ಇತಿಹಾಸ

ಮೊಘಲ ದೊರೆ ಬಾಬರ್ ಶ್ರೀಕೃಷ್ಣದೇವರಾಯನನ್ನು ಸೋಲಿಸುವುದು ಬಿಡಿ!! ಹತ್ತಿರಕ್ಕೂ ಸುಳಿಯಲಿಲ್ಲ‌ ಯಾಕೆ ?!

ಬಾಬರ್ ಎನ್ನುವ ಮೊಘಲ ದೊರೆ ಅದೆಷ್ಟೋ ಮಾರಣಹೋಮ ನಡೆಸಿದ್ದನ್ನು ಪದೇ ಪದೇ ಹೇಳಬೇಕಿಲ್ಲ! ಪ್ರತಿಯೊಬ್ಬ ಮೊಘಲ ದೊರೆಯೂ ಸಹ ಕುರಾನ್ ನ ಜೊತೆ ಕತ್ತಿ ಹಿಡಿದೇ ಭಾರತಕ್ಕೆ ಕಾಲಿಟ್ಟಿದ್ದು! ಅದನ್ಯಾವ ರೀತಿಯಲ್ಲಿಯೂ ಅಲ್ಲಗಳೆಯಲು ಸಾಧ್ಯವೇ ಇಲ್ಲ! ಇಸ್ಲಾಂ ಇಡೀ ಜಗತ್ತನ್ನಾಳಬೇಕೆಂಬ ಅಂಧಧರ್ಮ ಶ್ರದ್ಧೆಯೋ ಅಥವಾ ಇಸ್ಲಾಂ ನ ಹೆಸರಿನಲ್ಲಿ ಕುರಾನ್ ಓದುತ್ತಲೇ ಮಾನವೀಯತೆಯನ್ನು ಮರೆತ ಅವಿವೇಕತನವೋ, ಒಟ್ಟಿನಲ್ಲಿ ಬಲಿಯಾದದ್ದು ಮಾತ್ರ ಜಗದುದ್ದಗಲಕ್ಕೂ ಹರಡಿದ್ದ ಸ್ವಾಭಿಮಾನಿ ಹಿಂದೂಗಳು!

ಬಾಬರ್ ಎಂದಾಗಲೆಲ್ಲ ನೆನಪಾಗುವುದು ಬಾಬರಿ ಮಸೀದಿಯೇ! ತನ್ನ ಸಲಿಂಗಿಯ ತೃಪ್ತಿಗೋಸ್ಕರ ರಾಮ ಮಂದಿರವನ್ನು ಕೆಡಗಿ ಮಸೀದಿ ನಿರ್ಮಿಸಿದ ಬಾಬರ್ ಎನ್ನುವ ಮೊಘಲ ದೊರೆಯ ಬೆನ್ನ ಹಿಂದೆಯೇ ‘ಜೈ ಶ್ರೀರಾಮ್’ ಎಂಬ ಕೂಗು ಕೇಳುತ್ತದೆಯೆಂದಾದರೆ ನೀವು ನಿಜಕ್ಕೂ ಇತಿಹಾಸವನ್ನು ಅರಿತಿದ್ದೀರೆಂದೇ ಅರ್ಥ! ಬಾಬರನ ಮೇಲಿದ್ದ ಸಿಟ್ಟಿಗೋ ಅಥವಾ ಧರ್ಮದೊಳ ಹೊಕ್ಕಿದ ಸ್ವಾಭಿಮಾನಕ್ಕೋ, ಬರೋಬ್ಬರಿ ವರ್ಷಗಳ ತರುವಾಯ 6000 ಹಿಂದುಗಳು ರೊಚ್ಚಿಗೆದ್ದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ಕೇಸರೀಯೊಂದನ್ನು ನೆಟ್ಟಿದ್ದರು! ಅವತ್ತು ಬಾಬರ್ ಇಲ್ಲದಿದ್ದನಾದರೂ ಬಾಬರ್ ನ ಹಾಗೆಯೇ ವಿಶ್ವವನ್ನು ಇಸ್ಲಾಮೀಕರಣ ಮಾಡುತ್ತೇವೆಂದು ಹೊರಟಿದ್ದವರೆಲ್ಲ ಹಲ್ಲು ಕಿತ್ತ ಹಾವಿನಂತಾಗಿದ್ದರು!

ಇರಲಿ! ಬೇಡವೆಂದರೂ ಇತಿಹಾಸದಲ್ಲಿ ಆಶ್ಚರ್ಯಗಳಿಗೆ ಕೊರತೆಯಿಲ್ಲ! ಕುತೂಹಲಗಳಿಗೆ ಎಣೆಯಿಲ್ಲ! ಅದೇ ರೀತಿ…

ಬಾಬರ್ ಎಂಬ ಮೊಘಲ ದೊರೆ ಹಂಪಿ ಸಾಮ್ರಾಜ್ಯದ ಒಡೆಯನಾಗಿದ್ದ ಶ್ರೀ ಕೃಷ್ಣ ದೇವರಾಯನ ತಂಟೆಗೂ ಹೋಗಿರಲಿಲ್ಲವೆಂದರೆ ನಂಬುತ್ತೀರಾ?!

ದಕ್ಷಿಣ ಭಾರತದ ಅದೆಷ್ಟೋ ದೇವಾಲಯಗಳು, ಹಿಂದೂ ಸಾಮ್ರಾಜ್ಯಗಳು ಮೊಘಲರ ಕೈಗೆ ಸಿಕ್ಕು ನಲುಗುವಾಗಲೂ ಹಂಪಿ ಬಹಳ ರಕ್ಷಿತವಾಗಿತ್ತೆಂದರೆ ಆಶ್ಚರ್ಯವಲ್ಲವೇ?!

ಬಾಬರ್ ನ ಕಾಲಾವಧಿಯಲ್ಲಿ, ಉಳಿದ ಮೊಘಲರಿಗೆ ಹೋಲಿಸಿದರೆ ಈತ ಚತುರ! ಅದಕ್ಕಾಗಿ, ಹಂಪಿಯ ಸುದ್ದಿಗೂ ಹೋಗಿರಲಿಲ್ಲ ಬಾಬರ್! ಅಕಸ್ಮಾತ್, ತನ್ನ ಸೇನೆಯನ್ನು ಹಂಪಿಗೆ ನುಗ್ಗಿಸಿದ್ದೇ ಆಗಿದ್ದಿದ್ದರೆ, ಬಾಬರ್ ನ ಪೂರ್ಣ ಸೈನ್ಯ ನೆಲಕ್ಕುರುಳುತ್ತಿತ್ತೆಂಬ ವಾಸ್ತವ ಅವನಿಗರಿವಾಗಿತ್ತು! ಬಾಬರ್ ನ ಇಸ್ಲಾಂ ಸಿದ್ಧಾಂತವೊಂದು ಭಾರತದಲ್ಲಿ ಬೇರೂರಿದ್ದು ಮೊದಲನೆಯದಾಗಿ ಉತ್ತರದಲ್ಲಿ! ಮೊಘಲ್ ಸಾಮ್ರಾಜ್ಯದ ತಳಹದಿಯನ್ನು ಭದ್ರಗೊಳಿಸುವಲ್ಲಿ ಬಾಬರ್ ಶಕ್ಯನಾಗಿದ್ದು ಸ್ವಲ್ಪವೇ ಆದರೂ, ಈತನ ನಂತರ ಬಂದ ಮೊಘಲ ದೊರೆಗಳಿಗೆ ಬೆಟ್ಟದಷ್ಟು ಅನುಕೂಲ ಮಾಡಿಕೊಟ್ಟಿತಷ್ಟೇ!

ಬಾಬರ್ ಉತ್ತರ ಭಾರತವನ್ನು ವಶ ಪಡಿಸಿಕೊಂಡಾಗಿನ ಅವಧಿಯಲ್ಲಿ, ಶ್ರೀ ಕೃಷ್ಣ ದೇವರಾಯ ಭದ್ರವಾಗಿಯೇ ದಕ್ಷಿಣವನ್ನಾಳುತ್ತಿದ್ದನಷ್ಟೇ! ಉತ್ತರ ಭಾರತದ ಆಡಳಿತದಲ್ಲಿಯೇ ಇದ್ದ ಲೋಪ ದೋಷಗಳನ್ನು ಸರಿಪಡಿಸದ ಹೊರತು ದಕ್ಷಿಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಮಾತಾಗಿತ್ತು ಎನ್ನುವುದು ನಿಜವೇ!

ಎರಡನೆಯದಾಗಿ, ಬಾಬರ್ ಯೋಚಿಸಿದ್ದು ಸೈನ್ಯ ಬಲವನ್ನು!

ಬಾಬರ್ ನ ಮೊದಲ ಯುದ್ಧ ಪಾಣಿಪತ್ ನಲ್ಲಿ ಆತನ ಸೈನ್ಯದಲ್ಲಿದ್ದದ್ದು ಕೇವಲ 12000 ಯೋಧರು! ಎರಡನೇ ಯುದ್ಧವಾದ ಖಾನ್ವಾದಲ್ಲಿ, ಬರೋಬ್ಬರಿ 60000 ಮೊಘಲ್ ತಂಡಗಳು, 8000 ಅಫ್ಘನ್ ತಂಡಗಳು ಮತ್ತು 40 – 50 ಫಿರಂಗಿಗಳ ಜೊತೆ ಯುದ್ಧಕ್ಕಿಳಿದಿದ್ದ ಬಾಬರ್ ಎರಡೂ ಯುದ್ಧವನ್ನು ಗೆದ್ದಿದ್ದ! ಮೊದಲನೆಯ ಗೆಲುವು ಆತನಿಗೆ ಮೊಘಲ ಸಾಮ್ರಾಜ್ಯದ ಅಡಿಪಾಯವನ್ನು ಹಾಕಲು ನೆರವಾದರೆ, ಎರಡನೆಯ ಗೆಲುವು ಸಾಮ್ರಾಜ್ಯವನ್ನೇ ಕಟ್ಟಲು ನೆರವಾಯಿತು!

ಅದೇ ರೀತಿ, ಆದಿಲ್ ಶಾ ಸುಲ್ತಾನೇಟ್ ಜೊತೆಗಿನ ರಾಯಚೂರಿನ ಯುದ್ಧದಲ್ಲಿ ಕೃಷ್ಣದೇವರಾಯ ಉನ್ನತ ಮಟ್ಟದ ಗೆಲುವು ಸಾಧಿಸಿದ್ದನಷ್ಟೇ! ಇತಿಹಾಸಕಾರರು ಹೇಳುವ ಪ್ರಕಾರ, ಹಂಪಿ ಸಾಮ್ರಾಜ್ಯದ ಅಸ್ತಿತ್ವ ಭದ್ರವಾಗಿ ನೆಲೆ ನಿಂತಿದ್ದೇ ದೇವರಾಯನ ಸೈನ್ಯ ಬಲದ ಮೇಲೆ! ಬರೋಬ್ಬರಿ 7,36,000 ತಂಡಗಳನ್ನು ಹೊಂದಿದ್ದ ದೇವರಾಯ 32,000 ಯುದ್ಧ ಕುದುರೆಗಳನ್ನು, 550 ಯುದ್ಧ ಆನೆಗಳನ್ನೂ ಪೋಷಿಸಿದ್ದ! ಇಡೀ ದಕ್ಷಿಣದಲ್ಲಿಯೇ ದೇವರಾಯನ ಸೈನ್ಯ ಬಲಶಾಲಿಯಾಗಿತ್ತಲ್ಲದೇ, 2,00,000 ಸೇನಾತಂಡಗಳನ್ನು ಆತ ನಿರ್ದಿಷ್ಟವಾಗಿಯೇ ಕಾಯ್ದಿರಿಸಿಕೊಂಡಿದ್ದ! ಇಷ್ಟಲ್ಲದೇ, ಬೇಕಾದರೆ ಶ್ರೀ ಲಂಕಾವನ್ನು ಮೂರು ಬಾರಿ ಮುತ್ತಿಗೆ ಹಾಕಿ ಜಯಿಸುವಷ್ಟು ನೌಕಾಪಡೆ ದೇವರಾಯನ ಸಾಮ್ರಾಜ್ಯದಲ್ಲಿತ್ತು!

ಬಾಬರ್ ಮೊದಲು ಕಣ್ಣಿಟ್ಟಿದ್ದು ರಜಪೂತರ ಮೇಲೆ!

ರಜಪೂತರು ಆಗ ಒಡೆದು ಹೋಗಿದ್ದರು! ಆ ಸಮಯದಲ್ಲಿಯೇ ಬಾಬರ್ ತನ್ನ ಚತುರ ಬುದ್ಧಿಯನ್ನುಪಯೋಗಿಸಿ ಒಂದೊಂದೇ ರಜಪೂತ ದೊರೆಯನ್ನು ಜಯಿಸುತ್ತಾ ಬಂದನಷ್ಟೇ! ಆದರೆ, ರಾಣಾ ಸಂಗ ಎಂಬ ರಜಪೂತ ದೊರೆ ಮತ್ತೆ ಒಡೆದು ಛಿದ್ರವಾಗಿದ್ದ ರಜಪೂತ ದೊರೆಗಳನ್ನು ಒಟ್ಟುಗೂಡಿಸಿ ಮೊಘಲ ಸಾಮ್ರಾಜ್ಯದ ವಿರುದ್ಧ ಕತ್ತಿ ಹಿರಿದು ನಿಲ್ಲಿಸಿದ್ದ! ಇಡೀ ರಜಪೂತ ಸಾಮ್ರಾಜ್ಯ ಒಟ್ಟಾಗಿ ಖಾನ್ವಾದಲ್ಲಿ ಮೊಘಲ ಬಾಬರನಿಗೆ ಎದುರಾಗಿ ಹೋರಾಡಿದರೂ, ಉಹೂಂ! ರಜಪೂತರು ಸೋತರು! ಇಡೀ ರಜಪೂತ ಸಾಮ್ರಾಜ್ಯ ಬಾಬರ್ ನ ಕೈವಶವಾಯಿತು!

ಅಷ್ಟಾದರೂ ಆತ ದಕ್ಷಿಣಕ್ಕೆ ತಲೆ ಕೂಡ ಹಾಕಿ ಮಲಗಲಿಲ್ಲ!

ಹಾ! ಇಡೀ ಉತ್ತರವನ್ನೆನ್ನುವಷ್ಟು ವಶ ಪಡಿಸಿದ ಬಾಬರ್ ನಿಗೆ ಯೋಚನೆ ಇರಲಿಲ್ಲವೆಂದೇನಲ್ಲ! ಆದರೆ, ಆತ ಮಹಾ ಬುದ್ಧಿವಂತ! ಭಾರತದ ಭೂಪಟದೆದುರಿಗೆ ದಕ್ಷಿಣ ಸ್ಾಮ್ರಾಜ್ಯವನ್ನು ಗುರುತು ಹಾಕುತ್ತಾ ಹೋದಂತೆಲ್ಲ ಆತನಿಗೆ ಕರಾಳ ಸತ್ಯವೊಂದು ಎದುರಾಗುತ್ತಾ ಸಾಗಿದ್ದೇ ಹೆಚ್ಚು! ಅವತ್ತು, ಇಡೀ ದಕ್ಷಿಣವನ್ನಾಳುತ್ತಿದ್ದದ್ದು ಕೃಷ್ಣ ದೇವರಾಯನೆಂಬ ಹಿಂದೂ ಸಾಮ್ರಾಜ್ಯದೊಡೆಯ! ಆತನ ಕೈಕೆಳಗೆ ಉಳಿದ ದೊರೆಗಳಿದ್ದರೂ ಸಹ, ಕೃಷ್ಣ ದೇವರಾಯನಿಗೆ ದ್ರೋಹ ಬಗೆಯುವಷ್ಟು ಹಿಂದೂಗಳು ಅವತ್ತು ಒಡೆದಿರಲಿಲ್ಲ! ವಡೆಯರ್, ನಾಯಕ್, ಕಲಿಂಗ. . ಹೀಗದೆಷ್ಟೋ ಸಾಮ್ರಾಜ್ಯದ ದೊರೆಗಳು ಅವತ್ತು ಮೊಘಲರ ವಿರುದ್ಧ ನಿಲ್ಲುವುದಕ್ಕೆ ಹಿಂದೇಟು ಹಾಕುತ್ತಿರಲಿಲ್ಲ! ಅದಲ್ಲದೇ, ಅಕಸ್ಮಾತ್ ವಿಜಯ ನಗರ ಸಾಮ್ರಾಜ್ಯಕ್ಕೆ ಬೆದರಿಕೆ ಹಾಕಿದ್ದರೂ ಸಹ, ಬಾಬರ್ ನಿಗೆ ಸಮಾಧಿ ಕಟ್ಟುವಷ್ಟು ತಾಕತ್ತು ದಕ್ಷಿಣ ಭಾರತದಲ್ಲಿತ್ತು!

ವಿಜಯನಗರ ಸಾಮ್ರಾಜ್ಯದ ಅಧಿಪತ್ಯ ಕೇವಲ ದಕ್ಷಿಣ ಮಾತ್ರವಲ್ಲ, ಹೊರದೇಶಗಳಿಗೂ ಹಬ್ಬಿತ್ತು! ಪೋರ್ಚುಗೀಸರ ಸಾಮ್ರಾಜ್ಯದ ಅಧಿಪತ್ಯವಿದ್ದದ್ದು ದೇವರಾಯನ ಕೈಯ್ಯಲ್ಲಿಯೇ! ಅಲ್ಲದೇ, ಪರ್ಶಿಯಾದ ಷಾ ಕೂಡ ದೇವರಾಯನ ಆಪ್ತಗೆಳೆಯನಾಗಿದ್ದನಷ್ಟೇ! ಬಾಬರನ ವಿರುದ್ಧ ದೇವರಾಯ ತಿರುಗಿ ಬೀಳದಿದ್ದರೂ ಸಹ, ಪರ್ಶಿಯಾ ಹಾಗೂ ಪೋರ್ಚುಗೀಸರು ತಿರುಗಿ ನಿಂತಿದ್ದರೆ ಸಾಕಿತ್ತು! ಮೊಘಲ ಸಾಮ್ರಾಜ್ಯದ ಬುಡ ಹೇಳ ಹೆಸರಿಲ್ಲದಂತಾಗುತ್ತಿತ್ತು!

ಅಲ್ಲದೇ, ಇಡೀ ದಕ್ಷಿಣವನ್ನಾಕ್ರಮಿಸುವಷ್ಟು ಮೂಲಭೂತ ಸೌಕರ್ಯಗಳೂ ಬಾಬರನಲ್ಲಿ ಇರಲಿಲ್ಲ! ದಕ್ಷಿಣ ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುವಷ್ಟು ಪ್ರಾಕೃತಿಕ ಸಂಪನ್ಮೂಲಗಳು ಉತ್ತರದಲ್ಲಿರಲಿಲ್ಲವಾದ್ದರಿಂದ ಬಾಬರ್ ಯೋಚಿಸತೊಡಗಿದ! ಭಂಢ ಧೈರ್ಯ ಮಾಡಿ ಸೇನೆಯನ್ನು ನುಗ್ಗಿಸಿದ್ದೇ ಆಗಿದ್ದರೆ,.ಮೂಲಭೂತ ಸಂಪನ್ಮೂಲಗಳ ಕೊರತೆಯಿಂದ ಯುದ್ಧ ಮಾಡದೆಯೇ ಸತ್ತು ಹೋಗುತ್ತಿತ್ತು ಬಾಬರನ ಸೈನ್ಯ!

ಬೇರೆ ದಾರಿಯೇ ಇರಲಿಲ್ಲ ಬಾಬರನಿಗೆ!

ಬಾಬರನಿಗೆ ಇಲ್ಲ ಸಲ್ಲದ ಹುಚ್ಚಾಟ ಬೇಕಿರಲಿಲ್ಲ! ಯುದ್ಧಕ್ಕಿಳಿದದ್ದೇ ಆದರೆ, ತನ್ನ ದೆಹಲಿಯ ಸ್ಥಾನವೂ ನುಚ್ಚು ನೂರಾಗುವುದೆಂಬ ಅರಿವಿದ್ದ ಬಾಬರ್
ವಿಜಯ ನಗರ ಸಾಮ್ರಾಜ್ಯದ ಜೊತೆಗೆ ಸ್ನೇಹ ಬೆಳೆಸಲು ಯತ್ನಿಸಿದನೇ ಹೊರತು ನೇರ ಯುದ್ಧಕ್ಕಿಳಿಯಲೇ ಇಲ್ಲ ಕೊನೆಗೂ!

ಕಾಲಾನಂತರ ಬಿಡಿ! ಹಕ್ಕ ಬುಕ್ಕರು ಕಟ್ಟಿದ ಹಂಪಿಯೊಂದು ದ್ರೋಹಕ್ಕೆ ಬಲಿಯಾಗಿ ಹೋಯಿತು. ಆದರೆ, ಇವತ್ತಿಗೂ ಸಹ, ಕೃಷ್ಣ ದೇವರಾಯನ ಆಡಳಿತ ವೈಶಿಷ್ಟ್ಯತೆ ಆದರ್ಶಪ್ರಾಯವಾಗಿದೆ. ದೇಶದ ಆರೋಗ್ಯಕ್ಕೆ ಹೇಗೆ ಮೂಲಭೂತ ಸೌಕರ್ಯಗಳು ಮುಖ್ಯವೋ, ಅಷ್ಟೇ, ಭದ್ರತಾ ಪಡೆಯೂ ಮುಖ್ಯ ಎಂಬ ಸಿದ್ಧಾಂತವನ್ನು ನೀಡಿದ್ದ ಕೃಷ್ಣ ದೇವರಾಯನನ್ನು ಯುದ್ಧದಲ್ಲಿ ಸೋಲಿಸಲಾಗದೇ ದ್ರೋಹ ಬಗೆದು ಸೋಲಿಸಿದ್ದು ಇದೇ ಕಾರಣಕ್ಕೆ!

-Postcard team

Tags

Related Articles

FOR DAILY ALERTS
Close