ಅಂಕಣ

ಒಂದಲ್ಲ, ಎರಡಲ್ಲ, ರಾಮ ಮಂದಿರಕ್ಕಾಗಿ ಬರೋಬ್ಬರಿ 490 ವರ್ಷಗಳಿಂದ ಎಷ್ಟು ಕೋಟ್ಯಂತರ ರಾಮಭಕ್ತರು ಪ್ರಾಣ ತ್ಯಾಗ ಮಾಡಿದ್ದಾರೆ ಗೊತ್ತೇ?!

ಯಾವತ್ತು ಮರಳುಗಾಡಿನ ಮತಾಂಧ ಆಕ್ರಮಣಕಾರಿಗಳ ಕೆಟ್ಟ ಕಾಲು ಭಾರತಾಂಬೆಯ ಎದೆ ಮೇಲೆ ಬಿತ್ತೋ ಆವತ್ತೇ ಹಿಂದುತ್ವದ ಪತನವಾಯಿತು. ಮತಾಂಧರು ಓಡೆಯದ ಮಂದಿರಗಳಿಲ್ಲ, ಲೂಟಿ ಮಾಡದ ಮನೆ-ಮಠಗಳಿಲ್ಲ, ಭಾರತಾಂಬೆಯ ಮಡಿಲ ತುಂಬಾ ಅಕೆಯದೇ ಮಕ್ಕಳ ರಕ್ತದೋಕುಳಿ, ಮಾನ ರಕ್ಷಣೆಗಾಗಿ ಹೆಣ್ಣು ಮಕ್ಕಳ ಆಕ್ರಂದನ. ತಾಯಿ ಭಾರತಿಯ ಕಣ್ಣಲ್ಲಿ ರಕ್ತಧಾರೆ ಹರಿಸಿದ ಮತಾಂಧ ಮುಗಲರ ಬರ್ಬರತೆಗೆ ಸಾಕ್ಷಿ ನಮ್ಮದೇ ನೆಲದಲ್ಲಿರುವ ನಮ್ಮ ದೇವ-ದೇವಿಯರ ಮಂದಿರಗಳು.

ಭಾರತದಲ್ಲಿ ಮುಗಲ್ ವಂಶ ಸ್ಥಾಪಿಸಿದವನು ಬಾಬರ್. ಇವನಿಗಿಂತ ಹಿಂದೆ ಬಂದವರು ಭಾರತವನ್ನು ಕೊಳ್ಳೆ ಹೊಡೆದು ತಿರುಗಿ ತಮ್ಮ ದೇಶಕ್ಕೇ ಹೋಗಿ ನೆಲೆ ಸಿದ್ದರು. ಆದರೆ ಬಾಬರ್ ಮಾತ್ರ ಭಾರತದಲ್ಲೇ ನೆಲೆ ನಿಂತು ಬಿಟ್ಟ ನಮ್ಮ ದುರ್ದೈವ. ಕೋಟ್ಯಂತರ ಭಾರತೀಯರ ಆರಾಧ್ಯ ದೈವ ರಾಮನ ಜನ್ಮ ಭೂಮಿಯಲ್ಲಿದ್ದ ಮಂದಿರವನ್ನು ಒಡೆದು ತನ್ನ ಸಮಲೈಂಗಿಕ ಗುಲಾಮನಾದ ಬಬುರಿ/ಬಾಬ್ರಿ ಯ ಹೆಸರಲ್ಲಿ ಮಹಲು ಕಟ್ಟಿಸಿಕೊಂಡ ಪಾಪಿ ಈ ಬಾಬರ್. ಈತನೇ ತನ್ನ ಸೇನಾಪತಿ ಮೀರ್ ಬಾಕಿಯ ಕೈಯಲ್ಲಿ ರಾಮ ಮಂದಿರವನ್ನು ತೋಪಿನಿಂದ ಒಡೆಸಿ ತನ್ನ ಪ್ರಿಯಕರ ಬಾಬ್ರಿಯ ನೆನಪಿಗಾಗಿ ಮಹಲು(ಅಯೋಧ್ಯೆಯಲ್ಲಿರುವುದು ಇಸ್ಲಾಂಗನುಗುಣವಾಗಿ ಕಟ್ಟಿಸಿದ ಮಸೀದಿ ಅಲ್ಲ) ಕಟ್ಟಿಸಿದ್ದು. ರಾಮ ಜನ್ಮ ಭೂಮಿಯಲ್ಲಿ ರಾಮನ ಮಂದಿರವನ್ನೊಡೆದು ಬಾಬ್ರಿ ಮಹಲನ್ನು ಕಟ್ಟಿದ್ದು ಕೋಟ್ಯಂತರ ಹಿಂದೂಗಳ ರಕ್ತದಿಂದ.

ರಾಮ ಜನ್ಮ ಭೂಮಿ ಸಂಘರ್ಷಕ್ಕೆ ಒಂದಲ್ಲ, ಎರಡಲ್ಲ, ಬರೋಬ್ಬರಿ 490 ವರ್ಷಗಳ ಇತಿಹಾಸವಿದೆ. ಕೋಟ್ಯಂತರ ರಾಮ ಭಕ್ತರು ಮಂದಿರ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. 1528 ರಲ್ಲಿ ಬಾಬರನ ಕೆಟ್ಟ ಕಣ್ಣು ಅಯೋಧ್ಯೆಯ ರಾಮ ಮಂದಿರದ ಮೇಲೆ ಬಿದ್ದಾಗಿತ್ತು. ರಾಮ ಮಂದಿರವನ್ನು ಒಡೆಯುವ ಜವಾಬ್ದಾರಿಯನ್ನು ಆತ ತನ್ನ ದಂಡನಾಯಕ ಮೀರ್ ಬಾಕಿಗೆ ನೀಡುತ್ತಾನೆ. ಶ್ಯಾಮಾನಂದಜೀ ಮಹಾರಾಜರ ಸುಪರ್ದಿಯಲ್ಲಿದ್ದ ರಾಮ ಮಂದಿರವನ್ನು ಒಡೆಯುವ ಕೆಟ್ಟ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಶ್ಯಾಮಾನಂದರು ರಾಮನ ಮೂರ್ತಿಯನ್ನು ಸರಯೂ ನದಿಯಲ್ಲಿ ಮುಳುಗಿಸಿ ತಾನೂ ಜಲ ಸಮಾಧಿಯಾದರು.

ಇತ್ತ ಭೀತಿಯ ರಾಜರಾದ ಮಹತಾಬ್ ಸಿಂಗರ ಕಿವಿಗೆ ರಾಮ ಮಂದಿರ ಒಡೆಯುವ ಸುದ್ದಿ ಬಿದ್ದ ತಕ್ಷಣ ತನ್ನ ಒಂದು ಲಕ್ಷಕ್ಕೂ ಮಿಕ್ಕಿದ ಸೇನೆಯೊಂದಿಗೆ ಮುಗಲರ ನಾಲ್ಕು ಲಕ್ಷದ ಸೈನ್ಯವನ್ನೆದುರಿಸಲು ರಣಾಂಗಣಕ್ಕೆ ಧುಮುಕಿ ಬಿಡುತ್ತಾರೆ. ಈ ಹಿಂದೂ ವೀರರು ವೀರಾವೇಶದಿಂದ ಮುಗಲರೊಡನೆ ಹೋರಾಡಿ ಲಕ್ಷದಷ್ಟಿದ್ದ ಅವರ ಸೈನ್ಯವನ್ನು ಸಾವಿರಕ್ಕಿಳಿಸುತ್ತಾರೆ. ದುರಾದೃಷ್ಟವಶಾತ್ ಮಹತಾಬ್ ಸಿಂಗ್ ಯುದ್ದದಲ್ಲಿ ಹುತಾತ್ಮರಾಗುತ್ತಾರೆ. ಆದರೆ ಇವರ ಸೈನ್ಯ ಧೃತಿ ಗೆಡುವುದಿಲ್ಲ.

ಮಹತಾಬ್ ಸಿಂಗರ ಸೈನ್ಯದಲ್ಲಿದ್ದ ಸನೇತುವಿನ ಸೈನಿಕ ದೇವೀ ದೀನ್ ಪಾಂಡೆ ಎಂಬ ಯುವಕ ರಾಮ ಮಂದಿರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲುತ್ತಾನೆ. 70000 ಯುವಕರನ್ನು ಯುದ್ದಕ್ಕೆ ಅಣಿಗೊಳಿಸಿ ಮುಗಲರ ಸೈನ್ಯವನ್ನೆದುರಿಸುತ್ತಾನೆ. ಯುದ್ದ ಭೂಮಿಯಲ್ಲಿ ಸಾಕ್ಷಾತ್ ಮಹಾಕಾಲನ ರೂಪ ಪಡೆದು ಮುಗಲ ಹಂದಿಗಳನ್ನು ತರಿ ತರಿದು ಹಾಕುತ್ತಾನೆ. ಅವನ ವೀರಾವೇಶ ಹೇಗಿತ್ತಂದರೆ ಬರಿ ಒಂದೇ ದಿನದ ಯುದ್ದದಲ್ಲಿ 600 ಮುಗಲ್ ಸೈನಿಕರನ್ನು ತರಿದು ಹಾಕುತ್ತಾನೆ. ಸ್ವತಃ ಬಾಬರನೇ ದೇವೀ ದೀನ್ ಪಾಂಡೆಯ ಪರಾಕ್ರಮದ ಬಗ್ಗೆ ಬರೆಯುತ್ತಾ ರಾಮ ಮಂದಿರ ಒಡೆಯುವ ಕಾರ್ಯದಲ್ಲಿ ಆತ ಬಹು ದೊಡ್ಡ ಬಾಧೆಯಾಗಿದ್ದ ಎನ್ನುತ್ತಾನೆ. ತಲೆ ಒಡೆದು ರಕ್ತ ಸುರಿಯುತ್ತಿದ್ದರೂ ತನ್ನ ಪಗಡಿಯ ಬಟ್ಟೆಯನ್ನು ತಲೆಗೆ ಸುತ್ತಿ ವೀರಾವೇಶದಿಂದ ಹೋರಾಡುವ ಆತನ ರೌದ್ರಾವತಾರ ನೋಡಿ ಮೀರ್ ಬಾಕಿ ಹೆದರಿ ಆನೆಗಳ ಶಿಬಿರದಲ್ಲಿ ಅಡಗಿದ್ದನಂತೆ! ಸನೇತುವಿನಲ್ಲಿ ದೇವಿ ದೀನ್ ಪಾಂಡೆಯ ವಂಶಜರು ಈಗಲೂ ನೆಲೆಸಿದ್ದಾರೆ.

ಐದು ದಿನಗಳ ರಣ ಭೀಕರ ಯುದ್ದದ ಬಳಿಕ ಮೀರ್ ಬಾಕಿಯ ಕುತಂತ್ರದಿಂದಾಗಿ ದೇವಿ ದೀನ್ ಪಾಂಡೆ ಹುತಾತ್ಮನಾಗುತ್ತಾನೆ. ಅಷ್ಟರವರೆಗೆ ಲಕ್ಷಾಂತರ ರಾಮ ಭಕ್ತರು ಮಂದಿರ ರಕ್ಷಣೆಗಾಗಿ ರಕ್ತ ತರ್ಪಣೆ ನೀಡಿಯಾಗಿತ್ತು. ದೇವಿ ದೀನ್ ಪಾಂಡೆಯ ಮರಣಾನಂತರ ಮಂದಿರ ರಕ್ಷಣೆಯ ಕಾರ್ಯವನ್ನು ಮತ್ತೊಬ್ಬ ಹಿಂದೂ ವೀರ ಹನ್ಸವೀರ್ ರಣವಿಜಯ ಸಿಂಗ್ ಹೊತ್ತುಕೊಳ್ಳುತ್ತಾನೆ. ಈತನೂ ಅಷ್ಟೇ ಮುಗಲರ ಸೇನೆಯನ್ನು ತರಕಾರಿ ಕೊಚ್ಚಿದಂತೆ ಕೊಚ್ಚಿ ಹಾಕುತ್ತಾನೆ. ಲಕ್ಷಾಂತರ ಸೈನಿಕರಿರುವ ಮೊಗಲ್ ಸೈನ್ಯದ ಮುಂದೆ ಪುಟ್ಟ ಪುಟ್ಟ ಹಿಂದೂ ಸೇನೆಗಳು ಕಡೆ ಉಸಿರಿರುವರೆಗೂ ಹೋರಾಡುತ್ತವೆ. ಕೇವಲ ತನ್ನ ಆರಾಧ್ಯ ದೈವ ರಾಮನಿಗಾಗಿ. ಹನ್ಸವೀರನೂ ರಾಮನಿಗಾಗಿ ಪ್ರಾಣಾರ್ಪಣೆ ಮಾಡುತ್ತಾನೆ.

ತದನಂತರ ಆತನ ಪತ್ನಿ ಜಯಕುಮಾರಿ ಮತ್ತು ಮಹೇಶ್ವರಾನಂದಜೀ ಗುರುಗಳು ರಾಮ ಮಂದಿರ ರಕ್ಷಣೆಗಾಗಿ ಖಡ್ಗ ಹಿಡಿಯುತ್ತಾರೆ. ಕೇವಲ ಸೈನಿಕರು ಮಾತ್ರವಲ್ಲದೆ ಸಾಧು-ಸಂತ-ಮಹಂತರು, ಅಯೋಧ್ಯೆಯ ನಾಗರಿಕರು ಮಂದಿರ ರಕ್ಷಣೆಗಾಗಿ ಶಸ್ತ್ರ ಹಿಡಿದು ಹೋರಾಡಿದ್ದಾರೆ. ಬಾಬರನ ಮರಣಾನಂತರ ಹುಮಾಯೂನ್ ಕೂಡಾ ತನ್ನ ತಂದೆಯ ಹಾದಿಯಲ್ಲೇ ನಡೆದು ಹಿಂದೂಗಳ ಮಾರಣ ಹೋಮ ಮಾಡುತ್ತಾನೆ. ಆತನ ನಂತರ ಗದ್ದುಗೆ ಏರಿದ ಕಪಟ ಧರ್ಮ ಸಹಿಷ್ಣು ಅಕ್ಬರ ಹಿಂದೂಗಳನ್ನು ಓಲೈಸಲು ಅಯೋಧ್ಯೆಯಲ್ಲೊಂದು ಪುಟ್ಟ ಗುಡಿ ನಿರ್ಮಿಸಿ ಕೊಟ್ಟು ತಾನು ಮಹಾನ್ ಕಾರ್ಯ ಮಾಡಿದವನಂತೆ ನಾಟಕವಾಡುತ್ತಾನೆ. ಆದರೆ ಔರಂಗಜೇಬನೆಂಬ ಮತಾಂಧ ಆ ಮಂದಿರವನ್ನೂ ಪುಡಿ ಪುಡಿಗೈಯುತ್ತಾನೆ. ಇದೇ ಸಮಯದಲ್ಲಿ ರಾಮ ಮಂದಿರ ರಕ್ಷಣೆ ಕಾರ್ಯದಲ್ಲಿ ಸಿಕ್ಖರ ಗುರು ಗೋವಿಂದ ಸಿಂಗರೂ ಭಾಗಿಯಾಗಿ ಮುಗಲ ಮತಾಂಧರನ್ನು ಅಟ್ಟಾಡಿಸಿ ಹೊಡೆದಿರುವ ವಿಚಾರ ಬಹು ಜನರಿಗೆ ಗೊತ್ತೇ ಇಲ್ಲ. ಮುಗಲರ ಪತನದ ನಂತರ ಬಂದ ಬ್ರಿಟಿಷರು, ಬ್ರಿಟಿಷರ ನಂತರ ಗದ್ದುಗೆ ಏರಿದ ಕಾಂಗ್ರೆಸ್ ರಾಮ ಮಂದಿರದ ವಿಷಯದಲ್ಲಿ ರಾಜಕೀಯ ಮಾಡುತ್ತಲೇ ಬಂದು ಹಿಂದೂಗಳ ಬೆನ್ನಿಗೆ ಚೂರಿ ಹಾಕಿದ್ದಾರೆ.

ರಾಮ ಮಂದಿರ ರಕ್ಷಣೆಗಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಾಣ ತೆತ್ತವರ ಸಂಖೆ ಕೋಟಿ ಮೀರಬಹುದೇನೋ? ತನ್ನ ಜೀವಿತ ಕಾಲದಲ್ಲೇ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣವಾಗಬೇಕೆಂದು ಕನಸು ಕಂಡ ರಾಮ ಭಕ್ತರು ಅದೆಷ್ಟಿದ್ದರೋ? ಶತಕೋಟಿ ರಾಮಭಕ್ತರು ಈಗಲೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದ್ದಾರೆ. ಸಾಯುವ ಮುನ್ನ ರಾಮನಿಗೊಂದು ಮಂದಿರ ಕಟ್ಟಲೇ ಬೇಕು ಎಂದು ಪಣ ತೊಟ್ಟವರು ಹಲವರು. ಮಂದಿರ ರಕ್ಷಣೆಗಾಗಿ ನಮ್ಮ ಪೂರ್ವಜರು ತಮ್ಮ ರಕ್ತದ ತರ್ಪಣ ನೀಡಿ ಪ್ರಾಣಾರ್ಪಣೆಗೈದಿದ್ದಾರೆ. ಆ ಹುತಾತ್ಮ ಆತ್ಮಗಳಿಗೆ ಶಾಂತಿ ಸಿಗಬೇಕೆಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು. ರಾಮ ಜನ್ಮ ಭೂಮಿಯಲ್ಲಿ ರಾಮನಿಗೊಂದು ಮಂದಿರ ಬೇಕೇ ಬೇಕು….ಜೈ ಶ್ರೀ ರಾಮ್..

-Sharvari

Tags

Related Articles

Close