ಪ್ರಚಲಿತ

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

ಅಧ್ಯಾಯ 5: ಭಾರತ ವಿಭಜನೆ ಎಂಬ ಎಂದೂ ಮಾಯದ ಗಾಯ.
ಕಾಶ್ಮೀರವನ್ನು ಉಳಿಸುವಲ್ಲಿ ಸ್ವಯಂಸೇವಕರ ಪಾತ್ರ:
1947 ರ ಸಮಯ,
ಕಾಶ್ಮೀರದಲ್ಲಿ ಪ್ರಕ್ಷುಬ್ಧ ವಾತಾವರಣ. ಭಾರತದ ಸ್ವಾತಂತ್ರ್ಯ ಹಾಗೂ ಸಮಗ್ರತೆಗೆ ಇನ್ನೊಂದು ಗಂಭೀರ ಸವಾಲು ಎದುರಾಯಿತು. ಜೂನ್ 3ರ ಘೋಷಣೆಯಂತೆ ಅವಿಭಜಿತ ಭಾರತದ ದೇಶೀಯ ಸಂಸ್ಥಾನಗಳ ರಾಜರುಗಳು ಪಾಕಿಸ್ತಾನ ಅಥವಾ ಭಾರತದಲ್ಲಿ ಒಂದರೊಡನೆ ವಿಲೀನವಾಗಲು ಮುಕ್ತ ಅವಕಾಶ ನೀಡಲಾಯಿತು. ಆದರೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರಿಗೆ ಉಭಯಸಂಕಟ. ಸ್ವತಃ ನಿಷ್ಠಾವಂತ ದೇಶಭಕ್ತ ಹಿಂದುವಾಗಿದ್ದ ಮಹಾರಾಜರಿಗೆ ಪಾಕಿಸ್ತಾನದೊಂದಿಗೆ ವಿಲೀನವಾಗಲು ಕಿಂಚಿತ್ತೂ ಮನಸ್ಸಿರಲಿಲ್ಲ.
ಆದರೆ ರಾಜ್ಯದ ಬಹುಸಂಖ್ಯಾತರು ಮುಸಲ್ಮಾನರು. ಜೂನ್ ಮೂರನೇ ವಾರದಲ್ಲಿ ಮೌಂಟ್ ಬ್ಯಾಟನ್ ವಿಶೇಷ ವಿಮಾನದಲ್ಲಿ ಕಾಶ್ಮೀರಕ್ಕೆ ತಲುಪಿ, ಪಾಕಿಸ್ತಾನದೊಂದಿಗೆ ವಿಲೀನವಾಗಲು ಮಹಾರಾಜರ ಮೇಲೆ ಒತ್ತಡ ತರುವುದು ಅವರ ಉದ್ದೇಶವಾಗಿತ್ತು.  ಅತ್ತ ಕಾಶ್ಮೀರದಲ್ಲಿನ ಮುಸ್ಲಿಂ ಕಾನ್ಫರೆನ್ಸ್ ಮಹಾರಾಜರನ್ನು ಪಾಕಿಸ್ತಾನಕ್ಕೆ ಸೇರಲು ಒತ್ತಾಯ ಹೇರುತಿತ್ತು. ಭಾರತದೊಂದಿಗೆ ತಟಸ್ಥ ನೀತಿಯ ಒಪ್ಪಂದ ಮಾಡಿಕೊಳ್ಳಬೇಕೆಂಬ ಆಲೋಚನೆ ಅವರದ್ದು.
ಆಗಸ್ಟ್ 15ರ ಗಡುವು ಹತ್ತಿರ ಬರುವ ಮೊದಲೇ ವಿಲೀನ ಪೂರ್ತಿಯಾಗ ಬೇಕು ಎಂದು ಹಠ ಹಿಡಿದಿದ್ದರು.
ಆಗ ಪ್ರಾಂತ ಸಂಘಚಾಲಕರಾಗಿದ್ದ ಪಂಡಿತ್ ಪ್ರೇಮನಾಥ್ ಡೋಗ್ರಾ ಅವರು ನೂರಾರು ಮನವಿಗಳ ಮೂಲಕ ಹಾಗೂ ವ್ಯಕ್ತಿಗತ ಭೇಟಿಯ ಮೂಲಕ ಮಹಾರಾಜರನ್ನು ಪರಿಸ್ಥಿತಿಯ ಅರಿವು ಮೂಡಿಸಿ ಭಾರತದೊಂದಿಗೆ ವಿಲೀನವಾಗಲು ಬೇಡಿಕೊಂಡರು. ಪಂಜಾಬಿನ ಸಂಘಚಾಲಕರಗಿದ್ದ ಬದ್ರಿದಾಸಜಿ ಬಗ್ಗೆ ಮಹಾರಾಜರಿಗೆ ತುಂಬಾ ಆದರ. ವಿಲೀನದ ಸಲಹೆ ನೀಡಲು ಅವರೇ ಸ್ವತಃ ಕಾಶ್ಮೀರಕ್ಕೆ ಧಾವಿಸಿದರು.ಆದರೆ ಕಾಶ್ಮೀರದಲ್ಲಿ ಭಾರತ ವಿರೋಧಿ ಶಕ್ತಿಗಳು ತಮ್ಮ ಆಟಾಟೋಪ ಮುಂದುವರಿಸಿದರು. ಶ್ರೀ ನಗರ ಅಂಚೆ ಕಚೇರಿಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಯಿತು.
ಸ್ವಯಂಸೇವಕರ ಹೋರಾಟದ ಫಲವಾಗಿ ಪಾಕಿಸ್ತಾನದ ಧ್ವಜವನ್ನು ಇಳಿಸಬೇಕಾಯಿತು. ಸಂಘದ ಕಾರ್ಯಲಯ ನೂರಾರು ತ್ರಿವರ್ಣ ಧ್ವಜವನ್ನು ಮನೆಮನೆಗೂ ಸರಬರಾಜು ಮಾಡಿತು. ಆಗಸ್ಟ್ 15 ರಂದು ಅಲ್ಲೆಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.ಈ ಮಧ್ಯೆ ಶಸ್ತ್ರಾಸ್ತ್ರ ಸಮೇತ ಪಾಕಿಸ್ತಾನಿಗಳು ಕಾಶ್ಮೀರದಲ್ಲಿ ದಂಗೆ ಎಬ್ಬಿಸುವ ಹುನ್ನಾರ ನಡೆಸಿದವು. ಅಕ್ಟೋಬರ್ ಮಧ್ಯಭಾಗದ ನಿರ್ಣಾಯಕ ದಿನಗಳಲ್ಲಿ, ಮಹಾರಾಜರ ಮನಸ್ಥಿತಿಯನ್ನು ಅರಿತ ಪಟೇಲರು ಶ್ರೀ ಗುರೂಜಿಯವರ ನೆರವನ್ನು ಬಯಸಿದರು. ಮಹಾರಾಜರಿಗೆ ಗುರೂಜಿಯವರ ಬಗ್ಗೆ ಇದ್ದ ಶ್ರದ್ಧೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ.
1947 ರ ಅಕ್ಟೋಬರ್ 17 ರಂದು ಶ್ರೀ ಗುರೂಜಿ ಶ್ರೀನಗರಕ್ಕೆ ಧಾವಿಸಿ, ಕಾಶ್ಮೀರವನ್ನು ಸ್ವತಂತ್ರವಾಗಿ ಇಡುವ ಮಹಾರಾಜರ ನಿರ್ಧಾರ ಹೇಗೆ ಲಾಭಕರವಲ್ಲ ಎಂಬುದನ್ನು ಅವರಿಗೆ ಮನಗಾಣಿಸಿದರು. ಪರಿಣಾಮವಾಗಿ ಮಹಾರಾಜರು ಭಾರತದೊಂದಿಗೆ ವಿಲೀನಕ್ಕೆ ಸಹಿ ಹಾಕಲು ಸಿದ್ಧರಾದರು. ಅಕ್ಟೋಬರ್ 19 ಕ್ಕೆ ದಿಲ್ಲಿಗೆ ವಾಪಾಸಾದ  ಗುರೂಜಿ ಸರ್ದಾರ್ ಪಟೇಲರಿಗೆ ಈ ವರದಿಯನ್ನು ಒಪ್ಪಿಸಿದರು.
ಜಮ್ಮುವನ್ನು ಉಳಿಸಿಕೊಂಡ ಸ್ವಯಂಸೇವಕರು:
ಅಕ್ಟೋಬರ್ 22-23 ರ ಹೊತ್ತಿಗೆ ಪಾಕಿಸ್ತಾನಿ ಗುಡ್ಡಗಾಡು ಮುಸ್ಲಿಮರ ದಾಳಿಗೆ ಭಾರತ ತತ್ತರಿಸಿ ಹೋಯಿತು. ಇಡೀ ಜಮ್ಮು ಹಾಗೂ ಸಿಯಾಲ್ಕೊಟ್ ಗಡಿ ಪ್ರದೇಶ ಹೊತ್ತಿ ಉರಿಯಿತು. ರಕ್ಷಣೆಗಾಗಿ ಮಹಾರಾಜರು ದಿಲ್ಲಿಗೆ ಸಂದೇಶ ರವಾನಿಸಿದರು. ಆದರೆ ನೆಹರೂ ಕಾಶ್ಮೀರದಲ್ಲಿ ಸೇನೆ ನಿಯೋಜನೆಗೆ ಹಿಂದೇಟು ಹಾಕಿದ್ದರ ಫಲವಾಗಿ, ಮಾರಣಹೋಮ ನಡೆಯುವ ಗಳಿಗೆಯಲ್ಲಿ ಸೇನೆಯು ಅಲ್ಲಿರದೇ ಭಯಾನಕ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿ ಸ್ವಯಂಸೇವಕರು ಹೊತ್ತುಕೊಂಡರು. ಕುತಂತ್ರಿಗಳ ಯೋಜನೆಯನ್ನು ವಿಫಲಗೊಳಿಸಿದರು. ಜಮ್ಮು ಉಳಿಯಿತು. ಜಮ್ಮು ಕೈಯಲ್ಲಿ ಉಳಿಯದೆ ಹೋಗಿದ್ದರೇ ನಮ್ ಸೈನಿಕರಿಗೆ ಶ್ರೀನಗರವನ್ನು ಉಳಿಸುವ ಆಸೆ ಸಹ ಹಗಲುಗನಸು ಎಂಬಂತೆ ಆಗುತಿತ್ತು.
ಕೋಟ್ಲಿ ಯ ಬಲಿದಾನ ಗಾಥೆ:
ಭಾರತ ಸೆನೆಟ್ ನೆರವಿಗೆ ನಿಂತ ಸ್ವಯಂಸೇವಕರು, ಮಾರ್ಗಳನ್ನು ಸರಿಪಡಿಸುವ ಕೆಲಸ ಕೈಗೆತ್ತಿಕೊಂಡರು. ಪಾಕಿಸ್ತಾನದ ಕೈವಶವಾಗಿದ್ದ ಮೀರ್ ಪುರದಲ್ಲಿ ಸಹಸ್ರಾರು ಸ್ತ್ರೀಯರ ಮಾನ ಕಾಪಾಡುವಲ್ಲಿ ಸ್ವಯಂಸೇವಕರು ತಮ್ಮ ರಕ್ತವನ್ನೇ ಬಸಿದರು.ಕೋಟ್ಲಿ ಗಡಿ ಪ್ರದೇಶದ ಒಂದು ಆಯಕಟ್ಟಿನ ಪ್ರದೇಶ. ಪಾಕಿಸ್ತಾನಿಗಳ ಕೈಯಿಂದ ಸುಲಿಗೆ ಅತ್ಯಾಚಾರಗಳು ಎಗ್ಗಿಲ್ಲದೇ ನಡೆದು ಹೋದವು. ಕೋಟ್ಲಿ ಯಲ್ಲಿದ್ದ ಸೈನಿಕ ತುಕಡಿಯ ಮದ್ದುಗುಂಡುಗಳ ದಾಸ್ತಾನು ಬರಿದಾದ ಸಂಧರ್ಭ. ಅದರ ಸಹಾಯ ಕ್ಕಾಗಿ ಮದ್ದುಗುಂಡುಗಳ 20 ಪೆಟ್ಟಿಗೆಗಳನ್ನು ಭಾರತೀಯ ವಾಯುಪಡೆ ಉದುರಿಸಿತ್ತು. ದುರಾದೃಷ್ಟವಶಾತ್ ಅವು ಪಾಕಿಸ್ತಾನಿಗಳು ಆಕ್ರಮಿಸಿ ಕೊಂಡಿದ್ದ ಗುಡ್ಡಗಾಡು ಪ್ರದೇಶದ ಇಳಿಜಾರಿನಲ್ಲಿ ಬಿದ್ದವು. ಪಾಕಿಸ್ತಾನಿ ಪಡೆಯ ಪರಿಮಿತಿ ಒಳಗೆ ಇದ್ದ ಅದ ಪೆಟ್ಟಿಗೆಗಳನ್ನು ತರುವುದು ಅವಶ್ಯಕ. ಆದರೆ ಅದನ್ನು ತರಲು ಪ್ರಾಣ ತೆತ್ತರೆ ಪಾಕಿಸ್ತಾನಿ ಪಡೆಯೊಂದಿಗೆ ಹೋರಾಡುವವರು ಯಾರು?
ಅಪತ್ಭಾಂದವರಂತೆ ಸಂಘದ ಸ್ಥಳೀಯ ಕಾರ್ಯಕರ್ತರಾದ ಕೃಷ್ಣಲಾಲ ಹಾಗೂ ಇನ್ನೂ 20 ಮಂದಿ ಸ್ವಯಂಸೇವಕರು ಈ ಸವಾಲನ್ನು ಸ್ವೀಕರಿಸಲು  ಸಿದ್ಧರಾದರು. ಸಾವಿನ ಅಂಚಿನಲ್ಲಿ ಸರಿಯುತ್ತಾ ಅದ ತಂಡ 27 ಪೆಟ್ಟಿಗೆಗಳನ್ನು ವಾಪಾಸು ತಂದೊಪ್ಪಿಸಿತು. ಶ್ರೀ ಕೃಷ್ಣ ಲಾಲರೂ ಸೇರಿದಂತೆ ಆರು ಸ್ವಯಂಸೇವಕರು ತಮ್ಮ ಪ್ರಾಣವನ್ನು ಅರ್ಪಿಸ ಬೇಕಾಯಿತು. 6000 ಹಿಂದೂಗಳ ರಕ್ಷಣೆ ಮಾಡುತ್ತಾ ಹೋರಾಟ ಕೊನೆಯ ಹಂತ ತಲುಪುವಾಗ ನಗರ ಕಾರ್ಯವಾಹ ಪ್ರಕಾಶರು ನಗರ ರಕ್ಷಣೆ ಮಾಡುತ್ತಾ ಪ್ರಾಣಾರ್ಪಣೆ ಮಾಡಿದರು.
ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಭಿನ್ನವಾಗಿ ಏನೂ ಇರಲಿಲ್ಲ. ದಿಲ್ಲಿಯ ಆಶ್ವಾಸನೆಯ ಫಲವಾಗಿ ಶೇಖ್ ಅಬ್ದುಲ್ಲಾ ಕಾಶ್ಮೀರದಲ್ಲಿ ಅನಿರ್ಬಂಧಿತ ಅಧಿಕಾರ ಹಿಡಿದರು. ಸ್ಥಳೀಯರು ಪಾಕಿಸ್ತಾನದ ದಾಳಿಗೆ ಹೆಗಳು ಕೊಟ್ಟರು. ಈ ಅಪಾಯಕ್ಕೆ ಎದೆಗೊಡಲು ಸ್ವಯಂಸೇವಕರು ಭಾರಿ ಸಂಖ್ಯೆಯಲ್ಲಿ ಪ್ರಜಾಸೇನೆಗೆ ಭರ್ತಿಯಾದರು.
ಶ್ರೀನಗರದ ರಕ್ಷಣೆಯಲ್ಲಿ ಪಂಡಿತ್ ಮನ್ಮಥ ಎಂಬ ಸ್ವಯಂಸೇವಕ ಹುತಾತ್ಮನಾದ. ಕಾಶ್ಮೀರ ಕಣಿವೆ ಉಳಿಯಬೇಕಾದರೆ, ತನ್ನ ಅಧಿಕಾರ ಸುಭದ್ರವಾಗಿ ನೆಲೆಗೊಳ್ಳಲು ಸಂಘದ ಸಹಕಾರ ಶೇಖ್ ಅಬ್ದುಲ್ಲಾ ಗೆ ಅನಿವಾರ್ಯವಾಗಿತ್ತು. ಆದರೆ ಒಮ್ಮೆ ತನ್ನ ಸ್ಥಾನ ಭದ್ರವಾದಂತೆ ಸಂಘದ ಸ್ವಯಂಸೇವಕರನ್ನು ಪ್ರಜಾಸೈನ್ಯದಿಂದ ಹಾಗೂ ಕ್ರಮೇಣ ಕಾಶ್ಮೀರದಿಂದ ಉಪಾಯವಾಗಿ ಹೊರಗಟ್ಟುವ ಪ್ರಯತ್ನವೂ ಶೇಖ್ ರಿಂದ ನಡೆದದ್ದು ಮಾತ್ರ ವಿಪರ್ಯಾಸ.
Chapter 1:https://postcardkannada.in/an-insight-into-rss-worlds-biggest-voluntary-organisation/
Chapter 2:https://postcardkannada.in/rss-how-the-organization-built-by-doctor-ji-grew-exponentially/
Chapter 3:https://postcardkannada.in/what-are-the-shakas-of-rss-heres-some-details-article-on-it/
Chapter 4:https://postcardkannada.in/is-it-true-that-rss-didnt-contribute-to-indias-freedom-struggle-let-us-break-this-myth/
-Dr. Sindhu Prashanth
Tags

Related Articles

FOR DAILY ALERTS
Close