ಪ್ರಚಲಿತ

ಮೋದಿ ಸಮಾವೇಶ ಹಾಳು ಮಾಡಿ ಎಂದು ಕೋಮು ಪ್ರಚೋದನೆ ನೀಡಿದ ಮೇವಾನಿ!! ಈ ಬಾರಿ ಮೋದಿಯನ್ನು ಸೋಲಿಸಲು ಮೇವಾನಿಯ ಮಾಸ್ಟರ್ ಪ್ಲಾನ್ ಏನು ಗೊತ್ತಾ?!

ಜಿಗ್ನೇಶ್ ಮೇವಾನಿ ಎಲ್ಲಿ ಹೋದರೂ ಅಲ್ಲಿ ಗಲಭೆ ಎಬ್ಬಿಸದೆ ಬರೋದಿಲ್ಲ ಅಂತಾ ಶಪಥ ಮಾಡಿದ್ದಾರೋ ಏನೋ ಪಾಪ!! ಹೋದ ಬಂದಲ್ಲೆಲ್ಲಾ ತನಗಿಷ್ಟ ಬಂದ ಹಾಗೆ ವರ್ತಿಸಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬಾಯಿಗೆ ಬಂದ ರೀತಿ ನಿಂದಿಸುವುದು ತನಗಂಟಿದ ರೋಗದಂತೆ ಕಾಣುತ್ತದೆ!! ಅಂದು ಗುಜರಾತ್ ಚುನಾವಣಾ ಸಮಯದಲ್ಲಿ ಗಲಭೆ ಎಬ್ಬಿಸಿದ್ದಲ್ಲದೆ ಈಗ ಕರ್ನಾಟಕ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಗಲಭೆ ಎಬ್ಬಿಸಲು ಈಗಾಗಲೇ ತಯಾರಾಗಿ ನಿಂತಿದ್ದಾರೆ ಜಿಗ್ನೇಶ್ ಮೇವಾನಿ!!

ರಾಜಕೀಯದಲ್ಲಿ ಯಾವುದೇ ಅನುಭವವಿಲ್ಲದಿದ್ದರೆ ಹೀಗೇ ಆಗೋದು. ಯಾರಿಗೆ ಏನು, ಹೇಗೆ ಮಾತನಾಡಬೇಕು ಎಂಬ ಕನಿಷ್ಟ ಅರಿವೂ ಇಲ್ಲದ ಈ ಜಿಗ್ನೇಶ್ ಮೇವಾನಿಗೆ ರಾಜಕೀಯ ಅನ್ನೋದು ದೂರದ ಮಾತು. ಮೋದಿ ಏನು ಎಂಬುವುದು ಈ ದೇಶ ಮಾತ್ರವಲ್ಲದೆ ವಿಶ್ವಕ್ಕೆ ಗೊತ್ತಿದೆ. ಅವರು ಒಂದು ಮಾತೆತ್ತಿದರೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದೂ ಗೊತ್ತಿರುವ ವಿಷಯವೇ. ಆದರೂ ಅಂತಹ ಮಹಾನ್ ನಾಯಕನ ಬಗ್ಗೆ ಮೊನ್ನೆ ಮೊನ್ನೆ ಹುಟ್ಟಿದ ಈ ಸ್ವಯಂ ಘೋಷಿತ ಹೋರಾಟಗಾರರು ಬಾಯಿಗೆ ಬಂದ ಹಾಗೆ ಮಾತನಾಡೋದು ಅವರ ಯೋಗ್ಯತೆಗೆ ಹಿಡಿದ ಕೈಗನ್ನಡಿಯಲ್ಲದೆ ಮತ್ತೇನೂ ಅಲ್ಲ.

ಜಿಗ್ನೇಶ್ ಮೇವಾನಿ ಎಂಬ ಈ ಸೋಗಲಾಡಿ ನಾಯಕ ಈಗಾಗಲೇ ಗುಜರಾತ್ ಚುನಾವಣೆಯ ಸಮಯದಲ್ಲಿ ಮೋದಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. “ಮೋದಿಗೆ ವಯಸ್ಸಾಗಿದೆ. ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಹಿಮಾಲಯಕ್ಕೆ ಹೋಗಿ ಪೂಜೆ ಮಾಡಲಿ” ಎಂದು ಹೇಳಿದ್ದಾರೆ!!. ಇದೀಗ ಮತ್ತೆ ಕರ್ನಾಟಕ ಚುನಾವಣಾ ಸಮಯದಲ್ಲಿ ಮತ್ತೆ ಮೋದಿಜೀಗೆ ಬಾಯಿಗೆ ಬಂದ ರೀತಿಯಲ್ಲಿ ನಿಂದಿಸಿದ್ದಾನೆ!! ಓರ್ವ ಪ್ರಧಾನಿಗೆ ಈ ರೀತಿ ನಿಂದನೆಯನ್ನು ಮಾಡುವುದು ಎಷ್ಟು ಸರಿ. ಇದು ವ್ಯಾಪಕವಾಗಿ ಚರ್ಚೆಯಾಗಿ ಟೀಕೆಗೆ ಗುರಿಯಾಗಿದ್ದಾನೆ. ಕೇವಲ ಒಂದು ಸೀಟು ಗೆದ್ದು ಹೀಗೆ ವರ್ತಿಸುವ ಈ ವ್ಯಕ್ತಿ ಇನ್ನು ರಾಜಕೀಯದ ಉನ್ನತಕ್ಕೆ ಹೋದರೆ ಯಾವ ರೀತಿ ವರ್ತಿಸಬಹುದು ಎಂಬುವುದೇ ಈಗ ಇರುವ ವಿಷಯವಾಗಿದೆ.

Image result for jignesh mevani

ಮೋದಿ ಸಮಾವೇಶವನ್ನು ತಡೆಯಬೇಕೆಂದ ಜಿಗ್ನೇಶ್ ಮೇವಾನಿ!!

ರಾಜ್ಯದ ಚುನಾವಣಾ ರಣಕಣದಲ್ಲಿ ಗುಜರಾತ್ ಮೇಡಗಾಂವನ ಪಕ್ಷೇತರ ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಧುಮುಕಿದ್ದು ರಾಜ್ಯದ ವಿವಿಧೆಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸುಳ್ಳು ಸುದ್ಧಿಯನ್ನು ಹಬ್ಬಿಸುವ ಮೂಲಕ ಕಿಡಿ ಕಾರುತ್ತಿದ್ದಾರೆ. ಇಂದು ಚಿತ್ರದುರ್ಗದಲ್ಲಿ ನಡೆದ ಪ್ರಗತಿಪರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೇವಾನಿ ‘ಪ್ರಧಾನಿ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದರೆ ಗದ್ದಲವೆಬ್ಬಿಸಿ . ಸಭೆಗಳಲ್ಲಿ ಕುರ್ಚಿಗಳನ್ನು ತೂರಾಡಿ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಶಿರಸಿಯಲ್ಲಿ ಇಂದು ನಡೆದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನದಲ್ಲಿ ಪಾಲ್ಗೊಂಡ ಮೇವಾನಿ ‘ಸಾಮಾಜಿಕ ನ್ಯಾಯದ ಸಮಾನಸಮಾಜವನ್ನು ನಾವು ಬಯಸುತ್ತೇವೆ. ಆದರೆ ಇದನ್ನು ಆರ್.ಎಸ್.ಎಸ್.ಮೊದಲಿನಿಂದಲೂ ವಿರೋಧಿಸಿದೆ. ಕೋಮುವಾದಿ ರಾಜಕಾರಣದಲ್ಲಿ ಮೆರೆಯುತ್ತಿದೆ ಎಂದು ಸುಳ್ಳು ಸುದ್ಧಿಯನ್ನು ಹಬ್ಬಿಸುತ್ತಿದ್ದಾನೆ!! ಇದನ್ನು ಇದೇ ಕರ್ನಾಟಕದ ಚುನಾವಣೆಯ ಮೂಲಕ ತಡೆಯಿರಿ’ ಎಂದು ಕರೆ ನೀಡಿದ್ದಾರೆ.

ಅಹಿತಕರ ಘಟನೆ ನಡೆಸುವಂತೆ ಪ್ರಚೋದನೆ ನೀಡಿದ ಮೇವಾನಿ!!

ದೇಶದ್ರೋಹಿಯೊಬ್ಬ ದಲಿತನ ಮುಖವಾಡ ಹೊತ್ತು ಯುವಜನರಿಗೆ ಕರೆ ಕೊಡುತ್ತಿದ್ದಾನೆ. ಈ ರಾಜ್ಯದಲ್ಲಿ ಮುಂದಿನ ಒಂದು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಹಿತಕರ ಘಟನೆಗಳಾಗುವಂತೆ ನೋಡಿಕೊಂಡು ರಾಜ್ಯವನ್ನು ಸಂಪೂರ್ಣ ಅರಾಜಕ ಸ್ಥಿತಿಗೆ ತಳ್ಳಲು ಎಲ್ಲ ದೇಶವಿದ್ರೋಹಿ ಶಕ್ತಿಗಳೂ ಒಟ್ಟಾಗೆ ಎಂಬಂತೆ ರಾಜಾರೋಷವಾಗಿ ಹೇಳಿಕೊಂಡಿದ್ದಾನೆ ಜಿಗ್ನೇಶ್ ಮೇವಾನಿ!! ಏಪ್ರಿಲ್ 15ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ಕೆ ರಾಜ್ಯದ ಎಲ್ಲ ಪ್ರಗತಿಪರರು, ದಲಿತರು ಮತ್ತು ಹಿಂದುಳಿದವರು ಒಗ್ಗೂಡಿ ವಿರೋಧಿಸಬೇಕು. 2 ಕೋಟಿ ಉದ್ಯೋಗ ಮತ್ತು ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವಂತೆ ಮೋದಿಗೆ ಸವಾಲು ಹಾಕಬೇಕು ಎಂದು ಜನತೆಗೆ ಕರೆ ನೀಡಿದ್ದಾನೆ!!

ಜಿಗ್ನೇಶ್ ಮೇವಾನಿಗೆ ಹರಳಯ್ಯ ಪ್ರಶಸ್ತಿ ನೀಡಿ ಗೌರವ!!

ಈ ತನ್ಮಧ್ಯೆ ಮೇವಾನಿ ಅವರಿಗೆ ಚಿತ್ರದುರ್ಗದ ಮಹಾ ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಅವರು ‘ಶಿವಶರಣ ಹರಳಯ್ಯ ಯುವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.. ಇಂತಹ ಪ್ರಶಸ್ತಿಗೆ ಜಿಗ್ನೇಶ್ ಮೇವಾನಿ ಅರ್ಹರೇ ಎಂಬ ಪ್ರಶ್ನೆ ಈಗಾಗಲೇ ಎಲ್ಲರಲ್ಲೂ ಕಾದಿದೆ!!

ಈ ಜಿಗ್ನೇಶ್ ಮೇವಾನಿ ಎನ್ನುವವನು ಬಲು ಚತುರ!! ದೇಶನಿಷ್ಠರಿರುವ ಭಾರತದಲ್ಲಿ ಸ್ವಘೋಷಿತ ಬುದ್ಧಿ ಜೀವಿಗಳ ಆಟ ನಡೆಯುವುದಿಲ್ಲ ಎಂದು ಗೊತ್ತಾದೊಡನೇ, ದೇಶದಲ್ಲಿರುವ ಮುಗ್ದರಿಗೆ ಬಲೆ ಬೀಸುವ ಇವರು ಆಡಳಿತಾಂಗದ ವಿರುದ್ಧ ಮುಗ್ದರನ್ನು ಎತ್ತಿ ಕಟ್ಟುತ್ತಾರೆ. ಜಿಗ್ನೇಶ್ ಮೇವಾನಿಯ ಹೆಸರು ಕೇಳಿದೊಡನೇ ದೇಶದ ದಲಿತ ಚಳವಳಿಗೆ ಒಂದು ಹೊಸ ಮುಖ ದೊರೆಯಿತು ಎಂಬ ಸಮಾಧಾನ ಎಷ್ಟೋ ದಲಿತರಿಗೆ ಮೂಡಿತ್ತು. ಜಿಗ್ನೇಶ್ ಮೇವಾನಿ ದಲಿತರಿಗೆ ಹೊಸ ಆಶಾಕಿರವಾಗುವ ಭರವಸೆ ಮೂಡಿತ್ತು. ಆದರೆ ಯಾವಾಗ ಜಿಗ್ನೇಶ್ ಮೇವಾನಿ ಅಂಬೇಡ್ಕರ್ ನ್ನೇ ರಾಜಕೀಯವಾಗಿ ಮುಗಿಸಿದ, ಸಂವಿಧಾನದ ಮೂಲ ಆಶಯಗಳನ್ನು ಬದಲಿಸಿದ ಕಾಂಗ್ರೆಸ್ ಬೆನ್ನಿಗೆ ನಿಂತರೋ ಆಗ ಆತನ ಮೇಲಿದ್ದ ಭರವಸೆ ಕುಂದಿತು. ಇನ್ನು ಜಿಗ್ನೇಶ್ ಮೇವಾನಿ ಚುನಾವಣೆಗೆ ಸ್ಪರ್ಧಿಸಿದಾಗ ಸದಾ ಭಾರತದ ಏಕತೆಗೆ ಬಗ್ಗೆ ಪ್ರಶ್ನಿಸುವ ಮತಿಗೇಡಿ ಅರುಂಧತಿ ರಾಯ್ ಮೂರು ಲಕ್ಷ ರೂಪಾಯಿ ಸಹಾಯ ನೀಡಿದ್ದಳೋ ಆವಾಗಲೇ ಜಿಗ್ನೇಶ್ ಮೇವಾನಿಯ ಅಸಲಿಯತ್ತು ಬಯಲಾಯಿತು. ಸದಾ ದೇಶದ ವಿರುದ್ಧ ಮಾತನಾಡುವ ರಾಯ್ ಅಂತವಳಿಂದ ಸಹಾಯಧನ ಪಡೆದ ಜಿಗ್ನೇಶ್ ಮೇವಾನಿಯಿಂದ ಇನ್ನೆಂಥ ಹೋರಾಟ ನಿರೀಕ್ಷಿಸಲು ಸಾಧ್ಯ..!! ಇಂತಹವನು ನರೇಂದ್ರ ಮೋದಿಯ ಬಗ್ಗೆ ಏನು ಮಾತನಾಡಲು ಸಾಧ್ಯ ಬಿಡಿ!!

ಜಿಗ್ನೇಶ್ ಮಾತಿಗೆ ಕೆರಳಿದ ಬಿಜೆಪಿ ಕಾರ್ಯಕರ್ತರು!!

ಮೇವಾನಿ ಕಾರ್ಯಕ್ರಮ ವಿರೋಧಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ಶಿವಮೊಗ್ಗದಲ್ಲಿ ಪ್ರತಿಭಟಿನೆ ನಡೆಸಿದ್ದಾರೆ!! ಒಬ್ಬ ದೇಶದ ಅತ್ಯುನ್ನತ ಸ್ಥಾನದಲ್ಲಿ ಪ್ರಧಾನಿ ಮೋದಿಯನ್ನು ಯಾರೂ ಬೇಕಾದರೂ ತನಗಿಷ್ಟ ಬಂದಂತೆ ನಿಂದಿಸಬಹುದು!! ಯಾವ ನ್ಯಾಯಾರೀ ಇದೆಲ್ಲಾ?!! ಇದನ್ನೆಲ್ಲಾ ಕೇಳಿಯೂ ಮೋದಿಜೀ ಮೌನ ಮರೆತಿರಬಹುದು ಆದರೆ ಇದಕ್ಕೆಲ್ಲಾ ಪ್ರತ್ಯುತ್ತರವಾಗಿ ಇಡೀ ಜನತೆ ನಿಮ್ಮಂತಹ ಸೋಗಲಾಡಿ ಜನರಿಗೆ ಸರಿಯಾಗಿಯೇ ಬುದ್ಧಿ ಕಲಿಸುತ್ತಾರೆ ಬಿಡಿ!! ಈತನ ಹೇಳಿಕೆ ಬಳಿಕ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ.

Image result for modi

ಅಂದು ಮೋದೀಜೀಗೆ ವಯಸ್ಸಾಗಿದೆ ಹಿಮಾಲಯಕ್ಕೆ ಹೋಗಿ ಎಂದು ನಿಂದಿಸಿದ್ದಿರಿ!! ಆದರೆ ಒಂದು ವಿಷಯ ಅರಿಯಬೇಕಾಗಿದೆ ಜಿಗ್ನೇಶ್ ಮೇವಾನಿ!! ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದವರು ಮೊದಲ ಬಾರಿಗೆ ಪ್ರಧಾನಿಯಾಗಿದ್ದಾರೆ. ಅವರೇ ನರೇಂದ್ರ ಮೋದಿ. ಮೋದಿಯವರು ಸ್ವಾತಂತ್ರ್ಯ ನಂತರ ಜನಿಸಿದವರು. ಅಂದರೆ ಈವರೆಗೆ ಪ್ರಧಾನಿಯಾಗಿದ್ದವರೆಲ್ಲರೂ ಸ್ವಾತಂತ್ರ್ಯ ಪೂರ್ವದವರು. ಅತಿ ಚಿಕ್ಕ ಪ್ರಾಯದವರು ನರೇಂದ್ರ ಮೋದೀಜಿ. ಇತಿಹಾಸ ಅರಿವಿದ್ದಿದ್ದರೆ ಈ ಬಗ್ಗೆ ಮಾಹಿತಿ ಇರಬೇಕಿತ್ತು. ಇತಿಹಾಸದ ಆಯಾಮಗಳೇ ಗೊತ್ತಿಲ್ಲದಿದ್ದರೆ ಹೀಗೇ ಆಗೋದು. ಮಾಧ್ಯಮಗಳು ವಿಜ್ರಂಭಿಸಿದವು ಎಂದು ಹೀರೋ ಆಗಲು ಹೋದರೆ ಇನ್ನೇನಾಗುತ್ತದೆ? ಅಲ್ವಾ..? ಯಾರೆಲ್ಲಾ ಮೋದಿಜೀಗೆ ಬಾಯಿಗೆ ಬಂದ ರೀತಿಯಲ್ಲಿ ನಿಂದಿಸಿದ್ದಾರೋ ಈಗಾಗಲೇ 22 ರಾಜ್ಯವನ್ನು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಜನರೇ ಪ್ರತ್ಯುತ್ತರ ನೀಡಿದ್ದಾರೆ!! ಸಧ್ಯದಲ್ಲೇ ಕರ್ನಾಟಕ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸರಿಯಾಗಿಯೇ ನಿಮ್ಮಂತಹ ಸೋಗಲಾಡಿ ರಾಜಕಾರಣಿಗಳಿಗೆ( ಸಿದ್ದರಾಮಯ್ಯನವರಿಗೂ) ಬುದ್ಧಿ ಕಲಿಸಲಿದ್ದಾರೆ ಕರ್ನಾಟಕದ ಜನತೆ!! ಇಂತಹ ನಿಮ್ಮ ಹೇಳಿಕೆಗಳು ಇಡೀ ಭಾರತದ ಜನತೆಯನ್ನು ಮತ್ತಷ್ಟು ಮೋದಿಜೀ ಬಗ್ಗೆ ಗೌರವ ಹುಟ್ಟುತ್ತದೆ ಅದೇ ನಿಮ್ಮ ಬಗ್ಗೆ ಅಸಹ್ಯ ಹುಟ್ಟುತ್ತದೆ ಅಷ್ಟೆ!! ಕೇವಲ ಚುನಾವಣೆಯನ್ನು ಗೆಲ್ಲುವುದಕ್ಕೋಸ್ಕರ ಇಂತಹ ಗಿಮಿಗ್‍ಗಳನ್ನು ಮಾಡುತ್ತೀರಾ ಅಂತಾ ನಿಮ್ಮ ಮುಖಕ್ಕೆ ಜನರು ಉಗಿಯುತ್ತಾರೆ ಅಷ್ಟೇ!! ಹಾಗಾಗಿ ನಿಮ್ಮ ಬುಡಕ್ಕೆ ನೀವೇ ಕೊಳ್ಳಿ ಇಟ್ಟಂತೆ ಬಿಡಿ!!

ಪವಿತ್ರ

Tags

Related Articles

Close