ಪ್ರಚಲಿತ

ಈ ಸ್ಟೋರಿ ಓದಿದರೆ ಮೋದಿ ವಿರೋಧಿಗಳೂ ಪ್ರೀತಿಸುತ್ತಾರೆ..! 4 ವರ್ಷದಲ್ಲಿ ಮೋದಿ ಎಷ್ಟು ವಿದೇಶಿ ಭಾರತೀಯರನ್ನು ರಕ್ಷಿಸಿದ್ದಾರೆ ಗೊತ್ತಾ..?

ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ ಸಮಯದಿಂದಲೂ ತನ್ನ ದೇಶವು ಸದೃಢತೆ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ. ಅಲ್ಲದೇ ತಾನು ದೇಶಕ್ಕೋಸ್ಕರ, ದೇಶದ ಜನತೆಗೋಸ್ಕರ ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ, ಎಲ್ಲಿಯೂ ಕೂಡ ಹೇಳಿಕೊಳ್ಳದೆ ಇರುವ ವ್ಯಕ್ತಿ!! ಇನ್ನು ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಯಾವುದೇ ಕೆಲಸವನ್ನು ಮಾಡಿಲ್ಲ ಅಷ್ಟೇ ಅಲ್ಲದೇ ತಾವು ಮಾಡಿದ ಅಭಿವೃದ್ದಿ ಕೆಲಸಗಳ ಬಗ್ಗೆ ಎಲ್ಲಿಯೂ ಕೂಡ ಹೇಳಿದ್ದೇ ಇಲ್ಲ!! ಎಲ್ಲರೂ ಒಂದೇ ಎನ್ನುತ್ತಾ ಯಾವ ಜಾತಿ ಧರ್ಮ ಎಂದು ಎಂದಿಗೂ ಭೇದ ಭಾವ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಪ್ರಧಾನ ಸೇವಕ ಮೋದೀಜೀ!!

ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಯಾಕೆಂದರೆ ನರೇಂದ್ರ ಮೋದಿ ಒಬ್ಬ ಮಹಾನ್ ಕನಸುಗಾರ. ಕನಸನ್ನು ನನಸಾಗಿ ಪರಿವರ್ತಿಸುವ ಸಾಮಥ್ರ್ಯವುಳ್ಳ ಧೀಮಂತ. ಭಾರತದ ಅಭಿವೃದ್ಧಿ ಬಗ್ಗೆ ಮೋದಿ ಕಂಡಿರುವ ಕನಸುಗಳಲ್ಲಿ ಕೃಷಿ ಸಂಶೋಧನೆ, ಪರಿಸರದ ರಕ್ಷಣೆ, ಉದ್ಯಮಕ್ಕೆ ಪೂರಕ ಮೂಲಸೌಕರ್ಯ ಮತ್ತು ಜಾಗತಿಕ ಹಣ ಹೂಡಿಕೆ ಪ್ರಮುಖವಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕಾದರೆ ಜೀವನದಲ್ಲಿ ಅನಂತ ಆನಂದವನ್ನು ಹೊಂದಿರುವ ಸಂಪದ್ಭರಿತ ಸಮಾಜದ ಕನಸು ಹೊತ್ತಿದ್ದಾರೆ!!! ಅತ್ಯಂತ ಶಿಸ್ತಿನ ಸಿಪಾಯಿ ಆಗಿರುವ ನರೇಂದ್ರ ಮೋದಿ ಅವರು ಅದ್ಭುತ ಶಕ್ತಿ ಮತ್ತು ಕಾರುಣ್ಯದ ಪ್ರತೀಕವೂ ಆಗಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಅನಿವಾಸೀ ಭಾರತೀಯರು ಕೂಡಾ ಮೋದಿ ಆಡಲಿತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ!! ಹೊಟ್ಟೆ ಪಾಡಿಗೋಸ್ಕರ ವಿದೇಶಕ್ಕೆ ತೆರಳಿ ಯುದ್ಧ ದಾಳಿ ವಂಚನೆ ಮುಂತಾದ ಸಂದರ್ಭ ಹಾಗೂ ಸಮಸ್ಯೆಗಳಲ್ಲಿ ಸಿಲುಕಿದ್ದ 90,000ಕ್ಕೂ ಹೆಚ್ಚು ಭಾರತೀಯರನ್ನು ಕಳೆದ ನಾಲ್ಕು ವರ್ಷದ ಬಿಜೆಪಿ ಸರಕಾರದ ಆಡಳಿತ ಕಾಲದಲ್ಲಿ ರಕ್ಷಿಸಲಾಗಿದೆ!! ಎಂದರೆ ಅಷ್ಟು ಸುಲಭದ ಮಾತೇ?!!

Related image

ತಾವು ಮಾಡಿರುವ ಕೆಲಸಗಳ ಬಗ್ಗೆ ಎಳ್ಳಷ್ಟು ಜಂಭವನ್ನು ತೋರ್ಪಡಿಸಲ್ಲ ಮೋದೀಜೀ!! ಅಂದು ಯೆಮೆನ್ ದೇಶದಲ್ಲಿ ಗುಂಡಿನ ಸುರಿಮಳೆ ನಡೆಯುತ್ತಿದ್ದಾಗ ಸ್ವಲ್ಪ ಸಮಯದವರೆಗೆ ಯೆಮೆನ್ ದೇಶಕ್ಕೆ ಗುಂಡು ಹಾರಿಸುವುದನ್ನು ನಿಲ್ಲಿಸಲು ಸೌದಿ ಕಿಂಗ್‍ಗೆ ಆದೇಶ ನೀಡಿದ್ದರು. ಆದರೆ ಗುಂಡು ಹಾರಿಸುವುದನ್ನು ನಿಲ್ಲಿಸಿ ಎಂದು ಹೇಳುವುದು “ಅದು ಸುಲಭವಾದ ಕೆಲಸವಾಗಿರಲಿಲ್ಲ”!! ಆದರೆ ಈ ಗುಂಡು ಹಾರಿಸುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿರುವುದರಿಂದ ಒಟ್ಟು 48 ದೇಶಗಳ ಅಂದರೆ 4000 ಭಾರತೀಯರು ಹಾಗೂ 2000 ವಿದೇಶಿಯರನ್ನು ಆಪರೇಶನ್ ರಾಹತ್ ಮೂಲಕ ಭಾರತ ಯೆಮೆನ್‍ನಿಂದ ತಕ್ಷಣ ತೆರವುಗೊಳಿಸಿತು.!! ಈ ಸಮಯದಲ್ಲಿ ಮೋದಿಜೀ ಕಾರ್ಯ ತಂತ್ರಕ್ಕೆ ಇಡೀ ವಿಶ್ವವೇ ಬೆರಗಾಗಿತ್ತು!! ಇಂತಹ ಇಷ್ಟು ದೊಡ್ಡ ಕಾರ್ಯ ಮಾಡುವುದಕ್ಕೆ ಮೋದೀಜೀಯಂತಹ ಪ್ರಧಾನಿಯಿಂದ ಮಾತ್ರ ಸಾಧ್ಯ ಎಂಬ ಮಾತು ಇಡೀ ವಿಶ್ವವೇ ಹೇಳಿತ್ತು!!

ಅದಲ್ಲದೆ ಹೊಟ್ಟೆ ಪಾಡಿಗಾಗಿ ಭಾರತದಿಂದ 46 ನರ್ಸ್ ಗಳು ಇರಾಕಿಗೆ ಹೋಗಿದ್ದರು. ಅವರ ದುರ್ದೈವ ಅಲ್ಲಿ ಐಸಿಸ್ ಉಗ್ರಗಾಮಿಗಳು ಅವರನ್ನು ಅಪಹರಿಸಿ ಬಂಧಿಸಿ ಬಿಟ್ಟಿದ್ದರು. 23 ದಿನಗಳವರೆಗೆ ಅನ್ನ-ನೀರಿಲ್ಲದೆ ಐಸಿಸ್ ಉಗ್ರರ ಕೈಯಲ್ಲಿ ನರಳುತ್ತಿದ್ದ ನರ್ಸ್ ಗಳನ್ನು ಶತಾಯಗತಾಯ ಭಾರತಕ್ಕೆ ಕರೆತರಲು ಪಣ ತೊಟ್ಟರು ಮೋದಿ. ಸುಲಭದ ಕೆಲಸವೆ ಇದು? ಆದರೆ ಮೋದಿಗೆ ಅಸಾಧ್ಯವಾದುದು ಯಾವುದೂ ಇಲ್ಲ!!

Image result for modi

ಯುದ್ಧ ಪೀಡಿತ ಪ್ರದೇಶಗಳಾದ ಯೆಮನ್ಸಿ, ರಿಯಾ, ಲೆಬಲಾನ್, ಇರಾಕ್ ಮುಂತಾದ ದೇಶಗಳಿಂದ ಅಲ್ಲಿ ನೆಲೆಸಿದ್ದ ಭಾರತೀಯರನ್ನು ರಕ್ಷಿಸಿದ್ದು ಇದೇ ನಮ್ಮ ಮೋದೀಜೀಯವರು!! ಇದಕ್ಕೇನನ್ನುತ್ತಾರೆ ಬುದ್ಧಜೀವಿಗಳು!! ಅದಲ್ಲದೆ ಅಂದು ಅಫಘಾನಿಸ್ತಾನದ ಹೇರತ್ ನಿಂದ ಅಪಹರಣಕ್ಕೊಳಗಾದ ಫಾದರ್ ಅಲೆಕ್ಸಿಸ್ ಪ್ರೇಮಕುಮಾರ್, ಅಪಹರಣಕಾರರಿಂದ ಮಾನಸಿಕ ಚಿತ್ರಹಿಂಸೆಗೊಳಗಾಗುತ್ತಿದ್ದ ಸಂಧರ್ಭದಲ್ಲಿ 8 ತಿಂಗಳು ಹರಸಾಹಸ ಪಟ್ಟು ವಾಪಾಸು ಕರೆತಂದದ್ದು ಇದೇ ನಮ್ಮ ಮೋದಿಜೀ ಎಂಬುವುದದನ್ನು ಯಾರೂ ಮರೆಯಬಾರದು!! ಅದಲ್ಲದೆ ಮಿಶನರಿ ಕೆಲಸಕ್ಕಾಗಿ ಯೆಮನಿಗೆ ತೆರಳಿದ್ದಾಗ ಸಿಸ್ಟರ್ ಸ್ಯಾಲಿ ಅವರನ್ನು ಅಪಹರಿಸಿದ್ದಾಗಲೂ ರಕ್ಷಿಸಿದ್ದು ಮೋದೀಯವರೇ…

Image result for modi

ಹಾಗಾಗಿ ಭಾರತೀಯರು ಎಲ್ಲೇ ಇರಲಿ ಯಾವ ಯಾವ ಜಾತಿ ಧರ್ಮವನ್ನು ಪರಿಗಣಿದೆ ನಾವೆಲ್ಲಾ ಭಾರತೀಯರೆಂದು ಅಂದುಕೊಂಡು ಅವರ ರಕ್ಷಣೆಗೆ ಧಾವಿಸುತ್ತಾರೆ!! ಭಾರತೀಯರು ಯಾವ ದೇಶಕ್ಕೆ ಹೋದರೂ ಮೋದೀಜೀ ಕಣ್ಣು ಅವರ ಮೇಲೇ ಇರುತ್ತದೆ!! ಭಾರತೀಯರಿಗೆ ಒಂದು ಸಣ್ಣ ತೊಂದರೆಯಾದರೂ ಮೋದೀಜೀ ಅಲ್ಲಿಗೆ ಧಾವಿಸಿ ಕ್ಷಣ ಮಾತ್ರದಲ್ಲೇ ಅದನ್ನು ಪರಿಹರಿಸುವ ಶಕ್ತಿ ಮೋದೀಜೀಗಿರುತ್ತದೆ!! ಇಷ್ಟು ಮಾಡಿದ ಮೋದೀಜೀಯನ್ನು ಮಾತ್ರ ಸೋಲಿಸಲು ಕೆಲವರು ಕ್ರೈಸ್ತರು ಚರ್ಚ್‍ನಲ್ಲಿ ಪ್ರಾರ್ಥಿಸಿದರೆ ಮುಸ್ಲಿಮರು ತಮ್ಮ ಮದರಾಸದಲ್ಲಿ ಪ್ರಾರ್ಥಿಸುತ್ತಾರಂತೆ!! ನಿಮಗಿದು ತಿಳಿದಿರಲಿ ಅಂದು ಮೋದೀಜೀ ಕೂಡ ಜಾತಿ, ಮತ, ಧರ್ಮ ಎಂದು ಪರಿಗಣಿಸುತ್ತಿದ್ದರೆ ಇಂದು ನೀವು ಭಾರತದಲ್ಲಿ ಸುಭೀಕ್ಷವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ!! ಮೋದೀಜೀಯನ್ನು ಎಷ್ಟು ಕಟುವಾಗಿ ಬೈದರೂ ಕೇಳಿಯೂ ಕೇಳದಂತೆ ಮೌನವಾಗಿರುತ್ತಾರೆ!! ಅದರ ಅರ್ಥ ಅವರಿಗೆ ಮಾತನಾಡಲು ಬರುವುದಿಲ್ಲ ಅಂತ ಅಲ್ಲ!!

Image result for modi

ಕೇವಲ ನಾಲ್ಕು ವರ್ಷದಲ್ಲಿ ಆಡಳಿತ ನಡೆಸಿ ಇಡೀ ವಿಶ್ವದ ಜನರ ಮನಸ್ಸನ್ನು ಗೆದ್ದಿದ್ದಾರೆ ಎಂದರೆ ಮೋದೀಜೀ ಸಾಮಾನ್ಯವಾದ ವ್ಯಕ್ತಿಯಲ್ಲ ಎಂಬುವುದು ಈಗಾಗಲೇ ಎಲ್ಲರಿಗೆ ತಿಳಿದಿರಬಹುದು!! ಕೇವಲ ನಾಲ್ಕು ವರ್ಷದ ಆಡಳಿತವಾಧಿಯಲ್ಲಿ ವಿದೇಶದಲ್ಲಿ ವಾಸಿಸುತ್ತಿದ್ದ ಸುಮಾರು 90,000ಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಿದ್ದಾರೆ ಎಂದರೆ ಇದು ನಿಜವಾಗಿಯೂ ಗ್ರೇಟ್!! ತಾನೊಬ್ಬ ಪ್ರಧಾನಿಯಾಗಿದ್ದರೂ ಸಹ ಪ್ರಧಾನ ಸೇವಕ ಎಂದು ಹೇಳುತ್ತಲೇ ಇಡೀ ದೇಶದ ಅಭಿವೃದ್ಧಿಯನ್ನು ಮಾಡುವುದೇ ಮೋದೀಜೀಯ ಕೆಲಸವಾಗಿದೆ!! ಇಡೀ ವಿಶ್ವವೇ ನರೇಂದ್ರ ಮೋದಿಯವರನ್ನು ಗೌರವಿಸುತ್ತಿರುವಾಗ ಕೆಲ ಬುದ್ದಿಜೀವಿಗಳು ಪ್ರಧಾನಿಯನ್ನು ತೆಗಳುತ್ತಿರುವುದು ಮಾತ್ರ ವಿಪರ್ಯಾಸ!! ಯಾರೇ ಆಗಲಿ ಹೊಸ ಹೊಸ ಯೋಜನೆ ಮತ್ತು ನಾಯಕತ್ವದಲ್ಲಿರಬೇಕಾದ ಆದರ್ಶಗಳತ್ತ ನೋಡುತ್ತಿದ್ದರೆ ನರೇಂದ್ರ ಮೋದಿಯವರಿಗಿಂತ ರೋಲ್ ಮಾಡೆಲ್ ಇನ್ನೊಬ್ಬರಿಲ್ಲ. ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿಕೊಟ್ಟಿದ್ದಾರೆ.!! ಜೈ ಮೋದೀಜೀ!!

ಕೃಪೆ : ನ್ಯೂಸ್ 13

  • ಪವಿತ್ರ
Tags

Related Articles

Close