ಅಂಕಣ

ವಿರೋಧಿಗಳು ಎರಚಿದ ಮಸಿಗೆ ಬೆಳಕಿಗೆ ಬಾರದ ಗಣಿಧಣಿಯ ಮಾನವೀಯತೆ!

ಜಗತ್ತಿನಲ್ಲಿ ಅಗ್ನಿ ಪರೀಕ್ಷೆ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಧರ್ಮ ರಕ್ಷಣೆಗಾಗಿ ವಿಷ್ಣುವಿನ ಅವತಾರವೆತ್ತಿದ ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮ ಜೈಲಿನಲ್ಲಿ ಹುಟ್ಟಬೇಕಾಯ್ತು! ಮರ್ಯಾದ ಪುರುಷೋತ್ತಮ, ಅಯೋಧ್ಯಾಧಿಪತಿ ಶ್ರೀ ರಾಮಚಂದ್ರ ತನ್ನ ೧೪ ವರ್ಷಗಳನ್ನು ಕಾಡಿನಲ್ಲಿ ಕಳೆಯಬೇಕಾಯ್ತು. ಸಾಕ್ಷಾತ್ ಶ್ರೀ ಕೃಷ್ಣನ ಬಲವಿದ್ದರೂ ಅಂದು ಪಾಂಡವರು ತಮ್ಮ ರಾಜ್ಯವೆಲ್ಲವನ್ನು ಬಿಟ್ಟು ಕುಟುಂಬ ಸಮೇತ ವನವಾಸವನ್ನು ಅನುಭವಿಸಬೇಕಾಯ್ತು. ಧರ್ಮರಕ್ಷಣೆಗೋ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗಿಯೋ ಅಥವಾ ಕಾಕತಾಳೀಯವಾಗಿಯೋ ಏನೋ ಎಂಬಂತೆ ಈ ಎಲ್ಲಾ ಕಟು ಅವಧಿಯ ಅಗ್ನಿ ಪರೀಕ್ಷೆ ಯನ್ನು ದಾಟಿ ಬಂದು ಮತ್ತೆ ತಮ್ಮ ಸಾಮ್ರಾಜ್ಯವನ್ನು ಭವ್ಯವಾಗಿ ಆಳಿದವರು. ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದೆ ಶಾಶ್ವತವಾಗಿ ಉಳಿಸಿಕೊಂಡವರು. ಇವರೆಲ್ಲರೂ ವನವಾಸಕ್ಕೆ ತೆರಳಿದವರು ಅಥವಾ ಜೈಲಿನಲ್ಲಿ ಜನಿಸಿದವರು ಎಂಬ ಮಾತ್ರಕ್ಕೆ ಜನರ ಬಾಯಲ್ಲಿ  ಯಾವತ್ತಿಗೂ ಅನ್ನಿಸಿಕೊಳ್ಳಲಿಲ್ಲ. ಅನ್ನಿಸಿಕೊಂಡರೂ ಅದು ವಿರೋಧಿಗಳ ಹಾಗೂ ಅಧರ್ಮಿಗಳ ಬಾಯಿಂದಲೇ ಹೊರತು ಉತ್ತಮರಿಂದಲ್ಲ.

ಈ ಸಾಲುಗಳು ನಮ್ಮ ಕರ್ನಾಟಕದ ಓರ್ವ ವ್ಯಕ್ತಿಗೆ ಹೇಳಿ ಮಾಡಿಸಿದಂತಿದೆ. ಆ ವ್ಯಕ್ತಿ ಮತ್ಯಾರೂ ಅಲ್ಲ. ಅವರೇ ಬಳ್ಳಾರಿ ದೊರೆ ಜನಾರ್ದನ ರೆಡ್ಡಿ. ೬೦ ವರ್ಷಗಳ ಕಾಲ ಕರ್ನಾಟಕ ರಾಜ್ಯವನ್ನಾಳಿ, ಕೃಷ್ಣ ದೇವರಾಯ, ಮೈಸೂರು ಒಡೆಯರ್ ರಂತಹ ಮಹಾನ್ ನಾಯಕರ ಸಾಧನೆಗಳನ್ನು ಇತಿಹಾಸದಲ್ಲೇ ಮರೆಯುವಂತೆ ಮಾಡಿ, ಸ್ವಾತಂತ್ರ್ಯ ನಂತರವೂ ಅತಿಕೆಟ್ಟ ಆಡಳಿತವನ್ನು ನೀಡಿತ್ತು ಕರ್ನಾಟಕದ ರಾಜಕೀಯ ಪಕ್ಷಗಳು. ಕಾಂಗ್ರೆಸ್ ಎಂಬ ಪಕ್ಷ ದೇಶದೊಂದಿಗೆ ರಾಜ್ಯವನ್ನೂ ಕೊಳ್ಳೆ ಹೊಡೆದಿತ್ತು. ಕರ್ನಾಟಕಕ್ಕೆ ರಾಷ್ಟ್ರಭಕ್ತ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದ ಅನಿವಾರ್ಯತೆ ಎದುರಾಗಿತ್ತು. ಆದರೆ ದಕ್ಷಿಣ ಭಾರತದಲ್ಲಿ ಆಡಳಿತದ ಚುಕ್ಕಾಣಿಯನ್ನೇ ಹಿಡಿಯದ ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ತಲೆ ಎತ್ತಲು ಸಾಧ್ಯವೇ ಎಂಬ ಜಿಜ್ಞಾಸೆ ಮೂಡಿತ್ತು. ಈ ಸಂದರ್ಭದಲ್ಲಿ ಬರಗಾಲದಲ್ಲಿ ಭಗೀರಥನಂತೆ ಗೋಚರಿಸಿದ್ದು ಗಾಲಿ ಜನಾರ್ದನ ರೆಡ್ಡಿ ಎಂಬ ಮುತ್ಸದ್ದಿ ನಾಯಕ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಟಾವಂತ ಕಾರ್ಯಕರ್ತನಾಗಿ ಬೆಳೆದು ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಪತಾಕೆಯನ್ನು ಮೊದಲು ಸ್ವತಂತ್ರವಾಗಿ ಹಾರಾಡುವಂತೆ ಮಾಡಿದ ನಾಯಕ ಶ್ರೀ ಜನಾರ್ದನ ರೆಡ್ಡಿ. ಆದರೆ ಅವರಿಗೆ ಬಂದ ಅಗ್ನಿ ಪರೀಕ್ಷೆ ಒಂದೆರಡಲ್ಲ. ಅಂದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ರಾಜ್ಯದ ಭಾರತೀಯ ಜನತಾ ಪಕ್ಷವನ್ನು ಶತಾಯ ಗತಾಯ ಬೀಳಿಸಬೇಕೆಂಬ ಹಠವನ್ನು ಹೊಂದಿತ್ತು. ಈ ಕಾರಣಕ್ಕಾಗಿ ಆ ಪಕ್ಷ ಕೈ ಹಾಕಿದ್ದು ಭಾರತೀಯ ಜನತಾ ಪಕ್ಷದ ಭದ್ರ ಬುನಾದಿಗೆ. ಗಣಿ ಧನಿಯಾಗಿದ್ದ ಜನಾರ್ದನ ರೆಡ್ಡಿಯವರನ್ನು ಸಿಬಿಐ ಎಂಬ ಅಸ್ತ್ರಗಳನ್ನು ಇಟ್ಟುಕೊಂಡು ಬಂಧಿಸಿ ಜೈಲಿನಲ್ಲಿಟ್ಟಿತ್ತು. ಡಿಕೆ ಶಿವಕುಮಾರ್ ಗೆ ಐಟಿ ಒಂದು ಪ್ರಶ್ನೆ ಕೇಳಿದರೆ ಈಗಿನ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ರಾಜಕೀಯ ದ್ವೇಷ ಎನ್ನುತ್ತಾರೆ. ಆದರೆ ಅಂದು ಮೂರುವರೆ ವರ್ಷಗಳ ಕಾಲ ಜೈಲಿನಲ್ಲಿ ಇರಿಸಿದ್ದ ಕಾಂಗ್ರೆಸ್ ಸರಕಾರದ ಬಗ್ಗೆ ಜನತೆಗೆ ತಿಳಿದೇ ಇರಲಿಲ್ಲ.

Image result for janardhan reddy

ಜನಾರ್ದನ ರೆಡ್ಡಿಯವರು ಸಂಪತ್ತಿನಲ್ಲಿ ಶ್ರೀಮಂತರು ಎಂಬುವುದು ಸತ್ಯ. ಆದರೆ ಅವರ ಸಂಪತ್ತಿನ ಬಹುಪಾಲು ಸಮಾಜ ಸೇವೆಗೇ ಸಂದಾಯವಾಗುತ್ತೆ ಅನ್ನೋದು ಕೂಡಾ ಅಷ್ಟೇ ಸತ್ಯ. ಆದರೆ ಕೆಲವು ರಾಜಕೀಯ ಹೇಳಿಕೆಗಳು ಮಾತ್ರ ಅವರ ಸಂಪತ್ತಿನ ಬಗ್ಗೆ ಬೇರೆನೇ ಲೋಕದ ಕಲ್ಪನೆಯನ್ನು ಕಟ್ಟಿಬಿಡುತ್ತದೆ. ರೆಡ್ಡಿಯವರ ಬಂಧನದ ಸಮಯದಲ್ಲಿ ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ಧಿಯಂತೂ ಎಂತವರಿಗೂ ರೆಡ್ಡಿ ಮೇಲೇ ಇದ್ದಂತಹ ಪ್ರೀತಿಯೂ ನಾಶಪಡಿಸುವಂತಿತ್ತು. ಅಂದಿನ ಹೇಡಿ ಕಾಂಗ್ರೆಸ್ ಪಕ್ಷ ರೆಡ್ಡಿಯವರನ್ನು ರಾಜಕೀಯ ಲಾಭಕ್ಕಾಗಿ ಸೆರೆಮನೆಗೆ ತಳ್ಳಿತ್ತು. ಅಕ್ರಮ ಗಣಿಯ ಧೂಳು ವಿನಾಕಾರಣ ಬಲವಂತವಾಗಿ ರೆಡ್ಡಿಯವರ ಮೇಲೆ ಅಂಟಿಸಿಬಿಟ್ಟಿತ್ತು. ರೆಡ್ಡಿ ಹೊರಗಿದ್ದಷ್ಟು ದಿನ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ತಪ್ಪಿದ್ದಲ್ಲ ಎಂದರಿತು ಅವರನ್ನು ಸಿಬಿಐ ಅಸ್ತ್ರ ಬಳಸಿ ಜೈಲಿನಲ್ಲಿಟ್ಟಿತ್ತು. ಆದೆಷ್ಟೇ ಒತ್ತಡಗಳು ಬಂದರೂ ಭಾರತ ಮಾತೆಯೇ ಶ್ರೇಷ್ಠ, ಭಾರತೀಯ ಜನತಾ ಪಕ್ಷವೇ ನನ್ನ ಜೀವಮಾನದ ಪಕ್ಷ ಎಂಬ ಸಂದೇಶಗಳನ್ನು ಮತ್ತೆ ಮತ್ತೆ ಸಾರುತ್ತಿದ್ದರು. ಕೊನೆಗೂ ಯುದ್ಧವನ್ನು ಜಯಿಸಿ ಜೈಲಿನಿಂದ ಹೊರಬಂದರು. ಕೆಲವರು ಕೆಲವು ರೀತಿ ಮಾತನಾಡಿದ್ದರು.

ಆದರೆ ಜನಾರ್ದನ ರೆಡ್ಡಿಯವರು ಮಾತ್ರ ಎದೆಗುಂದಲೇ ಇಲ್ಲ. ಕಷ್ಟ ಮನುಷ್ಯನಿಗೆ ಬಾರದೆ ಕಲ್ಲು ಮರಗಳಿಗೆ ಬರುವುದೆ ಎಂದು ಮತ್ತೆ ತಮ್ಮ ಸೇವಾ ಕಾರ್ಯವನ್ನು ಮುಂದುವರೆಸಿದ್ದರು. ಶ್ರೀ ರಾಮನನ್ನು ನಿಂದಿಸುವ ಈಗಿನ ಪ್ರಗತಿಪರ ಬುದ್ಧಿಜೀವಿಗಳು ಅದೆಷ್ಟೇ ಇರಬಹುದು, ಆದರೆ ಆತನನ್ನು ಪೂಜಿಸುವವರ ಸಂಖ್ಯೆ ಅನಂತ. ಅಂತೆಯೇ ರೆಡ್ಡಿಯವರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ನಿಂದಿಸುವ ಅದೆಷ್ಟೋ ಜನರಿರಬಹುದು, ಆದರೆ ಇಂದಿಗೂ ಅವರ ಹೆಸರು ಹೇಳಿಕೊಂಡು ಊಟ ಮಾಡುವವರು ಅದೆಷ್ಟೋ ಜನ.

Image result for janardhan reddy daughter marriage photos

* ರೆಡ್ಡಿಯವರು ತನ್ನ ಮಗಳ ಮದುವೆಗೆ ಕೋಟಿ ಗಟ್ಟಲೆ ಖರ್ಚು ಮಾಡಿದ್ದಾರೆ ಎಂದು ಕೆಲವು ವಿರೋಧಿಗಳು ಆರೋಪಿಸಿದ್ದರು. ಆದರೆ ಅದೇ ಜನಾರ್ದನ ರೆಡ್ಡಿ ಎಂಬ ಪುಣ್ಯಾತ್ಮ ೪೨೦೦೦ಕ್ಕೂ ಅಧಿಕ ಬಡ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟ ಸುದ್ಧಿಯನ್ನು ಯಾವೊಬ್ಭನೂ ಬಿತ್ತರಿಸಲ್ಲ.! ವರ್ಷಕ್ಕೊಮ್ಮೆ ಜನಾರ್ದನ ರೆಡ್ಡಿಯವರ ಹಾಗೂ ಅವರ ಪ್ರಾಣ ಸ್ನೇಹಿತ ಶ್ರೀರಾಮುಲು ಅವರು ಸೇರಿಕೊಂಡು ನಡೆಸುವ ಸಾಮೂಹಿಕ ಮದುವೆಯಲ್ಲಿ ೪೨೦೦೦ ಅಧಿಕ ಬಡ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಕಂಡುಕೊಂಡಿದ್ದಾರೆ. ಪ್ರತಿ ಜೋಡಿಗೂ ೨ ತಾಳಿ, ಒಂದು ಸೀರೆ, ಮನೆಗೆ ಬೇಕಾದಂತಹ ಪಾತ್ರೆಗಳು, ಜೊತೆಗೆ ೧೦೦೦೦ರೂಗಳಷ್ಟು ಹಣ ನೀಡಿ ಅವರಿಗೆ ಹೊಸ ದಿಗಂತವಾಗಿ ಗೋಚರಿಸಿದವರು. ಆ ಸಾಮೂಹಿಕ ಮದುವೆ ಕೇವಲ ಸಾಮಾನ್ಯ ಮದುವೆಯ ಕಾರ್ಯಕ್ರಮವಾಗಿರದೆ ಅದೊಂದು ಹಬ್ಬವಾಗಿರುತ್ತದೆ. ಅಷ್ಟೊಂದು ವಿಜ್ರಂಭಣೆಯಿಂದ ಈ ಸಾಮೂಹಿಕ ಮದುವೆಯ ಕಾರ್ಯಕ್ರಮವನ್ನು ರೆಡ್ಡಿ ಹಾಗೂ ಶ್ರೀ ರಾಮುಲು ಮಾಡುತ್ತಾರೆ ಎಂದರೆ ನಂಬಲೇ ಬೇಕು. ಹಾಗೇ ಸುಮ್ಮನೆ ಲೆಕ್ಕ ಹಾಕಿದರೆ ೪೨೦೦೦ ಮಂದಿಯ ಮದುವೆಗೆ ರೆಡ್ಡಿಯವರು ಖರ್ಚು ಮಾಡಿದ್ದೆಷ್ಟಿರಬಹುದು? ಜೋಡಿಯ ವ್ಯಯಕ್ತಿಕ ಖರ್ಚು, ಸಮಾರಂಭದ ಖರ್ಚು, ಸಾಂಸ್ಕೃತಿಕ ಉತ್ಸವ ಬೇರೆ, ಊಟ ಉಪಚಾರ ಇದ್ದೇ ಇರುತ್ತದೆ. ಬಡಜನರ ಕಣ್ಣೀರೊರೆಸಲು ಇಷ್ಟೆಲ್ಲಾ ಮಾಡಿರುವ ರೆಡ್ಡಿಯವರಿಗೆ ತನ್ನ ಮಗಳ ಮದುವೆಯನ್ನು ವಿಜ್ರಂಭಣೆಯಿಂದ ಮಾಡಲು ಹಕ್ಕಿಲ್ಲವೇ?

* ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸುಮಾರು ೪೦೦೦ ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೆ ಅಂದಿನ ಸರ್ಕಾರ ಕನ್ನ ಹಾಕಿದ್ದಾಗ, “ಪೋಸ್ಟ್ ಕಾರ್ಡ್” ಮಾಧ್ಯಮದ ಮಹೇಶ್ ವಿಕ್ರಂ ಹೆಗ್ಡೆಯವರ “ಭಿಕ್ಷಾಂಧೇಹಿ” ಆಂದೋಲನದ ಮೂಲಕ ೨೭ ಲಕ್ಷ ಹಣಗಳನ್ನು ಆ ಶಾಲೆಯ ಬಡ ಮಕ್ಕಳ ಅನ್ನಕ್ಕಾಗಿ ನೀಡಿದ್ದರು.

 

ಸಾವಿರಾರು ಬಡ ಜನರಿಗೆ ಊಟ ಹಾಕಿದ ಇವರಿಗೆ ತನ್ನ ಮಗಳ ಮದುವೆಗೆ ಊಟ ಹಾಕುವಷ್ಟು ಸ್ವಾತಂತ್ರ್ಯ ಇಲ್ಲವೇ..? ದಾನ ಮಾಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದ ಮಾಧ್ಯಮಗಳು ತಾನು ವಿಜೃಂಭಿಸಿದಾಗ ಅದೆಲ್ಲಿಂದ ಸೃಷ್ಟಿಯಾಗುತ್ತವೋ..!

* ಶ್ರೀ ಜನಾರ್ದನ ರೆಡ್ಡಿಯವರು 1997 ರಲ್ಲಿ ತಮ್ಮ ತಂದೆಯ ಹೆಸರಿನಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯನ್ನು ಆರಂಭಿಸಿದ್ದರು. ಇಂದಿಗೂ ಅಲ್ಲಿ 110 ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳ ಲಾಲನೆ-ಪಾಲನೆ  ಮಾಡಲಾಗುತ್ತಿದೆ. ಒಂದು ಬಡ ಕುಟುಂಬದಲ್ಲಿ ಬುದ್ಧಿ ಮಾಂದ್ಯತೆಯ ಮಕ್ಕಳು ಜನಿಸಿದರೆ ಆ ಕುಟುಂಬದ ಪರಿಸ್ಥಿತಿ ಹೇಗಿರಬಹುದು. ಇದನ್ನು ಮನಗಂಡು ಈ ಶಾಲೆಯನ್ನು ಆರಂಭಿಸಿದ್ದರು. ತನ್ನ ತಾಯಿಯ ಮೂಲ ಶಂಕು ಸ್ಥಾಪನೆ ಮಾಡಿಸಿ ಉದ್ಘಾಟನೆಯನ್ನು ಭಾರತೀಯ ಜನತಾ ಪಕ್ಷದ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಸುಷ್ಮಾ ಸ್ವರಾಜ್ ಕೈಯಿಂದ ಮಾಡಿಸಿದ್ದರು. ಇಂದು ಈ ಸಂಸ್ಥೆ ದೇವರ ಮಕ್ಕಳು ಎಂದೇ ಕರೆಯಲ್ಪಡುವ ವಿಕಲಚೇತನರು ಹಾಗೂ ಬುದ್ದಿಮಾಂದ್ಯರನ್ನು ಸಲಹುವ ಕೆಲಸ ಮಾಡುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಸುತ್ತ ಮುತ್ತಲ 500 ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. ಆ ಎಲ್ಲಾ ಮಕ್ಕಳ ಪೋಷಕರ  ಕಣ್ಣಲ್ಲಿ ಕಾಣುವ ಖುಷಿಗೆ ಬೆಲೆ ಕಟ್ಟಲಾಗದು. ಇದರೊಂದಿಗೆ ಅದೇ ಸ್ಥಳದಲ್ಲಿ ಒಂದು ಗೋಶಾಲೆ, ಕೃಷ್ಣ ಮಂದಿರ, ವೃದ್ಧಾಶ್ರಮ ಎಲ್ಲವು ಇದೆ. ಇದು ಅಗರ್ಭ ಶ್ರೀಮಂತ ಎನಿಸಿಕೊಂಡ ಜನಾರ್ದನ ರೆಡ್ಡಿಯವರ ಜಗತ್ತಿಗೆ ಕಾಣದ ಸ್ಟೋರಿ.

Image result for janardhan reddy with sushma swaraj

* ರೆಡ್ಡಿಯವರು ಸಚಿವರಾಗಿದ್ದ ಸಮಯದಲ್ಲಿ ಒಂದು ಹೆಲಿಕಾಪ್ಟರ್ ಖರೀದಿಸಿದ್ದರು. ಬಳ್ಳಾರಿ ಹಾಗೂ ಬೆಂಗಳೂರು ಹೀಗೆ ಎರಡೂ ಕಡೆಗಳಲ್ಲಿ ಕೆಲಸ ಮಾಡಬೇಕಾಗಿದ್ದರಿಂದ ಹೆಲಿಕಾಪ್ಟರ್ ಅಗತ್ಯವೆನಿಸಿತ್ತು. ೧೩ಗಂಟೆಗಳ ಪ್ರಯಾಣ ಕೇವಲ ೨ ಗಂಟೆಗಳಲ್ಲಿ ಪೂರ್ಣಗೊಂಡು ಸಮಯ ಉಳಿಯುತ್ತಿತ್ತು. ಈ ಹೆಲಿಕಾಪ್ಟರ್ ಗೆ ತಾನು ಸಚಿವರಾಗಿದ್ದರು ಕೂಡಾ ಸರ್ಕಾರದಿಂದ ನಯಾ ಪೈಸೆಯೂ ಮುಟ್ಟದೆ ಸ್ವಂತ ಖರ್ಚಿನಲ್ಲಿ ಖರೀದಿಸಿದ್ದರು. ಆದರೆ ಮಾಧ್ಯಮಗಳು ಹಾಗೂ ವಿರೋಧಿಗಳು ಹೆಲಿಕಾಪ್ಟರ್ ಬಗ್ಗೆ ಒಂದು ಕಥಯನ್ನೇ ಕಟ್ಟಿಬಿಟ್ಟಿದ್ದರು. ಬಡವರಿಗಾಗಿ ಕೋಟ್ಯಾಂತರ ರೂಪಾಯಿಗಳಷ್ಟು ಖರ್ಚು ಮಾಡಿದ ದಾನಶೂರನಿಗೆ ಸ್ವಂತ ಹೆಲಿಕಾಪ್ಟರ್ ಬಳಸಲೂ ದೊಣ್ಣೆ ನಾಯಕನ ಅಪ್ಪಣೆ ಬೇಕು ಎನ್ನುವಷ್ಟರ ಮಟ್ಟಿಗೆ ಇತ್ತು ವಿರೋಧಿಗಳ ಕಿರುಚಾಟ.

ರಾಮುಲು ಸ್ನೇಹ-ಅತಿದೊಡ್ಡ ಆಸ್ತಿ…

ಶ್ರೀರಾಮುಲು. ಕರ್ನಾಟಕ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿಕೊಂಡಿರುವ ನಾಯಕ. ಹಿಂದೂ ಹೃದಯ ಸಾಮ್ರಾಟನೆಂದೇ ಗುರುತಿಸಿಕೊಂಡವರು. ಇವರು ಮಾತನಾಡಲು ನಿಂತರೆ ವಿರೋಧಿಗಳು ಬೆಕ್ಕಸ ಬೆರಗಾಗುತ್ತಾರೆ. ಇಂತಹಾ ನಾಯಕ ಜನಾರ್ದನ ರೆಡ್ಡಿಯವರ ಸ್ನೇಹ ಸಂಪಾದಿಸಿದ ರೀತಿ ಅಮೋಘ. ಶ್ರೀ ರಾಮುಲು ಅವರ ತಂದೆ ರೈಲ್ವೆ ಇಲಾಖೆಯಲ್ಲಿ ನೌಕರನಾಗಿದ್ದರು. ರೆಡ್ಡಿಯವರ ತಂದೆ ಪೊಲೀಸ್ ಆಗಿದ್ದರು. ಪೊಲೀಸ್ ಕ್ವಾಟ್ರಸ್ ಮತ್ತು ರೈಲ್ವೆ ಕ್ವಾಟ್ರಸ್ ಕೆಲ ದೂರದಲ್ಲೇ ಇತ್ತು. ರೈಲ್ವೇ ಟ್ರಾಕ್ ಆ ಬದಿ ಈ ಬದಿಯಲ್ಲಿದ್ದ ಈ ಎರಡು ಕ್ವಾಟ್ರಸ್ ಗಳೇ ರೆಡ್ಡಿ-ರಾಮುಲು ಸ್ನೇಹಕ್ಕೆ ದಾರಿಮಾಡಿಕೊಟ್ಟಿತು. ೮-೧೦ ಇರುವಾಗಲೇ ಇವರ ಸ್ನೇಹದ ಬಂಧ ಬೆಳೆದಿತ್ತು. ಬಾಲ್ಯದ ಆಟಗಳೇ ಇವರ ಸ್ನೇಹಕ್ಕೆ ಸೇತುವೆಯಾಗಿತ್ತು. ಶ್ರೀ ರಾಮುಲು ೧೭ ವರ್ಷದವರಾಗಿದ್ದಾಗ ಅವರ ಸೋದರ ಮಾವನ ಹತ್ಯೆಯಾಗಿತ್ತು. ನಂತರ ಶ್ರೀ ರಾಮುಲು ಅವರ ಜೀವಕ್ಕೂ ಅಪಾಯವಿತ್ತು. ಈ ಸಮಯದಲ್ಲಿ ಶ್ರೀ ರಾಮುಲು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದವರು ಜನಾರ್ದನ ರೆಡ್ಡಿಯವರು. ಅಂದಿನಿಂದ ಇಂದಿನತನಕವೂ ಇವರಿಬ್ಬರ ಬದುಕಿನ ಎಲ್ಲಾ ಏರಿಳಿತಗಳಿಗೂ ಇವರಿಬ್ಬರು ಸಾಕ್ಷಿಯಾಗಿದ್ದಾರೆ. ಇಂದಿಗೂ ತನಗೆ ಸಿಕ್ಕ ಅತಿದೊಡ್ಡ ಆಸ್ತಿ ಎಂದರೆ ಶ್ರೀ ರಾಮುಲು ಅವರ ಸ್ನೇಹ ಎನ್ನುತ್ತಾರೆ ರೆಡ್ಡಿಯವರು.

Image result for shreeramulu with reddy

ಸತ್ಯದರ್ಶನದ ಶಪಥ ಮಾಡಿದ ರೆಡ್ಡಿಯವರು..!

ಅನ್ಯಾಯವಾಗಿ ವಿರೋಧಿಗಳ ಕುತಂತ್ರದಿಂದ ಜೈಲುಪಾಲಾಗಿ ಇಲ್ಲ ಸಲ್ಲದ ಆರೋಪಗಳನ್ನು ಎದುರಿಸಿದ ಜನಾರ್ದನ ರೆಡ್ಡಿಯವರು ಜನತೆಗೆ ಸತ್ಯದ ದರ್ಶನ ಮಾಡಿಸುವುದಾಗಿ ಶಪಥ ಮಾಡಿದ್ದಾರೆ. “ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನ ಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ ನನ್ನನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಸುಳ್ಳುಗಳನ್ನೆ ನೂರು ಬಾರಿ ಹೇಳಿ ನನ್ನ ಗೌರವಕ್ಕೆ, ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡಿದವು. ಕೆಲವು ಮಾಧ್ಯಮಗಳು ಸಹ ಅತ್ಯಂತ ಕೆಳಹಂತಕ್ಕೆ ಇಳಿದು ನನ್ನನ್ನು ನಿಂದಿಸಿದವು. ಸತ್ಯವನ್ನು ಮರೆಮಾಚಿ ಸುಳ್ಳಿನ ಸರಮಾಲೆಯನ್ನೇ ಪ್ರಕಟಿಸಿದವು. ಇಷ್ಟಾಗಿಯೂ ಕೊನೆಗೆ ಗೆದ್ದದ್ದು ಸತ್ಯವೇ. ನ್ಯಾಯಕ್ಕೆ ಅಂತಿಮವಾದ ಗೆಲುವು ಸಿಕ್ಕಿದೆ, ಇಂದು ನನ್ನ ಮೇಲಿದ್ದ ಶೇಕಡಾ 90% ಕೇಸುಗಳು ಮುಕ್ತಾಯವಾಗಿದ್ದು, ‘ನಾನು ನಿರ್ದೋಷಿ’ ಎಂಬ ತೀರ್ಪು ಹೊರ ಬಿದ್ದಿದೆ. ಸತ್ಯಕ್ಕಿರುವ ಶಕ್ತಿಯೇ ಅಂಥದ್ದು. ಅದು ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ. ಎಲ್ಲ ಸವಾಲನ್ನು ಮೀರಿ ಗೆಲ್ಲುತ್ತದೆ. ಮುಂಬರುವ ದಿನಗಳಲ್ಲಿ ನಾನು ಜನತೆಗೆ ಸತ್ಯ ದರ್ಶನ ಮಾಡಿಸಲಿದ್ದೇನೆ. ಅಲ್ಲದೇ ಸಾಕ್ಷಿಸಹಿತವಾಗಿ ವಿರೋಧಿಗಳ ಎಲ್ಲಾ ಆರೋಪಗಳಿಗೆ ಸಮರ್ಥ ಉತ್ತರವನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ನೀಡಲಿದ್ದೇನೆ” ಎಂದು ಗಟ್ಟಿ ಧ್ವನಿಯಲ್ಲೇ ಸೆಟೆದು ನಿಂತು ಹೇಳಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಅನ್ನೋದು ಬಂದೇ ಬರುತ್ತವೆ. ಅನೇಕ ಆರೋಪಗಳೂ ಬಾಧಿಸುತ್ತವೆ. ಹಲವಾರು ಮಂದಿಯ ಕೆಟ್ಟ ಬಾಯಿಗೂ ತುತ್ತಾಗುವ ಪರಿಸ್ಥಿತಿಯೂ ಬಂದು ಬಿಡುತ್ತದೆ. ಅರಸನಾಗಿದ್ದ ಸತ್ಯ ಹರಿಶ್ಚಂದ್ರ ಸ್ಮಶಾನ ಕಾದ ಕಥೆ, ಗ್ರಹಚಾರ ಕೆಟ್ಟ ನಳರಾಜ ಭಿಕಾರಿಯಾದ ಕಥೆ ಹೀಗೆ ಅನೇಕ ಜೀವನ ಚರಿತ್ರೆಗಳೂ ನಮ್ಮ ಮುಂದೆ ಹಾದು ಹೋಗುತ್ತಿದೆ. ಆದರೆ ಸತ್ಯ ಏನಿದ್ದರೂ ಕಹಿಯಾಗಿಯೇ ಇರುತ್ತೆ.ಒಂದಲ್ಲಾ ಒಂದು ದಿನ ಅದು ವಿಶ್ವರೂಪವನ್ನು ಪಡೆದುಕೊಳ್ಳುತ್ತದೆ. ಜನಾರ್ದನ ರೆಡ್ಡಿಯವರ ಜೀವನವೂ ಹಾಗೇನೇ. ಜೀವನದ ಅರ್ಧ ವಯಸ್ಸನ್ನು ದಾಟುವ ಮುಂಚೆನೇ ಅನೇಕ ಕಷ್ಟ ಕಾರ್ಪಣ್ಯಗಳನ್ನು ದಾಟಿಕೊಂಡು ಬಂದಿದ್ದಾರೆ. ಅವರೇ ಹೇಳಿದಂತೆ ಸತ್ಯ ಜ್ವಾಲಾಮುಖಿಯಂತೆ ಸ್ಪೋಟಗೊಳ್ಳುವ ಸಮಯ ದೂರವಿಲ್ಲ. “ಅಚ್ಛೇ ದಿನ್ ಆನೇ ವಾಲೇ ಹೈ”…

  • ಸುನಿಲ್ ಪಣಪಿಲ
Tags

Related Articles

Close