ಇತಿಹಾಸ

ಹಿಂದವೀ ಸ್ವರಾಜ್ಯ ನಿರ್ಮಾಣಕ್ಕೆ ವೀರ ಶಿವಾಜಿಗೆ ತಾಯಿ ಜೀಜಾಮಾತೆ ಹೇಳಿಕೊಟ್ಟ ಪಾಠವೇನು ಗೊತ್ತಾ..? ಧರ್ಮರಕ್ಷಣೆಗೆ ಮಾತಾಸೂತ್ರ!

ಜಗತ್ತು ಕಂಡ ಅಪ್ರತಿಮ ವೀರ!! ಭಾರತವನ್ನು ಪರಕೀಯರಿಂದ ಮುಕ್ತಿಗೊಳಿಸಲು ತನ್ನ ಜೀವವನ್ನೇ ಮುಡಿಪಾಗಿರಿಸಿದ ಅಪ್ಪಟ ದೇಶಪ್ರೇಮಿ. ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ಥಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಲಾಗುತ್ತಿತ್ತೊ, ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವಾತಂತ್ರ್ಯ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ, ಮರಾಠ ಸಾಮ್ರಾಜ್ಯದ ದೊರೆ, ಹಿಂದೂ ಸಮಾಜಕ್ಕೆ ಪುನರ್ಜನ್ಮ ನೀಡಿದ ಪುನ್ಯಾತ್ಮ ವೀರ ಶಿವಾಜಿ!! ಛತ್ರಪತಿ ಶಿವಾಜಿ!!

ಒಬ್ಬ ಕವಿ ಅದ್ಭುತವಾಗಿ ಬರೆಯುತ್ತಾನೆ, “ಕಾಶೀ ಜೀ ಕೀ ಕಲಾಜಾ ತೀ, ಮಥುರಾ ಮಸ್ಜಿದ್ ಹೋತೀ, ಯದೀ ಶಿವಾಜೀ ನಾ ಹೋತೇ ತೋ, ಸುನ್ನತ್ ಹೋತೀ ಸಬ್ ಕೀ”… ಕಾಶಿ ಕಳಾಹೀನವಾಗ್ತಿತ್ತು, ಮಥುರಾ ಮಸೀದಿಯಾಗ್ತಿತ್ತು, ಅಕಸ್ಮಾತ್ ಶಿವಾಜೀ ಮಹಾರಾಜ್ ಹುಟ್ಟದೇ ಇರುತ್ತಿದ್ದರೆ ದೇಶ ಇಸ್ಲಾಂ ಕ್ರೂರಿಗಳ ಬಂಧನಕ್ಕೊಳಗಾಗಿ ಸುನ್ನತ್ ಆಗುತ್ತಿತ್ತು. ಅಕ್ಷಷಃ ಸತ್ಯ. “ಮುಸಲ್ಮಾನರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ ಸಮಾಜವನ್ನು ಮೇಲಕ್ಕೆತ್ತಲು ಎದು ಬಂದ ಶಿವಾಂಶ ಆತ” ಎಂದು ಮಹಾಸಂತ ಸ್ವಾಮಿ ವಿವೇಕಾನಂದರೇ ಹೇಳುತ್ತಾರೆ.

Image result for ಶಿವಾಜಿ

ಶಿವಾಜಿಯ ಶಕ್ತಿ, ಪೌರುಷ, ಪರಾಕ್ರಮ ಆ ರೀತಿಯಿತ್ತು. ಸಮಾಜದಲ್ಲಿ ಗೆಲ್ಲೋವರೆಗೆ ಯರೂ ಹತ್ರ ಬರೋಲ್ಲ. ಗೆದ್ದ ಮೇಲೆ ಎಲ್ರೂ ಇದ್ದಾರೆ ಅನ್ನೋದು ವಾಸ್ತವ. ಈ ಸತ್ಯ ಶಿವಾಜಿಯನ್ನೂ ಬಿಟ್ಟಿಲ್ಲ. ಶಿವಾಜಿಗೆ ಆರಂಭದಲ್ಲಿ
ಯಾರ ಬೆಂಬಲವೂ ಸಿಗಲೇ ಇಲ್ಲ. ಶಿವಾಜಿ ಕಾಡು ಜನರನ್ನು, ಮಾವಳಿ ಪೋರರನ್ನು, ಭೇಟಿಯಾಗ್ತಾನೆ. ಅವರಲ್ಲಿ ಉಟ್ಟುಕೊಳ್ಳೋಕ್ಕೆ ಬಟ್ಟೆಯೂ ಇರಲಿಲ್ಲ ಅಂತಹ ಯುವಕರೊಂದಿಗೆ ಸಂಬಂಧ ಬೆಳೆಸುತ್ತಾನೆ. ಅವರಿಗೆ ಯುದ್ಧದ ವಿದ್ಯೆಗಳನ್ನು ಕಳಿಸುತ್ತಾನೆ. ಹೀಗೆ ಶಿವಾಜಿಯೊಂದಿಗೆ ಕಲಿತ ವಿದ್ಯೆಯಿಂದಾಗಿ ಆ ವೀರರು ಮುಂದೊಂದು ದಿನ ಶಿವಾಜಿ ಸಾಮ್ರಾಜ್ಯದ ಬಲಿಷ್ಟ ಸಿಂಹಗಳೇ ಆಗಿ ಬಿಡುತ್ತವೆ. ಶಿವಾಜಿಯ ಶಕ್ತಿಯ ಸಂಕೇತವಾಗಿ ಬಿಡುತ್ತವೆ. ಇವರ ಮೂಲಕ ಒಂದೊಂದು ಕೋಟೆಯನ್ನೂ ಗೆದ್ದು ವೀರನಾಗುತ್ತಾನೆ.

ಅಷ್ಟಕ್ಕೂ ಶಿವಾಜಿ ಎಂಬ ಮಹಾಪುರುಷನ ಜನನವಾಗುತ್ತದೆ ಎಂಬ ಸುಳಿವು ಜಗತ್ತಿಗೆ ಮೊದಲೇ ಗೊತ್ತಿತ್ತು. ಈ ಬಗ್ಗೆ ಶ್ರೇಷ್ಟ ಸಂತ ಸಮರ್ಥ ರಾಮದಾಸರು “ಈ ಮಣ್ಣಿನಲ್ಲಿ ಒಂದು ಅಗಮ್ಯವಾದ ಶಕ್ತಿಯ ಜನನವಾಗುತ್ತದೆ. ಅವನು ಹಿಂದೂ ಧರ್ಮದ ರಕ್ಷಣೆಗಾಗಿ ಜನಿಸಿದ ಅವತಾರ ಪುರುಷನಾಗಿರುತ್ತಾನೆ.ಅವನ ಮಾತನ್ನು ಇಡೀ ಸಮಾಜ ಕೇಳುತ್ತದೆ. ಧರ್ಮಕ್ಕಾಗಿ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಾನೆ. ಆ ಮಹಾತ್ಮನ ಹೆಸರು ಸೂರ್ಯ ಚಂದ್ರರು ಇರುವವರೆಗೂ ಅಜರಾಮರವಾಗಿ ಉಳಿಯುತ್ತದೆ.”. ಹೀಗೆಂದ ಮರುಕ್ಷಣವೇ ಮಹಾತಾಯಿ ಜೀಜಾಮಾತೆಯ ಉದರದಲ್ಲಿ “ಜೈ ಭವಾನಿ” ಎಂದು ಹಿಂದವೀ ಸ್ವರಾಜ್ಯದ ಕಹಳೆಯನ್ನು ಮೊಳಗಿಸುತ್ತಾ ಜನ್ಮತಾಳಿಯೇ ಬಿಟ್ಟಿದ್ದ ಬಾಲ ಶಿವಾಜಿ.

ದಟ್ಟ ಪೊಡವಿಯೊಡಲಲ್ಲಿ ಕಾಡು ಜನರೊಂದಿಗೆ, ತನ್ನ ತಾಯಿ ಹಾಕಿಕೊಟ್ಟ ದೇಶಭಕ್ತಿಯ ಗೆರೆಯನ್ನು ದಾಟದೆ, ಅದೇ ತಾಯಿ ಜೀಜಾ ಮಾತೆಯಿಂದ ವಿದ್ಯೆಗಳನ್ನು ಕಲಿತು, ಧರ್ಮಕ್ಕಾಗಿ, ಹಿಂದವೀ ಸಾಮ್ರಾಜ್ಯದ ಸ್ಥಾಪನೆಗಾಗಿ ಕುದುರೆಯನ್ನೇರಿ ಕುಳಿತುಬಿಟ್ಟಿದ್ದ ವೀರ ಶಿವಾಜಿಯಾಗಿ.

ಶಿವಾಜಿಗೆಗೆ ಎದುರಾಗಿತ್ತು ಎರಡು ಮಹಾ ಕಂಟಕಗಳು..!

ಹೌದು… ನರಜನ್ಮವೆಂದಾಗ ಕಷ್ಟಗಳು ಸರ್ವೇ ಸಾಮಾನ್ಯ. ಅದು ಶಿವಾಜಿಯನ್ನೂ ಬಿಟ್ಟಿಲ್ಲ. ಶಿವಾಜಿಯ ಜನನಾ ನಂತರ ಸಂತ ಸಮರ್ಥ ರಾಮದಾಸರು ಶಿವಾಜಿಯ ಜಾತಕವನ್ನು ನೋಡಿ ಒಮ್ಮೆ ದಂಗಾಗಿಬಿಡುತ್ತಾರೆ. ಆ ಕೂಡಲೇ ತಡಮಾಡದ ಸಂತ ಸಮರ್ಥರು ರಾತ್ರಿಯೇ ಶಿವನೇರಿ ದುರ್ಗಾಕ್ಕೆ ಧಾವಿಸುತ್ತಾರೆ. ಶಿವಾಜಿಯ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಈ ಸಂಭ್ರಮದ ಮಧ್ಯೆ ಸಂತ ಸಮರ್ಥ ರಾಮದಾಸರು ಮನೆ ಪ್ರವೇಶಿಸುತ್ತಾರೆ. ಆಗ ತಾನೇ ಬಾಲ ಶಿವಾಜಿ ಊಟಕ್ಕೆ ಕುಳಿತಿದ್ದ. ತಟ್ಟೆಯಲ್ಲಿದ್ದ ಅನ್ನವನ್ನು ತೆಗೆದು ಬಾಯಿಗೆ ಇಡಬೇಕು ಎನ್ನುವಷ್ಟರಲ್ಲಿ ಸಂತ ರಾಮದಾಸರು ತಡೆಯುತ್ತಾರೆ. “ಶಿವಾ, ಕೈಯ್ಯಲ್ಲಿರುವ ತುತ್ತನ್ನು ಮರಳಿ ತಟ್ಟೆಗೆ ಹಾಕಿ ಇಲ್ಲಿ ಬಾ” ಎನ್ನುತ್ತಾರೆ. ಗುರುಗಳ ಮಾತನ್ನು ಶಿರಸಾ ಪಾಲಿಸಿದ ಶಿವಾಜಿ ಎದ್ದು ಬಂದು ಗುರುಗಳ ಬಳಿಗೆ ಧಾವಿಸುತ್ತಾನೆ. “ಆತ ಉಣ್ಣುತ್ತಿರುವ ತಟ್ಟೆಗೆ ವಿಷ ಬೆರಸಲಾಗಿದೆ. ಅದರಲ್ಲಿರುವ ಆಹಾರವನ್ನು ಈ ಕೂಡಲೇ ಮಣ್ಣಿನಡಿಯಲ್ಲಿ ಮುಚ್ಚಿಬಿಡಿ” ಎನ್ನುತ್ತಾರೆ ಸಂತರು.

“ಜೀಜಾಭಾಯಿ… ನಿನ್ನ ಮಗನಿಗೆ ಜೀವನದಲ್ಲಿ ಎರಡು ಕಂಟಕಗಳು ಬರುತ್ತವೆ. ಅದ್ರಲ್ಲಿ ಒಂದನ್ನು ನಾನು ತೆಗೆದಿದ್ದೇನೆ. ಇನ್ನೊಂದನ್ನು ನೀವು ಅವನ ಬೆಂಗಾವಲಾಗಿದ್ದು ಕಾಪಾಡಿಕೊಳ್ಳಬೇಕಿದೆ. ಈತ ಅಸಾಧಾರಣ ಪುರುಷ. ಆತನ ಜೀವ ಧರ್ಮಕ್ಕೆ ಬಹಳ ಅವಶ್ಯಕವಾಗಿದೆ” ಎಂದರು.

ಕಾಡು ಜನರೊಂದಿಗೆ ಆಟವಾಡಿಕೊಂಡು, ವಿದ್ಯಾಭ್ಯಾಸ ಕಲಿಕತುಕೊಂಡಿರುತ್ತಿದ್ದ ಸಮಯದಲ್ಲಿ ಆತನ ತಂದೆ ಶಾಂಬಾಜಿ, ಹೆಂಡತಿ ಮಕ್ಕಳ ಭೇಟಿಗೆಂದು ಶಿವನೇರಿ ದುರ್ಗಾಕ್ಕೆ ಬರುತ್ತಾರೆ. ಹೀಗೆ ಬಂದ ಶಾಂಬಾಜಿ, ಶಿವಾಜಿಯನ್ನು ತನ್ನೊಡನೆ ಕರೆದೊಯ್ಯಲು ತೀರ್ಮಾನಿಸುತ್ತಾರೆ. ಆದರೆ ಸುಲ್ತಾನರ ಬಳಿಗೆ ಕಳುಹಿಸಿಕೊಡಲು ಮಾತೆ ಜೀಜಾಭಾಯಿ ಮೊದಲಿಗೆ ಒಪ್ಪಲಿಲ್ಲವಾದರೂ ಪತಿಯ ಮಾತಿಗೆ ಬೆಲೆಕೊಡಬೇಕೆಂಬ ಉದ್ಧೇಶದಿಂದ ಕಳುಹಿಸಿಕೊಡುತ್ತಾಳೆ.

ಬಿಜಾಪುರ ಸುಲ್ತಾನನ ಆಸ್ಥಾನದಲ್ಲಿ ಬಾಲ ಶಿವಾಜಿ…

ಬಿಜಾಪುರದ ಸುಲ್ತಾನನ ಆಸ್ಥಾನದಲ್ಲಿ ಮಂತ್ರಿವರ್ಗವೆಲ್ಲಾ ಸುಲ್ತಾನನ ಆಗಮನದ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ತಂದೆಯೊಂದಿಗಿರುವ ಶಿವಾಜಿಯೂ ಕೂಡಾ. ಅಷ್ಟರಲ್ಲೇ ಸುಲ್ತಾನನ ಆಗಮನವಾಗುತ್ತದೆ. ಸುಲ್ತಾನ ಆಗಮಿಸುವಾಗ ಮಂಡಿಯೂರಿ ನಮಸ್ಕರಿಸುವುದು ಅಲ್ಲಿನ ಪದ್ಧತಿ. ಅಂತೆಯೇ ಅಲ್ಲಿರುವ ಎಲ್ಲಾ ಮಂತ್ರಿಗಳು ಸಹಿತ ಸೇನಾಧಿಪತಿಗಳೂ ಆಗಮಿಸಿದ ಸುಲ್ತಾನನಿಗೆ ಮಂಡಿಯೂರಿ ಗೌರವಿಸುತ್ತಾರೆ. ಆದ್ರೆ ಬಾಲ ಶಿವಾಜಿ ಮಾತ್ರ ಬಗ್ಗಲೇ ಇಲ್ಲ. ಸುಲ್ತಾನ ಆಗಮಿಸುವಾಗ ಎದೆಯುಬ್ಬಿಸಿ ನಿಲ್ಲತ್ತಾನೆ ಬಾಲ ಶಿವಾಜಿ. ತಂದೆ ಶಾಂಬಾಜಿಗೆ ಸ್ವಲ್ಪ ಇರಿಸು ಮುರಿಸಾಗುತ್ತೆ. ಸುಲ್ತಾನನೂ ದುರುಗುಟ್ಟಿ ನೋಡಿದಾನದರೂ ಸಣ್ಣ ಹುಡುಗ ಎಂದು ಸುಮ್ಮನಾದ. ಆದ್ರೆ, ತನ್ನ ಇಸ್ಲಾಂ ಸಂತಾನವನ್ನು ನಿರ್ನಾಮ ಮಾಡಲು ಅವತಾರ ತಾಳಿದ ವೀರ ಪುರುಷ ಎಂಬುವುದು ಆತನ ತಲೆಗೆ ಹೊಕ್ಕಲೇ ಇಲ್ಲ.

ಹೊರಬಂದ ನಂತರ ತಂದೆ ಶಾಂಬಾಜಿಯು ಶಿವಾಜಿಯ ಬಳಿ “ಶಿವ ನೀನ್ಯಾಕೆ ಸುಲ್ತಾನರಿಗೆ ಗೌರವಿಸಿಲ್ಲ. ನನಗೆಷ್ಟು ಅವಮಾನವಾಯ್ತು ಗೊತ್ತಾ” ಎಂದಾಗ ತಕ್ಷಣ ಶಿವಾಜಿ ನೀಡಿದ ಉತ್ತರವೇನಿತ್ತು ಗೊತ್ತಾ. “ಅಪ್ಪಾಜಿ ನಮ್ಮ ನೆಲವನ್ನು ವಶಪಡಿಸಿಕೊಂಡು, ನಮ್ಮ ಹಿಂದೂ ಜನರ ರಕ್ತವನ್ನು ಹೀರುತ್ತಿರುವ ಈ ಸುಲ್ತಾನನ ಕೈಕೆಳಗೆ ನೀವು ದುಡಿಯುತ್ತೀರಲ್ಲಾ, ನನಗೂ ಎಷ್ಟು ಮುಜುಗರವಾಗುತ್ತೆ ಗೊತ್ತಾ” ಎಂದು ಹೇಳಿ ತಕ್ಷಣವೇ ತನ್ನ ತಾಯಿ ಬಳಿ ಹೊರಟೇ ಬಿಟ್ಟಿದ್ದ ಶಿವಾಜಿ.

ಹೀಗೆ ತಾಯಿಯ ಬಳಿ ಹೊರಟ ಶಿವಾಜಿ ಮೊದಲು ಹೇಳಿದ ಪದವೇ “ಅಮ್ಮ ನಾನು ಸಾಮ್ರಾಜ್ಯ ಕಟ್ಟುತ್ತೇನೆ” ಎಂದು. ಆ ಮಹಾಮಾತೆಗೆ ಎಲ್ಲಿಲ್ಲದ ಸಂತೋಷ. “ಹಿಂದವೀ ಸ್ವರಾಜ್ಯ ಕಟ್ಟೋದು ನನ್ನ ಕನಸು” ಎಂದು ಶಿವಾಜಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಈ ವಿಷಯವನ್ನು ಗುರು ದಾದಾಜಿ ಕೊಂಡದೇವರ ಬಳಿ ಹೇಳಿದಾಗ, ತಂದೆ ಮಗನ ಸಂಬಂಧದಲ್ಲಿ ವಿರಸವುಂಟಾಗಬಹುದು ಎಂದು ತಿರಸ್ಕರಿಸಿದರು. ಆದ್ರೆ ಪಟ್ಟು ಬಿಡದ ಶಿವಾಜಿ “ನನಗೆ ನನ್ನ ತಂದೆಗಿಂತ ತಾಯಿಯ ಕನಸು ಮುಖ್ಯ” ಎಂದು ಹಠ ಹಿಡಿದಿದ್ದರಿಂದ ಗುರುಗಳು ಒಪ್ಪಿಕೊಂಡರು.

ಮಾತೆ ಜೀಜಾಭಾಯಿ ಮತ್ತು ಗುರು ದಾದಾಜಿ ಕೊಂಡದೇವ, ಶಿವಾಜಿಯ ಹಿಂದವೀ ಸಾಮ್ರಾಜ್ಯಕ್ಕೆ ಹಾಕಿಕೊಟ್ಟ ರೂಪುರೇಷೆಗಳು ಹೇಗಿತ್ತು ಗೊತ್ತಾ..?

* ಶಿವಾಜಿ ಆಶಯದಂತೆಯೇ ಮಾತೆ ಜೀಜಾಭಾಯಿ ಮತ್ತು ಗುರು ದಾದಾಜಿ ಕೊಂಡದೇವ, ಆತನ ಹಿಂದವೀ ಸಾಮ್ರಾಜ್ಯಕ್ಕೆ ಅದ್ಭುತ ರೂಪುರೇಷೆಗಳನ್ನು ಹಾಕಿಕೊಡುತ್ತಾರೆ.

* ಬ್ರಾಹ್ಮಣರು ದೇವಮಾನವರ ಸಮ. ಅವರನ್ನು ಕೊಲ್ಲುವುದು ಘೋರ ಪಾಪ. ನಿನ್ನ ಧರ್ಮಯುದ್ಧದಲ್ಲಿ ಅವರು ನಿನ್ನ ವಿರುದ್ಧ ಬಂದರೆ ಎಚ್ಚರಿಸು, ಕೇಳಲಿಲ್ಲವಾದರೆ ಶಿಕ್ಷಿಸು. ಅದು ನಿನ್ನ ಧರ್ಮಕ್ಕಾಗಿಯೇ ಆಗಿರುತ್ತದೆ.

* ನಿನ್ನ ಧರ್ಮಯುದ್ಧದಲ್ಲಿ ಅನಾವಶ್ಯಕವಾಗಿ ಅನ್ಯಧರ್ಮವನ್ನು ಗುರಿಯಾಗಿಸಬೇಡ.

* ಪ್ರಾಣ ಮತ್ತು ಧರ್ಮ ಇವೆರಡರಲ್ಲಿ ನಿನ್ನ ಆಯ್ಕೆ ನಿನ್ನ ಧರ್ಮವಾಗಿರಲಿ.

* ಸ್ತ್ರೀಯರ ಮಾನಭಂಗವನ್ನು ಸಹಿಸಿ ಸುಮ್ಮನಿರಬೇಡ. ಅಂತವರನ್ನು ಸದೆಬಡಿಯುವವರೆಗೂ ವಿರಮಿಸಬೇಡ.

* ನಿನ್ನ ಧರ್ಮಯುದ್ಧ ಕೇವಲ ಮತಾಂಧರ ಜೊತೆಗೆ ಮಾತ್ರವೇ ಇರಲಿ. ಧರ್ಮವನ್ನು ಪಾಲಿಸುತ್ತಿರುವ ಯಾವುದೇ ಹಿಂದೂ ರಾಜರ ಬಳಿ ಯುದ್ಧಕ್ಕೆ ನಿಲ್ಲಬೇಡ.

*ಹೀಗೆ ವಿದ್ಯೆಯನ್ನು ಹೇಳಿಕೊಡುತ್ತಲೇ ಗುರು ದಾದಾಜಿಕೊಂಡರಿಗೆ ವಯಸ್ಸಾಗುತ್ತೆ. ಅವರು ಆಗಲೇ ಶಿವಾಜಿ ತೊಡೆಗೆ ಎರಗಿ “ನನಗೆ ವಯಸ್ಸಾಯಿತು. ನನ್ನ
ಸಾಮ್ರಾಜ್ಯವನ್ನು ನೀನಿ ನೋಡಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ” ಎಂದು ಹೇಳಿ ಶಿವಾಜಿಗೆ ಭೋದಿಸುತ್ತಾ…

*ತಂದೆ ತಾಯಿಯನ್ನು ದೇವರಂತೆ ಪಾಲಿಸು. ಅವರ ಶಾಪ ಏಳೇಳು ಜನ್ಮಕ್ಕು ಬಿಡುವುದಿಲ್ಲ.

* ಜಾತಿ ಭೇದ ಮರೆತು ರಾಜ್ಯಭಾರ ಮಾಡು.

* ಜನರ ಆಸೆಗಳಿಗೆ ತಣ್ಣಿರು ಎರಚಿ ಅವರ ಮನಸ್ಸಿಗೆ ನೋವುಂಟುಮಾಡಬೇಡ. ಪ್ರತಿಯೊಬ್ಬ ಪ್ರಜೆಗೂ ರಾಜನೇ ದೇವರಾಗಿರುತ್ತಾನೆ. ಯಾವ ರಾಜ್ಯದಲ್ಲಿ ಪ್ರಜೆಗಳು ಕ್ಷೇಮವಾಗಿರುತ್ತಾರೋ ಆ ರಾಜ್ಯದ ರಾಜ ಯೋಗ್ಯನಾಗಿರುತ್ತಾನೆ.

* ದುಷ್ಟರಿಂದ ದೂರವಿರು.

* ನಿನ್ನ ಕಾರ್ಯ ಸಫಲಗೊಂಡರೆ ಹಿಗ್ಗಬೇಡ, ವಿಫಲಗೊಂಡರೆ ಕುಗ್ಗಬೇಡ.

* ಮಾವಳಿಗಳು ಜಮೀನ್ದಾರರ ಪದ್ದತಿಯಿಂದ ನಲುಗಿ ತಮ್ಮ ಮನೆ ಮಠ ಕಳೆದುಕೊಂಡಿದ್ದಾರೆ. ಅವರಿಗೆ ನೆಲೆ ಒದಗಿಸಿ ಕೊಡು.

ಹೀಗೆ ಅನೇಕ ವಿಷಯಗಳನ್ನೂ ಭೋಧಿಸುತ್ತಾ ರಾಜತಾಂತ್ರಿಕತೆಯ ಪಾಠವನ್ನುಣಿಸುತ್ತಾರೆ.

Image result for shivaji with his mother

ಶಿವಾಜಿ ಅತಿ ದೊಡ್ಡ ವೀರನಾಗಿ ಹೊರಹೊಮ್ಮುತ್ತಾನೆ. ತನ್ನ ಧರ್ಮಕ್ಕಾಗಿ, ಮಹಿಳೆಯರ ಪ್ರಾಣ ರಕ್ಷಣೆಗಾಗಿ ಯಾವ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ. “ಹಿಂದೂ ಧರ್ಮ ಪ್ರತಿಷ್ಟಾಯೇ ಸಿದ್ಧ ಖಡ್ಗ ಸದಾವಯಂ’ ಎಂದು ಘರ್ಜಿಸುತ್ತಾ ಹಿಂದೂ ಧರ್ಮವನ್ನು ಪ್ರತಿಷ್ಠಾಪಿಸಲು ನನ್ನ ಖಡ್ಗ ಸದಾ ಸಿದ್ಧವಾಗಿರುತ್ತದೆ ಎಂದು ಸಿಂಹಾಸನವನ್ನೇರಿ ಕುಳಿತುಬಿಟ್ಟ.

ನಂತರ ಆರಂಭವಾಗಿದ್ದೇ ಧರ್ಮಯುದ್ದಗಳು. ಪ್ರಜೆಗಳನ್ನು ಹಿಂಸಿಸುತ್ತಿದ್ದ ಇಸ್ಲಾಮೀ ರಾಜರನ್ನು ಸದೆ ಬಡಿದು ಹಿಂದೂ ಸಾಮ್ರಾಜ್ಯದ ಕನಸನ್ನು ನನಸುಗೊಳಿಸುತ್ತಾನೆ. ಛತ್ರಪತಿ ಎನಿಸುತ್ತಾನೆ… ಮೋಸದಿಂದ ಕೊಲ್ಲಲು ಬಂದ ಧೈತ್ಯ ಆಫ್ಜಲ್ ಖಾನನ ಎದೆಬರಿದು ಅವನ ಆಸ್ಥಾನದಲ್ಲೇ ಮುಗಿಸಿಬಿಡುತ್ತಾನೆ ಶಿವಾಜಿ.

ನಂತರ ತನ್ನ ಕೋಟೆಗಳನ್ನು ಆಕ್ರಮಿಸಲು ಬಂದ ಔರಂಗಜೇಬನಿಗೂ ಕಿಂಚಿತ್ತೂ ಜಾಗ ಬಿಡದೆ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿಬಿಡುತ್ತಾನೆ.

ಹೀಗೆ ತನ್ನ ತಾಯಿಯ ಕನಸನ್ನು ಈಡೇರಿಸಿಯೂ, ಗುರುಗಳ ವೇದವಾಕ್ಯವನ್ನು ಪಾಲಿಸಿಯೂ, ಪ್ರಜೆಗಳ ಆರಾಧಕನಾಗಿಯೂ ತನ್ನ ಆಡಳಿತವನ್ನು ಸಮರ್ಪಕವಾಗಿ ನಿರ್ವಹಿಸಿ ಪ್ರಾಣವನ್ನು ಹಿಂದೂ ಸಮಾಜಕ್ಕಾಗಿ ಮೀಸಲಿಡುತ್ತಾನೆ…

  • ಸುನಿಲ್ ಪಣಪಿಲ
Tags

Related Articles

Close