ಪ್ರಚಲಿತ

ಬಿಗ್ ಬ್ರೇಕಿಂಗ್! ಡಿಕೆಶಿಗೆ ಭಾರೀ ಮುಖಭಂಗ! ಜಿದ್ದಿಗಿಳಿದಿದ್ದ ಜೆಡಿಎಸ್‍ಗೆ ಭರ್ಜರಿ ಜಯ..!

ಭಾರೀ ಕುತೂಹಲಗಳನ್ನೇ ಸೃಷ್ಟಿಸಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ಖಾತೆ ಹಂಚಿಕೆಯಲ್ಲಿ ಮಾಜಿ ಇಂಧನ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರಿಗೆ ಮೈತ್ರಿ ಸರ್ಕಾರ ಭಾರಿ ಶಾಕ್‍ನ್ನೇ ನೀಡಿದೆ. ಮೈತ್ರಿ ಸರ್ಕಾರ ರಚಿಸಲು ಪ್ರಮುಖ ಕಾರಣರಾದ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹಾಗೂ ಜನತಾ ದಳ ಕೊನೇ ಘಳಿಗೆಯಲ್ಲಿ ಮಹಾ ಮೋಸವನ್ನೇ ಮಾಡಿದೆ.

ಇತ್ತೀಚೆಗೆ ನಡೆದಿದ್ದ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಸರ್ಕಾರ ರಚಿಸುವಷ್ಟು ಸಾಮಥ್ರ್ಯವನ್ನು ಕಳೆದುಕೊಂಡಿತ್ತು. ಹೀಗಾಗಿ ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಭಾರೀ ಕುದುರೆ ವ್ಯಾಪಾರವನ್ನು ಭಾರತೀಯ ಜನತಾ ಪಕ್ಷ ನಡೆಸಬಹುದು ಎಂಬ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ರೆಸ್ಟೋರೆಂಟ್‍ಗೆ ಕರೆದೊಯ್ದಿದ್ದರು. ಇದರ ಸಂಪೂರ್ಣ ಜವಬ್ಧಾರಿಯನ್ನು ಡಿಕೆ ಶಿವಕುಮಾರ್ ಅವರು ವಹಿಸಿಕೊಂಡಿದ್ದರು.

ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ ಎಂದೇ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ ಡಿಕೆ ಶಿವಕುಮಾರ್ ಅವರ ಯೋಜನೆಯೇ ಉಲ್ಟಾ ಆಗಿತ್ತು. ಮಾಜಿ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿ ಕಾಂಗ್ರೆಸ್ ಕೈತೊಳೆದುಕೊಂಡಿತ್ತು. ಅಲ್ಲಿಯೂ ಡಿಕೆ ಶಿವಕುಮಾರ್ ಅವರಿಗೆ ಮೋಸ ಮಾಡಿ ಸಚಿವ ಸ್ಥಾನದಲ್ಲಿ ನೀವು ಹೇಳಿದ ಹುದ್ದೆಯನ್ನೇ ನೀಡುತ್ತೇವೆ ಎಂದು ಕಣ್ಣೊರೆಸುವ ತಂತ್ರವನ್ನು ಮಾಡಿತ್ತು.

ಕೊನೇ ಪಕ್ಷ ತಾನು ಈ ಹಿಂದೆ ನಿರ್ವಹಿಸುತ್ತಿದ್ದ ಇಂಧನ ಖಾತೆಯನ್ನಾದರೂ ನೀಡಿ ಎಂದು ಕಾಂಗ್ರೆಸ್ ನಾಯಕರ ಬಳಿ ಅಂಗಲಾಚಿದ್ದರು. ಈ ಬಗ್ಗೆ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್‍ನ್ನು ಮೆಚ್ಚಿಸುವ ಕೆಲಸವನ್ನೂ ಮಾಡಿದ್ದರು. ಆದರೆ ಇತ್ತ ಜನತಾ ದಳೆದ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಸಹೋದರ ರೇವಣ್ಣ ಇಂಧನ ಖಾತೆ ಬೇಕೆಂದು ಪಟ್ಟು ಹಿಡಿದಿದ್ದರು. ಈ ಬಗ್ಗೆ ಜನತಾ ದಳದ ರೇವಣ್ಣ ಹಾಗೂ ಕಾಂಗ್ರೆಸ್ ಡಿಕೆ ಶಿವಕುಮಾರ್ ಅವರಿಗೆ ಜಟಾಪಟಿಯಾಗಿತ್ತು.

ಇದೀಗ ಡಿಕೆ ಶಿವಕುಮಾರ್ ಅವರನ್ನು ಸ್ವತಃ ಕಾಂಗ್ರೆಸ್ ಪಕ್ಷವೇ ಮೂಲೆಗುಂಪು ಮಾಡಿದೆ. ಇಂಧನ ಖಾತೆಯನ್ನು ಜನತಾ ದಳದ ಬುಟ್ಟಿಗೆ ಹಾಕಿ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಮುಖಭಂಗವನ್ನು ಅನುಭವಿಸುವಂತೆ ಮಾಡಿದೆ. ಈ ಮೊದಲೇ ರೇವಣ್ಣ ವಿರುದ್ಧ ಕಿಡಿ ಕಾರಿದ್ದ ಡಿಕೆ ಶಿವಕುಮಾರ್ ಅವರು ಇದೀಗ ಮತ್ತೊಮ್ಮೆ ಸಿಡಿದೇಳುವ ಸಾಧ್ಯತೆಗಳೂ ಎದುರಾಗಿದೆ. ಈ ಮೊದಲೇ ತನ್ನ ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದ ಡಿಕೆ ಶಿವಕುಮಾರ್ ಇದೀಗ ಮತ್ತೆ ಸ್ವಪಕ್ಷದ ವಿರುದ್ಧ ಕೆಮಡ ಕಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅನೇಕ ಬಾರಿ ಕಾಂಗ್ರೆಸ್ ಪಕ್ಷ ಕಷ್ಟದ ದಿನಗಳನ್ನು ಎನಿಸುತ್ತಿರುವಾಗ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರು ಡಿಕೆ ಶಿವಕುಮಾರ್. ಐಟಿ ಇಲಾಖೆ, ಸಿಬಿಐ, ಇಡಿ ಸಹಿತ ಎಲ್ಲಾ ಇಲಾಖೆಗಳೂ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದರೂ ಜಗ್ಗದೆ ಕಾಂಗ್ರೆಸ್ ಪಕ್ಷದ ಶಾಸಕರನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದರು. ಅನೇಕ ಬಾರಿ ಅತ್ಯುನ್ನತ ಹುದ್ದೆಗಳನ್ನು ಡಿಕೆ ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಬಳಿ ಕೇಳಿದ್ದರು. ಆದರೆ ಪಕ್ಷ ಮಾತ್ರ ಈ ಬಗ್ಗೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳದೆ ಡಿಕೆಶಿ ಏನಿದ್ದರೂ ಪಕ್ಷ ಬಿಡೋದಿಲ್ಲ ಎಂದು ಕಡೆಗಣಿಸುತ್ತಲೇ ಬಂದಿದ್ದರು.

ಇಂಧನ, ಲೋಕೋಪಯೋಗಿ, ಕೃಷಿ ಸಹಿತ ಪ್ರಮುಖ ಖಾತೆಗಳನ್ನು ಜನತಾ ದಳವೇ ಇಟ್ಟುಕೊಂಡಿದೆ. ಗೃಹ ಖಾತೆ, ಕಂದಾಯ, ಬೆಂಗಳೂರು ಅಭಿವೃದ್ಧಿ, ಬೃಹತ್ ಕೈಗಾರಿಕೆ ಸಹಿತ ಮತ್ತೆ ಕೆಲವು ಖಾತೆಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ.

ಒಟ್ಟಾರೆ ಡಿಕೆ ಶಿವಕುಮಾರ್‍ಗೆ ಕಾಂಗ್ರೆಸ್ ಕೊಟ್ಟ ನಂತರ ಕಾಂಗ್ರೆಸ್ ಪಾಳಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೀಗ ಡಿಕೆ ಶಿವಕುಮಾರ್ ಅವರನ್ನು ಸಮಾಧಾನಪಡಿಸುವಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ.

  • ಸುನಿಲ್ ಪಣಪಿಲ
Tags

Related Articles

Close