೆ. ಅಷ್ಟೇ ಅಲ್ಲದೇ ಕಳೆದ ವರ್ಷಗಳ ಹಿಂದೆ ಚೀನಾದ ಲಾಸದಲ್ಲಿ ಸಿಕ್ಕ ಸಂಸ್ಕೃತ ಪ್ರಾಚೀನ ಗ್ರಂಥಗಳನ್ನು ಚಂಡೀಗಡ ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗೂ ಚೀನಾ ಭಾಷೆ ಗೆ ತರ್ಜುಮೆ ಮಾಡಲಾಗಿದೆ. ಆಗಾ ತಿಳಿದು ಬಂದ ಸಂಗತಿ ಏನೆಂದರೆ ಭಾರತೀಯರಿಗೆ ಐದು ಸಾವಿರ ವರ್ಷಗಳ ಹಿಂದೆಯೇ ಗುರುತ್ವಾಕರ್ಷಣೆಯ ವಿರುದ್ಧವಾಗಿ ಹೋಗುವ ಜ್ಞಾನ ತಿಳಿದಿತ್ತು ಎನ್ನುವುದು!!

Image result for veda oldendays aeroplane

ಯಾವ ಜಗತ್ತು 20 ಹಾಗೂ 21ನೇ ಶತಮಾನದಲ್ಲಿ ಕಂಡುಹಿಡಿದಿದ್ದರೊ ಅದನ್ನು ಭಾರತೀಯರು 5 ಸಾವಿರ ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಇದೇ ಕಾರಣಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಭಾರತದ ಸಂಸ್ಕೃತ ಗ್ರಂಥಗಳನ್ನು ಜರ್ಮನಿ ಭಾಷೆಗೆ ತರ್ಜುಮೆ ಮಾಡಿಸಿಕೊಂಡಿದ್ದ. ಅವತ್ತು ಭಾರತದ ಬಗ್ಗೆ ಕ್ಷುಲ್ಲಕವಾಗಿ ಮಾತಾನಾಡಿದ್ದ ರಾಷ್ಟ್ರಗಳಿಗೆ ಈಗಾ ಭಾರತದ ನಿಜವಾದ ತಾಕತ್ತು ಏನು ಅನ್ನೋದು ಅರಿತಿವೆಯಲ್ಲದೇ ಭಾರತದ ಆಗಾಧವಾದ ಸಂಸ್ಕøತಿಗೂ ತಲೆಬಾಗುತ್ತಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಕಾಣಬಹುದು!!

-Postcard team

Tags

Related Articles

FOR DAILY ALERTS
Close