ಅಂಕಣ

ವೀರ ಸಾವರ್ಕರ್‍ರನ್ನು ವಿರೋಧಿಸುವವರು ಒಮ್ಮೆ ಅವರಿದ್ದ ಅಂಡಮಾನ್ ಜೈಲಿನ ಬಗ್ಗೆ ತಿಳಿದರೆ…

ಸುಮಾರು ಆರು ಗಂಟೆಗಳ ಕಾಲ ಸೂರ್ಯನ ಭಯಂಕರವಾದ ಬಿಸಿಲಿನ ಬೆಗೆಯ ನಡುವಿನಲ್ಲಿ ತೆಂಗಿನಕಾಯಿಯ ಹೊಟ್ಟು ಕೀಳುವ ಕೆಲಸಗಳ ನಂತರ ಸುಶೀಲ್ ದಾಸ್‍ಗುಪ್ತಾ ಅವರ ಕೈಗಳು ತನ್ನದೇ ಆದ ರಕ್ತದ ಮಡುವಿನಲ್ಲಿ ತುಂಬಿಹೋಗಿದ್ದವು; ಅವರ ದೇಹವು ದಣಿದಿದ್ದಲ್ಲದೇ ನಿಶಕ್ತಿಯಿಂದ ಚಲನೆಯು ನಿಂತುಹೋಗಿತ್ತು!! ಗಂಟಲಿನ ಮೂಳೆ ಕೂಡ ಒಣಗಿಹೋಗಿತ್ತು. ಅದಕ್ಕಾಗಿ ಒಂದು ಕಪ್ ನೀರನ್ನು ಅಲ್ಲಿರುವ ಸಿಬ್ಬಂದಿಗಳ ಬಳಿ ಕೇಳುವುದು ಕಠಿಣವಾಗಿತ್ತು. ಯಾಕೆಂದರೆ ಅಲ್ಲಿರುವ ಸಿಬ್ಬಂದಿಗಳು ನಿಲ್ಲಿಸದೇ ಕೊಡುತ್ತಿದ್ದದ್ದು ಮಾತ್ರ ಚಾವಟಿ ಏಟುಗಳು!! ಇದು ಬಂಗಾಳ ಕೊಲ್ಲಿಯಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿದ್ದ ಕ್ರೂರ ಬ್ರಿಟಿಷ್‍ರ ವಸಾಹತುಗಳ ಸೆಲ್ಯುಲರ್ ಜೈಲಿಗೆ ಕಳುಹಿಸಲಾದ ರಾಜಕೀಯ ಖೈದಿಗಳ ಪರಿಸ್ಥಿತಿ ಇದಾಗಿತ್ತು!!

ಖೈದಿಗಳನ್ನು ಎಷ್ಟೊಂದು ದೌರ್ಜನ್ಯಕ್ಕೆ ಒಳಪಡಿಸುತ್ತಿದ್ದರು ಎಂದರೆ ಅವರಿಗೆ ವಿಶ್ರಾಂತಿಯೇ ಇಲ್ಲದಷ್ಟು ಅವರನ್ನು ಹಿಂಸಿಸಲಾಗುತ್ತಿತ್ತು. ಯಾರಾದರೂ ನಿಧಾನಗತಿಯಲ್ಲಿ ಸಾಗುತ್ತಿದ್ದರೆ ಅಂತವರಿಗೆ ಅತ್ಯಂತ ಕ್ರೂರ ಶಿಕ್ಷೆಯೂ ಅವರಿಗಾಗಿ ಕಾಯುತ್ತಿತ್ತು. ಅಷ್ಟೇ ಅಲ್ಲದೇ ಕೆಲಸ ಮಾಡದೇ ಇದ್ದರೆ ಅವರನ್ನು ಪ್ರತ್ಯೇಕ ಸೆಲ್ ಒಳಗೆ ಇರಿಸಲಾಗುತ್ತಿದ್ದಲ್ಲದೇ, ಅದರಲ್ಲೂ ಶೌಚಾಲಯದಲ್ಲಿ ವಿರಾಮಿಸಲು ಕಟ್ಟುನಿಟ್ಟಾಗಿ ರೆಜಿಮೆಂಟ್ ಮಾಡಲಾಗಿತ್ತು. ಅಧಿಕಾರಿಗಳು ಖೈದಿಗಳಿಗೆ ಅನುಮತಿ ನೀಡುವವರೆಗೂ ಕೂಡ ಗಂಟೆಗಟ್ಟಲೆ ಅಲ್ಲೇ ಕಾಲ ಕಳೆಯಬೇಕಾಗಿತ್ತು!!

ಆ ದ್ವೀಪದಲ್ಲಿದ್ದ ನೂರಾರು ಖೈದಿಗಳಂತೆ ಸುಶೀಲ್ ಅವರ ಜೀವನವು ಚಿತ್ರಹಿಂಸೆ, ಹಸಿವು ಮತ್ತು ಒಂಟಿತನದಿಂದ ತುಂಬಿಹೋಗಿತ್ತು!! ಅವರೆಲ್ಲರೂ ಕೂಡ ಬ್ರಿಟಿಷರ ಗುಲಾಮರಂತೆ ಕೆಲಸ ಮಾಡಬೇಕಾಗಿದ್ದು, ಇದರಿಂದ ಕೆಲವರಿಗೆ ಹುಚ್ಚು ಹಿಡಿದರೆ ಇನ್ನೂ ಕೆಲವರು ಆತ್ಮಹತ್ಯೆಗೆ ಪರಿತಪಿಸುತ್ತಿದ್ದರು!! ಇದು ಭಾರತ ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿದ್ದ ಒಂದು ಕರಾಳ ಅಧ್ಯಾಯನ!!

17 ಆಗಸ್ಟ್ 1932ರ ಸಂದರ್ಭದಲ್ಲಿ ಸುಶೀಲ್ ಅವರನ್ನು ಅಂಡಮಾನ್ ದ್ವೀಪಗಳಲ್ಲಿ ಬಂಧಿಸಲ್ಪಟ್ಟಾಗ ಆಗಿನ್ನೂ ಅವರಿಗೆ 26 ವರ್ಷ ವಯಸ್ಸು!! ಆ ಸಮಯದಲ್ಲಿ ಅನೇಕ ಬಂಗಾಳಿ ತರುಣರಂತೆ ಇವರು ಕೂಡ ಕಲ್ಕತ್ತಾದಲ್ಲಿನ ಜುಗಂತಾರ್ ಪಕ್ಷದ ರಾಜಕೀಯ ಕಾರ್ಯಕರ್ತರ ಗುಂಪಿನ ಸದಸ್ಯರಾಗಿದ್ದರು. ಈ ಗುಂಪಿನ ಮೂಲ ಉದ್ದೇಶವೇ ಬ್ರಿಟಿಷರ ಆಡಳಿತದಿಂದ ಭಾರತ ಸ್ವತಂತ್ರ ಮುಕ್ತರಾಷ್ಟವಾಗಬೇಕು ಎನ್ನುವುದು!! ಹಾಗಾಗಿ ತಮ್ಮ ರಾಜಕೀಯ ಚಟುವಟಿಕೆಗಳಿಗೆ ಹಣವನ್ನು ಸಂಗ್ರಹಿಸಲು ಸುಶೀಲ್ ಹಾಗೂ ಇತರ ನಾಲ್ಕು ಜುಗಂತಾರ್ ಸದಸ್ಯರೊಂದಿಗೆ ಗನ್ ಪಾಯಿಂಟ್.ನಲ್ಲಿನ ಬಸ್ ಅನ್ನು ಲೂಟಿ ಮಾಡಿ ತಪ್ಪಿಸಿಕೊಂಡಾಗ ಪೊಲೀಸರು ಅವರನ್ನು ತಡೆದು ಶೂಟ್-ಜೌಟ್ ನಡೆಸಿದರು. ಆ ಸಂದರ್ಭದಲ್ಲಿ ಸುಶೀಲ್ ಅವರನ್ನು ಸೆರೆಹಿಡಿಯಲಾಯಿತು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರೆಂಬ ಕಾರಣದಿಂದಾಗಿ ಇವರನ್ನು ಗಡಿಪಾರು ಮಾಡಿ, 800 ಮೈಲುಗಳಷ್ಟು ದೂರಕ್ಕೆ ಕಳುಹಿಸಬೇಕೆನ್ನುವುದು ಅವರ ಶಿಕ್ಷೆಯಾಗಿತ್ತು!! ಹಾಗಾಗಿ ವಿದೇಶಿ ರಾಜಕೀಯ ಕಾರ್ಯಕರ್ತರನ್ನು ಒಳಗೊಂಡಿರುವ ಅಂಡಮಾನ್ ದ್ವೀಪದ ರಾಜಧಾನಿಯಾದ ಪೋರ್ಟ್ ಬ್ಲೇರ್ ನಲ್ಲಿರುವ ಸೆಲ್ಯುಲರ್ ಜೈಲಿಗೆ ಕಳುಹಿಸಲಾಯಿತು.

ಈ ಹಂತದಲ್ಲಿ ಜೈಲಿನಲ್ಲಿರುವ ಖೈದಿಗಳಿಗೆ ಯಾವ ಶಿಕ್ಷೆ ವಿಧಿಸಲಾಗುತ್ತದೆ ಎನ್ನುವ ಭಯಾನಕ ಕಥೆಗಳು ಭಾರತದಾದ್ಯಂತ ಹಬ್ಬಿತ್ತು!! ಹಿಂದಿಯಲ್ಲಿ ಜೈಲನ್ನು “ಕಾಲಾಪಾಣಿ” ಎಂದು ಕರೆಯಲಾಗುತ್ತಿತ್ತು, ಅಕ್ಷರಶಃ ಇದನ್ನು ‘ಕಪ್ಪು ನೀರು’ ಎಂದು ಭಾಷಾಂತರಿಸಲಾಗಿದ್ದು, ಸಮುದ್ರದ ಆಳದ ನೀರಿನಲ್ಲಿನ ಮತ್ತು ದೂರದಲ್ಲಿರುವ ಅಜ್ಞಾತವಾಸದ ಮನೆ ಇದಾಗಿತ್ತು!! ಈ ಜೈಲಿನ ಸುತ್ತಲಿರುವ ಸಮುದ್ರದ ನೀರು ಬಹಳ ಆಳವಾಗಿದ್ದು ಕಪ್ಪು ಬಣ್ಣದ್ದಾಗಿ ಕಾಣುತ್ತದೆ. ಹಾಗಾಗಿ ಕಾಲಾಪಾನಿ ಎಂದು ಹೆಸರು ಬಂದಿರಬಹುದು. ಜೊತೆಯಲ್ಲಿ ಇಲ್ಲಿನ ಚಿತ್ರ ವಿಚಿತ್ರ ಅಮಾನವೀಯ ಶಿಕ್ಷೆಯನ್ನು ಅನುಭವಿಸಿದವರು ಕೊಟ್ಟ ಹೆಸರೂ ಇದಾಗಿರಬಹುದು. ಅಷ್ಟೇ ಅಲ್ಲದೇ ಇಲ್ಲಿ ನೀಡುತ್ತಿರುವ ನರಕ ಸದೃಶ ಶಿಕ್ಷೆ ಹೊರಜಗತ್ತಿಗೆ ಗೊತ್ತಾಗುತ್ತಲೇ ಇರಲಿಲ್ಲ. ಅದೂ ಒಂದು ಕಾರಣದಿಂದ ಕಾಲಾಪಾನೀ ಎಂಬ ಹೆಸರು ಬಂದಿರಬಹುದು.

1911-1921ರ ನಡುವೆ ಈ ಜೈಲಿನಲ್ಲಿ ಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ್ ದಾಮೋದರ್ ಸಾವರ್ಕರ್ ಅವರನ್ನು ಬಂಧಿಸಿತ್ತು. ಇಂಗ್ಲೆಂಡ್ ನಲ್ಲಿ ಅಧ್ಯಯನ ನಡೆಸುವ ವೇಳೆ ಸಾರ್ವಕರ್ ಇಂಡಿಯಾ ಹೌಸ್ ಎಂಬ ಭಾರತೀಯ ರಾಷ್ಟ್ರೀಯತಾವಾದಿ ಗುಂಪಿನಲ್ಲಿ ಭಾಗಿಯಾಗಿದ್ದರಲ್ಲದೇ ಅದನ್ನು ಮುನ್ನಡೆಸಿಕೊಂಡಿದ್ದರು. ಹಾಗಾಗಿ ಈ ಗುಂಪಿನಲ್ಲಿ ಸಂಪರ್ಕ ಹೊಂದಿರುವ ಕಾರಣಕ್ಕಾಗಿ 1910ರಲ್ಲಿ ಬಂಧಿಸಲ್ಪಟ್ಟರು!! ಆದರೆ ವರ್ಷಗಳು ಕಳೆಯುವ ಮುನ್ನವೇ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಾಗಿ ತದನಂತರ ಅವರನ್ನು ಪೋರ್ಟ್ ಬ್ಲೆರ್ ಗೆ ಸಾಗಿಸಲಾಯಿತು!!

ತನ್ನ ಬಿಡುಗಡೆಯ ನಂತರ, ಅವರು ಎದುರಿಸಿದ ಅಸಹನೀಯ ಪರಿಸ್ಥಿತಿಗಳ ಬಗ್ಗೆ, ವಿಶೇಷವಾಗಿ ಕ್ರೂರ ಐರಿಶ್ ಜೈಲರ್ ಡೇವಿಡ್ ಬ್ಯಾರಿಯ ಬಗ್ಗೆ, ಸ್ವಯಂ ಘೋಷಿತ “ಗಾಡ್ ಆಫ್ ಪೋರ್ಟ್ ಬೇರ್” ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಈ ಜೈಲಿಗೆ ಪ್ರವೇಶಿಸುವುದು “ಸಾವಿನ ದವಡೆಗೆ ಪ್ರವೇಶಿಸಿದಂತೆ” ಎನ್ನುವುದನ್ನು ಉಲ್ಲೇಖಿಸಿದ್ದಾರೆ!!.​Savarkar wrote that as the gates of the prison shut behind him he felt he had “entered the jaws of death”. He continued: “I heard a whisper going round among the warders that Mr Barrie was coming. They seemed to have seen none more cruel and hard-hearted than he, and they watched my face to see what impression that name had made upon me.”
cellular-jail-1.jpg

ಸಣ್ಣ ಪುಟ್ಟ ಕಾರಣಗಳಿಗೂ ಕೂಡ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಧಿಸುತ್ತಿತ್ತು. ಅಷ್ಟೇ ಅಲ್ಲದೇ, ಅಪರಾಧಿಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತಲ್ಲದೇ, ಅವರು ಕೊಟ್ಟ ಆಹಾರಗಳನ್ನು ತಿನ್ನಲೇಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಕಠಿಣ ಶಿಕ್ಷೆ!!! ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು. ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಎಣ್ಣೆಯ ಗಾಣಕ್ಕೆ ಖೈದಿಯನ್ನು ಕಟ್ಟಿ, ಪ್ರತಿದಿನ 30 ಪೌಂಡ್ ಎಣ್ಣೆ ತೆಗೆಯಬೇಕೆಂಬ ನಿರ್ಬಂಧ. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು. ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಆದರೆ ಬ್ಯಾರಿ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಮಾತ್ರ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಅಷ್ಟೇ ಅಲ್ಲದೇ,ಟೆನ್ನಿಸ್ ಕೋರ್ಟ್, ಬೇಕರಿ, ಈಜುಕೊಳ ಮತ್ತು ಕ್ಲಬ್ ಹೌಸ್ ಗಳನ್ನು ಅಧಿಕಾರಿಗಳು ಹೊಂದಿದ್ದರು.

ಈ ಸೆರೆಮನೆಯನ್ನು 1896 ರಲ್ಲಿ ಕಟ್ಟಲು ಆರಂಭಿಸಿದ್ದು, ಅದು ಪೂರ್ಣಗೊಂಡಿದ್ದು 1906 ರಲ್ಲಿ!! ಇದರ ಮೂಲ ಕಟ್ಟಡವು ಕಡುಗೆಂಪಿನ-ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತಲ್ಲದೇ, ಸದ್ಯ ಇದನ್ನು ಮಯನ್ಮಾರ್ ಎನ್ನಲಾಗುತ್ತದೆ. ಈ ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿದ್ದು, ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ. ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಮೊನೆಗಳಂತೆ ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು, ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಇದು ಅನುಕೂಲವಾಗುತ್ತಿತ್ತು.

ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಕೋಶದಂತಹ ಗೂಡುಗಳಿದ್ದವೇ ವಿನಹ ಮಲಗುವ ಅಥವಾ ವಿಶ್ರಾಂತಿಯ ಪಡಶಾಲೆಗಳಿರಲಿಲ್ಲ. ಪ್ರತಿ ಕೋಶದಲ್ಲೂ 4.5 ಮೀಟರ್ * 2.7 ಮೀಟರ್ಸ್ ಅಥವಾ 15*8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ-ಬೆಳಕಿಗೊಂದು ಕಿಂಡಿಯಿತ್ತು. ಈ “ಸೆಲ್ಯುಲರ್ ಜೈಲ್”ಅನ್ನುವ ಶಬ್ದವು ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ-ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಕೋಶದ ಮಾದರಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಈ ಸೆರೆಮನೆಗೆ ಕಳುಹಿಸಲಾಗುತ್ತಿದ್ದ ಖೈದಿಗಳಿಗೆ ಅತಿ ಕೆಟ್ಟ ರೀತಿಯಲ್ಲಿ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಆದರೆ ಈ ಪ್ರದೇಶವನ್ನು ಭಾರತದ ಪ್ರಮುಖ ಭಾಗವೆಂದು ಯಾವತ್ತು ಯಾರು ಕೂಡ ಪರಿಗಣಿಸಿರಲಿಲ್ಲ, ಬದಲಾಗಿ ಇದನ್ನು ವಿದೇಶವೆಂದೇ ಭಾವಿಸಲಾಗಿತ್ತು!! ಅಷ್ಟೇ ಅಲ್ಲದೇ, ಇದನ್ನು ರಾಜಕೀಯ ಖೈದಿಗಳ ಕುಖ್ಯಾತ ದ್ವೀಪ ಎಂದೂ ಭಾವಿಸಲಾಗಿತ್ತು!!

“ಕಪ್ಪು ನೀರನ್ನು ದಾಟಿದ ನಂತರ ಸುಶೀಲ್ ಅವರನ್ನು ಸೇರಿ ಅಲ್ಲಿರುವ ಪುರುಷರನ್ನು, ಬ್ರಿಟಿಷರು ದಿನನಿತ್ಯ ದಮನ ಮಾಡುತ್ತಿದ್ದರಲ್ಲದೇ, ಸಂಪೂರ್ಣವಾಗಿ ಅವರನ್ನು ನಿಶಕ್ತಿಗೊಳಿಸುತ್ತಿದ್ದರು. ಬೆಳಗ್ಗೆ ಶಿಕ್ಷೆ ನೀಡುವ ಕೋಟಾವನ್ನು ನಿಯೋಜಿಸಿ ಅದರ ಫಲಿತಾಂಶವನ್ನು ದಿನದ ಅಂತ್ಯದಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಒಂದು ವೇಳೆ ಇದರಿಂದ ವಿಫಲರಾದರೆ ನಿಶ್ಚಿತವಾಗಿ ಸುಶೀಲ್ ಅವರಿಗೆ ನಿಡುತ್ತಿದ್ದ, ತೆಂಗಿನಕಾಯಿ ಹೊಟ್ಟುಗಳನ್ನು ಹೊಡೆಯುವ ಕೆಲಸವನ್ನು ನೀಡಲಾಗುತ್ತಿತ್ತು.

ಸ್ವಾತಂತ್ರ್ಯ ಹೋರಾಟದ ರಾಜಕೀಯ ಖೈದಿಗಳು ಹಾಗೂ ಕ್ರಾಂತಿಕಾರಿಗಳನ್ನು ಅಂಡಮಾನಿಗೆ ಕಳಿಸಲಾಗುತ್ತಿತ್ತು. ಅವರು ಪರಸ್ಪರ ಭೇಟಿಯಾಗದಂತೆ ನೋಡಿಕೊಳ್ಳುವುದು ಜೈಲಿನ ಮುಖ್ಯ ಆದ್ಯತೆ. ಅಲ್ಲಿದ್ದವರಲ್ಲಿ ಡಾ. ದಿವಾನ್ ಸಿಂಗ್ ಕಾಲೇಪಾನಿ, ಮೌಲಾನಾ ಫಜಲ್ ಇ ಹಕ್, ಯೋಗೇಂದ್ರ ಶುಕ್ಲಾ, ಬಟುಕೇಶ್ವರ್ ದತ್ತ, ವಿ.ಡಿ.ಸಾವರ್ಕರ್, ಜಿ.ಡಿ.ಸಾವರ್ಕರ್, ವಾಮನ್ ರಾವ್ ಜೋಶಿ, ಬರೀಂದ್ರ ಕುಮಾರ್ ಘೋಷ್, ಉಪೇಂದ್ರನಾಥ್ ಬ್ಯಾನರ್ಜಿ ಮೊದಲಾದವರು ಸೇರಿದ್ದಾರೆ.

ಜೈಲಿನಲ್ಲಿ ರಾಜಕೀಯ ಖೈದಿಗಳಿಗೆ ಕಠಿಣ ಶ್ರಮದ ಕೆಲಸ ಕೊಡಲಾಗುತ್ತಿತ್ತು. ಕೊಬ್ಬರಿಎಣ್ಣೆ ಗಾಣ, ನಾರು-ಹಗ್ಗ ತಯಾರಿ, ಕಾಡು ಕಡಿಯುವುದು, ನೇಯುವುದು, ಗುಡ್ಡ ಸವರುವುದು, ಗುಂಡಿ ಮುಚ್ಚುವುದು, ರಬ್ಬರ್ ಇಳಿಸುವುದು, ಇಟ್ಟಿಗೆ ತಯಾರಿಸುವುದು ಹೀಗೇ ಬಿರುಬಿಸಿಲಿನಲ್ಲಿ ಅವರು ಬೆವರು ಸುರಿಸಬೇಕಿತ್ತು. ಸುಖದ ಬದುಕನ್ನು ತ್ಯಜಿಸಿ ದೇಶಭಕ್ತಿಯಿಂದ ಪ್ರೇರಿತರಾಗಿ ಶಾಲಾಕಾಲೇಜು, ಮನೆಮಠ ತೊರೆದ ತರುಣರು ಕ್ರಿಮಿನಲ್‍ಗಳೆಂಬ ಅವಹೇಳನಕ್ಕೊಳಗಾಗಬೇಕಿತ್ತು. ರಾತ್ರಿಯೆಂದರೆ ಜೈಲುವಾಸಿಗಳಿಗೆ ನಡುಕ. ಸಂಜೆ 4-5ಕ್ಕೆಲ್ಲ ಕೋಣೆಯಲ್ಲಿ ಕೂಡಿ ಬಾಗಿಲು ಹಾಕಿದರೆ ಮರುದಿನ ಬೆಳಿಗ್ಗೆ ಆರರ ನಂತರವೇ ಬಾಗಿಲು ತೆರೆಯುವುದು. ಒಂದು ಬಾರಿ ಮೂತ್ರ ತುಂಬಲೂ ಸಾಲದಷ್ಟು ಪುಟ್ಟ ಕುಡಿಕೆ ಖೈದಿಯ ಇರುಳ ಶೌಚಾಲಯ. ಮೂತ್ರ ಬಂದೀತೆಂದು ಹೆದರಿ ನೀರು ಕುಡಿಯದೆ, ಮೂತ್ರ ತುಂಬಿ ನಿದ್ದೆ ಮಾಡಲಾಗದೇ, ಮೂತ್ರಬಾಧೆಯ ನಿರಂತರ ಹಿಂಸೆಗೇ ಎಷ್ಟೋ ಜನ ಮಾನಸಿಕ ಸಮತೋಲನ ಕಳೆದುಕೊಂಡರು.

ಮುಂಬೈ, ರತ್ನಗಿರಿ ಹಾಗೂ ಅಂಡಮಾನ್ ಜೈಲುಗಳಲ್ಲಿ ಒಟ್ಟು 27 ವರ್ಷ ಜೈಲುವಾಸ ಅನುಭವಿಸಿದ್ದ ವಿ.ಡಿ.ಸಾವರ್ಕರ್, “ದ ಸ್ಟೋರಿ ಆಫ್ ಮೈ ಟ್ರಾನ್ಸ್‍ಪೆÇೀರ್ಟೇಷನ್ ಫಾರ್ ಲೈಫ್’ ಎಂಬ ಪುಸ್ತಕದಲ್ಲಿ 10 ವರ್ಷಗಳ ಸೆಲ್ಯುಲರ್ ಜೈಲಿನ ಅನುಭವದ ಬಗ್ಗೆ ಬರೆದಿದ್ದು ಹೀಗೆ:

“ದೇಹ ಮತ್ತು ಮನಸ್ಸುಗಳು ಅನುಭವಿಸುತ್ತಿದ್ದ ಯಾತನೆಯನ್ನು ಹೇಗೆ ವಿವರಿಸುವುದು? ಜೈಲಿನ ಬದುಕು, ಕಠಿಣ ಕೆಲಸ, ಕಡಿಮೆ ಊಟ, ಕಡಿಮೆ ಬಟ್ಟೆ, ಹೊಡೆತ ಇವೆಲ್ಲವಕ್ಕಿಂತಲೂ ಮಲಮೂತ್ರ ಬಾಧೆ ತೀರಿಸಿಕೊಳ್ಳುವುದೇ ಕಷ್ಟವಾಗಿತ್ತು. ಅದರ ವ್ಯವಸ್ಥೆಯಾಗುವ ತನಕ ಖೈದಿ ಕಾಯಬೇಕಿತ್ತು. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಹೀಗೆ ದಿನಕ್ಕೆ ಮೂರು ಸಲ ಮಾತ್ರ ಅವಕಾಶವಿತ್ತು. ನಿಯಮಿತ ಸಮಯದ ನಡುವೆ ಹೋಗುವುದು ಕೆಟ್ಟ ನಡತೆಯೆಂದು ಭಾವಿಸಲಾಗುತ್ತಿತ್ತು. ರಾತ್ರಿ ಪುಟ್ಟ ಮಣ್ಣಿನ ಕುಡಿಕೆಯಲ್ಲಿ ಮೂತ್ರಬಾಧೆ ತೀರಿಸಿಕೊಳ್ಳಬೇಕು. ಜೈಲರ್ ಬ್ಯಾರಿ ಕೆಲವೊಮ್ಮೆ ಹೀಗೆನ್ನುತ್ತಿದ್ದ: “ಕೇಳಿ, ಖೈದಿಗಳೇ. ಇಡಿಯ ಜಗತ್ತಿಗೆ ಒಬ್ಬನೆ ದೇವರು. ಅವನು ಮೇಲೆ ಸ್ವರ್ಗದಲ್ಲಿದ್ದಾನೆ. ಆದರೆ ಇಲ್ಲಿ ಪೆÇೀರ್ಟ್‍ಬ್ಲೇರಿನಲ್ಲಿ ಇಬ್ಬರು ದೇವರು. ಆಕಾಶದಲ್ಲಿ ಅವನು, ನೆಲದ ಮೇಲಿನ ದೇವರು ನಾನು. ಆಕಾಶದ ದೇವರು ನೀವು ಸತ್ತ ನಂತರ ಬಹುಮಾನ ಕೊಡಬಹುದು, ಆದರೆ ನೆಲದ ಮೇಲಿನ ದೇವರು ಹಾಗಲ್ಲ, ನಾನು ಬದುಕಿರುವಾಗಲೆ ನಿಮಗೆ ಒಳ್ಳೆಯದು ಮಾಡುತ್ತೇನೆ. ಆದ್ದರಿಂದ ಖೈದಿಗಳಾಗಿ ಸನ್ನಡತೆ ತೋರಿಸಿ. ನನ್ನ ವಿರುದ್ಧ ಯಾವುದೇ ಮೇಲಧಿಕಾರಿಗೆ ನೀವು ದೂರಿತ್ತರೂ ಉಪಯೋಗವಿಲ್ಲ, ನೆನಪಿಡಿ” ಎಂದು.

ಅರವಿಂದ ಘೋಷರ ತಮ್ಮ ಬರೀಂದ್ರ ಕುಮಾರ್ ಘೋಷ್ ತನ್ನ ನೆನಪಿನಲ್ಲಿ ಬರೆದಿದ್ದು ಇದು: “ಮರುದಿನ ಬೆಳಿಗ್ಗೆ ಹೊರಬಂದು ಮುಖ ತೊಳೆದು ಮೊಟ್ಟ ಮೊದಲ ಬಾರಿಗೆ ಅನ್ನದ ಗಂಜಿಯ ದರ್ಶನ ಮಾಡಿದೆವು. ಆದರೆ ಗಂಜಿ ಕೊಟ್ಟಿದ್ದೆಷ್ಟು” ತೆಂಗಿನ ಕರಟವನ್ನು ಬೆತ್ತಕ್ಕೆ ಕಟ್ಟಿ ಮಾಡಿದ ಕಚ್ಚಾ ಸೌಟು ಡಬ್ಬುವಿನಲ್ಲಿ ಒಂದು ಡಬ್ಬು. ಅದಕ್ಕೂ ಉಪ್ಪು ಸಾಲುತ್ತಿರಲಿಲ್ಲ. ಏಕೆಂದರೆ ಇಡೀ ದಿನಕ್ಕೆ ಚಿಟಿಕೆ ಉಪ್ಪು ಕೊಡುತ್ತಿದ್ದರು. ಅದು ಮಧ್ಯಾಹ್ನದ ದಾಲ್‍ಗೂ ಬೇಕಾಗುತ್ತಿತ್ತು. ರುಚಿಯಿದೆಯೋ ಇಲ್ಲವೋ ಉಪ್ಪಿಲ್ಲದ ಗಂಜಿಯನ್ನು ಶ್ರದ್ಧೆಯಿಂದ ತಿನ್ನುತ್ತಿದ್ದೆವು.

ಜೈಲಿನಲ್ಲಿ ನೆಮ್ಮದಿಯಿಂದ ಇರುವಂತೆಯೇ ಇಲ್ಲ. ರುಚಿಯೇ ಇಲ್ಲದ ಆಹಾರವನ್ನು ಅತಿ ಕಡಿಮೆ ಕೊಡುತ್ತಿದ್ದರು. ಬರವಣಿಗೆ ಸಾಮಗ್ರಿ ದೊರೆಯುತ್ತಿರಲಿಲ್ಲ. ವರ್ಷಕ್ಕೊಮ್ಮೆ ಬಂಧುಮಿತ್ರರೊಂದಿಗೆ ಪತ್ರ ವ್ಯವಹಾರ ಮಾಡಬಹುದಿತ್ತು. ಬಂದ ಪತ್ರಗಳನ್ನೂ ಹಂಚುತ್ತಿರಲಿಲ್ಲ. ರಾಜಕೀಯ ಬಳು ಹಾಗೂ ಮೋಪ್ಳಾ ದಂಗೆಯ ಬಂಧಿಗಳು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. 1933ರಲ್ಲಿ ಜೈಲು ಸುಧಾರಣೆಗೆ ಒತ್ತಾಯಿಸಿ 46 ದಿನ ಉಪವಾಸ ಸತ್ಯಾಗ್ರಹ ನಡೆಸಲಾಯಿಂಧಿಗತು. “ಅವರ ಹೆಣ ಸಮುದ್ರದಲ್ಲಿ ತೇಲಿದರೂ ನಾನು ಒಂದಿಂಚೂ ನಿಯಮಗಳನ್ನು ಬದಲಿಸುವವನಲ್ಲ” ಎಂದು ಜೈಲರ್ ಬ್ಯಾರಿ ಹೇಳಿದ್ದ. ಉಪವಾಸ ನಿಲ್ಲಿಸಲು ಬಲವಂತವಾಗಿ ಹಾಲು ಕುಡಿಸಿ ಮಹಾವೀರ್ ಸಿಂಗ್, ಮೋಹಿತ್ ಮೈತ್ರ, ಮೋಹನ್ ಕಿಶೋರ ನಾಮದಾಸ್ ಉಸಿರುಕಟ್ಟಿ ತೀರಿಕೊಂಡರು. ಮೃತದೇಹಗಳನ್ನು ಗುಟ್ಟಾಗಿ ಸಮುದ್ರಕ್ಕೆಸೆಯಲಾಯಿತು.

ಆದರೆ ಸುಶೀಲ್ ಮತ್ತು ಇತರ ಖೈದಿಗಳು ಇವರ ಸಾವಿನ ಬಗ್ಗೆ ಒಂದೆರಡು ದಿನಗಳ ನಂತರ ತಿಳಿಯಿತು. ಅದೇನೆಂದರೆ; “ಇವರ ಮೃತದೇಹವನ್ನು ಚೀಲಗಳಿಗೆ ತುಂಬಿಸಿ ಅದಕ್ಕೆ ಕಲ್ಲನ್ನು ಇಟ್ಟು ಸಮುದ್ರಕ್ಕೆ ಎಸೆಯಲಾಗಿದೆ” ಎಂದು ಸುಶೀಲ್ ಅವರ ಮಗ ಅನುಪ್ ಹೇಳುತ್ತಾರೆ!!

ಈ ಬಗ್ಗೆ ಭಾರತೀಯರಿಗೆ ಸುದ್ದಿ ಹರಡುತ್ತದೆ. ಅಂತೂ ಉಪವಾಸ ಸತ್ಯಾಗ್ರಹ ಕೊನೆಗೊಂಡಾಗ ರಾಜಕೀಯ ಬಂಧಿಗಳು ಪರಸ್ಪರ ಭೇಟಿಯಾಗಲು ಅವಕಾಶ ನೀಡಲಾಯಿತು. ವೃತ್ತಪತ್ರಿಕೆ, ದಿನಪತ್ರಿಕೆ, ಬರೆವ ಸಾಮಗ್ರಿ ನೀಡಲಾಯಿತು. ರಾತ್ರಿ ದೀಪ ಒದಗಿಸಲಾಯಿತು. ಕೇರಂ, ಚೆಸ್, ಕಾರ್ಡ್ಸ್, ಫುಟ್‍ಬಾಲ್, ವಾಲಿಬಾಲ್ ಆಡುವ ಅವಕಾಶ ಒದಗಿಸಿದ್ದಲ್ಲದೆ ಲೈಬ್ರರಿ, ಪಾಠಗಳು ಶುರುವಾದವು. ಹಿಂದಿ ಮತ್ತು ಬಂಗಾಳಿಗಳಲ್ಲಿ ಪತ್ರಿಕೆ ಶುರುವಾದವು. 1935ರಲ್ಲಿ ಅಂಡಮಾನ್ ಬಂದಿಗಳಲ್ಲಿ 39 ಜನ ಸೇರಿ ಕಮ್ಯುನಿಸ್ಟ್ ಕನ್ಸಾಲಿಡೇಷನ್ ರಚಿಸಿಕೊಂಡರು. “ದಿ ಕಾಲ್” ಎಂಬ ಕೈ ಬರಹ ಪತ್ರಿಕೆ ಹೊರತರುತ್ತಿದ್ದ ಆ ಗುಂಪು ಭಾರತೀಯ ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿಕೊಂಡಿತ್ತು. ಈ ಗುಂಪಿನಲ್ಲಿ ಭಗತ್ ಸಿಂಗ್ ಸಹವರ್ತಿಯಾಗಿದ್ದ ಶಿವವರ್ಮ, ಹರೆ ಕೃಷ್ಣ ಕೊನಾರ್, ಅನಂತ್ ಚಕ್ರವರ್ತಿ, ನಳಿನಿ ದಾಸ್ ಮೊದಲಾದವರು ಇದ್ದರು!!
sushil-dasgupta.jpg

ಸುಧಾರಣೆಗಳ ನಂತರ ಅಂಡಮಾನ್ ಜೈಲು ಖೈದಿಗಳ ಸ್ವರ್ಗವಾಗಿದೆ ಎಂದು ಬ್ರಿಟಿಷ್ ಸಚಿವರೊಬ್ಬರು ಹೇಳಿದಾಗ ಆ ಮಾತಿಗೆ 1937ರಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಶುರುವಾಯಿತು. ರಾಜಕೀಯ ಖೈದಿಗಳನ್ನು ವಾಪಸು ಕಳಿಸಬೇಕೆಂದೂ, ಬಿಡುಗಡೆಯ ನಂತರ ಎಲ್ಲ ಖೈದಿಗಳನ್ನು ಅವರವರ ರಾಜ್ಯಗಳಿಗೇ ಕಳಿಸಬೇಕೆಂದೂ, ಖೈದಿಗಳಿಗೆ ನಾಗರಿಕ ಸೌಲಭ್ಯ ಕೊಡಬೇಕೆಂದೂ ಬೇಡಿಕೆ ಇಡಲಾಯಿತು. ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರರ ಮಧ್ಯ ಪ್ರವೇಶದಿಂದ 33 ದಿನಗಳ ನಂತರ ಸತ್ಯಾಗ್ರಹ ಕೊನೆಯಾಯಿತು. ಎಲ್ಲ ರಾಜಕೀಯ ಬಂದಿಗಳನ್ನೂ ಅವರವರ ರಾಜ್ಯಗಳಿಗೆ ಕಳಿಸಲಾಯಿತು. ಮತ್ತೆಕೆಲವರಿಗೆ ಕುಟುಂಬದವರನ್ನು ಕರೆಸಿಕೊಳ್ಳುವ ಅವಕಾಶ ನೀಡಲಾಯಿತು.

1938ರ ಜನವರಿ 18ರಂದು ಪಶ್ಚಿಮ ಬಂಗಾಳದ ಸ್ಥಳೀಯ ಜೈಲಿಗೆ ಸುಶೀಲ್ ಮರಳಿದರು. ಅಷ್ಟೇ ಅಲ್ಲದೇ, ನಂತರದ ವರ್ಷ ಸೆಲ್ಯುಲರ್ ಜೈಲಿನಲ್ಲಿದ್ದ ಕೊನೆಯ ಕೆಲವು ಖೈದಿಗಳನ್ನು ರವಾನಿಸಿದರು.

ಇವರು ಬಿಡುಗಡೆಯಾಗುವ ಹೊತ್ತಿಗೆ ಗಾಂಧೀಜಿಯವರ ಅಹಿಂಸಾತ್ಮಕ ಚಳುವಳಿ ಭಾರತದಾದ್ಯಂತ ವ್ಯಾಪಿಸಿತ್ತು. ಹೀಗಾಗಿ ಜುಗಂತರ್ ಪಕ್ಷದಂತಹ ಕ್ರಾಂತಿಕಾರಿ ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ಪತನಗೊಳಿಸಲು ಒಪ್ಪಿಕೊಂಡಿತು. ಅಂತಿಮವಾಗಿ 15 ಆಗಸ್ಟ್ 1947ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾದರೂ ” ಸ್ವಾತಂತ್ರ್ಯದ ಸಮಯದಲ್ಲಿ ಕಲ್ಕತ್ತಾವು ತೀವ್ರ ಕೋಮುಗಲಭೆಗಳಿಗೆ ಒಳಪಟ್ಟಿತ್ತು” ಎಂದು ಅನೂಪ್ ಹೇಳುತ್ತಾರೆ!! ಆದರೆ ಗಾಂಧಿ “ತನ್ನೆಲ್ಲಾ ಅನುಯಾಯಿಗಳಿಗೆ ಸಮಾಧಾನನದಿಂದಿದ್ದು, ಮೆರವಣಿಗೆಗಳನ್ನು ನಡೆಸುವಂತೆ ಸಲಹೆ ನೀಡಿದರು”.

ಆದ್ದರಿಂದ 11 ಸೆಷ್ಟೆಂಬರ್ 1947ರಂದು ಸುಶೀಲ್ ಕುಮಾರ್ ಕಲ್ಕತ್ತಾದ ಪಾರ್ಕ್ ಸರ್ಕಲ್ ನಲ್ಲಿ ಶಾಂತಿಯುತ ಪ್ರದರ್ಶನವನ್ನು ನಡೆಸಿದರು. ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದೊಳಗೆಯೇ ಹಿಂದು ಮತ್ತು ಮುಸ್ಲಿಂ ಗಲಭೆಯಲ್ಲಿ ಸುಮಾರು 4000 ಜನರು ಮೃತಪಟ್ಟರು. 4 ವರ್ಷಗಳ ಕಾಲ ಸ್ವಾತಂತ್ಯವನ್ನು ಅನುಭವಿಸಿದ ಸುಶೀಲ್ ಈ ಸಂದರ್ಭದಲ್ಲಿ ದಾಳಿಗೊಳಗಾದರಲ್ಲದೇ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದರು!! ತನ್ನ ತಂದೆ ಸುಶೀಲ್ ” ಹುತಾತ್ಮತೆಯನ್ನು ಆಲಂಗಿಸಿದಾಗ” ಅನೂಪ್ ಗೆ ಕೇವಲ ಮೂರು ವರ್ಷ ಎಂದು ಹೇಳುತ್ತಾರೆ!! ತನ್ನ ತಂದೆಯ ಶವ ಪೆಟ್ಟಿಗೆಯ ಸುತ್ತಲೂ ಇದ್ದ ಬಿಳಿ ಹೂವುಗಳ ರಾಶಿಯನ್ನು ನೆನಪಿಸಿಕೊಳ್ಳುತ್ತಾ….. ಡಿಕ್ಸನ್ ಲೈನ್ ನಲ್ಲಿರುವ ಅನೇಕ ಜನರು ಇವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಬಂದಿದ್ದರು. ಆ ಪ್ರದೇಶವನ್ನು ಇದೀಗ “ಮಾರ್ಟಿಯರ್ ಸುಶೀಲ್ ದಾಸ್ ಗುಪ್ತ್ ಸ್ಟ್ರೀಟ್” ಎಂದು ಕರೆಯಲಾಗುತ್ತದೆ ಎಂದು ಹೇಳಿದ್ದಾರೆ!!

ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದ ರಾಜಕೀಯ ಗುಂಪಿನ ನಾಯಕರನ್ನು ನೆನಪಿಸಿಕೊಳ್ಳುತ್ತಾ!! ಮುಂದಿನ ವರ್ಷ ನಾಥೂರಾಂ ವಿನಾಯಕ್ ಗೋಡ್ಸೆ ಎಂಬ ಹಿಂದು ರಾಷ್ಟ್ರೀಯತಾವಾದಿ ಗಾಂಧಿಯನ್ನು ಹತ್ಯೆ ಮಾಡಿದರು. ಅವರ ಎದೆಗೆ ಮೂರು ಬಾರಿ ಹಾರಿಸಿದ ಗುಂಡಿನಿಂದ ತಕ್ಷಣವೇ ಗಾಂಧಿಜಿಯವರ ಪ್ರಾಣಪಕ್ಷಿ ಹಾರಿಹೋಗುತ್ತದೆ. ತದನಂತರದಲ್ಲಿ ಭಾರತದ ಮೊದಲ ಪ್ರಧಾನಮಂತ್ರಿಯಾಗಿ, ಗಾಂಧೀಯ ಸ್ನೇಹಿತ ಜವಹರಲಾಲ್ ನೆಹರೂ ನೇತೃತ್ವ ವಹಿಸಿಕೊಂಡರು!! ಆ ಸಂದರ್ಭದಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಸೆರೆವಾಸಕ್ಕೊಳಗಾದ ಹೋರಾಟಗಾರರ ನೋವು ವ್ಯಾಪಕವಾಗಿ ತಿಳಿಯಲೇ ಇಲ್ಲ.

ಆದ್ಯಾಗೂ, ಇಂದು ಜೈಲು “ಭಾರತದಲ್ಲಿನ ಸ್ವಾತಂತ್ರ್ಯ ಚಳುವಳಿಯ ಸಂಕೇತವಾಗಿದೆ” ಎಂದು ಅನೂಪ್ ಹೇಳುತ್ತಾರೆ. ಭಾರತದ ಮೂಲೆಮೂಲೆಯ ತರುಣ ಕ್ರಾಂತಿಕಾರಿಗಳ ಬೆವರು, ನೆತ್ತರು, ಕಣ್ಣೀರು ಹೀರಿದ ಸೆಲ್ಯುಲಾರ್ ಜೈಲು 1979ರಲ್ಲಿ ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲ್ಪಟ್ಟಿತು. ಜೈಲಿನಲ್ಲಿದ್ದವರು ಧರಿಸುತ್ತಿದ್ದ ಗೋಣಿ ಉಡುಪು, ದಿನಕ್ಕೆ ಕನಿಷ್ಟ 30 ಪೌಂಡ್ ಎಣ್ಣೆ ತೆಗೆಯಲು ಕಾಯಿ ಒಡೆದು ರುಬ್ಬಬೇಕಿದ್ದ ಎಣ್ಣೆಗಾಣ, ನೇಣುಮನೆ, ಅಂತ್ಯಸಂಸ್ಕಾರ ವಿಧಿಯ ಪೀಠ, ಹೊಡೆತ ತಿನ್ನುವ ಸ್ಥಳ ಎಲ್ಲವೂ ಮೂಕಸಾಕ್ಷಿಗಳಾಗಿ ಆವರಣದಲ್ಲಿ ನಿಂತಿವೆ. ಪ್ರಸ್ತುತ ಜೈಲಿನಲ್ಲಿ ಪ್ರತಿದಿನ ಸಂಜೆ ನಡೆಯುವ ಸೌಂಡ್ ಅಂಡ್ ಲೈಟ್ ಶೋನಲ್ಲಿ ಜೈಲುವಾಸಿಗಳ ದನಿ ಹಾಗೂ ಜೈಲು ಆವರಣದ ಮರ ಮಾತನಾಡುವಂತೆ ನಿರೂಪಿಸುತ್ತ ನೋಡುಗರ ದೇಶಪ್ರೇಮವನ್ನು ರಿಚಾರ್ಜ್ ಮಾಡಲು ಪ್ರಯತ್ನಿಸಲಾಗುತ್ತಿದೆ.

source: http://www.independent.co.uk/news/long_reads/cellular-jail-india-integral-country-fight-freedom-independence-british-colony-andaman-and-nicobar-a7883691.html

-ಅಲೋಖಾ

Tags

Related Articles

Close