ಅಂಕಣಪ್ರಚಲಿತ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಹಿಂದಿನ ರಹಸ್ಯ ಬಹಿರಂಗ!! ನೀವು ನೀಡುವ ಹಣ ಎಲ್ಲಿಗೆ ಹೋಗುತ್ತದೆಯೆಂಬುದು ತಿಳಿದಿದೆಯೇ?!!

ತೈಲ ಬೆಲೆ ಏರಿಕೆಯ ಹಿಂದಿನ ರಹಸ್ಯ!!!

ಮೊನ್ನೆ ಹೀಗೇ ಸಂಜೆ ಕುಳಿತಿದ್ದೆ! ಅಷ್ಟರಲ್ಲಿ, ಮೋದಿಯನ್ನು ಶಪಿಸುತ್ತಲೇ ಒಳ ಬಂದಿದ್ದಳು ಗೆಳತಿ! ‘ಪೆಟ್ರೋಲ್ ಬೆಲೆ ಎಷ್ಟಾಗಿದೆ ಗೊತ್ತಾ?! ನಿನ್ನ ಮೋದಿ ಜಿಎಸ್ಟಿ ಮಣ್ಣು ಮಸಿ ಎಂದು ಮಧ್ಯಮ ವರ್ಗದವರಿಗೆ ಸಂಕಷ್ಟಕ್ಕೀಡು ಮಾಡಿಬಿಟ್ಟರು! ದೇಶದ ಆರ್ಥಿಕತೆಯ ಬಗ್ಗೆ ಭಾಷಣ ಬಿಗಿಯುವವರೆಲ್ಲ ಕೊನೆಗೆ ಹೀಗೇ!” ನಾನು ನಿಜಕ್ಕೂಅವಾಕ್ಕಾಗಿದ್ದೆ!

ಹಾಗಾದರೆ ನಿಜಕ್ಕೂ ಪೆಟ್ರೋಲ್ ನ ಬೆಲೆ ಕಡಿಮೆಯಾಗಲಿದೆ ಎಂದಿದ್ದ ಮೋದಿಯವರು ನಿಜಕ್ಕೂ ಸಂಕಷ್ಟಕ್ಕೆ ತಂದಿಟ್ಟರಾ?!

ನೀವೆಲ್ಲ ಗಮನಿಸಿರಬಹುದು! ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಾಗಿ ಮೋದಿಯವರನ್ನು ಗುರಿಯಾಗಿಸಿಕೊಂಡು ವಿರೋಧಿಗಳು ಯಾರೇನೇ ಮಾಡಿದರೂ ಕೇಂದ್ರ ಸರಕಾರವನ್ನೇ ಪ್ರಶ್ನಿಸುತ್ತಿದ್ದಾರೆನ್ನುವುದು ಮಾತ್ರ ದುರಂತ! ಅದರಲ್ಲಿಯೂ, ಪೆಟ್ರೋಲಿಯಮ್ ಉತ್ಪನ್ನಗಳ ಬೆಲೆ ಏರಿಕೆಯಾದ ಬಗ್ಗೆ ಮಾತ್ರ ಬೊಬ್ಬೆ ಹಾಕಿ ಮೋದಿಯನ್ನು ಇವತ್ತಿಗೂ ಪ್ರಶ್ನಿಸುತ್ತಿರುವವರು ಪೆಟ್ರೋಲಿಯಮ್ ಉತ್ಪನ್ನಗಳ ಮೇಲೆ ವಿಧಿಸಿರುವ ಅಬಕಾರಿ ಸುಂಕ ಮತ್ತು ವ್ಯಾಟ್ ಬಗ್ಗೆ ಮಾತ್ರ ತುಟಿ ಪಿಟಿಕ್ ಎನ್ನುವುದಿಲ್ಲ! ಬರೀ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಸಾಮಾನ್ಯ ಜನರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೆ ಕೊಡುವವರಿಗೆ ತಕ್ಕನಾಗಿ ಬುದ್ಧಿ ಇರುವ, ‘ಎಡುಕೇಟೆಡ್’ ಎನ್ನಿಸಿಕೊಳ್ಳುವವರೂ ಪೂರ್ವಾಪರ ಯೋಚನೆಯಿಲ್ಲದೇ ಮಾತನಾಡುವ ರೀತಿ ಇದೆಯಲ್ಲವಾ?! ತೀರಾ ಹಾಸ್ಯಾಸ್ಪದ ಎನ್ನಿಸಿಬಿಡುತ್ತದೆ!

ಅದನ್ನು ಬಿಡಿ! ಮೋದಿಯನ್ನು ವಿರೋಧಿಸುವ (ಯಾರೇ ಆಗಿರಲಿ), ಕಲ್ಲಿದ್ದಲು ಹಗರಣವಾದಾಗ, 2g ಹಗರಣವಾದಾಗ, ಚಾಪರ್ ಹಗರಣವಾದಾಗ, ಅಮಾಯಕರನ್ನು ಬಲಿ ಕೊಟ್ಟಾಗ ಇವರ ಬಾಯಿಗೆ ಬೀಗ ಬಿದ್ದಿತ್ತಷ್ಟೇ! ಬುಡಕ್ಕೆ ಬಂದಾಗ ‘ದೇವರೇ ನೋಡಿಕೊಳ್ಳುತ್ತಾನೆ’ ಎಂದು ಹಿಂದಿನಿಂದ ಜಾರಿಕೊಂಡವರು ‘ಮೋದಿ’ ಎಂದಾಗ ಸ್ವತಃ ದೇವರಾಗಿಬಿಡುತ್ತಾರೆ!!

ಪ್ರಧಾನಿ ಮೋದಿಯೇ ಪೆಟ್ರೋಲ್ ಬೆಲೆ ಏರಿಕೆಗೆ ಮೂಲ ಕಾರಣಕರ್ತರು ಎಂದೆನ್ನುವಾಗ ಸ್ವಲ್ಪ ಅಧ್ಯಯನ ಮಾಡಿ ಕೊನೆಗೆ ತೀರ್ಪು ಕೊಡುವುದು ಒಳಿತೆನ್ನುವುದು ನನ್ನ ಭಾವನೆ!

ಇಲ್ಲಿ ಕೇಳಿ!

ಉದಾಹರಣೆಗೆ, 2017 ರ ಸೆಪ್ಟೆಂಬರ್ 16 ರಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇದ್ದದ್ದು 70.48 ರೂಪಾಯಿಗಳು.

Particulars

 

Price (in Rs)
Trade Party Price or Refinery Transfer Price 27.70
Marketing Margin & Transport Cost 2.75
Dealer Margin 3.57
State  VAT 14.90
Central Excise Duty 21.48
 

Total

 

Rs 70.48

ಮೇಲಿನ ಅಂಶಗಳನ್ನು ಸರಿಯಾಗಿ ಗಮನಿಸಿದರೆ, ಸಲೀಸಾಗಿ ಅರ್ಥವಾಗಿಬಿಡುತ್ತದೆ! “ಕೇಂದ್ರ ಸರಕಾರಕ್ಕೆ ಪೆಟ್ರೋಲ್ ನಲ್ಲಿ ದಕ್ಕುವ ತೆರಿಗೆ ಕೇವಲ 21.48 ರೂಪಾಯಿಗಳು! ಅದರಲ್ಲಿ, ರಾಜ್ಯ ಸರಕಾರಕ್ಕೆ 9.02 ರೂ ಗಳನ್ನು ಕೊಡುತ್ತದೆ! ಅಂದರೆ, ಕೇಂದ್ರ ಸರಕಾರಕ್ಕೆ ಪೆಟ್ರೋಲ್ ನಲ್ಲಿ ಸಿಗುವುದು ಕೇವಲ 12.46 ರೂಪಾಯಿಗಳಷ್ಟೇ!!

ಜೊತೆಗೆ, ರಾಜ್ಯ ಸರಕಾರದ ತೆರಿಗೆ 14.90 ರೂಗಳಾದರೆ, 14.90 + 9.02 = 23.92 ರೂಗಳಿಗೆ ರಾಜ್ಯ ಸರಕಾರಕ್ಕೆ ಪೆಟ್ರೋಲ್ ಸಿಗುತ್ತಿದೆ! (ಆಯಾ ರಾಜ್ಯಗಳ ಸುಂಕ ಬೇರೆ ಬೇರೆ ತೆರನಾಗಿದ್ದರೂ ಸಹ, ಕೇಂದ್ರ ಸರಕಾರಕ್ಕೆ ಸಿಗುವುದು 12.46 ರೂಗಳಷ್ಟೇ! ಇನ್ನುಳಿದಂತೆ, ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವಾಗ ‘ಮಾವನ ಮಕ್ಕಳು’ ಎಂಹ ಹಾಗೆ ಪುಗಸಟ್ಟೆ ಕೊಡುತ್ತಾರೆಯೇ?! ಇಲ್ಲ! ಅದಕ್ಕೂ, ಕೂಡ ರಿಫೈನರಿ, ಪ್ರಾಸೆಸಿಂಗ್, ಸಾಗಾಣಿಕೆ ಎಂದೆಲ್ಲ ಸುಂಕ ಕಟ್ಟಲೇ ಬೇಕು! ಅದಕ್ಕೆ, 27.70 ರೂಗಳಷ್ಟು! ಅಕಸ್ಮಾತ್ ಕಟ್ಟದೇ ಹೋದರೆ, ನಾವೆಲ್ಲರೂ, ಒಂಟೆಯಲ್ಲಿ ಆಯಾ ದೇಶಕ್ಕೆ ಪ್ರಯಾಣಿಸಿ, ನಾವೇ ಪ್ರಾಸೆಸಿಂಗ್ ಎಂದೆಲ್ಲ ಸ್ವತಃ ಮಾಡಿ, ಡಬ್ಬಾಗಳಲ್ಲಿ ತುಂಬಿಸಿಕೊಂಡು ಒಂಟೆಯಲ್ಲಿ ಭಾರತಕ್ಕೆ ಪ್ರಯಾಣಿಸಿ, ನಮ್ಮ ಗಾಡಿಗಳಿಗೆ ತುಂಬಿಸಿಕೊಳ್ಳಬೇಕು!

ಇದನ್ನೂ, ಬಿಟ್ಟರೆ, ದೇಶದೊಳಗೆ ನಡೆಯುವ ಸಾಗಾಣಿಕೆಗೆಳಿಗೆ ಸುಂಕ ಇದೆ! ಅದು, 2.75 ರೂಗಳಷ್ಟು! ಜೊತೆಗೆ, ಡೀಲರ್ ಗಳೂ ಬದುಕಬೇಕಲ್ಲವೇ?! ಪೆಟ್ರೋಲ್ ಬಂಕ್ ನ ಡೀಲರ್ ಗಳು ತೆಗೆದುಕೊಳ್ಳುವುದು 3.57 ರೂಗಳಷ್ಟು! ಒಟ್ಟಾರೆಯಾಗಿ, ನಮಗೆ ಪೆಟ್ರೋಲ್ ಸಿಗುವುದು 70.48 ರೂಗಳಿಗೆ!

ಕೇಂದ್ರ ಸರಕಾರ ಯಾಕೆ 12.46 ರೂಗಳನ್ನಿಟ್ಟುಕೊಳ್ಳಬೇಕು?! ನಿಮ್ಮ ಹಣ ಎಲ್ಲಿಗೆ ಹೋಗುತ್ತಿದೆ ಗೊತ್ತೇ?

ಹೌದು! ಇದು ಬಹಳ ಒಳ್ಳೆಯ ಪ್ರಶ್ನೆ! ಜೊತೆಗೆ ಉತ್ತರವೂ ಅಷ್ಟೇ ಅದ್ಭುತ!! ಯಾಕೆಂದರೆ, ಕೇಂದ್ರ ಸರಕಾರ 12.46 ರೂಗಳನ್ನಿಟ್ಟುಕೊಳ್ಳುವಂತೆ ಮಾಡಿದ್ದು ಇದೇ ನಿಮ್ಮ ಕಾಂಗ್ರೆಸ್! ಕಳೆದೆಷ್ಟೋ ದಶಕಗಳಿಂದ ಆಡಳಿತ ನೀತಿಗಳನ್ನು ಬೇಕಾ ಬಿಟ್ಟಿಯಾಗಿ ಅಳವಡಿಸಿದ್ದು ಇದಕ್ಕೆಲ್ಲ ಕಾರಣ! ಕಾಂಗ್ರೆಸ್ ನ ಆಡಳಿತಾವಧಿಯಲ್ಲಿ ಭಾರತ ತೈಲಕ್ಕಾಗಿ ಅವಲಂಬಿತವಾಗಿದ್ದು ಇರಾನ್ ನನ್ನು! ಪ್ರತಿದಿನ ಇರಾನ್ ನಿಂದ 5 ಲಕ್ಷ ಬ್ಯಾರೆಲ್ ಗಳಷ್ಟು ಪೆಟ್ರೋಲ್ ತೈಲವನ್ನು ಖರೀದಿಸುತ್ತಿದ್ದ ಭಾರತ, ಆಗ ಹಣ ಕೊಡದೇ ಉಳಿಸಿದ ಸಾಲದ ಮೊತ್ತ 43,000 ಕೋಟಿ ರೂಪಾಯಿಗಳು!!

ಸಾಲ ಕೊಟ್ಟ ಇರಾನ್ ಹೋದರೆ ಹೋಗಲಿ ಎಂದು ಬಿಟ್ಟು ಬಿಡುತ್ತದೆಯೇ?!

ಭಾರತ ಸಾಲದಲ್ಲಿದೆ ಎಂಬುದೆಷ್ಟು ಸತ್ಯವೋ ಅದೇ ರೀತಿ ಋಣಭಾರವನ್ನು ಇಳಿಸಿಕೊಳ್ಳುವ ಜವಾಬ್ದಾರಿಯೂ ಅಷ್ಟೇ ಇದೆ! ಎರಡು ವರ್ಷಗಳ ಹಿಂದೆ, ಅಮೇರಿಕಾ ಸೇರಿದಂತೆ ಉಳಿದಂತಹ ಕೆಲ ಪಶ್ಚಿಮ ರಾಷ್ಟ್ರಗಳು ಇರಾನ್ ನ ಮೇಲೆ ನಿರ್ಭಂಧಗಳನ್ನು ಹೇರಿದವು! ಇರಾನ್ ಕೂಡ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತು! ಸಾಲವನ್ನು ಹಿಂತಿರುಗಿಸದೇ ಇದ್ದ ಭಾರತಕ್ಕೆ ಒತ್ತಡ ಹೇರಿತು! ಯೂರೋದ ಪ್ರಸ್ತುತ ಮಾರುಕಟ್ಟೆಗೂ ಅವಲಂಬಿತವಾಗಿರುವ ಸಾಲದ ಮರುಪಾವತಿ ಅಗತ್ಯವಾಗಿ ಹೋಯ್ತು! ಭಾರತೀಯರ ಅದ್ಯಾವ ಪುಣ್ಯವೋ! ಅಷ್ಟರಲ್ಲಾಗಲೇ, ಭಾರತ ಮೋದಿಯ ಆಡಳಿತದಲ್ಲಿತ್ತು! ತಕ್ಷಣವೇ ಸಾಲ ಮರುಪಾವತಿಗೆ ಕ್ರಮ ತೆಗೆದುಕೊಂಡ ಮೋದಿ ಸರಕಾರ, ಕಳೆದ ವರ್ಷ ಮೊದಲ ಕಂತಿನ ಹಣವನ್ನು ಪಾವತಿ ಮಾಡಿತು!

ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳವನ್ನು ಕಡಿಮೆ ಮಾಡಲು, ಸಾಲವನ್ನು ಮರುಪಾವತಿಸಲು, ಮೋದಿ ಸರಕಾರ ತೆಗೆದುಕೊಂಡ ನಿರ್ಧಾರ
ಅನಿವಾರ್ಯವೂ ಆಗಿತ್ತು! ಅದಲ್ಲದೇ, ಪ್ರಶಂಸನೀಯವೂ ಹೌದು! ಯಾಕೆಂದರೆ, ಇಷ್ಟೆಲ್ಲ ಸಾಲವಿದ್ದರೂ, ಕಳೆದ ಹದಿನೆಂಟು ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ನ ಅಬಕಾರಿ ಸುಂಕವನ್ನೂ ಹೆಚ್ಚಿಸಿಲ್ಲ ಮೋದಿ ಸರಕಾರ!

ಆದರೂ, ಪ್ರತಿಭಟಿಸಿದಿರಿ! ಉದ್ದೇಶವಾದರೂ ಏನು?!

ಪ್ರತಿಭಟಿಸುವ ಮುನ್ನ ಸಾಲದ ಮರುಪಾವತಿಗೆ ನಿಮ್ಮ ಹತ್ತಿರ ಯಾವುದಾದರೂ ಐಡಿಯಾ ಇದೆಯೇ?! ಅಥವಾ., 43,000 ಕೋಟಿ ರೂಗಳಲ್ಲಿ ಪ್ರತಿಭಟಿಸಿದವರಲ್ಲಿ ಒಬ್ಬೊಬ್ಬರೂ ಒಂದೊಂದು ಕೋಟಿಯನ್ನು ದೇಶದ ಸಾಲ ತೀರಲಿ ಎಂದು ಕೊಡುವಷ್ಟಿದ್ದೀರೇ?!

ಇನ್ನೂ ಎಂದರೆ, ಈ ಪೆಟ್ರೋಲ್ ಮತ್ತು ಡೀಸೆಲ್ ಇನ್ನೂ ಜಿಎಸ್ಟಿಯ ವ್ಯಾಪ್ತಿಗೆ ಬಂದಿಲ್ಲ! ವ್ಯಾಪ್ತಿಗೆ ತಂದರೆ, ತೀವ್ರವಾಗಿ ಇಳಿಮುಖವಾಗಲಿದೆ ಕೂಡ! ಪೆಟ್ರೋಲ್ ದರ 12% ರ ವ್ಯಾಪ್ತಿಯಲ್ಲಿ 38.01 ರೂಗಳಿಗೆ ಇಳಿದರೆ,18 % ತೆರಿಗೆ ವ್ಯಾಪ್ತಿಯಲ್ಲಿ 40.05 ರೂಗಳಿಗೆ ಹಾಗೂ 28% ವ್ಯಾಪ್ತಿಯಲ್ಲಿ ಪ್ರತಿ ಲೀಟರ್ ಗೆ 43.44 ರೂಗಳಿಗೆ ಇಳಿಯಲಿದೆ! ಅದೇ ರೀತಿ, ಡೀಸೆಲ್ ಕೂಡಾ ಕ್ರಮವಾಗಿ 31 ರೂ, 33 ರೂಗಳಿಗೆ ಮತ್ತು 37 ರೂಪಾಯಿಗಳಿಗೆ ಇಳಿಯಲಿದೆ!

ಇದು ಗೊತ್ತಿದ್ದೇ, ಕಾಂಗ್ರೆಸ್ ಪೆಟ್ರೋಲ್ ದರ ಹೆಚ್ಚಳದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಿಯಬಿಡತೊಡಗಿತು! ಮಾಧ್ಯಮದವರು ರಾತ್ರೋ ರಾತ್ರಿ ವಿಶ್ಲೇಷಕರನ್ನು ಕರೆ ತಂದರು! ಪೆಟ್ರೋಲ್ ಬೆಲೆ ಹೆಚ್ಚಳ ಎನ್ನುತ್ತಿದ್ದ ಹಾಗೆ, ದೇಶದಲ್ಲಿ ಬೆಳಗಾಗುವಷ್ಟರಲ್ಲಿ ಸಾವಿರಾರು ಜನ ‘ಎಜುಕೇಟೆಡ್’ ಗಳಾಗಿ
ಬಿಟ್ಟರು! ವಿಶ್ಲೇಷಕರಾಗಿ ಹೋದರು! ಏನು ಸಮೀಕ್ಷೆ! ಏನು ಚರ್ಚೆ! ಅಬ್ಬಾ! ಇಲ್ಲಿ, ಮನೆಯೊಳ ಕುಳಿತ ಅಮಾಯಕರು ಬದುಕೇ ಮುಗಿಯಿತೆಂದು
ಖಿನ್ನತೆಗೊಳಗಾಗುವಷ್ಟು ಈ ಪೇಯ್ಡ್! ಕ್ಷಮಿಸಿ! ಸೋಲ್ಡ್ ಔಟ್ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದವು! ಯಾಕೆ?!

2019 ರ ಲೋಕಸಭಾ ಚುನಾವಣೆಯ ಹೊತ್ತಿಗೆ ಜಿಎಸ್ಟಿ ವ್ಯಾಪ್ತಿಗೆ ಈ ತೈಲಗಳು ಬಂದರೆ, ದರ ಇಳಿಯುತ್ತದೆ! ಮತ್ತೆ, ಮೋದಿ ಸರಕಾರ ಆಡಳಿತ ನಡೆಸುತ್ತದೆ ಎಂಬುದು ಖಾತ್ರಿಯಾಗಿದ್ದೇ ನರಿಗಳು ಊಳಿಟ್ಟವು! ದರ ಇಳಿಕೆಯಾದಾಗಲಾದರೂ, “ನಮ್ಮ ಹೋರಾಟದ ಪ್ರತಿಫಲ” ಎಂದು ಕುರಿಗಳಾಗುವವರನ್ನಂತೂ ಕುರಿಗಳನ್ನಾಗಿ ಮಾಡಬಹುದಲ್ಲ ಎಂಬ ಚಾಣಾಕ್ಷತನ!

ಪ್ರತಿಭಟಿಸುವುದು ತಪ್ಪಲ್ಲ! ಆದರೆ, ಅನ್ಯಾಯಕ್ಕೆ ಮಾತ್ರ ಪ್ರತಿಭಟಿಸಬೇಕೆಂಬುದು ನೆನಪಿರಲಿ! ಪೂರ್ವಾಪರ ಗೊತ್ತಿಲ್ಲದೇ, ಅಂಕಿ ಅಂಶಗಳನ್ನಿಟ್ಟುಕೊಳ್ಳದೇ, ಕೇವಲ ಯೋಚಿಸಬಲ್ಲೆ ಎಂಬುದನ್ನೇ ಇಟ್ಟುಕೊಂಡು, ಎಲ್ಲರೂ ಮೋದಿಯವರನ್ನು ಹೊಗಳುವಾಗ, ನಾವು ಡಿಫರೆಂಟ್ ಎಂದು ತೋರಿಸಲು ಹೋಗಿ ಪ್ರತಿಭಟಿಸುವ ಮುನ್ನ ಸ್ವಲ್ಪ ಎಚ್ಚರವಹಿಸಿ! ರಾಷ್ಟ್ರದ ಹಿತಾಸಕ್ತಿಯ ವಿರುದ್ಧವೇ ನಿಲ್ಲುವ ಸಿದ್ಧಾಂತಗಳು ಯಾವತ್ತೂ ಶ್ರೇಯಸ್ಕರವಲ್ಲ! ದೇಶಕ್ಕೂ, ಸಮಾಜಕ್ಕೂ, ಕೊನೆಗೆ ನಿಮಗೂ!

– ತಪಸ್ವಿ

Tags

Related Articles

Close