ಪ್ರಚಲಿತ

ಕೆಂಪು ಕೋಟೆಯನ್ನು ಶಹಜಹಾನ ಕಟ್ಟಿಸಿದ್ದಲ್ಲ ಬದಲಾಗಿ 1060 ರಲ್ಲಿ ಹಿಂದೂ ರಾಜ ಅನಂಗಪಾಲ ತೋಮರನು ಕಟ್ಟಿಸಿದ್ದೆನ್ನುತ್ತದೆ ಇತಿಹಾಸ!!

ತೇಜೋಮಹಾಲಯ ತಾಜ್ ಮಹಲ್ ಆಯಿತು, ರಾಮ ಮಂದಿರ ಬಾಬ್ರಿ ಮಸೀದಿಯಾಯಿತು, ವಿಷ್ಣು ಸ್ಥಂಭ ಕುತುಬ್ ಮಿನಾರ್ ಆಯಿತು. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ  ಪಟ್ಟಿಗೆ ಇನ್ನೊಂದು ಸೇರ್ಪಡೆ ದೆಹಲಿಯ ಕೆಂಪು ಕೋಟೆ. ಕೆಂಪುಕೋಟೆ ಕಟ್ಟುವ ಹೊತ್ತಿಗೆ ಬಹುಶಃ  ಶಾಹಜಹಾನ್ ಇನ್ನೂ ಹುಟ್ಟಿರಲಿಲ್ಲ. ಆತ ಗದ್ದುಗೆ ಏರುವುದು ಬಿಡಿ, ಹುಟ್ಟುವುದಕ್ಕೂ ಮೊದಲೇ ದೆಹಲಿಯಲ್ಲಿ ಕೆಂಪುಕೋಟೆ ನಿರ್ಮಾಣವಾಗಿತ್ತು ಎನ್ನುತ್ತದೆ ಇತಿಹಾಸದ ಸಾಕ್ಷ್ಯಗಳು. 

ತೋಮರ ಸಾಮ್ರಾಜ್ಯದ ಅನಂಗಪಾಲ ತೋಮರನು 1060 ರಲ್ಲಿ ಕೆಂಪು ಕೋಟೆಯನ್ನು ಕಟ್ಟಿಸಿದೆನ್ನುತ್ತಾರೆ ಇತಿಹಾಸಕಾರರು.  ತೋಮರ ವಂಶ ದ ಮಹಾನ್ ರಾಜ, ಪೃಥ್ವಿ ರಾಜ ಚೌಹಾನ್ ಬಗ್ಗೆ ಬರೆದ “ಪೃಥ್ವಿ ರಾಜ ರಾಸೋ” ದಲ್ಲಿ ಪ್ರಾಥಮಿಕ ಉಲ್ಲೇಖ ಬಿಟ್ಟರೆ ಅನಂಗಪಾಲನ ಬಗ್ಗೆ ಬೇರೆ ಉಲ್ಲೇಖಗಳು ದೊರಕಿಲ್ಲ. 736 ನೆ ಇಸವಿಯಲ್ಲಿ “ಲಾಲ್ ಕೋಟ್” ಸಾಮ್ರಾಜ್ಯವನ್ನು ಸ್ಥಾಪಿಸಿದ ಅನಂಗಪಾಲ ತೋಮರನ ಪೂರ್ವಜರು ಅರಾವಳಿ ಪರ್ವತಗಳಲ್ಲಿ ವಾಸವಾಗಿದ್ದರೆನ್ನುವ ವಿಚಾರ ಬಿಟ್ಟರೆ ಈ ರಾಜ ಪರಿವಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅನಂಗಪಾಲ ತೋಮರನು ದೆಹಲಿ ಸುತ್ತ ಮುತ್ತ ರಾಜ್ಯಭಾರ ಮಾಡುತ್ತಿದ್ದ ಮತ್ತು ಹನ್ನೊಂದನೇ ಶತಮಾನದಲ್ಲಿಯೆ ಮೂಲ ಕೆಂಪುಕೋಟೆಯನ್ನು ಕಟ್ಟಿಸಿದ್ದ ಎಂದು ಸಾಕ್ಷ್ಯಗಳು ಹೇಳುತ್ತಿವೆ.

ತಿರುಚಲ್ಪಟ್ಟ ಭಾರತದ ಇತಿಹಾಸದ ಪುಸ್ತಕಗಳ ಪ್ರಕಾರ ಶಹಜಹಾನನು 1639 ರಿಂದ 1648 ಮಧ್ಯದಲ್ಲಿ ಕೆಂಪು ಕೋಟೆಯನ್ನು ಕಟ್ಟಿಸಿದ್ದು. ಆದರೆ ಆಕ್ಸ್ ಫರ್ಡಿನ Bodleian Libraryಯಲ್ಲಿರುವ ಚಿತ್ರದಲ್ಲಿ 1628 ರಲ್ಲೇ ಶಹಜಹಾನನು ಕೆಂಪುಕೋಟೆಯ ದಿವಾನ್-ಎ-ಆಮ್ ನಲ್ಲಿ ಪರ್ಶಿಯಾದ ರಾಜದೂತನನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವಿದೆ. ಅದೇ ವರ್ಷ ಶಹಜಹಾನನು ದಿಲ್ಲಿಯ ಗದ್ದುಗೆ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಿದ್ದು. ಒಂದು ವೇಳೆ ಕೆಂಪು ಕೋಟೆಯನ್ನು 1639 ರಿಂದ 1648 ರ ಮಧ್ಯದಲ್ಲಿ ಕಟ್ಟಿಸಿದ್ದೆಂದಾದರೆ  1628 ರಲ್ಲೆ ಶಹಜಹಾನ ಅಲ್ಲಿದ್ದಿದ್ದು ಹೇಗೆ? ಇದರಲ್ಲೇ ಗೊತ್ತಾಗುತ್ತದೆ ಶಹಜಹಾನ ಗದ್ದುಗೆ ಏರುವ ಮುಂಚೆಯೇ ಕೆಂಪು ಕೋಟೆ ದೆಹಲಿಯಲ್ಲಿತ್ತು.

ಇನ್ನು ಕೆಂಪು ಕೋಟೆಯ ವಾಸ್ತುಕಲೆ ಅದ್ದೊಂದು ಹಿಂದೂ ಸ್ಮಾರಕವೆನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಕೋಟೆಯಲ್ಲಿರುವ “ಖಾಸ್ ಮಹಲ್” ನ ದ್ವಾರದಲ್ಲಿ ತೋಮರ ವಂಶದ ರಾಜ ಲಾಂಛನವಿದೆ. ಹಿಂದೂಗಳ ಕಲಶದ ಮೇಲೆ ಎರಡು ಖಡ್ಗಗಳನ್ನು ತಲೆಕೆಳಗಾಗಿ ಇಡಲಾಗಿದೆ. ಇದರ ಮಧ್ಯೆ ಕಮಲದ ಮೊಗ್ಗಿನ ನಡುವಿನಲ್ಲಿ ನ್ಯಾಯದ ತಕ್ಕಡಿಯಿದೆ. ಅಕ್ಕ ಪಕ್ಕದಲ್ಲಿ ಎರಡು ಶಂಖಾಕೃತಿಗಳಿವೆ. ಕಲಶ, ಶಂಖ, ಖಡ್ಗ, ಕಮಲಕ್ಕೆ ಇಸ್ಲಾಮಿನಲ್ಲೇನು ಕೆಲಸ? ಇವೆಲ್ಲವೂ ಹಿಂದೂ ಚಿನ್ಹೆಗಳು. ಮಹಲಿನ ದ್ವಾರದ ಕಮಾನಿನಲ್ಲಿ ಪ್ರಜ್ವಲಿಸುತ್ತಿರುವ ಮಧ್ಯಾಹ್ನದ ಸೂರ್ಯನ ಚಿತ್ರವಿದೆ. ಅನಂಗಪಾಲ ಸೂರ್ಯವಂಶಿ ರಾಜನಾಗಿದ್ದ ಎನ್ನುವುದನ್ನು ಇದು ಪುಷ್ಟೀಕರಿಸುತ್ತದೆ. ಇದೇ ಕಮಾನಿನಲ್ಲಿ “ಓಮ್” ಎಂಬ ಹಿಂದೂ ಮಂತ್ರಾಕ್ಷರವನ್ನೂ ಕೆತ್ತಲಾಗಿದೆ. ಈಗ ಇದರ ಮಧ್ಯದಲ್ಲಿ ಉರ್ದು ಭಾಷೆಯಲ್ಲಿ ಬರೆದಂತಹ ಶಿಲಾ ಲೇಖಗಳನ್ನು ತುರುಕಲಾಗಿದೆ.

ಕೆಂಪು ಕೋಟೆಯ ದೆಹಲಿಯ ಪ್ರವೇಶ ದ್ವಾರದಲ್ಲಿ ವಿಶಾಲ ಕಾಯ ಆನೆಗಳ ಭವ್ಯ ಮೂರ್ತಿ ಇದೊಂದು ಹಿಂದೂ ಸ್ಮಾರಕವೆಂದು ಹೇಳುತ್ತದೆ. ಮಹಲಿನ ದ್ವಾರಗಳಲ್ಲೂ ಅನೆಯ ಕೈ ಹಿಡಿಕೆ ಇದೆ. ಹಿಂದೂ ಮಂದಿರ ಮತ್ತು ಹಿಂದೂಗಳ ಸ್ಮಾರಕಗಳಲ್ಲಿ ಮಾತ್ರ ಆನೆಯ ಮೂರ್ತಿ ಮತ್ತು ಕೈ ಹಿಡಿಕೆಗಳು ಕಾಣಸಿಗುತ್ತವೆ ಹೊರತು ಇಸ್ಲಾಂ ಅನುಸಾರ ಮಾಡಿದ ಸ್ಮಾರಕಗಳಲ್ಲ. ಆನೆ ಬಲಾಢ್ಯತೆಯ ಪ್ರತೀಕ, ಶಕ್ತಿಯ ಪ್ರತೀಕ ಆದ್ದರಿಂದ ಸನಾತನ ಪರಂಪರೆಯಲ್ಲಿ ಆನೆಗೆ ಬಹು ಪ್ರಾಮುಖ್ಯತೆ ಇದೆ.

“ಮೋತಿ ಮಸ್ಜಿದ್” ಪ್ರವೇಶ ದ್ವಾರ ನೋಡಿದ ಕೂಡಲೆ ಅಲ್ಲಿಯ ವಾಸ್ತು ಶಿಲ್ಪದಿಂದ ಇದೊಂದು ಹಿಂದೂ ಮಂದಿರವೆಂದು ಥಟ್ಟನೆ ಹೊಳೆಯುತ್ತದೆ. ದ್ವಾರದ ಗುಂಬದಿನ ಕವಚದಲ್ಲಿ ಭಗವಂತನಿಗೆ ಅರ್ಪಿಸುವ ಹೂವು- ಹಣ್ಣುಗಳ ಚಿತ್ರವನ್ನು ಮಾಡಲಾಗಿದೆ. ಇಸ್ಲಾಮಿನಲ್ಲಿ ಮಸೀದಿಯ ಒಳಗಡೆ ಫಲ ಪುಷ್ಪಗಳನ್ನು ಕೊಂಡು ಹೋಗಲು ಅನುಮತಿಯಿಲ್ಲ. ಕೇವಲ ಹಿಂದೂ ಮಂದಿರಗಳಲ್ಲಿ ಮಾತ್ರ ಭಗವಂತನಿಗೆ ಫಲ ಪುಷ್ಪಗಳನ್ನು ಅರ್ಪಿಸುವ ಪರಿ ಪಾಠ ಇದೆ. ಅಂದರೆ ಮೂಲತ ಇಲ್ಲಿ ಒಂದು ಮಂದಿರವಿತ್ತು ಮತ್ತು ಅದನ್ನು ಒಡೆದು ಮಸೀದಿಯನ್ನಾಗಿ ಪರಿವರ್ತಿಸಲಾಯಿತೆಂದಾಯ್ತು. ಮಹಲುಗಳಿಗೆ ಮುತ್ತು-ರತ್ನಗಳ ಹೆಸರಿಡುವುದು ಕೂಡಾ ಹಿಂದೂ ಸಂಸ್ಕೃತಿಯ ಅಂಗವೆ.

ಕೆಂಪು ಕೋಟೆ ಹಿಂದೂ ಸ್ಮಾರಕವೆನ್ನುವುದಕ್ಕೆ ನಿಚ್ಚಳ ಸಾಕ್ಷ್ಯ “ರಂಗ ಮಹಲ್” ನಿಂದ ದೊರೆಯುತ್ತದೆ. ಇದು ಕೂಡಾ ಹಿಂದೂ ಹೆಸರೆ. ರಂಗ ಮಹಲಿನ ಗೋಡೆಯಲ್ಲಿ ಹಿಂದೂ ವಾಸ್ತುಕಲೆಯನ್ನು ಕಾಣಬಹುದು. ಮಹಲಿನ ಮಂಟಪದಲ್ಲಿ ದೇವರ ಉತ್ಸವ ಮೂರ್ತಿಗಳ ಮೇಲೆ ಇರುವಂತಹ ಚಿಕ್ಕ ಛತ್ರಿ ಇದೆ. ಈ ತರಹದ ಛತ್ರಿಗಳನ್ನು ಈಗಲೂ ದೇವರ ಉತ್ಸವ ಮೂರ್ತಿಗಳ ಮೇಲೆ ನಾವು ಕಾಣಬಹುದು. ಶಹಜಹಾನ್ ಕೆಂಪು ಕೋಟೆಯನ್ನು ಕಟ್ಟಿಸಿದ್ದಾದರೆ, ದೇವಸ್ಥಾನಗಳಲ್ಲಿ ಇರುವಂತಹ ಛತ್ರಿಗಳ ಚಿತ್ರವನ್ನು ಏಕೆ ಬರೆಸಿದನು?

ಇನ್ನೊಂದು ಆಶ್ಚರ್ಯಕರ ವಿಚಾರವೆಂದರೆ ಖಾಸ್ ಮಹಲ್ ಮತ್ತು ರಂಗ ಮಹಲಿನಲ್ಲಿಅಮೃತಶಿಲೆಯಲ್ಲಿ ಕೆತ್ತಲಾದ ಛಿದ್ರವಿರುವ ಜಾಲಿಗಳ ಉಲ್ಲೇಖ ರಾಮಯಣದಲ್ಲೂ ಇದೆಯಂತೆ! ಹಾಗಾದರೆ ಶಹಜಹಾನ ರಾಮಾಯಣ ಓದಿ ಈ ಮಹಲುಗಳನ್ನು ಕಟ್ಟಿಸಿದ್ದನೆ?  ವಾಸ್ತವದಲ್ಲಿ ಶಹಜಹಾನ್ ಕೆಂಪು ಕೋಟೆಯನ್ನು ಕಟ್ಟಿಸಿದ್ದು, ತಾಜ ಮಹಲ್ ಕಟ್ಟಿಸಿದ್ದು ಎಲ್ಲ ಲೊಳಲೊಟ್ಟೆ. ಮತಾಂಧರು ಹಿಂದೂ ಮಂದಿರಗಳನ್ನು ಕೆಡವಿ ಅಲ್ಲಿ ಮಸೀದಿ-ಸಮಾಧಿ ಕಟ್ಟಿಸಿದ್ದು ಸೂರ್ಯನಷ್ಟೇ ಸತ್ಯ. ಕೆಂಪು ಕೋಟೆಯನ್ನು ಶಹಜಾನನಲ್ಲ, ಬದಲಿಗೆ ಅನಂಗಪಾಲನು ಕಟ್ಟಿಸಿದ್ದು. ಹಿಂದೂ ಸ್ಮಾರಕಗಳ ಮೇಲೆ ಇಸ್ಲಾಮಿನ ಸ್ಮಾರಕಗಳನ್ನು ಕಟ್ಟಿ ಅದು ತನ್ನದೆಂದು ಪ್ರತಿಪಾದಿಸುವುದು ಮತಾಂಧರು. ಭಾರತದ ಪ್ರತಿ ಮಸೀದಿಯ ಕೆಳಗೆ ಒಂದು ಮಂದಿರ ಇದ್ದೇ ಇರುತ್ತದೆ ಬೇಕಾದರೆ ಪ್ರಮಾಣಿಸಿ ನೋಡಿ.

-ಶಾರ್ವರಿ

Tags

Related Articles

Close