ಅಂಕಣ

“ಓಂ” ಬೀಜಾಕ್ಷರದಿಂದ ದೇಹದಲ್ಲಿನ ಆಯಾಸ ದೂರವಾಗುತ್ತದೆ ಎಂದು ನಿರೂಪಿಸಿದ 14 ವರ್ಷದ ಪೋರಿ ಯಾರು ಗೊತ್ತೆ?!

“ಓಂ” ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ!! ಹಿಂದೂಗಳು ಪಠಿಸುವ ಮಂತ್ರಗಳಲ್ಲಿ “ಓಂ” ಬೀಜಾಕ್ಷರಕ್ಕೆ ಬಹಳ ಪ್ರಾಮುಖ್ಯತೆಯಿದ್ದು, ಇದನ್ನು “ಓಮ್” ಎಂದೂ ಕೂಡ ಕರೆಯಲಾಗುತ್ತದೆ!! ಇದು ಕೇವಲ ಹಿಂದೂಗಳಿಗೆ ಮಾತ್ರ ಪವಿತ್ರ ಬೀಜಾಕ್ಷರವಾಗಿಲ್ಲ. ಬದಲಿಗೆ ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇನ್ನು, “ಓಂ” ಎನ್ನುವ ಶಬ್ದದಿಂದ ದೇಹದಲ್ಲಿನ ಆಯಾಸ ಕಡಿಮೆಯಾಗುತ್ತದೆ ಎನ್ನುವುದನ್ನು 14 ವರ್ಷದ ಬಾಲಕಿ ನಿರೂಪಿಸಿದ್ದಾಳೆ!! ಹಾಗಾದರೆ ಆಕೆ ಯಾರು ಎಂಬುವುದು ಗೊತ್ತೆ??

“ಓಂ” ಎನ್ನುವ ಬೀಜಾಕ್ಷರವನ್ನು ಓಂಕಾರವೆಂದೂ, ಪ್ರಣವವೆಂದೂ ವ್ಯವಹರಿಸುವುದುಂಟು. ವೇದಾದಿ ಪವಿತ್ರ ಗ್ರಂಥಗಳ ಪಠಣದ ಪ್ರಾರಂಭದಲ್ಲಿ ಇದನ್ನು ಉಚ್ಚರಿಸಬೇಕೆಂಬ ನಿಯಮವಿದೆ. ಮೊದಲು ಉಪನಿಷತ್ತುಗಳಲ್ಲಿ ಬೀಜಾಕ್ಷರವಾಗಿ ಕಂಡುಬರುವ ಇದರ ಅ, ಉ, ಮ ಎಂಬ ಧ್ವನಿಗಳೂ, ಒಟ್ಟಾಗಿ ಈ ಅಕ್ಷರವೂ ಆಧ್ಯಾತ್ಮಿಕ ಪ್ರಭಾವವುಳ್ಳವೆಂದೂ ಇದು ಪರಬ್ರಹ್ಮಸ್ವರೂಪವೆಂದೂ ಅಲ್ಲಿ ಪ್ರತಿಪಾದಿತವಾಗಿದೆ!! ತ್ರಿಮೂರ್ತಿ ಸ್ವರೂಪವೆಂದೂ ಹೇಳಲಾಗುವ “ಓಂ” ಬೀಜಾಕ್ಷರ
ಅ,ಉ,ಮ ಕಾರಗಳಿಂದ ಹುಟ್ಟಿಕೊಂಡಿದೆ. ಹಾಗೆಯೇ ಇದನ್ನು ಮೂರು ವೇದಗಳಿಗೂ ಅನ್ವಯಿಸಿದ್ದಾರೆ. ಇದರ ಮತ್ತೊಂದು ಹೆಸರಾದ ಪ್ರಣವವೆಂಬುದುನು (ಸ್ತುತಿಸು, ಶಬ್ದಮಾಡು) ಎಂಬ ಧಾತುವಿನಿಂದ ನಿಷ್ಟನ್ನವಾಗಿ, ಇದರಿಂದ ಆತ್ಮವೋ ಇಷ್ಟದೇವತೆಯೋ ಸ್ತುತಿಸಲ್ಪಡುವುದರಿಂದ ಪ್ರಣವವಾಗಿದೆಯೆಂದು ಅದಕ್ಕೆ ವಿವರಣೆ ಕಂಡುಬರುತ್ತದೆ. “ಓಂ”ಗೆ ತನ್ನದೇ ಆದ ಮಹತ್ವ ಇದ್ದು ‘ಓಂ’ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಆದರೆ ‘ಓಂ’ಗೆ ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರ ಹೊಂದಿಲ್ಲ ಬದಲಾಗಿ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ…?

ಹೌದು… “ಓಂ” ಶಬ್ದದಿಂದ ದೇಹದಲ್ಲಿನ ಆಯಾಸ(ನಿಶ್ಯಕ್ತಿ) ದೂರವಾಗುತ್ತದೆಂದು ಹದಿನಾಲ್ಕು ವರ್ಷದ ಬಾಲಕಿ ಅನ್ವೇಷ ರಾಯ್ ಪ್ರಯೋಗಾತ್ಮಕವಾಗಿ ನಿರೂಪಿಸಿದ್ದಾಳೆ!! ಈಕೆ ಪಶ್ಚಿಮ ಬೆಂಗಾಲ್ ಸರಕಾರ ನಿರ್ವಹಿಸಿದ ಸೈನ್ ಕಾಂಗ್ರೆಸ್ ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದಿಂದ ಅಲ್ಲಿ ನೆರೆದಿದ್ದ ಶಾಸ್ತ್ರಜ್ಞರನ್ನು ಮೂಕವಿಸ್ಮಿತರಾಗುವಂತೆ ಮಾಡಿದ ಪೋರಿ!! ಕೊಲ್ಕತ್ತಾದ ಅಡಮ್ಸ್ ವರಲ್ಡ್ ಸ್ಕೂಲಿನಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಅನ್ವೇಷ್ ರಾಯ್ ಓಂಕಾರದ ಮೇಲೆ ಪರಿಶೋಧನೆ ಮಾಡಿದ್ದಾಳೆ. ಓಂ ಶಬ್ದವನ್ನು ಕೇಳುವುದರಿಂದ ರಕ್ತದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಾಗಿ, ಕಾರ್ಬನ್ ಡೈ ಆಕ್ಸೈಡ್, ಲ್ಯಾಕ್ಟಿಕ್ ಆಸಿಡ್ ನಾಲೆಗಳು ಕಡಿಮೆಯಾಗುತ್ತದೆಂದು, ಅದರ ಮೂಲಕ ಆಯಾಸ ಇರುವುದಿಲ್ಲವೆಂದು ಅನ್ವೇಷ ತನ್ನ ಪ್ರಯೋಗದ ಮೂಲಕ ಕೊಲ್ಕತ್ತಾ, ಜಾದವಪೂರ್ ಯೂನಿವರ್ಸಿಟಿಗಳಿಗೆ ಸೇರಿದ ಫಿಜಿಕ್ಸ್, ಫಿಜಿಯಾಲಜಿ ಪ್ರೋಫೆಸರ್  ಗಳ ಮುಂದೆ ನಿರೂಪಿಸಿದ್ದಾಳೆ!!

ಓಂಕಾರದಿಂದ ಹೊರ ಹೊಮ್ಮುವ ಪ್ರತ್ಯೇಕ ಪೌನಃಪುಣ್ಯ ಸೇರಿ ಶಬ್ದಗಳು ದೇಹದಲ್ಲಿನ ನ್ಯೂರೋಟ್ರಾನ್ಸ್ ಮೀಟರ್ಸನ ಜೊತೆಗೆ ಹಾರ್ಮೋನುಗಳ ಸೆರೋಟಿನಿನ್, ಡೊಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯೆಗೆ ರಕ್ತದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚುವುದೇ ಕಾರಣವೆಂದು ಅನ್ವೇಷ ರಾಯ್ ಆ ಸಮಯದಲ್ಲಿ ತಿಳಿಸಿದಳು. ಹಾಗೆಯೇ ಕಡಿಮೆ ಪರಿಮಾಣದಲ್ಲಿ ಲಾಕ್ಟಿಕ್ ಆಸಿಡ್ ಬಿಡುಗಡೆಯಾಗುತ್ತದೆ ಇದರಿಂದಾಗಿ ಆಯಾಸ ಎನ್ನುವುದು ಇರುವುದಿಲ್ಲವೆಂದು ಅನ್ವೇಷ ತಿಳಿಸಿದಳು. ಕಳೆದ ಹತ್ತು ವರ್ಷಗಳಿಂದ ಸಂಗೀತ ಸಾಧನೆಯ ಮೂಲಕ ದೇಹಕ್ಕೆ ವ್ಯಾಯಾಮದಂತಾಗಿ , ಮಾನಸಿಕ ಪ್ರಶಾಂತದಿಂದಾಗುತ್ತದೆ ಎಂದು ಪರಿಶೋಧಕರು ನಿರೂಪಿಸಿದರೆಂದು ಪಶ್ಚಿಮ ಬೆಂಗಾಲ್ ಸ್ಟೇಟ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಭಾಗದ ಸೆಕ್ರೆಟರಿ ರಿನ ವೆಂಕಟ್ರಾಮನ್ ತಿಳಿಸಿದರು!!

ವರ್ಕ್ ಶಾಪ್ ಭಾಗವಾಗಿ ಅನ್ವೇಷ ಉತ್ತರಾಖಂಡ್ ನಲ್ಲಿ ಪರ್ಯಟಣೆಯಲ್ಲಿ ಬಗೇಶ್ವರ್ ನಿಂದ 68ಕಿ.ಮೀ ದೂರವಿರುವ ಕೇದರಿನಾಥ್ ಗೆ ಕಾಲುನಡಿಗೆಯಲ್ಲೇ ದಿನಾಲೂ ನೀರನ್ನು ತೆಗೆದುಕೊಂಡು ಹೋಗುತ್ತಿದ್ದ ಕೆಲವು ಪೂಜಾರಿಗಳೊಂದಿಗೆ ಎಂತಹುದೇ ಆಯಾಸ ಕಾಣದಿರುವುದನ್ನು ಕಂಡು ಈಕೆಗೆ ಆಶ್ಚರ್ಯವಾಗಿತ್ತು. ಹಾಗೆಯೇ ಓಂಕಾರದ ಮೇಲೆ ತನ್ನ ಪ್ರಯೋಗವನ್ನು ನಿರ್ವಹಿಸಬೇಕು ಎಂದು ಭಾವಿಸಿದ ಈಕೆ ಓಂಕಾರದ ಮೇಲೆ ಪರಿಶೋಧನೆಗೆ ಅಲ್ಲಿಯೇ ಶ್ರೀಕಾರವಾಡಿದಳು!! ಓಂ ಶಬ್ದದ ಮೂಲಕ ದೇಹದಲ್ಲಿ 430 ಹೆರ್ಡ್ಸ್ ಪೌನಃಪುಣ್ಯಾವನ್ನು ಹೊರಹಾಕುತ್ತದೆಂದು ಗುರುತಿಸಿ ವಿವಿಧ ಲ್ಯಾಬೊರೇಟರಿಗಳಲ್ಲಿ ಐದು ಪ್ರಯೋಗಗಳನ್ನು ನಿರ್ವಹಿಸಿದಳು. 17 ಮಂದಿ ಯುವತಿ, ಯುವಕರಿಗೆ ಓಂಕಾರವನ್ನು 30 ನಿಮಿಷಗಳವರೆಗೂ ಕೇಳಿಸಿ ಅವರ ದೇಹದಲ್ಲಿನ ಆಕ್ಸಿಜನ್, ಕಾರ್ಬನ್ ಡೈಆಕ್ಸೈಡ್ ಮಟ್ಟವನ್ನು ಲೆಕ್ಕಿಸಿದಳು. ಓಂ ಶಬ್ದದಿಂದ ಅವರ ದೇಹದಲ್ಲಿ ಆಕ್ಸಿಜನ್ ಪರಿಮಾಣ ಹೆಚ್ಚಾಗಿ ,ಕಾರ್ಬನ್ ಡೈಆಕ್ಸೈಡ್ ಮಟ್ಟ ಕಡಿಮೆಯಾಯಿತೆಂದು ಅನ್ವೇಷ ತಿಳಿಸಿದ್ದಾಳೆ!!

ಅದಲ್ಲದೇ ಓಂಕಾರ ದೇಹದ ಮೇಲೆ ನಿರ್ದಿಷ್ಟ ಪ್ರಭಾವ ಬೀರುತ್ತದೆ ಎಂದು ಅನ್ವೇಷ ನಿರೂಪಿಸಿದ್ದಾಳೆ. ಇಲ್ಲಿಯವರೆಗೂ ಯಾರು “ಓಂ” ಶಬ್ದದ ಮೇಲೆ ಪ್ರತ್ಯೇಕ ಪರಿಶೋಧನೆಗಳು ಮಾಡಿಲ್ಲವೆಂದು ಸ್ಟೇಟ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಸೇರಿದ ಸೀನಿಯರ್ ಶಾಸ್ತ್ರಜ್ಞ ದೀಪಾಂಕರ್ ದಾಸ್ ತಿಳಿಸಿದ್ದಾರೆ!! ಇನ್ನು “ಓಂ” ಬೀಜಾಕ್ಷರದ ಬಗ್ಗೆ ಯಾರೂ ಮಾಡದ ಪರಿಶೋಧನೆಯನ್ನು ಈಕೆ ಮಾಡಿದ್ದು, ಈಕೆ ಸಾಧನೆಯನ್ನು ನಾವು ಮೆಚ್ಚಲೇಬೇಕು!!

“ಓಂ” ಉಚ್ಛರಿಸುವುದರಿಂದ ಆಗುವ ಪ್ರಯೋಜನಗಳೇನು??

ಖಿನ್ನತೆಗೆ ಒಳಗಾಗಿರುವವರು ಪ್ರತೀ ನಿತ್ಯ “ಓಂ” ಉಚ್ಛರಿಸುವುದರಿಂದ ಹೊಸ ಚೈತನ್ಯ ಬರುವುದರೊಂದಿಗೆ ಉತ್ಸಾಹ ಮೂಡುತ್ತದೆ. ಹಾಗೆಯೇ ಚುರುಕಾಗಿ ಎಲ್ಲಾ ಕೆಲಸಗಳನ್ನು ಸುಗಮವಾಗಿ ಮಾಡಬಹುದು. ಓಂ ಉಚ್ಛರಿಸುವುದರಿಂದ ದೇಹಕ್ಕೆ ಆಮ್ಲಜನಕ ಹಾಗೂ ರಕ್ತದ ಪೂರೈಕೆ ಸರಿಯಾಗಿ ಆಗುತ್ತದೆ. ಇದರೊಂದಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಮಾತ್ರವಲ್ಲದೇ ಮಾನಸಿಕ ಒತ್ತಡ, ಆತಂಕ ದೂರವಾಗುತ್ತದೆ. ಪ್ರತಿನಿತ್ಯವೂ ಓಂ ಅನ್ನು ಧ್ಯಾನದಲ್ಲಿ ಉಚ್ಛರಿಸುವುದರಿಂದ ಬಹಳಷ್ಟು ಶಕ್ತಿ ಉದ್ಭವಿಸುತ್ತದೆ. ಒಂದು ಹಂತದಲ್ಲಿ ಅಧ್ಯಾತ್ಮಿಕ ಸ್ಥಾಯಿ ಅಧಿಕಗೊಂಡು ನಮ್ಮ ಆತ್ಮ ದೈವತ್ವದೊಂದಿಗೆ ವಿಲೀನಗೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ಪಾಸಿಟಿವ್ ಕಂಪನಗಳು ಉಂಟಾಗಿ ಅನಾರೋಗ್ಯದಿಂದ ಮುಕ್ತವಾಗುವಂತೆ ಸಹಾಯ ಮಾಡುತ್ತದೆ. ಮಿದುಳಿನ ಕಾರ್ಯಕ್ಷಮತೆ ಹೆಚ್ಚುವುದರೊಂದಿಗೆ ಆಲೋಚನಾ ಶಕ್ತಿಯು ವೃದ್ಧಿಸುತ್ತದೆ.

ಹೊಸ ಆವಿಷ್ಕಾರಗಳನ್ನು ಮಾಡಲು ಸಹಕಾರಿಯಾಗುತ್ತದೆ. ಇದರೊಂದಿಗೆ ಚುರುಕಾಗಿ ಆಲೋಚನೆ ಮಾಡಲು ಸಹಕಾರಿಯಾಗುತ್ತದೆ. ಓಂಕಾರವನ್ನು ಉಚ್ಛರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ವಿದ್ಯಾಭ್ಯಾಸದಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಓಂ ಪಠಿಸುವುದರಿಂದ ಶರೀರ ಲವಲವಿಕೆಯಿಂದ ಕೂಡಿದ್ದು, ಮನಸ್ಸು ಹತೋಟಿಯಲ್ಲಿರುತ್ತದೆ. ಇದರಿಂದ ಅನಾವಶ್ಯಕ ಆಲೋಚನೆಗಳು ಬರುವುದಿಲ್ಲ.ಶರೀರದಲ್ಲಿ ಸೇರಿಕೊಂಡಿರುವ ವಿಷಪದಾರ್ಥಗಳು ಹೊರದೂಡಲ್ಪಡುತ್ತವೆ. ಇದರಿಂದ ಶರೀರವು ಅಂತರಂಗದಿಂದ ಶುಭ್ರವಾಗುತ್ತದೆ ಮಾತ್ರವಲ್ಲದೇ ಚರ್ಮ ಕಾಂತಿಯುತವಾಗುತ್ತದೆ. ಓಂ ಅಕ್ಷರದ ವಿನ್ಯಾಸ ” ॐ ” ಗಣಪತಿಯನ್ನು ಹೋಲುತ್ತದೆ. ಅಕ್ಷರದ ಮೇಲಿನ ಭಾಗ ತಲೆಯನ್ನೂ, ಮಧ್ಯ ಭಾಗ ಸೊಂಡಿಲನ್ನು, ಕೆಳಭಾಗ ಹೊಟ್ಟೆಯನ್ನು ಸೂಚಿಸುತ್ತದೆ. ಇದರಿಂದಾಗಿ, ಓಂ ಕಾರವನ್ನು ಉಚ್ಛರಿಸುವುದರಿಂದ ಸಾಕ್ಷಾತ್ ವಿನಾಯಕನನ್ನೇ ಪೂಜಿಸಿದಂತೆ ಆಗುತ್ತದಂತೆ. ಇದರಿಂದ ವಿನಾಯಕನ ಅನುಗ್ರಹ ಲಭಿಸುತ್ತದೆ. ಸ್ವರ ಪೆಟ್ಟಿಗೆಯ ಸಮಸ್ಯೆ ಉಳ್ಳವರು, ಓಂ ಉಚ್ಛರಿಸಿದರೆ, ಸಮಸ್ಯೆ ನಿವಾರಣೆ ಆಗುತ್ತದೆ. ಸ್ವರ ಇಂಪಾಗುತ್ತದೆ.ಇಸ್ಲಾಂನಲ್ಲಿ “ಓಂ” ಅನ್ನು “ಸಮಾ” ಎಂದು ಕರೆಯುತ್ತಾರೆ. ಅಕ್ಷರವೂ ಸಹ “ಓಂ” ಅನ್ನು ಹೋಲುತ್ತದೆ.

“ಓಂ” ಬೀಜಾಕ್ಷರಲ್ಲಿನ ಅ, ಉ, ಮ ಎಂಬ ಧ್ವನಿಗಳು ಕ್ರಮವಾಗಿ ವಿಷ್ಣು, ಶಿವ, ಬ್ರಹ್ಮ ಇವರನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೇ, ಇದನ್ನು ಪಠಿಸುವುದರಿಂದ ಕುಂಡಲಿನೀ ಶಕ್ತಿ ಜಾಗೃತಗೊಳ್ಳುತ್ತದೆ!! ತ್ರಿಮೂರ್ತಿ ಸ್ವರೂಪವೆಂದೂ ಹೇಳಲಾಗುವ “ಓಂ” ಬೀಜಾಕ್ಷರವು ದೇಹಕ್ಕೆ, ಮನಸ್ಸಿಗೆ ಸಂಬಂಧಸಿದ ನಾನಾ ವಿಧದ ಸಮಸ್ಯೆಗಳನ್ನು ನಿವಾರಿಸುವುದರೊಂದಿಗೆ ಹೊಸ ಚೈತನ್ಯ ನೀಡುತ್ತದೆ!! ಹೀಗಾಗಿ ಮೂರು ವೇದಗಳಿಗೂ ಅನ್ವಯಿಸುವ ಓಂಕಾರವೂ ಸರ್ವರೋಗನಿವಾರಕ ಎಂದರೆ ತಪ್ಪಾಗಲಾರದು!!

Source :https://kannada.ap2tg.com/fatigue-dementia-maya-from-the-word-oh/

– ಅಲೋಖಾ

Tags

Related Articles

Close