ಪ್ರಚಲಿತ

ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕ್ಯಾನ್ಸರ್ ಮನಸ್ಥಿತಿಯ ಎ. ರಾಜಾ

ಸನಾತನ ಧರ್ಮದ ಬಗ್ಗೆ ಉದಯ ನಿಧಿ ಸ್ಟ್ಯಾಲಿನ್ ಹೇಳಿಕೆಯ ಬಿಸಿಯೇ ಇನ್ನೂ ತಣ್ಣಗಾಗಿಲ್ಲ. ಆಗಲೇ ಡಿಎಂಕೆ ಪಕ್ಷದ ಇನ್ನೋರ್ವ ನಾಯಕನೆನಿಸಿಕೊಂಡ ವ್ಯಕ್ತಿ ಸನಾತನ ಹಿಂದೂ ಧರ್ಮದ ಬಗ್ಗೆ ಅದಕ್ಕಿಂತಲೂ ತೀಕ್ಷ್ಣವಾದ ಹೇಳಿಕೆ ನೀಡುವ ಮೂಲಕ ಹಿಂದೂ ಧರ್ಮೀಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಡಿ ಎಂ ಕೆ ನಾಯಕ ಎ. ರಾಜಾ ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ ಎನ್ನುವುದು ಸುಳ್ಳಲ್ಲ. ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದಾರೆ. ಉದಯ ನಿಧಿ ಸ್ಟ್ಯಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದಾರೆ. ಇದು ಕೇವಲ ಮೃದು ಹೋಲಿಕೆಯಷ್ಟೇ. ಆದರೆ ಸನಾತನ ಧರ್ಮ ಎಚ್‌ಐ‌ವಿ, ಕುಷ್ಠರೋಗ ಇದ್ದಂತೆ. ಸನಾತನ ಧರ್ಮವನ್ನು ಸಾಮಾಜಿಕ ಕಳಂಕಗಳಿಗೆ ಹೋಲಿಕೆ ಮಾಡಬೇಕು ಎನ್ನುವ ಮೂಲಕ ತನ್ನ ಹೂವಿನ ಮನಸ್ಥಿತಿಯನ್ನು ಸಾರ್ವಜನಿಕರ ಮುಂದಿರಿಸಿದ್ದಾರೆ. ಆ ಮೂಲಕ ತಮ್ಮ ನಾಮರ್ಧತನವನ್ನು ಜಗಜ್ಜಾಹೀರು ಮಾಡಿ, ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಅದರ ಜೊತೆಗೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿರುವ ರಾಜಾ, ಈ ಬಗ್ಗೆ ಅನುಮತಿಸಿದರೆ ಸನಾತನ ಧರ್ಮದ ಬಗ್ಗೆ ಚರ್ಚೆಗೂ ತಾವು ಸಿದ್ಧ ಎಂಬುದಾಗಿ ತಿಳಿಸಿದ್ದಾರೆ. ಉದಯ ನಿಧಿಯ ಹೇಳಿಕೆಯೇ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಎ. ರಾಜಾ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ. ಸಾರ್ವಜನಿಕ ವಲಯದಲ್ಲಿ ಇಂತಹ ಮತು ಹೀನ ಹೇಳಿಕೆಗಳ ಬೆಂಕಿಯ ಕಾವು ಮತ್ತಷ್ಟು ಜೋರಾಗುವುದಕ್ಕೂ ಇದು ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸನಾತನ ಧರ್ಮವನ್ನು ಅವಮಾನ ಮಾಡುವ ಮೂಲಕ ತಮ್ಮ ಹೀನ ಮನಸ್ಥಿತಿಯನ್ನು ಜಗತ್ತಿನ ಎದುರು ತೆರೆದಿಡುವ ಕೆಲಸವನ್ನು ಡಿ ಎಂ ಕೆ ನಾಯಕರು ಮಾಡುತ್ತಿರುವುದು ಖೇದಕರ. ವಿವಾದಾತ್ಮಕ ಹೇಳಿಕೆಗಳ ಮೂಲಕ ಧಾರ್ಮಿಕ ವಿಷ ಬೀಜ ಬಿತ್ತಿ, ಧರ್ಮದ ಆಧಾರದಲ್ಲಿ ಜನರನ್ನು ಒಡೆಯಲು ಪ್ರಯತ್ನ ನಡೆಸುತ್ತಿರುವ, ಜನರ ಮಧ್ಯೆ ಹುಳಿ ಹಿಂಡಲು ‌ಪ್ರಯತ್ನ ನಡೆಸುತ್ತಿರುವ ಇಂತಹವರು ಸಮಾಜಕ್ಕೆ ಅಪಾಯಕಾರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಸನಾತನ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಇಂತಹವರು ದೇಶದ ಪಾಲಿಗೆ ಕ್ಯಾನ್ಸರ್ ರೋಗ ಇದ್ದಂತೆ ಎಂಬುದರಲ್ಲಿ ಎರಡು ಮಾತಿಲ್ಲ.

ಉದಯ ನಿಧಿ ಹಿಂದೂ ಧರ್ಮವನ್ನು ಮೃಧುವಾಗಿ ಟೀಕಿಸಿದ್ದರು. ಆದರೆ ತಾನು ಕಟುವಾಗಿ ಟೀಕೆ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಅವರು ನೈಜ ಸನಾತನಿ ಆಗಿದ್ದರೆ ವಿದೇಶಗಳಿಗೆ ಭೇಟಿ ನೀಡುತ್ತಿರಲಿಲ್ಲ. ನಿಜವಾದ ಹಿಂದೂ ಸಮುದ್ರ ದಾಟಿ ಬೇರೆಡೆಗೆ ಹೋಗಬಾರದು. ಆದರೆ ಪ್ರಧಾನಿ ಮೋದಿ ಇದಕ್ಕೆ ವಿರುದ್ಧ ಎಂಬುದಾಗಿಯೂ ಎ. ರಾಜಾ ತನ್ನ ನಾಲಿಗೆ ಹರಿಯ ಬಿಟ್ಟಿದ್ದಾರೆ.

ತಾನು ಈ ಬಗ್ಗೆ ಚರ್ಚೆಗೆ ಸಿದ್ಧ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವರ್ಣಾಶ್ರಮ ಮತ್ತು ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಸಲಿ ಎಂಬ ಸವಾಲನ್ನು ಸಹ ಎ. ರಾಜಾ ಹಾಕಿದ್ದಾರೆ. ಆ ಮೂಲಕವೂ ಸನಾತನ ಹಿಂದೂ ಧರ್ಮದ ಜನರ ಧಾರ್ಮಿಕ ಭಾವನೆ, ನಂಬಿಕೆಗಳಿಗೆ ಅವಮಾನ ಮಾಡಿದ್ದಾರೆ.

ಸನಾತನ ಧರ್ಮವನ್ನು ಹೀಯಾಳಿಸಿದ ಕಿಡಿಗೇಡಿ ನಾಯಕರ ವಿರುದ್ಧ ಕ್ರಮ ಕೈಗೆಳ್ಳುವಂತೆ ದೇಶಾದ್ಯಂತ ಹಲವಾರು ಠಾಣೆಗಳಲ್ಲಿ ದೂರು ದಾಖಲಿಸುವ ಕೆಲಸ ನಡೆದಿದೆ. ಹಲವಾರು ಸವನಾತನಿಗಳು ಇಂತಹ ದುರ್ಮಾರ್ಗಿ‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಒಟ್ಟಾರೆಯಾಗಿ ಕ್ಯಾನ್ಸರ್‌ನಂತಹ ಮಾರಕ ರೋಗದ ಮನ ಸ್ಥಿತಿಯ ಉದಯ ನಿಧಿ, ಎ. ರಾಜಾ ಅವರು ದೇಶಕ್ಕೆ ಕಂಟಕವಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಮಾಜದ ಹಿತ ರಕ್ಷಣೆ ಮಾಡುವ ಜವಾಬ್ದಾರಿ ಕಾನೂನಿನದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.

Tags

Related Articles

Close