ಪ್ರಚಲಿತ

ಬಿಗ್ ಬ್ರೇಕಿಂಗ್! ಕಾಂಗ್ರೆಸ್ ವಿರುದ್ಧ ಡಿಕೆಶಿ ಗರಂ.! ಪಕ್ಷ ತೊರೆಯಲು ಪವರ್‌ಫುಲ್ ಶಾಸಕ ರೆಡಿ..?

ಇನ್ನೇನು ಕಾಂಗ್ರೆಸ್ ಹಡಗು ಮುಳುಗಿಬಿಡುತ್ತದೆ ಎನ್ನುವಷ್ಟರಲ್ಲಿ ಮತ್ತೆ ದಡ ಸೇರಿಸಿದ ಕೀರ್ತಿ ಕಾಂಗ್ರೆಸ್‌ನ ಪವರ್‌ಫುಲ್ ಶಾಸಕ ಡಿಕೆ ಶಿವಕುಮಾರ್ ಗೆ ಸಲ್ಲುತ್ತದೆ. ಯಾಕೆಂದರೆ ಎರಡೆರಡು ಬಾರಿ ಕಾಂಗ್ರೆಸ್ ಸರ್ವನಾಶವಾಯ್ತು ಅಂದುಕೊಂಡಾಗಲೂ ಡಿಕೆಶಿ ಸಮಯ ಪ್ರಜ್ಞೆಯಿಂದ ಮತ್ತೆ ಅಧಿಕಾರ ನಡೆಸುವಂತಾಗಿದೆ. ಡಿಕೆಶಿ ಕಂಡರೆ ಸ್ವತಃ ಕಾಂಗ್ರೆಸ್‌ನಲ್ಲೇ ಅನೇಕರು ಉರಿದುಬಿದ್ದರೂ , ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ತನ್ನ ಪವರ್ ಏನೆಂಬುದನ್ನು ಡಿಕೆಶಿ ಈಗಾಗಲೇ ಕಾಂಗ್ರೆಸ್ ನಾಯಕರಿಗೂ ಪ್ರದರ್ಶಿಸಿದ್ದಾರೆ. ಆದ್ದರಿಂದ ಡಿಕೆಶಿಗೆ ಕಾಂಗ್ರೆಸ್ ನಾಯಕರ ಮೇಲೂ ಅಸಮಧಾನವಿದ್ದು, ಇದೀಗ ಮಂತ್ರಿ ಸ್ಥಾನಕ್ಕಾಗಿ ಕಿತ್ತಾಡಿಕೊಳ್ಳುತ್ತಿರುವವರನ್ನು ಕಂಡು ಸ್ವತಃ ಪಕ್ಷ ಬಿಡುವ ಮಾತನಾಡಿದ್ದಾರೆ..!

ಎಲ್ಲಾ ಖಾತೆ ರೇವಣ್ಣನೇ ಇಟ್ಟುಕೊಳ್ಳಲಿ , ನಾನೇ ಪಕ್ಷ ಬಿಡುತ್ತೇನೆ..!

ಇಂಧನ ಖಾತೆಗಾಗಿ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್‌ ನ ಎಚ್ ಡಿ ರೇವಣ್ಣ ಅವರು ಈಗಾಗಲೇ ಭಾರೀ ಪೈಪೋಟಿ ನಡೆಸಿದ್ದು, ಕುಮಾರಸ್ವಾಮಿ ಅವರ ಕೃಪಾಕಟಾಕ್ಷದಿಂದಾಗಿ ಈ ಖಾತೆ ರೇವಣ್ಣ ಕೈಸೇರುವುದು ಬಹುತೇಕ ಖಚಿತವಾಗಿದೆ. ಆದರೆ ಡಿಕೆಶಿ ಪ್ರಕಾರ , ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲೂ ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿರುವುದರಿಂದ ಮತ್ತೆ ತಮಗೇ ಈ ಹುದ್ದೆ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ಆದರೆ ರೇವಣ್ಣ ಅವರು ಜೆಡಿಎಸ್ ನ ಪ್ರಭಾವಿ ಮುಖಂಡ ಆಗಿರುವುದರಿಂದ ಇತ್ತ ಇಂಧನ ಖಾತೆಯ ಜೊತೆಗೆ ಲೋಕೋಪಯೋಗಿ ಇಲಾಖೆಯೂ ತಮ್ಮ ಕೈಗೇ ಸಿಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಕೆಂಡಾಮಂಡಲವಾದ ಡಿಕೆ ಶಿವಕುಮಾರ್ ಇದೀಗ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸುತ್ತಾ , ರೇವಣ್ಣ ಅವರು ಸರಕಾರದ ಎಲ್ಲಾ ಖಾತೆ ಬೇಕಾದರೂ ಇಟ್ಟುಕೊಳ್ಳಲಿ, ಮಂತ್ರಿಯೇ ಆಗಲಿ ನನಗೇನು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.!

ರೇವಣ್ಣಗೂ ನನಗೂ ಹೋಲಿಸಬೇಡಿ..!

ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಎಚ್ ಡಿ ರೇವಣ್ಣಗೂ ನನಗೂ ಯಾವುದೇ ಕಾರಣಕ್ಕೂ ಹೋಲಿಸಬೇಡಿ. ಅವರು ದೊಡ್ಡ ಕುಟುಂಬದಿಂದ ರಾಜಕೀಯಕ್ಕೆ ಬಂದವರು, ನಾನು ಸಾಮಾನ್ಯ ವ್ಯಕ್ತಿ. ಅವರಿಗೂ ನನಗೂ ಯಾವುದೇ ಹೋಲಿಕೆಯಿಲ್ಲ. ಸಚಿವ ಸ್ಥಾನ ಕೊಟ್ಟರೆ ನಾನು ನಿಭಾಯಿಸುತ್ತೇನೆ, ಇಲ್ಲವಾದಲ್ಲಿ ನನ್ನ ನಿರ್ಧಾರ ಶೀಘ್ರವೇ ತಿಳಿಸುತ್ತೇನೆ ಎಂದ ಡಿಕೆಶಿ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್‌ ವಿರುದ್ಧ ಅಸಮಧಾನ ಹೊರಹಾಕಿದರು.

ಎಲ್ಲದಕ್ಕೂ ಸಮಯ ಕೂಡಿ ಬಂದರೆ ಮಾತ್ರ ಅವಕಾಶಗಳು ಒದಗಿಬರುತ್ತವೆ, ಆದ್ದರಿಂದ ಈ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದ ಡಿಕೆಶಿ, ಎಚ್ ಡಿ ರೇವಣ್ಣ ಅವರ ಬಗ್ಗೆ ಏನೂ ಮಾತನಾಡದೆ ಹೊರ ನಡೆದರು..!

ಆದ್ದರಿಂದ ಮೈತ್ರಿ ಸರಕಾರದಲ್ಲಿ ದಿನೇ ದಿನೇ ಭಿನ್ನಾಭಿಪ್ರಾಯ ಹೆಚ್ಚುತ್ತಿದ್ದು, ಒಂದೆಡೆ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾದ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ಬಂದಿದ್ದು, ಇತ್ತ ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರ ವೈಮನಸ್ಸಿನಿಂದಾಗಿ ಮೈತ್ರಿ ಸರಕಾರದಲ್ಲಿ ಕೋಲಾಹಲ ಉಂಟಾಗಿದೆ..!

–ಅರ್ಜುನ್

Tags

Related Articles

Close