ಇತಿಹಾಸ

ವಿಭಜನೆಯ ಹೊತ್ತಲ್ಲಿ ಭಾರತವು ಪಾಕಿಸ್ಥಾನಕ್ಕೆ ಭೂಭಾಗ, 75 ಕೋಟಿ ರೂ ಹಣ ಮಾತ್ರವಲ್ಲದೇ ಏನೆನೆಲ್ಲ ಕೊಟ್ಟಿತ್ತು ಗೊತ್ತೇ?! ಯಾರಿಗೂ ತಿಳಿಯದ ವಿಭಜನೆಯ ಕಥೆ!!

ಭಾರತವನ್ನು ಇಬ್ಭಾಗಿಸಲಿಕ್ಕೆ ನಿರ್ಧಾರವನ್ನು ತೆಗೆದುಕೊಂಡಾಗಿತ್ತು! ತದನಂತರ, ಪಾಕಿಸ್ಥಾನ ಮತ್ತೆ ತಗಾದೆ ತೆಗೆಯಿತು! ಮಹಾತ್ಮಾ ಗಾಂಧಿ ಪಾಕಿಸ್ಥಾನಕ್ಕೆ
ಕೊಡಬೇಕಾಗಿರುವ 55 ಕೋಟಿ ಹಣವನ್ನು ಕೊಟ್ಟುಬಿಡಿ ಎಂದು ಹಠಕ್ಕಿಳಿದರು! ಕೊಟ್ಟ ಹಣದಲ್ಲಿಯೇ ಪಾಕಿಸ್ಥಾನ ಭಾರತದ ವಿರುದ್ಧ ಯುದ್ಧಕಿಳಿಯುತ್ತದೆಂದರೂ ಕೇಳದ ಗಾಂಧೀಜಿಯ ಹಠಕ್ಕೆ ಮಣಿದು ದುಡ್ಡೂ ಕೊಟ್ಟಾಯಿತು. ಅದೇ, ಗಾಂಧೀಜಿಯ ಹತ್ಯೆಗೆ ಮುಖ್ಯ ಕಾರಣವಾದರೂ ಸಹ, ಪಾಕಿಸ್ಥಾನಕ್ಕೆ ಕೊಟ್ಟಿದ್ದು 55 ಕೋಟಿ ರೂ ಮಾತ್ರವಲ್ಲ! ಬದಲಾಗಿ, 75 ಕೋಟಿ ರೂ!!!

ಒಂದಷ್ಟು ರಹಸ್ಯಗಳು ಬಯಲಾಗುವುದು ಯಾವಾಗ ಗೊತ್ತೇ?!

ಇತಿಹಾಸವನ್ನು ತಿಳಿಯಲೇ ಬೇಕೆಂದರೆ ಅದರಾಳಕ್ಕಿಳಿಯಬೇಕಾಗುತ್ತದೆ. ಇಲ್ಲದೇ ಹೋದರೆ, ಎಂದಿಗೂ ಸಹ ಇತಿಹಾಸದೊಳಗಿನ ಒಂದಷ್ಟು ರಹಸ್ಯಗಳು ಬಯಲಾಗುವುದೇ ಇಲ್ಲ! ಅದೇ ರೀತಿ, ಮಹಾತ್ಮಾ ಗಾಂಧಿ, ಭಾರತದ ಇಬ್ಭಾಗ, ಇಸವಿ 1947,.. ಇಂತಹ ವಿಷಯಗಳ ಬಗ್ಗೆ ಅಧ್ಯಯನಕ್ಕಿಳಿದಾಗ ಒಂದಷ್ಟು ಸ್ಫೋಟಕ ಮಾಹಿತಿಗಳೂ ದೊರಕಿತು!

ಪಾಕಿಸ್ಥಾನಕ್ಕೆ ಕೊಡಬೇಕಿದ್ದ ಹಣ ಕೇವಲ 55 ಕೋಟಿ ರೂಗಳಲ್ಲ, ಬದಲಿಗೆ 75 ಕೋಟಿ ರೂ! ಮೊದಲ ಕಂತಿನಲ್ಲಿ 20 ಕೋಟಿ ರೂಗಳನ್ನು ಪಾಕಿಸ್ಥಾನಕ್ಕೆ ಕೊಟ್ಟಾಗಿತ್ತಾದರೂ, ಅದೇ ಹಣದ ಬಲದಿಂದ ಕಾಶ್ಮೀರವನ್ನಾಕ್ರಮಿಸಲು ದಾಳಿ ನಡೆಸಿತು! ಈ ಕಾರಣಕ್ಕಾಗಿ ಉಳಿದ 55 ಕೋಟಿ ರೂಗಳನ್ನು ನೀಡಲು ನಿರಾಕರಿಸಿದ ಸರಕಾರ, ಮೊದಲು ಕಾಶ್ಮೀರಿ ಸಮಸ್ಯೆಯನ್ನು ಪರಿಹರಿಸಿ, ಕೊನೆಗೆ ದುಡ್ಡು ಕೇಳಿ ಎಂದು ಬಿಟ್ಟಿತು! ಆದರೆ, ಮಹಾತ್ಮನಿಗೇಕೋ ಇದು ರುಚಿಸಲಿಲ್ಲ! ಪಾಕಿಸ್ಥಾನಕ್ಕೆ ಕೊಡಬೇಕಿರುವ ಇನ್ನುಳಿದ 55 ಕೋಟಿ ರೂಗಳನ್ನೂ ಕೊಡಿ ಎಂದರು!

ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ಥಾನಕ್ಕೆ ದುಡ್ಡು ಕೊಟ್ಟಿದ್ದೇ ಆದರೆ, ಮತ್ತೆ ಯುದ್ಧ ಮಾಡಲು ಬಳಸಿಕೊಳ್ಳುತ್ತದೆ ಎಂದು ಪರಿಯಾಗಿ ಹೇಳಿದರೂ ಸಹ ಮಹಾತ್ಮಾ ಕೇಳಲಿಲ್ಲ! ‘ನೀವು ಮೊದಲು ಕೊಡಿ, ಒಪ್ಪಂದ ಮಾಡಿಕೊಂಡ ಮೇಲೆ ತಪ್ಪುವುದು ಸರಿಯಲ್ಲ. ಹುಟ್ಟುತ್ತಲೇ ಎರಡು ರಾಷ್ಟ್ರಗಳ ಸಂಬಂಧ ಕೆಡುವುದು ಒಳ್ಳೆಯದಲ್ಲ’ ಎಂದು ಉಪದೇಶ ನೀಡಿದರು!

ಭಾರತ ಹಾಗೂ ಪಾಕಿಸ್ಥಾನದ ಒಪ್ಪಂದವಾದರೂ ಏನಿತ್ತು ಹಾಗಾದರೆ?!

ನಾನು ಹುಡುಕುತ್ತಿದ್ದ ಎರಡನೇ ಉತ್ತರ ಭಾರತದ ವಿಭಜನೆಯ ಬಗ್ಗೆಯಷ್ಟೇ! ಬರೋಬ್ಬರಿ 75 ಕೋಟಿ ರೂಗಳನ್ನು ಭಾರತ ಪಾಕಿಸ್ಥಾನಕ್ಕೆ ಕೊಡಬೇಕಾದರೆ ಭಾರತಕ್ಕೇನು ಸಿಕ್ಕಿತ್ತು?! ನಾನಿದರ ಹುಡುಕಾಟದಲ್ಲಿದ್ದೆ!

1. ಎಲ್ಲಾ ವಿಧದ ವಿತ್ತೀಯ ಮತ್ತು ದ್ರವ ಆಸ್ತಿಗಳಲ್ಲಿ, ಪಾಕಿಸ್ಥಾನಕ್ಕೆ 17.5% ಸಿಕ್ಕಿದ್ದರೆ, ಭಾರತಕ್ಕೆ ಸಿಕ್ಕ ಪಾಲು ಶೇ.82.5% ರಷ್ಟು! ದ್ರವ ಆಸ್ತಿಗಳು (liquid assets), ಮುದ್ರಿತವಾಗಿದ್ದ ನೋಟುಗಳು, ನಾಣ್ಯಗಳು, ಅಂಚೆ, ಆದಾಯ ಅಂಚೆ ಚೀಟಿಗಳು, ಚಿನ್ನ, ಭಾರತೀಯ ರಿಸರ್ವ್ ಬ್ಯಾಂಕಿನ ಆಸ್ತಿಗಳನ್ನೂ ಒಳಗೊಂಡಿತ್ತು ಒಪ್ಪಂದ! ಇದಲ್ಲದೇ, ನಿಷೇಧಗೊಂಡ ನಾಗಾಲ್ಯಾಂಡ್ ನ ಭಾಗದಲ್ಲಿ ಜಿಲ್ಲೆಯ ಕಮಿಶನರ್ ನಿಂದ 75 ರೂ ನಗದು ಹಣದ ಅನುಪಾತವನ್ನೂ ದಾಖಲಿಸಲಾಗಿತ್ತು!

2. ಎಲ್ಲಾ ಚಲಿಸಬಲ್ಲ ಹಾಗೂ ದ್ರವವಲ್ಲದ ಸ್ವತ್ತುಗಳಲ್ಲಿ (movable and non-liquid asset) ಭಾರತ ಹಾಗೂ ಪಾಕಿಸ್ಥಾನದ ನಡುವೆ 80-20 ರ ಅನುಪಾತವಿರಬೇಕು. ಸರಕಾರೀ ಆವರಣದಲ್ಲಿ ಒಳಪಡುವ ವಸ್ತುಗಳಾದ ಕೋಷ್ಟಕಗಳು, ಕುರ್ಚಿಗಳು, ದೀಪಗಳು, ಶಾಯಿ ಮಡಿಕೆಗಳು, ಪೊರಕೆಗಳು, ಮಸಿ ಹೀರುವ ಕಾಗದಗಳು,. .ಇಷ್ಟೇ ಅಲ್ಲ! ಸರಕಾರೀ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನೂ ಸಹ ಎರಡೂ ದೇಶಗಳಿಗೆ ವಿಂಗಡಿಸಿ ಹಂಚಲಾಯಿತು! ,

3. ಸರಕಾರೀ ವಾಹನಗಳನ್ನು, ರೈಲ್ವೇ ರೋಲಿಂಗ್ ಸ್ಟಾಕ್ ಗಳನ್ನು ಆಯಾ ದೇಶದ ಮಾರ್ಗಗಳ ಮೈಲೇಜುಗಳಿಗೆ ಅನುಗುಣವಾಗಿ
ವಿಭಜಿಸಲಾಯಿತು!

4. ಪಾಕಿಸ್ಥಾನಕ್ಕೆ 75 ಕೋಟಿ ರೂ ಸಿಗಬೇಕಾದರೆ, ಭಾರತಕ್ಕೆಷ್ಟು ನಗದು ಸಿಕ್ಕಿತ್ತು?!’ ಎಂಬ ಅತೀ ಸರಳ ಪ್ರಶ್ನೆಗೆ ಉತ್ತರ – 470 ಕೋಟಿ ರೂ ಗಳು!

ಈ ವಿಭಜನೆಯ ನಿಯಮಗಳೆಂಬ ಅಥವಾ ಜೀವನಾಂಶದ ನಿಯಮಗಳೆಂಬುದೊಂದಿದೆಯಲ್ಲ?! ವಿಸ್ಮಯಕರವಾದ ಹಾಗೂ ಊಹಿಸಲಾಗದ ಪರಿಸ್ಥಿತಿಗೂ
ಭಾರತವನ್ನು ಒಳಪಡಿಸಿಬಿಟ್ಟಿತು!

‘ಹುಚ್ಚು’ ಎನ್ನುವಷ್ಟು ವಿಭಜನೆ ನಡೆದಿದ್ದು ಸೈನ್ಯದಲ್ಲಿ!

1. ಮೊದಲನೆಯದಾಗಿ, ಲಾಹೋರಿನಲ್ಲಿ ಪೋಲಿಸ್ ಸುಪರಿಡೆಂಟ್ ಎರಡು ದೇಶಗಳಿಗೆ ಹಂಚುಕೆಯಾಗಬೇಕಿದ್ದದ್ದನ್ನು ಹಿಂದೂ ಡೆಪ್ಯುಟಿಗಿಷ್ಟು ಹಾಗೂ ಮುಸಲ್ಮಾನ ಡೆಪ್ಯುಟಿಗಿಷ್ಟು ಎಂದು ಸಣ್ಣ ಸೂಜಿಯಿಂದ ಹಿಡಿದು ಭಾಗವಾಗಿಸಿದ್ದನೆಂದರೆ ಅದೆಂತಹ ವಿಭಜನೆಯ ತಿಕ್ಕಾಟವಿದ್ದಿರಬೇಕು!!

(“The Police Superintendent in Lahore divided everything equally between a Hindu deputy and a Muslim deputy – leggings, turbans, lathis, rifles etc. The last items were the instruments of the police band. These were split up too – a flute for Pakistan, a drum for India, a trumpet for Pakistan, cymbals for India, till there was only 1 item left – a trombone. Before his eyes, the deputies, who had been comrades for years and devoted to each other, got into a fist fight to gain the trombone for his country.”)

2.ಲೆಗ್ಗಿಂಗ್ಸ್, ರುಮಾಲು, ಲಾಠಿಗಳು, ಬಂದೂಕುಗಳು, ಮದ್ದುಗುಂಡುಗಳ ನಡುವೆ ಸಮಾನವಾಗಿ ಹಂಚಿದ ನಂತರ ಉಳಿದದ್ದು ಪೋಲಿಸ್ ಬ್ಯಾಂಡ್ ಸೆಟ್ ಗಳು!!! ಅದನ್ನೂ ಸಹ ಎರಡು ದೇಶಗಳಿಗೆ ಸರಿಯಾಗಿ ಹಂಚಲಾಯಿತು! ಪಾಕಿಸ್ಥಾನಕ್ಕೆ ಕೊಳಲು, ಕಹಳೆ ಗಳನ್ನು ಕೊಡಲಾಯಿತು! ಭಾರತಕ್ಕೆ ಡ್ರಮ್ ಹಾಗೂ ತಾಳಗಳನ್ನು ಕೊಡಲಾಯಿತು! ಉಳಿದದ್ದೊಂದೇ ಕೊನೆಗೆ! ‘ಟ್ರೊಂಬೋನ್’!! ಸುಪರಿಡೆಂಟ್ ನ ಕಣ್ಣು ಅದರ ಮೇಲೆ ಬೀಳುವುದರೊಳಗೆ ಅದೆಷ್ಟೋ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಕಾಮ್ರೇಡ್ ಗಳು ಜಗಳಕ್ಕಿಳಿದರು!

3.ಪಂಜಾಬ್ ನ ಸರಕಾರೀ ಗ್ರಂಥಾಲಯದ Encyclopedia ಹಾಗೂ Britanicca ಪುಸ್ತಕಗಳನ್ನು ಧಾರ್ಮಿಕ ವಿಚಾರಗಳ ಆಧಾರವನ್ನಿಟ್ಟು ವಿಂಗಡಿಸಲಾಯಿತು! ಸಂಬಂಧ ಪಟ್ಟ ಶಬ್ದಕೋಶ ಇದ್ದದ್ದು ಒಂದೇ! ಅದನ್ನೂ ಹರಿದು A – K ವರೆಗೆ ಭಾರತಕ್ಕೆ ಕೊಟ್ಟರೆ, ಉಳಿದ ಪಾಲು ಪಾಕಿಸ್ಥಾನ ತೆಗೆದುಕೊಂಡಿತು! ಪುಸ್ತಕದ ಪ್ರತಿಗಳೆಲ್ಲವೂ ಒಂದೇ ಇದ್ದುದರಿಂದ ಆಯ ದೇಶದ ಆಸಕ್ತಿಗನುಗುಣವಾಗಿ ವಿಂಗಡಿಸತೊಡಗಿದ ಗ್ರಂಥಪಾಲಕರಿಗೆ ತಲೆನೋವಾಗಿದ್ದು Alice in wonderland ಹಾಗೂ Wuthering Heights ಎಂಬೆರಡು ಪುಸ್ತಕಗಳ ವಿಭಜನೆಯಲ್ಲಿ!!!

(“Sets of the Encyclopedia Britannica in the Punjab Government library were religiously divided, alternate volumes going to each dominion. Dictionaries were ripped apart, A-K going to India while the rest went to Pakistan. Where only 1 copy was available for any book, librarians were supposed to allot that book based on which country had a greater interest in it. As a result, librarians actually came to blows over which country had a greater interest in Alice in Wonderland or Wuthering Heights.”)

4.ಮದ್ಯ ಹಾಗೂ ದ್ರಾಕ್ಷಾರಸದ ಮಾಳಿಗೆಗಳ ವಿಚಾರವಾಗಿ ವಿಭಜನೆಗೊಳಿಸುವಾಗ ಪೂರ್ತಿ ಪಾಲು ಭಾರತಕ್ಕುಳಿಯಿತು! ಇಸ್ಲಾಂ ನಲ್ಲಿ ದ್ರಾಕ್ಷಾರಸ “ಹರಾಮ್’ ಆಗಿದ್ದುದರಿಂದ ಪಾಲನ್ನು ಹಣದ ರೂಪದಲ್ಲಿ ನೀಡಲು ನಿಶ್ಚಯಿಸಲಾಯಿತು!!!

(“Wine cellars would stay with India, as Pakistan would be an Islamic state where alcohol was haraam. However, Pakistan was to be monetarily compensated for its share of the value of the wine.”)

5.ಅವತ್ತು, ಭಾರತದ ನೋಟುಗಳನ್ನು ಮುದ್ರಿಸಲು ಇದ್ದದ್ದು ಒಂದೇ ಒಂದು ಮುದ್ರಣಾಲಯ! ಅದನ್ನು ಮಾತ್ರ ಭಾರತ ಪಾಕಿಸ್ಥಾನಕ್ಕೆ ನೀಡಲು ಒಪ್ಪಲೇ ಇಲ್ಲ! ಬಹುಷಃ ಈ ನಿರ್ಧಾರದಿಂದ ಆರ್ಥಿಕತೆಯಲ್ಲಿ ಭಾರತ ಮುಗ್ಗರಿಸಲಿಲ್ಲ! ಪಾಕಿಸ್ಥಾನ ಬೇರೆ ವಿಧಿಯಿಲ್ಲದೇ, ಭಾರತದ ಹೆಸರಿದ್ದ ನೋಟುಗಳ ಮೇಲೆ ಪಾಕಿಸ್ಥಾನವೆಂದು ಮುದ್ರಿಸಿ ಸರಕಾರವನ್ನು ಅಸ್ತಿತ್ವಕ್ಕೆ ತಂದು ಆಡಳಿತ ನಡೆಸಲು ಪ್ರಾರಂಭಿಸಿತು!

(“There was only one government press that printed currency notes and India refused to hand that over. So Pakistan began its existence with Indian currency notes rubber stamped “Pakistan” over “India”.)

6.ಅವತ್ತಿನ ಭಾರತದ ವೈಸರಾಯ್ ಹತ್ತಿರ ಇದ್ದದ್ದು ಎರಡು Royal Carriages! ಒಂದು ಚಿನ್ನದ ಲೇಪನವನ್ನೊಳಗೊಂಡಿದ್ದರೆ ಇನ್ನೊಂದು ಬೆಳ್ಳಿಯದಾಗಿತ್ತು! ಟಾಸ್ ಹಾರಿಸಿದ ಮೌಂಟ್ ಬ್ಯಾಟನ್ ಚಿನ್ನದ ಲೇಪನವನಿದ್ದ ಗಾಡಿಯನ್ನು ಭಾರತಕ್ಕೆ ನೀಡಿದರೆ, ಬೆಳ್ಳಿಯ ಗಾಡಿಯನ್ನು ಪಾಕ್ ಪಡೆದುಕೊಂಡಿತು! ಇದಲ್ಲದೇ, ಗಾಡಿಯ ಸಲಕರಣೆ, ಚಾವಟಿ, ಸಮವಸ್ತ್ರ. . .ಹೀಗೆ ಪ್ರತಿಯೊಂದರಲ್ಲಿಯೂ ವಿಂಗಡಣೆ ಮಾಡಿದ ನಂತರ ಉಳಿದದ್ದು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುತ್ತಿದ್ದ ಹಾರ್ನು!!! ಅದನ್ನು ವಿಭಜಿಸಲು ಬರುವುದಿಲ್ಲ, ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರು ಜಗಳಕ್ಕಿಳಿಯುತ್ತಾರೆಂದ ಮೌಂಟ್ ಬ್ಯಾಟನ್ ತನಗಾಗಿ ತೆಗೆದಿರಿಸಿಕೊಂಡ ಸ್ಮರಣಿಕೆಯ ನೆಪ ಹೂಡಿ! ಆತನಿಗೂ ಹೊರಡುವ ಸಮಯದಲ್ಲಿ ಧರ್ಮದೇಟು ಬೇಡವಾಗಿತ್ತು!

(“The Viceroy of India had 2 sets of Royal carriages, one set trimmed in gold, the other with silver.
Who would get which set was decided by Mountbattens Aide-de-camp by the toss of a coin, with
India getting the gold trimmed set. After the harnesses, whips, spurs, uniforms etc were divided,
the only item left was a ceremonial horn, used on special occasions. Splitting that into two
would have made it useless, and giving it to any one dominion would have caused a fight. In the
end, the ADC took it for himself as a souvenir.”)

ಏನೆಲ್ಲ ನಡೆದು ಹೋಯಿತು ವಿಭಜನೆಯ ನೆಪದಲ್ಲಿ?!

ಇತಿಹಾಸವನ್ನು ಕೆದಕುತ್ತ ಹೋದಂತೆಲ್ಲ ಪ್ರತಿಯೊಬ್ಬ ಭಾರತೀಯನಿಗೂ ಎನ್ನಿಸುವುದಿದೇ! ಬರೀ ವಸ್ತುಗಳಷ್ಟೇ ಅಲ್ಲ, ಭೂಭಾಗ ಮಾತ್ರವಷ್ಟೇ ಅಲ್ಲ, ಆಸ್ತಿ
ಮಾತ್ರವಲ್ಲ, ಬದಲಿಗೆ ಎರಡು ಧರ್ಮಗಳೂ ವಿಭಜನೆಯಾದರು! ಸಿದ್ಧಾಂತವೂ ವಿಭಜನೆಯಾಯಿತು! ವಿಚಾರವೂ ವಿಭಜನೆಯಾಯಿತು! ಕೊನೆ ಕೊನೆಗೆ ಮನಸ್ಸುಗಳೂ ವಿಭಜನೆಯಾಯಿತು! ‘ನಂಬಿಕೆ’ ಎನ್ನುವುದು ಭಾರತದ ಪಾಲಾದರೆ, ‘ದ್ರೋಹ’ವೆಂಬ ಪಾಲನ್ನು ಪಾಕಿಸ್ಥಾನ ಸಂತಸವಾಗಿ ಸ್ವೀಕರಿಸಿತ್ತು! ಅಷ್ಟೇ!!

Source : Freedom At Midnight by Larry Collins and Dominique LaPierre

– ಅಜೇಯ ಶರ್ಮಾ

Tags

Related Articles

Close