ಪ್ರಚಲಿತ

ಅಧ್ಯಾಯ ೪: ಪಂಡಿತರ ಬೀಡಾಗಿದ್ದ ಕಾಶ್ಮೀರದಲ್ಲಿ ಹಿಂದೂಗಳಿಗೆ ವಿಧಿಸಿದ್ದ ಷರತ್ತುಗಳು ಎಂತದ್ದು ಗೊತ್ತಾ.? ಆ ಷರತ್ತು ಪಾಲಿಸದಿದ್ದರೆ ಏನಾಗುತ್ತೆ.?

    ಅಧ್ಯಾಯ ೪:
        ಕುತಂತ್ರಕ್ಕೆ ಬಲಿಯಾಗಿ ಸೆರೆಯಾದ ಕೋಟಾ ರಾಣಿಯ ಆಸ್ಥಾನದ ಎರಡು ಕುಡಿಗಳಾದ ಭಟ್ಟ ಭಿಕ್ಷನ ಮತ್ತು ಭಟ್ಟ ಅವತಾರ್ ಅವರ ಹತ್ಯೆಯನ್ನು  ಷಾ ಮೀರ್ ಅತ್ಯಂತ ಕುಟಿಲತೆಯಿಂದಲೂ ಕುಶಲತೆಯಿಂದಲೂ ನಿರ್ವಹಿಸಿದ್ದನು.ಷಾ ಮೀರ್ ತಾನು ಅನಾರೋಗ್ಯ ಪೀಡಿತನಾಗಿದ್ದೇನೆಂದೂ,ಕೊನೆಯುಸಿರೆಳೆಯುತ್ತಿದ್ದೇನೆಂದೂ ಸಹಚರರ ಮೂಲಕ ಸುಳ್ಳು ಸುದ್ದಿಯನ್ನು ಸಾರ್ವಜನಿಕರ ಮಧ್ಯದಲ್ಲಿ ಹರಸಿಸಿದನು.ಸೌಜನ್ಯಕಾರವಾಗಿ ಷಾ ಮೀರ್ ನ ಆರೋಗ್ಯದ ವಿಚಾರಣೆಗಾಗಿ ಆಡಳಿತಗಾರರಾಗಿದ್ದ ಕೋಟಾ ರಾಣಿ ಭಟ್ಟ ಭಿಕ್ಷನ ಮತ್ತು ಭಟ್ಟ ಅವತಾರ್ ರನ್ನು ನಿಯೋಜಿಸಿದರು. ಸೌಜನ್ಯಕ್ಕಾಗಿ ಷಾ ಮೀರ್ ನ ನಿವಾಸಕ್ಕೆ ಪ್ರವೇಶಿಸಿದ ಇವರಿಬ್ಬರನ್ನು ಷಾ ಮೀರ್ ನ ಸಶಸ್ತ್ರ ಪುರುಷರು ನಿರ್ದಯವಾಗಿ ಹತ್ಯೆ ಮಾಡಿದರು.ಈ ಕುಕ್ರತ್ಯದಿಂದ ಕೋಪಗೊಂಡ ಕೋಟಾ ರಾಣಿ ಅವರಿಬ್ಬರ ಸಾವಿಗೆ ಪ್ರತೀಕಾರ ತೀರಿಸಲು ಹೊರಟರು…ಆದರೆ ಕಾಶ್ಮೀರ ಭೂಮಿಯಲ್ಲಿ ಆಶ್ರಯ ಪಡೆದಿರುವ ಷಾ ಮೀರ್ ನನ್ನು ಕೊಲ್ಲುವುದು ಕಾಶ್ಮೀರದ ನೈತಿಕ ನಿಯಮಗಳನ್ನು ಮೀರುತ್ತದೆ ಎಂದು ಹೇಳುವುದರ ಮೂಲಕ ಆಸ್ಥಾನಿಗರು ಕೋಟ ರಾಣಿಯನ್ನು ತಡೆದರು.ಆದರೆ ಟರ್ಕಿಯ ಆಕ್ರಮಣಕಾರರು ಕ್ರೂರಿಗಳಾಗಿ ವರ್ತಿಸಿ ಅನಾಗರೀಕರಾಗಿ ರಾಣಿ ಅಚಲಾಲ ತಲೆಯನ್ನು ಕತ್ತರಿಸಿದಂತೆಯೇ ಕೋಟ ರಾಣಿಯು ಅಂದೇನಾದರೂ ಷಾ ಮೀರ್ ನ ತಲೆಯನ್ನು ಕತ್ತರಿಸಿದ್ದಾರೆ ವೇದ,ಶಿಕ್ಷಣ ವ್ಯಸನಿಗಳಾದ ಸರಳ ಸಜ್ಜನ ಹಿಂದೂಗಳು ಮುಂದೆ ಮುಸಲ್ಮಾನ ಕ್ರೌರ್ಯಕ್ಕೆ ಬಲಿಯಾಗುವುದು ತಪ್ಪುತ್ತಿತ್ತು.ಅಹಿಂಸೆ,ಮೌಲ್ಯಗಳು ಮತ್ತು ಉನ್ನತ ಮಟ್ಟದ ನೈತಿಕತೆಯನ್ನೇ ಜೀವನದ ಧ್ಯೇಯವನ್ನಾಗಿಸಿ ಜೀವಿಸುತ್ತಿದ್ದ ಹಿಂದೂಗಳ ಮನಸ್ಸಿನಲ್ಲಿ ಹೋರಾಟ ಮತ್ತು ಶೌರ್ಯದ ಭಾವನೆಗಳು ತಣ್ಣಗಾಗಿದ್ದವು.
        ಕಾಶ್ಮೀರದಲ್ಲಿ ಮುಸ್ಲಿಂ ಆಳ್ವಿಕೆಯು ಪ್ರಾರಂಭವಾಗುವುದರೊಂದಿಗೆ ಮುಸಲೀಮರು ಮತ್ತು ವಿಶೇಷವಾಗಿ ಸಯ್ಯಿದ್ದ್ ಗಳು ಹಿಂದೂ ಧರ್ಮ ಮತ್ತು ತತ್ವಶಾಸ್ತ್ರಗಳ ಭದ್ರಕೋಟೆಯೆಂದೇ ಪ್ರಸಿದ್ಧವಾಗಿದ್ದ ಕಾಶ್ಮೀರದಲ್ಲಿ ಇಸ್ಲಾಮ್ ಧರ್ಮವನ್ನು ಪಸರಿಸಲು ಉತ್ಸುಕರಾಗಿದ್ದರು. ಅದೇ ಸಮಯದಲ್ಲಿ ತೈಮೂರ್ ಸಯ್ಯಿದ್ಗಳ ಮೇಲೆ ದಬ್ಬಾಳಿಕೆ ನಡೆಸಿ ದೇಶದಿಂದ ಹೊರಹಾಕಿದ್ದನು.ಇವರಲ್ಲೇ ಮುಖ್ಯವಾದ ಸಯ್ಯದ್ ಮೀರ್ ಅಲಿ ತೈಮೂರನ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತನ್ನ ೭೦೦ ಅನುಯಾಯಿಗಳು ಮತ್ತು ಸಂಬಂಧಿಕರೊಂದಿಗೆ ಓಡಿಹೋಗಿ ಕಾಶ್ಮೀರ್ಸ್ದಲ್ಲಿ ಆಶ್ರಯ ಪಡೆದನು.ಕುಲಬುದ್ದೀನ್  ಸುಲ್ತಾನ್ ಕಾಶ್ಮೀರದಲ್ಲಿ ಆತನಿಗೆ ರತ್ನಕಂಬಳಿಯ ಸ್ವಾಗತ ನೀಡಿದ್ದರು.ಮತ್ತು ರಾಜರ ಖರ್ಚಿನಲ್ಲಿ ಅವರ ಜೀವನ ನಡೆಯುತ್ತಿತ್ತು.ಕಾಶ್ಮೀರದ ಮುಸ್ಲಿಂ ಆಡಳಿತಗಾರರಿಂದ ಮಾತ್ರ ಪ್ರೋತ್ಸಾಹ ಪಡೆದಿದ್ದರೂ ಅವರು ಕಾಶ್ಮೀರಕ್ಕೆ ಮೂರು ಬಾರಿ ಭೇಟಿ ನೀಡಿದ್ದರು,ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಮತಾಂತರಗೊಳಿಸುವಲ್ಲಿ ಇವರ ಪಾತ್ರ ಅಪಾರವಾಗಿತ್ತು.
    ಕಾಶ್ಮೀರದ ಹಿಂದೂಗಳ ಮೇಲೆ  ನಡೆದ ಅಸಹ್ಯಕರ ಕಿರುಕುಳ ಮತ್ತು ಚಿತ್ರಹಿಂಸೆಗಳಿಗೆ ಕಾರಣವಾಗುವ ಪರಿಸ್ಥಿತಿಗಳನ್ನು ಸೃಷ್ಟಿಸುವ ಮೂಲಕ ಕಾಶ್ಮೀರದಲ್ಲಿ ಕೋಮು ಶಾಂತಿಯನ್ನು ಬುಡಮೇಲು ಮಾಡುವ ಜವಾಬ್ದಾರಿಯನ್ನು  ಮೀರ್ ಅಲಿ ಅಹಮದಾಲಿ ವಹಿಸಿಕೊಂಡಿದ್ದರು.ತಮ್ಮ ಮೇಲಿದ್ದ ಹಲವು ಒತ್ತಡಗಳ ನಡುವೆಯೂ ಅವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿದ್ದರು.ಮುಸ್ಲಿಂ ಆಡಳಿತಗಾರ ಕುತುಬ್-ಉದ್-ದಿನಿಗೆ ಸಯ್ಯದ್ ನೀಡಿದ ಸಲಹೆಯ ಮೂಲಕ ಅವರು ಕಾಶ್ಮೀರದ ರಾಜಕೀಯವನ್ನು ಕೋಮುವಾದ ಮತ್ತು ಧ್ರುವೀಕರಣವನ್ನಾಗಿಸಲು ಸತತವಾಗಿ ಪ್ರಯತ್ನಿಸಿದರು.ಆದರೆ ಅವರಿಗೆ ತಮ್ಮ ರಾಜ್ಯವನ್ನು ಶೆರಿಯತ್ ಕಾನೂನಿನ ಮೂಲಕ ಆಡಳಿತ ನಡೆಸುವ ಯಾವುದೇ ಉದ್ದೇಶವಿರಲಿಲ್ಲ. ಆದರೆ ಅವರ ನಿರ್ದೇಶನದಂತೆ ಮುಸ್ಲಿಂ ಆಡಳಿತಗಾರ ಹಿಂದೂ ಹಬ್ಬಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸುವಂತಿರಲಿಲ್ಲ..ಆದರೆ ಇತರ ಮುಸ್ಲಿಂ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿದ್ದ ಉಡುಪುಗಳನ್ನೇ ಧರಿಸಬೇಕಾಗಿತ್ತು ಈ ಮೂಲಕ ಅವರು ಹಿಂದೂಗಳಿಂದ ಪ್ರತ್ಯೇಕವಾದ ಗುರುತನ್ನು ಸ್ಥಾಪಿಸಿದ್ದರು ಮತ್ತು ಇತರ ಮುಸ್ಲಿಂ ರಾಷ್ಟ್ರಗಳೊಂದಿಗೆ ತಮ್ಮ ಸಂಬಂಧವನ್ನೂ ಜೋಡಿಸಿದ್ದರು.
    ಮೀರ್  ಅಲಿ ಅಹಮದಾನಿ ಅವರ ಜಖ್ಹೀರಾತುಲ್ಮಾಲುಕ್ ಎಂಬ ಪುಸ್ತಕವು ಕಾಶ್ಮೀರದ ಹಿಂದೂಗಳ ವಿರುದ್ಧ ಮುಸ್ಲಿಂ ಅಸಹಿಷ್ಣುತೆ,ದ್ವೇಷ,ಅಪನಂಬಿಕೆ ಮತ್ತು ದ್ವೇಷ ದ ಅಭಿಯಾನಕ್ಕೆ ಸಾಕ್ಷಿಯಾಗಿದೆ.ಅದರಲ್ಲಿ ಈ ರೀತಿಯಲ್ಲಿ ಬರೆಯಲಾಗಿದೆ.
೧  ವಿಗ್ರಹಾರಾಧನೆಗಾಗಿ ಮುಸ್ಲಿಂ ಆಡಳಿತಗಾರ ದೇವಾಲಯಗಳು ಮತ್ತು  ಹೊಸ ದೇವಾಲಯಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು.
೨. ಮುಸ್ಲಿಮೇತರ ದೇವಾಲಯಗಳ ಮತ್ತು ಮಂದಿರಗಳಿಗೆ ಯಾವುದೇ ರಿಪೇರಿಯನ್ನು ಮಾಡಬಾರದು.
೩.ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ಪ್ರವಾಸಿಗರರಿಗೆ ವಸತಿಯನ್ನು ನಿರಾಕರಿಸುವಂತಿಲ್ಲ..ದೇವಾಲಯಗಳಲ್ಲಿ ಈ ಪ್ರಯಾಣಿಕರನ್ನು ಮುಸ್ಲಿಮೇತರರು ಮೂರು ದಿನಗಳ ಕಾಲ ಅತಿಥಿಗಳನ್ನಾಗಿ ಪರಿಗಣಿಸಬೇಕು.
೪. ಯಾವುದೇ ಮುಸ್ಲಿಮೇತರರು ಮುಸ್ಲಿಂ ರಾಜ್ಯದಲ್ಲಿ ಗೂಡಾಚಾರರಾಗಿ ವರ್ತಿಸಬಾರದು.
೫. ಮುಸ್ಲಿಮೇತರರು ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಬದ್ಧತೆಯನ್ನು ತೋರಿಸಿದರೆ ಅವರಿಗೆ ಯಾವುದೇ ತೊಂದರೆ ನೀಡಲಾಗುವುದಿಲ್ಲ.
೬. ಮುಸ್ಲಿಮೇತರರು ಮುಸ್ಲಿಮರನ್ನು ಗೌರವಿಸಬೇಕು ಮತ್ತು ಮುಸ್ಲಿಮರು ಆವರಣಕ್ಕೆ ಪ್ರವೇಶಿಸಿದಾಗಲೆಲ್ಲ ತಮ್ಮ ಸಮಾರಂಭವನ್ನು ತೊರೆಯಬೇಕು.
೭. ಹಿಂದೂಗಳು ಕುದುರೆ ಸವಾರಿ ಮಾಡಬಾರದು.
೮. ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು.
೯. ಹಿಂದೂಗಳು ವಜ್ರದ ಉಂಗುರವನ್ನು ಧರಿಸಬಾರದು.
೧೦. ವಿಗ್ರಹಾರಾಧನೆಯ ಚಿತ್ರಗಳನ್ನು ಪ್ರದರ್ಶಿಸಬಾರದು.
೧೧. ಹಿಂದೂಗಳು ಮುಸ್ಲಿಮರ ನೆರೆಹೊರೆಯಲ್ಲಿ ಮನೆಗಳನ್ನು ನಿರ್ಮಿಸಬಾರದು.
೧೨. ಮುಸ್ಲಿಮರ ನೆರೆಹೊರೆಯಲ್ಲಿ ತಮ್ಮ ಮರಣಹೊಂದಿದ ಸಂಬಂಧಿಕರನ್ನು ವಿಲೇವಾರಿ ಮಾಡಬಾರದು ಮತ್ತು ಜೋರಾಗಿ ಅಳಬಾರದು.
೧೩. ಅವರು ಮುಸ್ಲಿಂ ಗುಲಾಮರನ್ನು ಖರೀದಿಸುವಂತಿಲ್ಲ.
  ಕೊನೆಯಲ್ಲಿ ಹಿಂದೂಗಳು ಈ ಷರತ್ತುಗಳನ್ನು ಪಾಲಿಸದಿದ್ದಲ್ಲಿ ಅವರ ಜೀವನವನ್ನು ಸ್ವಾಧೀನಪಡಿಸಿಕೊಳ್ಳುವುದು ಮುಸ್ಲಿಮರಿಗೆ ಕಾನೂನು ನೀಡುವ ಹಕ್ಕು ಎಂಬ ಸಲಹೆಯನ್ನೂ ನೀಡುತ್ತದೆ.
  ಉಲ್ಲೇಖ : ಪ್ರೊಫೆಸರ್ ಮೋಹನ್ ಲಾಲ್ ಕೌಲ್

Chapter1:https://postcardkannada.in/the-heaven-on-earth-and-motherland-goddess-sharade-in-kashmir/

Chapter2:https://postcardkannada.in/how-kashmir-became-the-crown-of-sharada-mata/

Chapter 3:https://postcardkannada.in/know-the-history-of-hindus-in-kashmir/

-Deepashree M
Tags

Related Articles

FOR DAILY ALERTS
Close