ಪ್ರಚಲಿತ

ಮುಸ್ಲಿಮ್ ಬಾಹುಲ್ಯದ ಕಣಿವೆ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಮೋದಿ ಸರ್ಕಾರದ ಈ ಯೋಜನೆ! ನಮೋ ಎಂದ ಜನತೆ…

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಗದ್ದುಗೆಯನ್ನು ಏರಿದರೋ ಅಂದಿನಿಂದ ಇಡೀ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ!! ದೇಶದಾದ್ಯಂತ ಸಾಮಾಜಿಕ ಕ್ಷೇಮಾಭಿವೃದ್ದಿ ಯೋಜನೆಗಳನ್ನು ಜಾರಿ ತರುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಮನೆಮಾತಾಗಿದ್ದಾರೆ. ಕೇಂದ್ರ ಸರ್ಕಾರ ಹಲವಾರು ರೀತಿಯ ಜನಕಲ್ಯಾಣ ಯೋಜನೆಗಳನ್ನು ಘೋಷಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಕೂಡ!! ಬಡವರಿಗೆ, ಕೆಳಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹೀಗೆ ಎಲ್ಲ ವರ್ಗದ 44 ಕೋಟಿ ಜನರ ಕ್ಷೇಮಾಭಿವೃದ್ದಿಗೆ ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯು ಒಂದಾಗಿದೆ!!

ಸರ್ಕಾರಗಳು ಕಾಲ ಕಾಲಕ್ಕೆ ಅನೇಕ ಜನೋಪಯೋಗಿ ಯೋಜನೆಗಳನ್ನು ಘೋಷಿಸುತ್ತಿದ್ದು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಸಂತಸದ ವಿಚಾರ!! ಇನ್ನು ಭಾರತದಲ್ಲಿ ಅದೆಷ್ಟೋ ಲಕ್ಷಾಂತರ ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿದ್ದು ಜೀವನ ಸಾಗಿಸುತ್ತಿದ್ದು, ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯ. ಹಾಗಾಗಿ ಕೇಂದ್ರ ಸರ್ಕಾರ “ಪ್ರಧಾನ ಮಂತ್ರಿ ಅವಾಸ್ ಯೋಜನೆ” ಎಂಬ ಉತ್ತಮವಾದ ಯೋಜನೆಯನ್ನು ಜಾರಿಗೆಗೆ ತಂದಿದೆ.

Image result for modi

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ವರ್ಷದ ಆರಂಭದ ದಿನ ರಾಷ್ಟ್ರದ ಪ್ರಜೆಗಳಿಗೆ ಶುಭಾಶಯ ಹೇಳುವ ವೇಳೆ ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಇದೀಗ ಜಮ್ಮು ಕಾಶ್ಮೀರದಲ್ಲಿ ಮೋದಿ ಸರಕಾರ ಆವಾಸ್ ಯೋಜನೆಯಡಿ ಪಕ್ಕಾ ಮನೆಗಳನ್ನು ನಿರ್ಮಿಸಿ ಕೊಡುವುದರ ಮೂಲಕ ಇತಿಹಾಸ ಸೃಷ್ಟಿಸಿದೆ!!

ಆವಾಸ್ ಯೋಜನೆಯಡಿ ಜಮ್ಮು ಕಾಶ್ಮೀರದಲ್ಲಿ ಪಕ್ಕಾ ಮನೆಗಳ ನಿರ್ಮಾಣ:

ಜಮ್ಮು ಮತ್ತು ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರಕಾರ ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿವೆ!! ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ತಯಾರಿಸಿದ ಮನೆಗಳಿಗೆ ಪಕ್ಕಾ ಮನೆಗಳು ಎನ್ನುತ್ತಾರೆ!! ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಣಿವೆ ರಾಜ್ಯದಲ್ಲಿ ಬಡವರಿಗೆ ಇಂತಹ ಹಲವಾರು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ!! ಪಕ್ಕಾ ಮನೆಗಳನ್ನು ಪಡೆದ ಕಣಿವೆಯ ಬಡವರು ತಮ್ಮ ಸಂತಸವನ್ನು ಹಂಚಿಕೊಂಡು ಕೇಂದ್ರ ಸರಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ!! ಆವಾಸ್ ಯೋಜನೆಯಿಂದಾಗಿ ಗುಣಮಟ್ಟದ ಜೀವನ ಮತ್ತು ಕನಸು ಸಾಕಾರದ ವಿಷಯ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು!! 2022ರ ವೇಳಗೆ ಪ್ರತೀ ಭಾರತೀಯನೂ ವಸತಿ ಹೊಂದಿರಬೇಕು ಎಂಬ ಗುರಿಯ ಸಾಕಾರಕ್ಕೆ ನಮ್ಮ ಸರ್ಕಾರ ಕಾರ್ಯೋನ್ಮುಖ ಗೊಂಡಿರುವುದಾಗಿ ತಿಳಿಸಿದರು!!

Related image

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಗರದಲ್ಲಿನ ಕಳಪೆ ಮಟ್ಟವನ್ನು ತೊಡೆದು ಹಾಕುವಲ್ಲಿ ಸಹಾಯಕವಾಗುತ್ತದೆ. ಡಿಜಿಟಲ್ ಇಂಡಿಯ ಮಿಷನ್ ದೇಶವನ್ನು ಹೊಸ ದಿಕ್ಕಿನತ್ತ ಸಾಗುವಲ್ಲಿ ಪರಿವರ್ತನೆಗೊಳ್ಳುವಂತೆ ಮೋದೀಜೀ ಸರಕಾರ ಮಾಡುತ್ತಿರುವುದು ಹೆಮ್ಮೆಯ ವಿಚಾರ!!

  • ಪವಿತ್ರ
Tags

Related Articles

Close