ಅಂಕಣ

ಯುದ್ಧವನ್ನೇ ಮಾಡದೆ ಆಯಸ್ಸನ್ನು ಕಳೆದುಕೊಳ್ಳುತ್ತಿರುವ ಸೈನಿಕರು!! ಇಲ್ಲಿ ಕೆಲಸ ಮಾಡಿದರೆ ಆಯಸ್ಸು ಕಡಿಮೆಯಾಗೋದ್ಯಾಕೆ?!

ಸಿಯಾಚಿನ್ ಎಂಬುದು ಭಾರತ ಮತ್ತು ಪಾಕಿಸ್ತಾನ ಗಡಿಪ್ರದೇಶ!! ಪಾಕಿಸ್ತಾನಿಗಳು ನಮ್ಮ ದೇಶಕ್ಕೆ ನುಗ್ಗೋಕೆ ಸಾಧ್ಯವಾಗೋ ಒಂದೇ ಒಂದು ಜಾಗ ಅಂದ್ರೆ ಸಿಯಾಚಿನ್!! ನಮ್ಮ ಸೈನಿಕರು ಇವತ್ತು ಅಲ್ಲಿ ಕಾವಲು ನಿಂತು ನಮ್ಮನ್ನ ಕಾಪಾಡುತ್ತಿದ್ದಾರೆ!! ಜಗತ್ತಿನ ಅತೀ ಎತ್ತರದಲ್ಲಿರುವ ಯುದ್ಧಭೂಮಿ ಸಿಯಾಚಿನ್. ಸಮುದ್ರ ಮಟ್ಟದಿಂದ 22,000 ಅಡಿ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಭಾರತೀಯ ಸೈನಿಕರು ದೇಶ ರಕ್ಷಣೆಯ ಕಾಯಕದಲ್ಲಿ ಮಗ್ನರಾಗಿದ್ದಾರೆ!! ಶತ್ರು ರಾಷ್ಟ್ರದ ದಾಳಿಯಲ್ಲಿ ಸಾಯುವುದಕ್ಕಿಂತ ಹೆಚ್ಚು ಸೈನಿಕರು ಇಲ್ಲಿನ ಹವಾಮಾನ ವೈಪರೀತ್ಯದಿಂದ ಸಾಯುತ್ತಾರೆ ಎಂಬುದು ದುರದೃಷ್ಟಕರ ಸಂಗತಿಗಳಲ್ಲೊಂದು.!!

Image result for indian army in siachen

ಆದರೂ ನಮ್ಮ ದೇಶವನ್ನು ಪ್ರಾಣ ತ್ಯಾಗ ಮಾಡಿಯಾದರೂ ರಕ್ಷಣೆ ಮಾಡಬೇಕು ಎಂದು ಪಣತೊಟ್ಟು ಗಡಿ ಕಾಯುತ್ತಿದ್ದಾರೆ!! ಸಿಯಾಚಿನ್ ಬಗ್ಗೆ ಕೇಳುವಾಗಲೇ ಮೈ ಜುಮ್ಮೆನ್ನುತ್ತೆ!! ಆದರೆ ಅಲ್ಲೇ ನಮ್ಮ ದೇಶದ ಗಡಿ ಕಾಯೋ ಯೋಧರು ದೇಶ ರಕ್ಷಣೆಗೋಸ್ಕರ ಕುಟುಂಬವನ್ನೂ ತ್ಯಜಿಸಿ ಗಡಿ ಕಾಯುತ್ತಿದ್ದಾರೆ!! ಅವರ ಬದುಕುವ ಸ್ಥಿತಿ ತಿಳಿದರೆ ನಿಜವಾಗಿಯೂ ಕಣ್ಣಂಚಿನಲ್ಲಿ ನೀರು ಬರುತ್ತದೆ!! ಸಿಯಾಚಿನ್‍ನಲ್ಲಿ 80ರ ದಶಕದಿಂದ ಈವರೆಗೆ ಅದೆಷ್ಟೋ ಸಾವಿರಾರು ಭಾರತೀಯ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಸಾವಿಗೆ ಶತ್ರುಪಡೆಗಳು ಹಾರಿಸಿದ ಗುಂಡು, ಸಿಡಿಸಿದ ಬಾಂಬ್ ಕಾರಣವಲ್ಲ. ಬದಲಿಗೆ ಸಹಿಸಿಕೊಳ್ಳಲಾಗದಷ್ಟು ಚಳಿ ಹೊಂದಿರುವ ಪ್ರತಿಕೂಲ ಹವಾಮಾನ, ದಿಢೀರ್ ಹಿಮ ಕುಸಿತದಂತಹ ಘಟನೆಗಳು….

Image result for indian army in siachen

ಸಿಯಾಚಿನ್‍ನಲ್ಲಿ ಕಾವಲು ಕಾಯೋದು ಅಷ್ಟು ಸುಲಭದ ಮಾತಲ್ಲ!! ಯಾಕೆ ಗೊತ್ತಾ?! ಪ್ರಪಂಚದ ಅತಿ ಎತ್ತರವಾದ ಮತ್ತು ಭಯಾನಕ ಯುದ್ಧ ಭೂಮಿ ಸಿಯಾಚಿನ್!! ಹಿಮಾಲಯ ಪರ್ವತದ ಕಾರಾಕೋರಂ ಸಾಲಿನ ಪೂರ್ವದಲ್ಲಿರೋ ಸಿಯಾಚಿನ್ ಭಾರತ ಮತ್ತು ಪಾಕಿಸ್ತಾನದ ಗಡಿ(ಲೈನ್ ಆಫ್ ಕಂಟ್ರೋಲ್). ಅಷ್ಟು ಎತ್ತರ ಜಾಗದ ಪರಿಸರಕ್ಕೆ ನಮ್ಮ ದೇಹ ಅಡ್ಜಸ್ಟ್ ಆಗೋದೆಂದರೆ ಮನುಷ್ಯನ ಜೀವಕ್ಕೆ ಕುತ್ತೇ ಸರಿ. ಸಿಯಾಚಿನ್ ನಲ್ಲಿ ವರ್ಷಕ್ಕೆ ಸುಮಾರು 36 ಅಡಿ ಹಿಮಪಾತ ಆಗುತ್ತೆ.

ಬೆಳಗ್ಗಿನ ಹೊತ್ತು ಇಲ್ಲಿನ ಸರಾಸರಿ ಉಷ್ಣತೆ ಮೈನಸ್ 30 ಡಿಗ್ರಿ. ರಾತ್ರಿ ಹೊತ್ತು ಮೈನಸ್ 55 ಡಿಗ್ರಿ. ಇದು ಕೆಲವೊಮ್ಮೆ ಮೈನಸ್ 60 ರಷ್ಟು ಆಗುವುದೂ ಇದೆ. ಸುತ್ತ ನೋಡಿದರೆ ಬೇರೇನೂ ಕಾಣುವುದಿಲ್ಲ!! ಕಾಣುವುದು ಹಿಮಗುಡ್ಡೆಗಳು ಮಾತ್ರ. ಇಲ್ಲಿ ವಾತಾವರಣದ ಒತ್ತಡ ಅತೀ ಕಡಿಮೆಯಾಗಿರುವುದರಿಂದ ಉಸಿರಾಟವೂ ಕಷ್ಟ. ನಮಗೆ ಸಿಗುವ ಆಮ್ಲಜನಕದ ಶೇಕಡಾ 10 ರಷ್ಟು ಮಾತ್ರ ಆಮ್ಲಜನಕ ಇಲ್ಲಿ ಉಸಿರಾಡಲು ಸಿಗುತ್ತದೆ. ಹತ್ತು ನಿಮಿಷ ಇಲ್ಲಿ ನಡೆದಾಡಿದರೆ ಮತ್ತೆ ಸುಧಾರಿಸಿಕೊಳ್ಳುವುದಕ್ಕೆ ಅರ್ಧ ಗಂಟೆಯಾದರೂ ಬೇಕೇ ಬೇಕು. ಶ್ವಾಸಕೋಶ ಮತ್ತು ಮೆದುಳನ್ನು ಬಾಧಿಸುವ ಹೈ ಆಲ್ಟಿಟ್ಯೂಡ್ ಪಲ್ಮನರೀ ಒಡಿಮಾಗೆ ತುತ್ತಾಗಲು ಇಲ್ಲಿ ಕೆಲವೇ ಕ್ಷಣಗಳು ಸಾಕಂತೆ!!

Related image

ಅದಲ್ಲದೆ, ಹಿಮಪಾತದಿಂದ ದೇಹವೂ ಗಾಯಕ್ಕೊಳಗಾಗುತ್ತೆ!! ಕಬ್ಬಿಣ ದೇಹಕ್ಕೆ ತಾಗಿದರೂ ದೇಹದಲ್ಲಿ ಗಾಯಗಳಾಗುವ ಸಾಧ್ಯತೆಯಿದೆ. ಚಿಕ್ಕ ಪುಟ್ಟ ಗಾಯಗಳಾದರೂ ಅವು ಬೇಗನೆ ದೇಹವನ್ನು ಕುಗ್ಗಿಸಿಬಿಡುತ್ತವೆ. ಅಂದರೆ ಇಲ್ಲಿ  ಫ್ರೋಸ್ಟ್ ಬೈಟ್ ಜಾಸ್ತಿಯಾಗಿರುತ್ತದೆ. ವಿಪರೀತ ಚಳಿಯಿಂದಾಗಿ ದೇಹದಲ್ಲಿ ತಂತಾನೇ ಗಾಯಗಳಾಗುವುದನ್ನೇ ಫ್ರೋಸ್ಟ್ ಬೈಟ್ ಅಂತಾರೆ. ಮೂಗು, ಕೈ ಮತ್ತು ಕಾಲಿನ ಬೆರಳುಗಳು ಫ್ರೋಸ್ಟ್ ಬೈಟ್ ಗೆ ಒಳಗಾಗಿ ಗ್ಯಾಂಗ್ರೀನ್ ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ  ಫ್ರೋಸ್ಟ್ ಬೈಟ್ ನಿಂದ ಕೈ ಬೆರಳುಗಳನ್ನೇ ಕತ್ತರಿಸಬೇಕಾಗಿ ಬಂದ ಉದಾಹರಣೆಗಳೂ ಇಲ್ಲಿವೆ.

ಸಿಕ್ಕಾಪಟ್ಟೆ ಸುಸ್ತು ಇಲ್ಲಿನ ಹವಾಮಾನದಿಂದಾಗಿ ನಿದ್ದೆ, ಹಸಿವು ಇಲ್ಲದಾಗುತ್ತದೆ. ಶರೀರ ಕುಗ್ಗುತ್ತಾ ಹೋಗುತ್ತಿದ್ದು ನೆನಪಿನ ಶಕ್ತಿಯೂ, ಮಾತನಾಡುವ ಶಕ್ತಿಯೂ ಕುಂದುತ್ತದೆ. ಇಲ್ಲಿ ಗಂಟೆಗೆ 100 ಮೈಲಿ ವೇಗದಲ್ಲಿ ಹಿಮಗಾಳಿ ಬೀಸುತ್ತಿರುತ್ತದೆ. ಮೂರು ವಾರಗಳ ಕಾಲ ಇದು ಸತತವಾಗಿ ಬೀಸುತ್ತಿದ್ದು, ಮನುಷ್ಯನಿಗೆ ಇದನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಸಿಯಾಚಿನ್‍ನಲ್ಲಿ ಒಬ್ಬ ಯೋಧ ಗರಿಷ್ಠ ಮೂರು ತಿಂಗಳು ಮಾತ್ರವೇ ಗಡಿ ಕಾಯಬಹುದು. ಈ ಅವಧಿ ಮುಗಿಯುತ್ತಿದ್ದಂತೆ ಸೇನೆ ಬೇರೆ ಯೋಧನನ್ನು ನಿಯೋಜಿಸುತ್ತದೆ. ಬಾನಾ ಪೋಸ್ಟ್ ಎಂಬ ಅತ್ಯಂತ ಅಪಾಯಕಾರಿ ಸ್ಥಳದಲ್ಲಿ ಪ್ರತಿ ತಿಂಗಳಿಗೊಮ್ಮೆ ಯೋಧರನ್ನು ಬದಲಿಸಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಸೇನಾ ತುಕಡಿಯನ್ನೇ ಎತ್ತಂಗಡಿ ಮಾಡಲಾಗುತ್ತದೆ.

Image result for indian army in siachen

ಸಿಯಾಚಿನ್‍ನಲ್ಲಿ 36 ಅಡಿಯಷ್ಟು ಹಿಮ ಮಳೆಯಾಗುತ್ತದೆ. ಹೀಗೆ ಬಿದ್ದ ಹಿಮಗಳನ್ನು ಆಗಾಗ ತೆರವು ಮಾಡದೇ ಇದ್ದಲ್ಲಿ ಸೈನಿಕರ ಪೋಸ್ಟ್‍ಗಳೂ ಹಿಮಾವೃತವಾಗಿ ಮುಳುಗುವ ಸಾದ್ಯತೆಯಿರುತ್ತದೆ. ಅದರ ಜತೆಗೇ ಹಿಮಪಾತವೂ ಆಗುತ್ತಿರುತ್ತದೆ. ಆರೆಂಜ್, ಆಪಲ್ ಎಲ್ಲ ಕ್ಷಣಾರ್ಧದಲ್ಲಿ ಮುದುಡಿ ಕ್ರಿಕೆಟ್ ಬಾಲ್‍ನಷ್ಟು ಗಟ್ಟಿಯಾಗಿ ಬಿಡುತ್ತದೆ. ನಮಗಿಷ್ಟವಾದ ಆಹಾರಗಳನ್ನು ಸೇವಿಸುವುದು ಇಲ್ಲಿ ಕನಸಿನ ಮಾತು. ಸೈನಿಕರಿಗೆ ಹೆಲಿಕಾಪ್ಟರ್ ಮೂಲಕ ಟಿನ್ ಕ್ಯಾನ್ ಗಳಲ್ಲಿ ಆಹಾರವನ್ನು ಪೂರೈಸಲಾಗುತ್ತದೆ. ಇಲ್ಲಿ ಹೆಲಿಕಾಪ್ಟರ್ ಹಾರಾಟವೂ ಕಷ್ಟವಾಗಿರುತ್ತದೆ. ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಸಿಯಾಚಿನ್‍ನಲ್ಲಿ ದೇಶ ರಕ್ಷಣೆ ಮಾಡುತ್ತಿರುವ ನಮ್ಮ ಸೈನಿಕರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ನೋಡಿ.

https://youtu.be/BiuHqJmNNf8

“ಚೀತಾ” ಅನ್ನೋ ಹೆಲಿಕ್ಯಾಪ್ಟರ್‍ನ್ನು ಇದಕ್ಕೆ ಅಂತಾನೇ ತಯಾರು ಮಾಡಿದ್ದಾರೆ. ವಾತಾವರಣ ಕೆಟ್ರೆ ಅರ್ಧ ಊಟ ಹಿಮದ ಪಾಲಾಗಿರುತ್ತೆ. ಸಿಯಾಚಿನ್ ನಲ್ಲಿರೋ ಸೈನಿಕರಿಗೆ ಸ್ನಾನ ತಿಂಗಳಿಗೆ ಒಂದೇ ಸಾರಿ!!! ಡಿ.ರ್.ಡಿ.ಓ ಕಟ್ಟಿರೋ ಸ್ಪೆಷಲ್ ಬಚ್ಚಲು ಮನೆಯಲ್ಲಿ ಇವರು ತಿಂಗಳಿಗೆ ಒಂದು ಬಾರಿ ಸ್ನಾನ ಮಾಡ್ತಾರೆ. ಇಲ್ಲಿರೋ ಸೈನಿಕರಿಗೆ ಸಾಕಷ್ಟು ಅರೋಗ್ಯ ತೊಂದರೆಗಳು ಆಗುತ್ತೆ. ಸರಿಯಾಗಿ ನಿದ್ದೆ ಬರೋಲ್ಲ, ಸಿಕ್ಕಾಪಟ್ಟೆ ತೂಕ ಕಡಿಮೆ ಆಗೋದು, ಮಾತಾಡಕ್ಕಾಗಲ್ಲ, ಮರೆವು. ಈ ಸಮಸ್ಯೆಗಳು ಅಲ್ಲಿ ಕಾರ್ಯನಿರ್ವಹಿಸುವ ಮುಕ್ಕಾಲುಭಾಗ ಸೈನಿಕರಿಗೆ ಕಾಡುತ್ತವೆ. ಕಳೆದ 30 ವರ್ಷದಲ್ಲಿ ನಾವು 846 ಸೈನಿಕರನ್ನ ಸಿಯಾಚಿನ್ ನಲ್ಲಿರುವ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಕಳಕೊಂಡಿದ್ದೇವೆ. ಇಷ್ಟೆಲ್ಲಾ ಇದ್ದರೂ ನಮ್ಮ ಯೋಧರು ಯಾತಕ್ಕಾಗಿ ಸಿಯಾಚಿನಲ್ಲಿ ಗಡಿ ಕಾಯುತ್ತಿದ್ದಾರೆ ಗೊತ್ತೇ?!

Image result for indian army in siachen

1949ರ ಕರಾಚಿ ಒಪ್ಪಂದ ಮತ್ತು 1972ರ ಶಿಮ್ಲಾ ಒಪ್ಪಂದದ ಪ್ರಕಾರ, ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯ ಅತ್ಯಂತ ಉತ್ತರ ತುದಿಯಲ್ಲಿರುವ ಸಿಯಾಚಿನ್ ಅನ್ನು ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಪ್ರದೇಶ ಎಂದು ಒಪ್ಪಿಕೊಳ್ಳಲಾಯಿತು. ಆದರೆ ಈ ಒಪ್ಪಂದಕ್ಕೆ ವಿರುದ್ಧವಾಗಿ ಸಿಯಾಚಿನ್ ಹಿಮಪರ್ವತವನ್ನು ವಶಕ್ಕೆ ತೆಗೆದುಕೊಳ್ಳಲು ಪಾಕ್ ಪ್ರಯತ್ನ ಆರಂಭಿಸಿತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯನ್ನು 1984ರಲ್ಲಿ ನಿಯೋಜಿಸಲಾಯಿತು. ಪಾಕ್ ಸೈನಿಕರು ಸಿಯಾಚಿನ್‍ಗೆ ಹೋಗಿ ಅಲ್ಲಿ ಠಿಕಾಣಿ ಹೂಡುವ ಮೊದಲೇ ಭಾರತೀಯ ಸೈನಿಕರು ತೆರಳಿ ಸಿಯಾಚಿನ್ ಮೇಲೆ ಪ್ರಭುತ್ವ ಸಾಧಿಸಿದ್ದರು. ಅಂದಿನಿಂದಲೂ ಸಿಯಾಚಿನ್ ಅನ್ನು ಭಾರತದ ಯೋಧರು ರಕ್ಷಿಸುತ್ತಿದ್ದಾರೆ….

Image result for indian army in siachen

ಇದೆಲ್ಲಾ ಕೇಳೋವಾಗಲೇ ಮೈ ರೋಮಾಂಚನವಾಗುತ್ತೆ…. ನಿಜವಾಗಿಯೂ ಹೇಳಬೇಕೆಂದರೆ ಇಲ್ಲಿ ನಾವು ಹಾಯಾಗಿ ಕುಳಿತುಕೊಂಡು, ಐಶಾರಾಮಿ ಜೀವನವನ್ನು ಸಾಗಿಸುತ್ತಿದ್ದೇವೆ.. ಅದರೆ… ಅಲ್ಲಿ ಸಿಯಾಚಿನ್ ಯೋಧರ ಕಥೆ…… ಇಲ್ಲಿ ಕಾರ್ಯನಿರ್ವಹಿಸುವಾಗ ಒಂದು ವೇಳೆ ಸಾವು ಸಂಭವಿಸಿದರೆ ಅವರನ್ನು “ವೀರಮರಣ” ಅಂತ ಗೌರವಿಸಲಾಗುತ್ತದೆ!! ನಿಜವಾಗಿ ಹೇಳಬೇಕೆಂದರೆ ನಾವು ದೇವರಂತೆ ಪೂಜಿಸಬೇಕು ನಮ್ಮ ಯೋಧರನ್ನು… ಇವರೇ ನಮ್ಮ ರಿಯಲ್ ಹಿರೋಸ್!! ಈಗಾಗಲೇ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸೈನಿಕರಿಗೆ ನಾನಾ ರೀತಿಯಲ್ಲಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನೂ ಕೂಡಾ ನೀಡುತ್ತಾನೇ ಬರುತ್ತಿದ್ದಾರೆ!! ಅದಲ್ಲದೆ ದೀಪಾಳಿಯ ಸಂದರ್ಭದಲ್ಲೂ ಸಿಯಾಚಿನ್ ಯೋಧರ ಜೊತೆ ಸೇರಿ ದೀಪಾವಳಿಯನ್ನು ಆಚರಿಸುವುದಲ್ಲದೆ ಅವರಿಗೆ ಬೇಕಾದ ಸವಲತ್ತುಗಳು ಹಾಗೂ ಮಾನಸಿಕ ಸ್ಥೈರ್ಯವನ್ನು ನೀಡುತ್ತಾ ಬರುತ್ತಿದ್ದಾರೆ!! ಮೋದಿಜೀಯ ಇಂತಹ ಕಾರ್ಯಕ್ಕೆ ಜೈ ಎನ್ನಲೇ ಬೇಕು!!

Source :kannadaprabha

  • ಪವಿತ್ರ
Tags

Related Articles

FOR DAILY ALERTS
Close