ಅಂಕಣ

ಗೋಹತ್ಯೆಗೂ, ಇಂದಿರಾ ಹಾಗೂ ರಾಜೀವ್ ಗಾಂಧಿಯ ಸಾವಿಗೂ ಇರುವ ಸಂಬಂಧವೇನು ಗೊತ್ತೇ?! ಅವರಿಬ್ಬರ ಸಾವಿನ ‘ತಿಥಿ’ ಶಾಪದ ಮಹಿಮೆ ತಿಳಿಸಿತ್ತು!!

ಭಾರತದಲ್ಲಿ ಅದೆಷ್ಟೋ ಸಾವು ನೋವುಗಳಾಗಿದೆ ಬಿಡಿ! ಆದರೆ, ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವಾಗಿಯೋ ಎಂಬಂತೆ ಒಂದೇ ಕುಟುಂಬದ ಎಲ್ಲರೂ ಸಹ ಒಂದೇ ಮಿತಿಗೆ ಸಾವಿಗೀಡಾಗುವುದು ಕಾಕತಾಳೀಯವಲ್ಲ ಅನ್ನುವುದೂ ಅಷ್ಟೇ ಸತ್ಯ!!

ಪುರಾತನ ಭಾರತದ ಇತಿಹಾಸವನ್ನು, ಅದರ ಕಟ್ಟು ಪಾಡುಗಳನ್ನು, ರೀತಿ ನೀತಿಗಳನ್ನು ಅಧ್ಯಯನ ಮಾಡಿದರೆ ಅವಶ್ಯವಾಗಿ ಭಾರತದ ತಾಕತ್ತಿನ ಬಗೆಗೂ ಅರ್ಥವಾಗುವುದಲ್ಲದೇ, ಸಾಧು ಸಂತರ ವಿಶಿಷ್ಟ ಶಕ್ತಿಯ ಬಗೆಗೂ ಒಂದು ಸಣ್ಣದಾದ ಸಾಕ್ಷಿ ಸಿಗುತ್ತಾ ಹೋಗುತ್ತದೆ!

ಈ ಎರಡು ಸಾವಿದೆಯಲ್ಲವಾ, ಅದು ನೆಹರೂವಿನ ಪೀಳಿಗೆಯವರಲ್ಲಿ ಆತಂಕ ಮೂಡಿಸಿದ‌್ದು ಸುಳ್ಳಲ್ಲ!ಇವತ್ತಿನವರೆಗೂ, ಇಂದಿರಾ ಗಾಂಧಿಯ ಸಾವನ್ನು ನಾವು ಅರ್ಥೈಸಿಕೊಂಡದ್ದು ಆಕೆಯ ಎರಡು ಸಿಖ್ ಸೆಕ್ಯುರಿಟಿ ಗಾರ್ಡ್ ಗಳು ಗುಂಡಿಟ್ಟು ಕೊಂದರೆಂದೇ! ಆಕೆಯ ಬ್ಲೂ-ಸ್ಟಾರ್ ಎಂಬ ಕಾರ್ಯಾಚರಣೆ ಇಡೀ ಸಿಖ್ ಸಮುದಾಯವನ್ನು ಆಕ್ರೋಶಕ್ಕೀಡು ಮಾಡಿದ್ದು ಸುಳ್ಳಲ್ಲ ಬಿಡಿ! ಆಕೆಯ ರಕ್ಷಕರು ಇಂದಿರಾ ಗಾಂಧಿಯ ಸಾವಿನ ಬಾಗಿಲನ್ನು ರಕ್ಷಿಸುತ್ತಾ ನಿಂತಿದ್ದರಷ್ಟೇ! ತಮ್ಮ ಧರ್ಮದ ಮೇಲಾದಂತಹ ಅವಮಾನವನ್ನು ಯಾವೊಬ್ಬ ಸಿಖ್ಖನೂ ಸಹಿಸಲಾರದವನಾಗಿದ್ದ ಎಂಬುದೂ ಮೇಲ್ನೋಟಕ್ಕೆ ಕಂಡು ಬಂದರೂ ಇಂದಿರಾಳ ‘ತಿಥಿ’ಯ ಮುಹೂರ್ತ ನಿಗದಿಯಾಗಿತ್ತು. ಅದೇ ದಿನದಂದೇ ಆಕೆಯಯ ಸಾವನ್ನು ನಿರ್ಧರಿಸಿದ್ದಕ್ಕೆ ನಿರ್ದಿಷ್ಟ ಕಾರಣವೂ ಇತ್ತು!

ಇವರಿಬ್ಬರ ಸಾವಿನ ಕಥೆ ಬರೀ ಸಾವಾಗಿಯೇ ಉಳಿಯಲಿಲ್ಲ, ಬದಲಾಗಿ ವಚನ ತಪ್ಪಿದ ನಾಯಕರ ದುಸ್ಥಿತಿಯಾಗಿ, ಸಂತರ ಶಾಪದ ಫಲವಾಗಿ ಹಾಗೂ ಲಕ್ಷಾಂತರ ಸಾವಿನ ದಂತಕಥೆಯಾಗಿ ಇತಿಹಾಸದ ಪುಟಗಳಲಿ ನಗುತ್ತಾ ಕುಳಿತಿತು ಯಾರಿಗೂ ಸುಳಿವು ಹತ್ತದಂತೆ!

ಯಾರೇ ಆಗಲಿ, ಭಾರತದಲ್ಲಿದ್ದಾಗ ಭಾರತೀಯನಾಗಿರಬೇಕು. ಭಾರತೀಯರ ಮತಗಳಿಗೆ ಕೇವಲ ಬೇಡುವುದಲ್ಲ, ಬದಲಾಗಿ ಅವರ ಭಾವನೆಗಳಿಗೆ, ಸಂಪ್ರದಾಯಗಳಿಗೆ ಹಾಗೂ ಅಭಿಪ್ರಾಯಗಳಿಗೆ ಬೆಲೆ ಕೊಡುವುದು ಅವಶ್ಯವಾಗಿರುತ್ತದೆಯೆಂಬುದು ಸುಳ್ಳಲ್ಲ. ಯಾವತ್ತು ಕಾಂಗ್ರೆಸ್ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಹೊಡೆತ ನೀಡಲು ಶುರು ಮಾಡಿದರೋ, ಅವತ್ತಿನಿಂದಲೇ ಬಹುಷಃ ಅದೆಷ್ಟೋ ಜನರ ಕಣ್ಣೀರು ಇಂದಿರಾಳ ಬದುಕಿನಲ್ಲಿ ಆಟ ಆಡಲು ಪ್ರಾರಂಭ ಮಾಡಿದ್ದನ್ನು ಆಕೆಯೂ ಗಮನಿಸಿರಲೇ ಇಲ್ಲ. ಒಂದಷ್ಟು ಘಟ್ಟದವರೆಗೆ ತಪ್ಪುಗಳನ್ನು ಭಾರತೀಯರು ಕ್ಷಮಿಸಿದರೂ, ದೈವತ್ವ ಹಾಗೂ ಮೂಕ ಪ್ರಾಣಿಗಳ ರೋದನೆ ಕ್ಷಮಿಸಲೇ ಇಲ್ಲ!!!

1971 ರ ಕಾಲಘಟ್ಟದಲ್ಲಿ ಎಲ್ಲಿ ಇಂದಿರಾ ಗಾಂಧಿಯ ರಾಜಕೀಯ ನಡೆಯೊಂದು ಮುಗ್ಗರಿಸತೊಡಗಿತೋ, ಆಕೆಗೆ ಹಿಂದೂ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಬೇಕಾದ ಅನಿವಾರ್ಯತೆಯೂ ಬಂದೊದಗಿತ್ತು. ಹಿಂದೂಗಳ ಮತಗಳ ಗೆಲ್ಲುವುದಕ್ಕೆ ಆಕೆ ಹಿಂದುತ್ವದ ಸಿದ್ಧಾಂತಗಳನ್ನು ಬಳಸತೊಡಗಿದಳೋ, ಅಥವಾ ನಿಜವಾಗಿಯೂ ಆಕೆ ಹಿಂದೂವಾಗಿಯೇ ಕೈ ಮುಗಿಯಲು ಶುರು ಹಚ್ಚಿದ್ದಳೋ, ಆದರೆ, ಅದೃಷ್ಟ ಹಾಗೂ ಭಾರತೀಯರ ಮುಗ್ಧತನ ಆಕೆಯನ್ನು ಕೈ ಬಿಡಲಿಲ್ಲ.

ತೀರಾ ಕಷ್ಟಕರವಾದ ಪರಿಸ್ಥಿತಿ ಬಂದಾಗ, ಆಕೆ ಸಂತ ಕರ್ಪಾತ್ರಿ ಹಾಗೂ ವಿನೋಬಾ ಭಾವೆಯವರ ಮಾರ್ಗದರ್ಶನ ಹಾಗೂ ಆಶೀರ್ವಾದ ಪಡೆಯಲು ತೆರಳಿದ್ದಳಷ್ಟೇ! ಆಗಿನ ಕಾಲಘಟ್ಟದಲ್ಲಿ, ಆ ಎರಡು ವ್ಯಕ್ತಿತ್ವಗಳೂ ಸಹ ಅಧ್ಯಾತ್ಮದಲ್ಲಿ ದಿಗ್ಗಜರೇ! ಸಂತ ಕಪಾತ್ರಿ ಮಹರಾಜ್ ಆಕೆ ಚುನಾವಣೆಯಲ್ಲಿ ಗೆಲ್ಲುವುದಾಗಿ ಅಭಯ ನೀಡಿದರಾದರೂ ಒಂದು ವಚನವನ್ನೂ ತೆಗೆದುಕೊಂಡರು. ‘ಆಕೆ ಚುನಾವಣೆಯಲ್ಲಿ ಗೆದ್ದದ್ದೇ ಆದರೆ, ಆಕೆ ಗೋಹತ್ಯೆಯನ್ನು ನಿಲ್ಲಿಸಬೇಕು’ ಎಂಬುದಾಗಿತ್ತು! ಇಂದಿರಾಳೂ ಅದಕ್ಕೆ ನಗುತ್ತಲೇ ಒಪ್ಪಿದ್ದಳು! ಆಗ ದಿನಕ್ಕೆ 15000 ಗೋವುಗಳನ್ನು ಕಡಿಯಲಾಗುತ್ತಿತ್ತಷ್ಟೇ ಭವ್ಯ ಭಾರತದಲ್ಲಿ!

ಆದರೆ. . . . .

ಸಂತ ಕಪಾತ್ರಿ ಹೇಳಿದಂತೆ ಆಕೆಯೇನೋ ಗೆದ್ದಳು! ಆದರೆ, ಸಂಸತ್ತಿನಲ್ಲಿ ಅದೆಷ್ಟೋ ಬಾರಿ ಗೋಹತ್ಯೆ ನಿಷೇಧದ ಪ್ರಸ್ತಾಪ ಬಂದರೂ ಸಹ ಇಂದಿರಾ ಸೊಲ್ಲೆತ್ತಲಿಲ್ಲ! ಸಂತ ಕಪಾತ್ರಿ ಹಾಗೂ ವಿನೋಭಾ ಭಾವೆ ಮತ್ತೊಮ್ಮೆ ಮಗದೊಮ್ಮೆ ಇಂದಿರಾಳಿಗೆ ನೆನಪಿಸಿದರು. ಉಹೂಂ! ಆಕೆ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಮುಂಚೆ ಇರುವುದಕಿಂತಲೂ ಆಕೆಯ ಅಧರ್ಮದ ಕಾರ್ಯ ಹೆಚ್ಚೇ ನಡೆಯತೊಡಗಿತು! ಗೋಹತ್ಯೆಯೂ ಯಾವುದೇ ಅಡೆತಡೆಗಳಿಲ್ಲದೆಯೇ ಸಾಗಿತು ಕೂಡ!

ಸಂತ ಕಪಾತ್ರಿಯವರಿಗೆ ಹೋರಾಟ ನಡೆಸದೇ ವಿಧಿಯಿಲ್ಲವೆಂದಾಗ ಸಂಸತ್ತಿನ ಎದುರು ತಮ್ಮ ಸಾವಿರಾರು ಹಿಂಬಾಲಕರೊಂದಿಗೆ ಗೋಹತ್ಯಾ ನಿಷೇಧದ ವಿಚಾರವಾಗಿ ಹೋರಾಟ ಆರಂಭಿಸಿದ್ದರಷ್ಟೇ! ಅಷ್ಟರಲ್ಲಿಯೇ, ಇಂದಿರಾ ಗಾಂಧಿಯ ಸರಕಾರ ಅನ್ಯಾಯವಾಗಿ ನಿಶ್ಯಸ್ತ್ರವಾಗಿದ್ದ ಇಬ್ಬರನ್ನು ರಕ್ತಪಾತದಲ್ಲಿ ಮುಳುಗಿಸಿಬಿಟ್ಟಿತು! ಪೋಲಿಸರ ನಿರಂತರ ಹೊಡೆತದಿಂದಲೇ ಸಾವನ್ನಪ್ಪಿದ್ದ ಆ ಹಿಂಬಾಲಕರದ್ದು ಸಂಸತ್ತನ್ನು ಸ್ಫೋಟಗೊಳಿಸುವ ಆಲೋಚನೆಯಿರಲಿಲ್ಲ,.ಅಹಿಂಸಾತ್ಮಕವಾಗಿಯೇ ಹಿಂದೂಗಳ ಪೂಜಾರಾಧಕವಾಗಿದ್ದ ಗೋಮಾತೆಯ ಹತ್ಯೆಯನ್ನು ಭಾರತದಲ್ಲಿ ನಿಲ್ಲಿಸಿ ಎಂಬುದಷ್ಟೇ!

ಇಂದಿರಾ ಸಂತ ಕಪಾತ್ರಿಯವರ ಭಕ್ತರನ್ನೂ ಬಿಡಲಿಲ್ಲ!

ಆಕೆಯ ಕ್ರೂರತೆಯೊಂದು ಮುಂಚೆಯೇ ಅರ್ಥವಾಗಿದ್ದರೆ, ಬಹುಷಃ ಯಾವುದೇ ಕಾರಣಕ್ಕೂ ಸಂತ ಕಪಾತ್ರಿಯವರು ಆಶೀರ್ವದಿಸಿ ಕಳುಹಿಸಿ ಕೊಡುತ್ತಿರಲಿಲ್ಲವೇನೋ! ಎಲ್ಲಿ ಹೋರಾಟ ತೀವ್ರವಾಯಿತೋ, ಇಂದಿರಾ ಒಬ್ಬೊಬ್ಬ ಭಕ್ತರನ್ನು ಗೋವಿನ ಬದಲಾಗಿ ಕತ್ತರಿಸುತ್ತಲೇ ಬಂದಳು. ಅವತ್ತಿನ ವರದಿಯ ಪ್ರಕಾರ, ಆಕೆ 375 ಭಕ್ತರ ಮಾರಣಹೋಮವನ್ನು ನಡೆಸಿದ್ದಳು. ಆದರೆ, ಕಣ್ಣಾರೆ ಆಕೆಯ ಕ್ರೂರತೆಯನ್ನು ನೋಡಿದ್ದವರು ಅಂದಾಜಿಸಿದ್ದು ಬರೋಬ್ಬರಿ 5000 ಭಕ್ತರು!

ಗೋಮಾತೆಯನ್ನುಳಿಸಬೇಕೆಂದು ಹೊರಟ ಭಕ್ತರಿಗೆ ಅದೇ ಸ್ತ್ರೀ ರೂಪದ ಮಾತೃತ್ವ ಅರಿಯದವಳೊಬ್ಬಳು ರಕ್ತಪಾತ ಸೃಷ್ಟಿಸುತ್ತಲೇ ನಡೆದದ್ದನ್ನು ಭಾರತದ
ದುರಂತವೆನ್ನಬೇಕೇ?! ಅಥವಾ ಹಣೆಬರಹವೆನ್ನಬೇಕೋ?! ಅಥವಾ ಇನ್ನೇನೆಂದು ವ್ಯಾಖ್ಯಾನಿಸಬಹುದು?!

ಆಕೆಯ ಕುಟುಂಬವೊಂದು ಬರ್ಬರವಾಗಿಯೇ ಹತ್ಯೆಗೀಡಾದದ್ದು ಶಾಪದಿಂದ!!!

ತನ್ನ ಭಕ್ತರ ಶವಗಳನ್ನು, ಜೀವಚ್ಛಂದ ದೇಹಗಳನ್ನು ನೋಡುತ್ತಾ ಸಾಗಿದ ಸಂತ ಕಪಾತ್ರಿಯವರ ಮನಸ್ಸು ನೊಂದಿತ್ತು. ತನ್ನನ್ನು ನಂಬಿದವರ ಹತ್ಯೆಯಯನ್ನು ಯಾವ ಸಂತ ತಡೆದುಕೊಳ್ಳಬಲ್ಲ?! ಸಂತ ಕಪಾತ್ರಿಯವರು “ಧರ್ಮದ ವಿರುದ್ಧ ನಡೆದ ನಿನ್ನ ಹೆಸರು ಚರಿತ್ರೆಯ ಪುಟಗಳಲಿ ಜನರಿಂದ ಅಪಮಾನಕ್ಕೀಡಾಗುತ್ತದೆ. ಗೋಮಾತೆಯನ್ನುಳಿಸಲು ನಡೆದ ನಮ್ಮ ಹೋರಾಟಗಾರರ ರಕ್ತಪಾತ ನಡೆಸಿದ ನಿನಗೆ ಮುಂದೊಂದು ದಿನ ಇಂತಹದ್ದೇ ಸಾವು ಕಾದಿರುತ್ತದೆ.’ ಎಂದು ಹೇಳುತ್ತಾ ರಕ್ತದಿಂದ ಕೆಂಪಾಗಿದ್ದ ನೆಲದ ಮೇಲೆ ತಮ್ಮ ಹಸ್ತದಿಂದ ಗುದ್ದಿದ್ದರಷ್ಟೇ! ಅದಕ್ಕೆ ಸರಿಯಾಗಿ ಕೆಲವೇ ವರ್ಷಗಳಲಿ ಆಕೆಯ ರಕ್ಷಣೆಗಾರರೇ ಆಕೆಯನ್ನು ಗುಂಡಿಕ್ಕಿ ಕೊಂದರು!

ಇಂದಿರಾ ಅಷ್ಟಕ್ಕೇ ಸಾಯಲಿಲ್ಲ! ಆಕೆಯ ದೇಹದಿಂದ ಅದೆಷ್ಟು ರಕ್ತವನ್ನು ಹೊರಚೆಲ್ಲಿತೋ, ನರಳುತ್ತಲೇ ಒದ್ದಾಡಿ ಪ್ರಾಣಬಿಟ್ಟಳು ಇಂದಿರಾ ಎಂಬ ‘Iron Lady’!!! ಆಕೆಯ ಸಾವಿನ ತಿಥಿ ‘ಅಷ್ಟಮಿ’! ಅವತ್ತು ಭಾರತದಲ್ಲಿ ‘ಗೋಪಾಷ್ಟಮಿ’!!! ಗೋವನ್ನು ಪೂಜಿಸಿ ಕೃಷ್ಣನ ಆರಾಧಿಸುವ ಹಿಂದೂಗಳ ವೈಭವಯುತವಾದ ಹಬ್ಬ!!!!! ಕಾರ್ತಿಕ ಶುಕ್ಲ ಪಕ್ಷದ ಎಂಟನೆಯ ದಿನ ಆಚರಿಸುವ ಈ ಹಬ್ಬದ ದಿನ ಇಂದಿರಾಳಿಗೆ ಸಾವಿನ ತಿಲಕ ಇಟ್ಟಿದ್ದರು ಸಿಖ್ಖರು!!!!

ಕಾಕತಾಳೀಯವೆನ್ನುತ್ತೀರಾ ಈ ಸಾವನ್ನೂ?!!

ರಾಜೀವ್ ಗಾಂಧಿಗೆ ಹಾರ ಹಾಕಲು ಬಾಂಬು ಹಿಡಿದೇ ಬಂದಿದ್ದ LTE ಉಗ್ರಳಾಕೆ! ನೋಡ ನೋಡುತ್ತಲೇ ಸಹಸ್ರ ಸಿಖ್ಖರ ಮಾರಣಹೋಮಕ್ಕೆ ಕಾರಣವಾಗಿದ್ದ, ‘ದೊಡ್ಡ ಮರ ಉರುಳಿದಾಗ ಸಣ್ಣ ಗಿಡಗಳು ಸಾಯುವುದು ಸಹಜ’ ಎಂದು ಸಮರ್ಥಿಸಿಕೊಂಡಿದ್ದ, ಗೋಹತ್ಯಾ ವಿಚಾರವಾಗಿ ತಾಯಿಯ ಪರ ನಿಂತಿದ್ದ ಆತನನ್ನು ನೂರು ಹೋಳುಗಳಾಗಿ ಸಿಡಿಸಿದ್ದ ದಿನದ ತಿಥಿ ಅದೇ ‘ಶುಕ್ಲಪಕ್ಷದ ಎಂಟನೆಯ ದಿನದ ಗೋಪಾಷ್ಟಮಿ.’!!!!!!

ಸುಖಿಸಬಾರದು ಯಾರ ಸಾವನ್ನೂ!!

ಈ ಮಾತು ಕೇಳುವಾಗಲೆಲ್ಲ, ಉಪದೇಶದ ಮೇಲೆಯೇ ರೇಜಿಗೆ ಹುಟ್ಟುತ್ತದೆ ನನಗೆ! ಸಹಸ್ರ ಹಿಂದೂಗಳ ಸಾವಿಗೆ ಕಾರಣವಾದ, ಲಕ್ಷ ಗೋವುಗಳ ಹತ್ಯೆಗೆ ಕಾರಣವಾದ, ಹಿಂದೂ ಧರ್ಮದ ಆಚಾರವನ್ನೇ ತುಳಿದು ನಡೆದವರ ಸಾವನ್ನು ಸುಖಿಸುವ ಹಕ್ಕಿಲ್ಲ ಎಂಬುದು ವಿಷಾದನೀಯ!

ಮತ್ತೆ ಮತ್ತೆ ನೆನಪಿಸುವುದ್ಯಾಕೆ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿರುವುದೊಂದೇ! ‘ಎಲ್ಲಿ ಮತ್ತೆ ಹಿಂದೂಗಳು ರಕ್ತಸಿಕ್ತವಾದ ಇತಿಹಾಸವನ್ನು ಮರೆತು ಮತ್ತದೇ ಇಂದಿರಾ ಗಾಂಧಿಯಂತವಳನ್ನು ಅಧಿಕಾರಕ್ಕೆ ತಂದು, ಮತ್ತೆಲ್ಲಿ ಆಕೆ ಮುಂದಿನ ಪೀಳಿಗೆಯವರಿಗೆ ‘ಹೀರೋಯಿನ್’ ಆಗಿ ಬಿಡುವಳೋ ಎಂಬ ಆತಂಕ ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ!

ಸಂತ ಕಪಾತ್ರಿಯವರ ಶಾಪವೊಂದು ಆಕೆಯ ಕುಟುಂಬವನ್ನು ಅದೇ ರೀತಿಯ ಮರಣವೊಂದನ್ನು ಹೊಂದುವಂತೆ ಮಾಡಿತು ಎಂಬ ಸಮಾಧಾನ
ಕೊನೆಗುಳಿದಿದ್ದಾದರೂ, ಹೇಗೆ ತನ್ನ ನಂಬಿದ್ದ ಸಂತರಿಗೆ ದ್ರೋಹ ಬಗೆದಳೋ, ಆಕೆಯೂ ತನ್ನ ಸ್ವಂತ ಸೊಸೆಯಿಂದಲೇ ಅಪಪ್ರಚಾರಕ್ಕೀಡಾಗಿ ಸಾವನ್ನಪ್ಪಿದ್ದಳು!

ಮತ್ತದೇ ಸಾಲು ನೆನಪಾಗುತ್ತದೆ.. ‘ಕರ್ಮಣ್ಯೇ ವಾಧಿಕಾರಸ್ತು ಮಾ ಫಲೇಶು ಕದಾಚನ. . . !”

– ತಪಸ್ವಿ **

Tags

Related Articles

Close