ಪ್ರಚಲಿತ

ತಿರುಪತಿಯ ಬೊಕ್ಕಸದಿಂದ ಹಣ ಕೊಳ್ಳೆ ಹೊಡೆದು ಅಲ್ಪರಿಗೆ ಸುರಿಯುತ್ತಿರುವ ಚಂದ್ರಬಾಬು ನಾಯ್ಡು ಕೈಗಳಿಂದ ತಿರುಪತಿಯನ್ನು ಮುಕ್ತಗೊಳಿಸುವ ಪ್ರತಿಜ್ಞೆಗೈದ ಹಿಂದೂ ಸಿಂಹ ಡಾ.ಸುಬ್ರಮಣ್ಯನ್ ಸ್ವಾಮಿ!!

ಡಾ ಸುಬ್ರಮಣ್ಯನ್ ಸ್ವಾಮಿ ಒಂದು ವಿಷಯವನ್ನು ಕೈಗೆತ್ತಿಕೊಂಡರೆಂದರೆ ಸಾಕು, ಅಲ್ಲಿಗೆ ಎದುರಿಗಿದ್ದವರ ಕಥೆ ಮುಗಿಯೆತೆಂದೆ ಅರ್ಥ. ಇತ್ತೀಚಿನ ದಿನಗಳಲ್ಲಿ “ಜಾತ್ಯಾತೀತ”ರಾಗಿರುವ ಚಂದ್ರಬಾಬು ನಾಯ್ಡು, ತಿರುಪತಿಯ ಬೊಕ್ಕಸಕ್ಕೆ ಕೈ ಹಾಕಿ ಕೋಟ್ಯಂತರ ರುಪಾಯಿಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ತಿರುಪತಿಯ ದೇವಸ್ಥಾನದಲ್ಲಿ ಅಕ್ರಮಗಳು ನಡೆಯುತ್ತಿರುವುದು ತಿಳಿದಿದ್ದರೂ ತನಗೂ ಅದಕ್ಕೂ ಸಂಬಂಧವೆ ಇಲ್ಲದಂತೆ ಇದ್ದು ಬಿಟ್ಟಿದ್ದಾರೆ. ಆಂಧ್ರದ ಮೂಲೆ ಮೂಲೆಗಳಲ್ಲಿ ಮಿಶನರಿಗಳು ಎಗ್ಗಿಲ್ಲದೆ ಮತಾಂತರ ನಡೆಸುತ್ತಿದ್ದರೂ ಕೆಪ್ಪ-ಕುರುಡರಂತೆ ವರ್ತಿಸುತ್ತಿದ್ದಾರೆ. ಇದೀಗ ಬಂದ ವರದಿಯ ಪ್ರಕಾರ ಚಂದ್ರಬಾಬು ನಾಯ್ಡು ಸರಕಾರ 5 ಕೋಟಿ ರುಪಾಯಿಗಳನ್ನು ರಾಜ್ಯದ ಮಸೀದಿಗಳನ್ನು ಸರಿಪಡಿಸಲು ನೀಡಲಿದೆ ಎಂದು ತಿಳಿದು ಬಂದಿದೆ. ತಿರುಪತಿ ದೇವಸ್ಥಾನವನ್ನು ದುರಸ್ತಿ ಮಾಡಲು ಹಣವಿಲ್ಲ, ಆದರೆ ಮಸೀದಿ ಸರಿಪಡಿಸಲು ಹಣವಿದೆ!!

ಹಿಂದೂ ಪತ್ರಿಕೆಯ ವರದಿಯ ಪ್ರಕಾರ “ರಂಜಾನ್ ತೋಹಫಾ” ಅನ್ನು 12 ಲಕ್ಷ ಮುಸ್ಲಿಂ ಕುಟುಂಬಗಳಿಗೆ ತಲುಪಿಸಲು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಗೆ ಸೂಚಿಸಲಾಗಿದೆ. ಒಂದೆಡೆ ಮೋದಿ ಸರಕಾರ ಗುರುದ್ವಾರಾದ ಲಂಗರ್ ಸೇವೆಯನ್ನು ಜಿ.ಎಸ್.ಟಿ ವಿನಾಯಿತಿಗೊಳಿಸಿ ಹಣ ಮರು ಪಾವತಿ ಮಾಡುತ್ತಿದೆ. ಇನ್ನೊಂದೆಡೆ, ಆಂಧ್ರ ಸರಕಾರ ಹಿಂದೂ ಮಂದಿರದ ಹಣ ಕೊಳ್ಳೆ ಹೊಡೆದು ಅಲ್ಪರಿಗೆ ತೊಹಫಾ ನೀಡುತ್ತಿದೆ. ಎಷ್ಟು ವ್ಯತ್ಯಾಸ ಎರಡು ಸರಕಾರಗಳಲ್ಲಿ. ನಿಮಗೆ ಯಾವ ಸರಕಾರ ಬೇಕು ಎನ್ನುವುದನ್ನು ಸರಿಯಾಗಿ ಯೋಚಿಸಿ. ಹಿಂದೂ ವಿರೋಧಿಗಳ ಕೈಗಳಲ್ಲಿ ಅಧಿಕಾರ ನೀಡುವ ಮೊದಲು ನೂರು ಬಾರಿ ಆಲೋಚಿಸಿ ಹಿಂದೂಗಳೆ.

ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ರಂಜಾನ್ ತಿಂಗಳಲ್ಲಿ “ಇಫ್ತಾರ್ ಕೂಟಗಳನ್ನು ಸಂಘಟಿಸಲು” 5 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗುವುದೆಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಶುಕ್ರವಾರ ವೇಲಾಗುಪಡಿ ಸಭೆಯಲ್ಲಿ ನಾಯ್ಡು ಸ್ವತಃ ಈ ಘೋಷಣೆ ಮಾಡಿದ್ದಾರೆ. ಆಂಧ್ರ ಸರಕಾರವು ಪ್ರಸಕ್ತ ಹಣಕಾಸು ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 1,100 ಕೋಟಿ ರೂ.ಗಳನ್ನು ನಿಗದಿಪಡಿಸಿದೆ ಮತ್ತು ಎಲ್ಲಾ ಭರವಸೆಗಳನ್ನು 2018 ರ ಅಂತ್ಯದ ವೇಳೆಗೆ ಅತ್ಯುತ್ತಮವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ಕೂಡಾ ನೀಡಿದೆ!! ಹಿಂದೂಗಳ ದುಡ್ಡು, ಅಲ್ಪರ ಜಾತ್ರೆ !! ನಾಚಿಗೆ ಆಗಬೇಕು ಇವರ ಜನ್ಮಕ್ಕೆ. ಇಂತಹ ಘೋರ ಹಿಂದೂ ವಿರೋಧೀಗಳ ಕೈಗೆ ಆಡಳಿತ ನೀಡುತ್ತಾರಲ್ಲಾ ಹಿಂದೂಗಳು, ಅವರಿಗೆ ನಾಚಿಗೆ ಆಗಬೇಕು. ತಮ್ಮ ಕೈಯಾರೆ ತಮಗೆ ಗುಂಡಿ ತೋಡುವ ಹಿಂದೂಗಳಿರುವವರೆಗೆ ದೇಶ ಉದ್ಧಾರ ಆಗುವುದಿಲ್ಲ. ಚಂದ್ರಬಾಬು ನಾಯ್ಡು ಅಂತವರಿಗೆ ಪಾಠ ಕಲಿಸಲು ಡಾ. ಸುಬ್ರಮಣ್ಯನ್ ಸ್ವಾಮಿಯೆ ಸರಿ. ತಿರುಮಲ ತಿರುಪತಿ ದೇವಸ್ಥಾನವನ್ನು ಧರ್ಮ ದ್ರೋಹಿಯ “ಕೈ”ಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆ ಕೈಗೊಂಡು ನಾಯ್ಡು ವಿರುದ್ದ ಯುದ್ದ ಹೂಡಲು ಸಜ್ಜಾಗಿದ್ದಾರೆ ಡಾ.ಸ್ವಾಮಿ.

ತಿರುಮಲ ತಿರುಪತಿಯ ಮುಖ್ಯ ಅರ್ಚಕನನ್ನು ತೆಗೆದು ಹಾಕಿರುವುದು ಅಸಂವಿಧಾನಿಕ ಮತ್ತು ತಕ್ಷಣವೇ ಅವರನ್ನು ಪುನಃಸ್ಥಾಪಿಸಬೇಕು ಎಂದು ಡಾ. ಸುಬ್ರಹ್ಮಣ್ಯನ್ ಸ್ವಾಮಿ ಸರ್ವೋಚ್ಚ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಮಾತ್ರವಲ್ಲದೆ ತಿರುಪತಿ ದೇವಸ್ಥಾನವನ್ನು ನಾಯ್ಡು ಕೈಗಳಿಂದ ಮುಕ್ತ ಗೊಳಿಸಲು ತನ್ನ ಕಾನೂನು ವಿಶೇಷಜ್ಞರ ತಂಡದೊಂದಿಗೆ ರಿಟ್ ಪಿಟಿಷನ್ ಹಾಕುವ ತಯಾರಿಯಲ್ಲಿ ನಿರತರಾಗಿದ್ದಾರೆ. ತನ್ನ ತಂಡದ ಸದಸ್ಯರಾದ ಮೋಹನ್ ದಾಸ್, ಟಿ.ಆರ್ ರಮೇಶ್, ಆರ್.ರವಿ ಜೊತೆಗೂಡಿ ನ್ಯಾಯಾಲಯದಲ್ಲಿ PIL ಹಾಕುವ ತಯಾರಿಯಲ್ಲಿ ತೊಡಗಿದ್ದಾರೆ ಡಾ.ಸ್ವಾಮಿ. ಇದಕ್ಕೆ ಮುನ್ನ ರಾಜ್ಯ ಬಿ.ಜೆ.ಪಿಯು ಕೇಂದ್ರ ಸರ್ಕಾರದ ಪುರಾತತ್ತ್ವ ಇಲಾಖೆಗೆ ಪತ್ರ ಬರೆದು ದೇವಸ್ಥಾನವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿತ್ತು. ಕೇವಲ ತಿರುಪತಿ ಮಾತ್ರವಲ್ಲ, ದೇಶದ ಎಲ್ಲಾ ದೇವಸ್ಥಾನಗಳನ್ನು ಸರಕಾರದ ಸುಪರ್ದಿಯಿಂದ ಮುಕ್ತಗೊಳಿಸಬೇಕು, ಇಲ್ಲವೆ ದೇವಸ್ಥಾನದ ಹಣ ಕೇವಲ ದೇವಸ್ಥಾನಕ್ಕೆ ಹಾಗೂ ಭಕ್ತರಿಗೇ ಮೀಸಲು ಎನ್ನುವ ಕಾನೂನು ತರಬೇಕು.

ತಿರುಪತಿ ದೇವಸ್ಥಾನದಲ್ಲಾಗುತ್ತಿರುವ ಅಕ್ರಮಗಳನ್ನು ಅಲ್ಲಿಯ ಮುಖ್ಯ ಅರ್ಚಕ ರಮಣ ದೀಕ್ಷಿತಲು ಬಯಲಿಗೆಳೆದ ಬಳಿಕ TTDಯು ಅವರನ್ನು ಬಾಲಜಿಯ ಸೇವೆಯಿಂದ ಕಿತ್ತೊಗೆದಿದೆ. ಆಡಳಿತ ಮಂಡಳಿಯ ಈ ನಿರ್ಧಾರದ ವಿರುದ್ಧವೂ ಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ರಾಮ ಸೇತುವನ್ನುಳಿಸಿದ ಹಿಂದೂ ಸಿಂಹ ತಿರುಮಲ ದೇವಸ್ಥಾನವನ್ನೂ ರಕ್ಷಿಸುತ್ತಾರೆ ಎನ್ನುವ ಭರವಸೆ ಹಿಂದೂಗಳಿಗಿದೆ. ಹಿಂದೂ ವಿರೋಧಿ, ಜಾತ್ಯಾತೀತ ಚಂದ್ರಬಾಬು ನಾಯ್ಡು ಕೈಗಳಿಂದ ತಿರುಮಲವನ್ನು ರಕ್ಷಿಸಲು ತಿರುಪತಿ ಬಾಲಾಜಿಯ ದಯೆ ಡಾ. ಸ್ವಾಮಿ ಮೇಲೆ ಸದಾ ಇರಲಿ ಮತ್ತು ಆದಷ್ಟು ಬೇಗ ಹಿಂದೂಗಳಿಗೆ ನ್ಯಾಯ ದೊರಕಲಿ.

-ಶಾರ್ವರಿ

Tags

Related Articles

Close