ಪ್ರಚಲಿತ

ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಮೋದಿ ಮಾರ್ಗ ದರ್ಶನ ನೀಡಿದ್ದು ಹೇಗೆ ಗೊತ್ತಾ?!

ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ಸಾಕು ಎಲ್ಲರ ಕಿವಿ ನೆಟ್ಟಗಾಗುವುದಂತೂ ಖಂಡಿತ!! ನರೇಂದ್ರ ಮೋದಿ ಕೇವಲ ರಾಜಕಾರಣಿ ಯಷ್ಟೇ ಅಲ್ಲ. ಅವರೊಬ್ಬ ಗುರು, ಮಾರ್ಗದರ್ಶಕ. ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಆಶಾಕಿರಣ. ಅದೆಷ್ಟೋ ಜನರು ಅವರನ್ನೇ ತಮ್ಮ ಬದುಕಿನ ಆದರ್ಶ ವ್ಯಕ್ತಿಯನ್ನಾಗಿ ಆರಾಧಿಸುತ್ತಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನರೇಂದ್ರ ದಾಮೋದರ ದಾಸ್ ಮೋದಿ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಯಾಗಿ ಬೆಳೆದು ನಿಂತಿರುವುದು ಸಾಮಾನ್ಯ ಸಂಗತಿಯಲ್ಲ.!!

ಇಂದು ನರೇಂದ್ರ ಮೋದಿಯವರು ಭಾರತದ ಪ್ರಧಾನಿ. ಪ್ರತಿ ದಿನ 18-19 ಗಂಟೆ ಬ್ಯುಸಿಯಾಗಿರೋ ಮನುಷ್ಯ. ತಾವೂ ಕೂಡ ಎಲ್ಲರ ಹಾಗೆ ಸಾಮಾನ್ಯರಂತೆ ಬದುಕುವ ಹಂಬಲವಿರುವ ಮನುಷ್ಯ ಅವರು. ಪ್ರಧಾನಮಂತ್ರಿ ಯಾದರೂ ತಮ್ಮ ಪುಸ್ತಕ ಬರೆಯುವ ಹವ್ಯಾಸವನ್ನು ಇಂದಿಗೂ ಮೋದಿಯವರು ನಿಲ್ಲಿಸಿಲ್ಲ. ಒಂದು ದಶಕಕ್ಕೂ ಹೆಚ್ಚಿನ ಕಾಲ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇಂಗ್ಲಿಷ್, ಗುಜರಾತಿ, ಹಿಂದಿ ಸೇರಿದಂತೆ ಅನೇಕ ಭಾಷೆಗಳಿಗೆ ಮೋದಿಯವರ ಪುಸ್ತಕಗಳು ತರ್ಜುಮೆ ಗೊಂಡು ಕೋಟ್ಯಾಂತರ ಜನ ಓದಿದ್ದಾರೆ. ಮೋದಿಯವರ ಸ್ಫೂರ್ತಿದಾಯಕ ಭಾಷಣಗಳಿಗೆ, ರಾಜತಾಂತ್ರಿಕ ನಿಲುವಿಗಳಿಗಷ್ಟೇ ಅಭಿಮಾನಿಗಳಿಲ್ಲ. ಅವರ ಬರವಣಿಗೆಗೂ ಓದುಗರಿದ್ದಾರೆ..

 ಲೋಕಾರ್ಪಣೆಯಾಯ್ತು ಮೋದಿಯವರ ಇನ್ನೊಂದು ಪುಸ್ತಕ:

ಮೋದಿಯವರು ಕಳೆದ ವರ್ಷವೇ ನಾನೊಂದು ಪುಸ್ತಕ ಬರೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಆ ಪುಸ್ತಕ ಬಿಡುಗಡೆಯಾಗುತ್ತಿದೆ. ದೇಶದ ವಿದ್ಯಾರ್ಥಿಗಳಿಗಾಗಿ ಈ ಬಾರಿ ಪುಸ್ತಕ ಬರಿದಿದ್ದಾರೆ ಮೋದಿಯವರು. `ಎಕ್ಸಾಮ್ ವಾರಿಯರ್ಸ್’ ಎಂದು ಆ ಬಹುನಿರೀಕ್ಷಿತ ಪುಸ್ತಕಕ್ಕೆ ಹೆಸರಿಟ್ಟಿದ್ದಾರೆ.

ರಾಷ್ಟ್ರದ ವಿದ್ಯಾರ್ಥಿಗಳು ಪರೀಕ್ಷೆ ಯನ್ನ ಹೇಗೆ ಎದುರಿಸಬೇಕು, ತಯಾರಿಗಳು ಹೇಗಿರಬೇಕು, ಆತ್ಮ ವಿಶ್ವಾಸ ವನ್ನ ವೃದ್ಧಿಗೊಳಿಸಿಕೊಳ್ಳುವುದು, ಪರೀಕ್ಷಾ ಆತಂಕ ನಿವಾರಿಸಿಕೊಳ್ಳುವುದು ಹೇಗೆ ಎಂಬ ಹತ್ತು ಹಲವು ಸ್ಫೂರ್ತಿದಾಯಕ ವಿಷಯಗಳ ಕುರಿತು ಪ್ರಧಾನಮಂತ್ರಿ ಯವರು ಬರೆದಿದ್ದಾರೆ. ಆಗಾಗ್ಗೆ ಮಕ್ಕಳೊಂದಿಗೆ ವಿಶೇಷ ಸಂವಾದಗಳನ್ನ ಮೋದಿಯವರು ಮಾಡುತ್ತಿರುತ್ತಾರೆ. ಮಕ್ಕಳಿಗೂ ಮೋದಿಯವರೆಂದರೆ ಅಚ್ಚುಮೆಚ್ಚು. ಹಾಗಾಗಿ ಪುಸ್ತಕ ಮತ್ತಷ್ಟು ವೈಶಿಷ್ಟ್ಯ ಪೂರ್ಣವಾಗಿ ಬಂದಿರುವುದರಲ್ಲಿ ಅನುಮಾನವಿಲ್ಲ..

ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ, ಮಕ್ಕಳಲ್ಲಿ ಪರೀಕ್ಷೆ ಭೀತಿಯನ್ನು ಹೋಗಲಾಡಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಎಕ್ಸಾಮ್ ವಾರಿಯರ್ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಸ್ವಂತ ಜೀವನದ ಹಲವು ಉದಾಹರಣೆಗಳನ್ನು ನೀಡುವ ಮೂಲಕ, ಮಕ್ಕಳಲ್ಲಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಇವೆಲ್ಲವೂ ಮನ್ ಕಿ ಬಾತ್‍ನಲ್ಲಿ ಈ ಹಿಂದೆ ಮೋದಿ ಮಕ್ಕಳಿಗೆ ನೀಡಿದ ಸಲಹೆಗಳಾಗಿದ್ದು, ಇದನ್ನೇ ಕೃತಿ ರೂಪದಲ್ಲಿ ಹೊರತರಲಾಗಿದೆ. ಇದರ ಜೊತೆಗೆ, ಶಿಕ್ಷಕರು ಹಾಗೂ ಹೆತ್ತವರಿಗೂ ಹಲವು ಸಲಹೆಗಳನ್ನು ಮೋದಿ ನೀಡಿದ್ದಾರೆ.

ಮೋದಿ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲ ಅಂಶಗಳು:

ನಾಟಕದ ಅನುಭವ:

ನಾನು ಶಾಲೆಗೆ ಹೋಗುತ್ತಿದ್ದಾಗ ನಾಟಕವೊಂದರಲ್ಲಿ ಅಭಿನಯಿಸಬೇಕಿತ್ತು. ನಿರ್ದೇಶಕರಿಗೆ ಬೇಕಾದ ರೀತಿಯಲ್ಲಿ ಸಂಭಾಷಣೆ ಹೇಳಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ನಿರ್ದೇಶಕರು ನನ್ನ ಮೇಲೆ ಸಿಟ್ಟಾಗಿದ್ದರು. ನಾನು ಅದೇ ತಪ್ಪನ್ನು ಪುನಃ ಮಾಡುತ್ತಿದ್ದೆ. ಮರುದಿನ ನನ್ನಂತೆಯೇ ನಟಿಸುವಂತೆ ಹಾಗೂ ನಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂದು ತೋರಿಸುವಂತೆ ಅವರನ್ನು ಕೇಳಿಕೊಂಡೆ. ಅವರು ಹಾಗೆ ಮಾಡಿದಾಗ ನನಗೆ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಯಿತು.

ಪ್ರಧಾನ ಕಾರ್ಯದರ್ಶಿಯಾಗಿದ್ದಾಗಿನ ಅನುಭವ:

ಪರೀಕ್ಷೆಗೆ ತಯಾರಿ ಅತ್ಯಂತ ಮುಖ್ಯ. ಒಂದು ವಿಷಯವನ್ನು ಚರ್ಚಿಸುವುದು ತಯಾರಿಯಲ್ಲಿ ಮಹತ್ವದ್ದಾಗಿರುತ್ತದೆ. ಹಿಂದೊಮ್ಮೆ ನಾನು ಬಿಜೆಪಿಯಲ್ಲಿ ಸಂಘಟನೆಯ ಹೊಣೆ ಹೊತ್ತಿದ್ದೆ. ಆಗ ನಾವು ಕಾರ್ಯಕರ್ತರನ್ನು ವಿವಿಧ ತಂಡಗಳನ್ನಾಗಿ ವಿಂಗಡಿಸಿ, ಚರ್ಚೆ ನಡೆಸುತ್ತಿದ್ದೆವು. ಈ ಪೈಕಿ ಒಂದು ತಂಡ ವಿರೋಧ ಪಕ್ಷದವರ ಪಾತ್ರ ನಿರ್ವಹಿಸುತ್ತಿತ್ತು. ಅವರು ವಿಭಿನ್ನ ದೃಷ್ಟಿಕೋನದಲ್ಲಿ ಸಮಸ್ಯೆಯನ್ನು ನೋಡುತ್ತಿದ್ದರು. ಇದರಿಂದ ನಮ್ಮ ಸಿದ್ಧತೆ ಹೇಗಿದೆ ಎಂಬುದು ತಿಳಿಯುತ್ತದೆ.

2012ರ ಚುನಾವಣೆ ಕಲಿಸಿದ್ದು:

ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಯ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಬಾರದು. ನಿಮ್ಮಂತೆಯೇ ನನಗೆ 2012ರಲ್ಲೂ ಪರೀಕ್ಷೆ ಎದುರಾಗಿತ್ತು. ಮತದಾನದ ಅನಂತರ ನಾನು ಇತರ ಕೆಲಸಗಳಿಗೆ ಸಾಗಿದೆ. ಚುನಾವಣೆ ಮರುದಿನವೇ ನಾನು ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮೇಳನದ ತಯಾರಿ ಹಾಗೂ ನೀರಾವರಿ ಯೋಜನೆಯ ಮರುಪರಿಶೀಲನೆಗೆ ತೆರಳಿದ್ದೆ.

ಪ್ರಕೃತಿಯೊಂದಿಗೆ ಸಮಯ ಕಳೆಯಿರಿ:

ನಾನು ಬಾಲ್ಯದಲ್ಲಿ ಹಳ್ಳಿಯಲ್ಲಿನ ಕೆರೆಯಲ್ಲಿ ಈಜುವ ಮೂಲಕ ಸಮಯ ಕಳೆಯುವ ಅಭ್ಯಾಸ ಹೊಂದಿದ್ದೆ. ಪ್ರಕೃತಿಯೊಂದಿಗೆ ಸಮಯ ಕಳೆದರೆ ಮನಸು ಆಹ್ಲಾದಕರವಾಗಿರುತ್ತದೆ. ಎಂ ಮಾತನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ..

ಚೆನ್ನಾಗಿ ನಿದ್ರೆ ಮಾಡಿ:

ಉತ್ತಮ ನಿದ್ರೆ ಅತ್ಯಂತ ಪ್ರಮುಖ. ಹಲವರು ನನ್ನ ಬಳಿ ಹೇಗೆ ನೀವು ನಿದ್ರೆ ಮತ್ತು ಕೆಲಸವನ್ನು ನಿರ್ವಹಿಸುತ್ತೀರಿ ಎಂದು ಕೇಳುತ್ತಾರೆ. ನಿದ್ರೆ ಆಳವಾಗಿಲ್ಲದಿದ್ದರೆ, ಎಷ್ಟು ಹೊತ್ತು ನಿದ್ರಿಸಿದರೂ ನಿಷ್ಪ್ರಯೋಜಕ. ನಿದ್ರೆಗೆ ಜಾರುವಾಗ ಎಲ್ಲ ಚಿಂತೆಗಳನ್ನೂ ದೂರ ಸರಿಸುತ್ತೇನೆ. ಹೀಗಾಗಿ ನಾನು ನಾಲ್ಕರಿಂದ ಆರು ಗಂಟೆಗಳವರೆಗೆ ನಿದ್ರೆ ಮಾಡಿದರೂ ಆಳವಾಗಿರುತ್ತದೆ. ಮರುದಿನ ಇದು ನನ್ನನ್ನು ಉಲ್ಲಾಸಭರಿತವಾಗಿರಿಸುತ್ತದೆ.

ಇದುವರೆಗೂ ಮೋದಿಯವರು ಬರೆದ ಪುಸ್ತಕಗಳೆಷ್ಟು ಗೊತ್ತಾ..?

ಪ್ರಧಾನಿ ಮೋದಿಯವರು ತಮ್ಮ ಮೇಲೆ ಅತಿದೊಡ್ಡ ಜವಾಬ್ದಾರಿಯಿದ್ದರೂ ಸಹ ಸ್ವಲ್ಪ ಸಮಯ ಬಿಡುವನ್ನ ಮಾಡಿಕೊಂಡು ತಮ್ಮ ಹವ್ಯಾಸವಾದ ಪುಸ್ತಕ ಬರೆಯುವುದನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದುವರೆಗೆ ಒಟ್ಟಾರೆ 15 ಪುಸ್ತಕಗಳನ್ನು ಬರೆದಿದ್ದಾರೆ.

* ಕನ್ವೀನಿಯಂಟ್ ಆಕ್ಷನ್(ಇಂಗ್ಲಿಷ್)
* ದಿ ಯೋಗ ಆಫ್ ಎಜುಕೇಷನ್(ಇಂಗ್ಲಿಷ್)
* ಏಕ್ ದಾಯಕನೋ(ಗುಜರಾತಿ)
* ಸಾಮಾಜಿಕ್ ಸಾಮರಸ್ಥ(ಗುಜರಾತಿ)
* ಶ್ರೀ ಗುರೂಜಿ: ಏಕ್ ಸ್ವಯಂ ಸೇವಕ್(ಗುಜರಾತಿ-ಹಿಂದಿ)
* ಸೇತುಬಂಧ್(ಹಿಂದಿ)
* ಪ್ರೇಮ್ ತೀರ್ಥ್ (ಗುಜಾರಾತಿ)
* ಸಂಘರ್ಷ್ ಮಾ ಗುಜರಾತ್(ಗುಜರಾತಿ)
* ಕೆಲವೆ ತೆ ಕೆಲವಾನಿ(ಗುಜರಾತಿ)
* ಆಪತ್ಕಾಲ್ ಮೆ ಗುಜರಾತ್(ಗುಜರಾತಿ)
* ಜ್ಯೋತಿಪುಂಜ್(ಹಿಂದಿ)
* ಎಜುಕೇಷನ್ ಈಸ್ ಎಂಪವರ್ ಮೆಂಟ್ (ಇಂಗ್ಲಿಷ್)
* ಸಾಕ್ಷಿಭವ್ (ಗುಜರಾತಿ)
* ಭವ್ಯತ್ರ(ಹಿಂದಿ)
* ಎಂಗೇಜಿಂಗ್ ದ ವಲ್ರ್ಡ್(ಇಂಗ್ಲಿಷ್)

ಈ ರೀತಿಯಾಗಿ ಪುಸ್ತಕಗಳನ್ನು ಬರೆದಿದ್ದು, ಪ್ರತೀಯೊಂದು ಪುಸ್ತದಲ್ಲೂ ಜನರಿಗೆ ಉಪಯುಕ್ತ ಉತ್ತಮ ವಿಷಯಗಳನ್ನು ಅಳವಡಿಸಿಕೊಂಡಿದ್ದಾರೆ.. ಆದರೆ ಕೆಲ ಜನರು ಎಷ್ಟೇ ಸಮಯವಿದ್ದರೂ ಅದನ್ನು ದುರುಪಯೋಗ ಮಾಡುವುದೇ ಜಾಸ್ತಿ.. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಯಾವಾಗ ನೋಡಿದರೂ ಬ್ಯುಸಿಯಾಗಿದ್ದರೂ ಇಂತಹ ಉತ್ತಮ ಪುಸ್ತಕಗಳನ್ನು ಬರೆದಿರುವುದು ನಿಜಕ್ಕೂ ಗ್ರೇಟ್!!

ಪವಿತ್ರ

Tags

Related Articles

Close