ಪ್ರಚಲಿತರಾಜ್ಯ

ಬಿಗ್ ಬ್ರೇಕಿಂಗ್: ಘೋಷಣೆಯಾಯ್ತು ಚುನಾವಣಾ ದಿನಾಂಕ! ಶುರುವಾಯಿತು ರಾಜಕೀಯ ಪಕ್ಷಗಳ ನಡುಕ! ಯಾವಾಗ ಚುನಾವಣೆ ಯಾವಾಗ ರಿಸಲ್ಟ್?

ಕರ್ನಾಟಕಕ್ಕೆ ಕರ್ನಾಟಕವೇ ಕಾದು ಕುಳಿತಿದ್ದಂತಹ ಕರ್ನಾಟಕ ವಿಧಾನ ಸಭಾ ವಿಧಾನ ಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಕೋಟ್ಯಾಂತರ ಜನರು ಛಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಆ ದಿನ ಕೊನೆಗೂ ಬಂದೊದಗಿದೆ. ಎಲ್ಲರು ನಿರೀಕ್ಷಿಸುತ್ತಿದ್ದಂತೆಯೇ ಮೇ ತಿಂಗಳಿನಲ್ಲೇ ರಾಜ್ಯ ವಿಧಾನ ಸಭಾ ಚುನಾವಣೆ ಎದುರಾಗಲಿದೆ.

ಫಿಕ್ಸ್ ಆಯ್ತು ಚುನಾವಣೆಯ ಡೇಟ್…

ರಾಜ್ಯ ಚುನಾವಣಾ ಆಯೋಗದಿಂದ ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಂಕ ಹೊರಬಿದ್ದಿದೆ. ಮುಂದಿನ ಮೇ ತಿಂಗಳಿನ 12ನೇ ತಾರೀಕಿನಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದು, ರಾಜ್ಯಭಾರವನ್ನು ನಡೆಸುತ್ತಾ ಇದೆ. ಈಗಾಗಲೇ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸನ್ನದ್ಧರಾಗಿ ನಿಂತಿದ್ದು, ಇದೀಗ ರಾಜಕಾರಣಿಗಳ ಎದೆಯಲ್ಲಿ ಮತ್ತಷ್ಟು ನಡುಕ ಆರಂಭವಾಗಿದೆ. ಮುಂದಿನ ಮೇ ತಿಂಗಳ 12ನೇ ತಾರೀಕಿನಂದು ರಾಜ್ಯದಲ್ಲಿ ಚುನಾವಣಾ ದಿನಾಂಕ ಫಿಕ್ಸ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಹುರುಪು ಬಂದಿದೆ.

ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಕೆ-27ಕ್ಕೆ ವಾಪಾಸ್..!

ಮೇ 12 ರಂದು ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಅದರ ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಕೆಯಾಗಲಿದೆ. ವಿವಿದ ಪಕ್ಷಗಳ ಅಭ್ಯರ್ಥಿಗಳಿಂದ ಏಪ್ರಿಲ್ 17ಕ್ಕೆ ನಾಮ ಪತ್ರ ಸಲ್ಲಿಸಲು ದಿನಾಂಕ ನಿಗಧಿಯಗಿದೆ. ಹಾಗೂ ದಿನಾಂಕ ಏಪ್ರಿಲ್ 27ಕ್ಕೆ ನಾಮ ಪತ್ರ ವಾಪಾಸ್ ಪಡೆಯುವಂತಹ ಪ್ರಕ್ರಿಯೆಗೂ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆಗೆ ನಾಮ ಪತ್ರ ಸಲ್ಲಿಸಿದ್ದರೂ ನಂತರ ವಾಪಾಸು ಪಡೆಯುವವರು ದಿನಾಂಕ ಏಪ್ರಿಲ್ 27ಕ್ಕೆ ಹಿಂಪಡೆಯಬಹದಾಗಿದೆ.

ಮೇ 15ಕ್ಕೆ ಹಣೆಬರಹ ಬಯಲು..!

ಕಳೆದ ಕೆಲ ತಿಂಗಳಿನಿಂದ ರಾಜ್ಯದಲ್ಲಿ ರಾಜಕೀಯ ಹಾಗೂ ಚುನಾವಣಾ ಕಹಳೆ ಮೊಳಗಿದ್ದು, ಅದು ಚುನಾವಣೆ ನಡೆದು ಫಲಿತಾಂಶದ ಮೂಲಕ ಅಂತ್ಯಗೊಳ್ಳಲಿದೆ. ಏಪ್ರಿಲ್ 17 ಕ್ಕೆ ನಾಮಪತ್ರ ಸಲ್ಲಿಸಿ, 27ಕ್ಕೆ ನಾಮಪತ್ರ ವಾಪಾಸು ಪಡೆದು ನಂತರ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಮೇ 12ನೇ ತಾರೀಕಿನಂದು ರಾಜ್ಯದಲ್ಲಿ ಮಹಾ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಮೇ 15ಕ್ಕೆ ಅಭ್ಯರ್ಥಿಗಳ ಹಣೆ ಬರಹ ಬಯಲಾಗಲಿದೆ. ಮೇ 15ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ರಾಜ್ಯದಲ್ಲಿ ಮುಂದಿನ ಸರ್ಕಾರ ಯಾವುದು ಎಂಬ ಸ್ಪಷ್ಟ ನಿರ್ಧಾರ ಅಂದು ಮತದಾರರು ನೀಡಲಿದ್ದಾರೆ.

ಒಂದೇ ಹಂತದಲ್ಲಿ ನಡೆಯಲಿದೆ ಚುನಾವಣೆ…

ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣಾ ದಿನಾಂಕವನ್ನು ವ್ಯತ್ಯಾಸ ಮಾಡಲಿಲ್ಲ. ಈವರೆಗೂ ನಡೆದಂತೆ ಈ ಬಾರಿಯೂ ಒಂದೇ ದಿನದಲ್ಲಿ ರಾಜ್ಯದಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. 224 ರಾಜ್ಯ ವಿಧಾನ ಸಭಾ ಕ್ಷೇತ್ರಗಳ ಸುಮಾರು 2 ಸಾವಿರಕ್ಕೂ ಅಧಿಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ನಡೆಯುವ ಚುನಾವಣೆಯು ಒಂದೇ ದಿನದಲ್ಲಿ ನಡೆಯಲಿದೆ. ಕರ್ನಾಟದಲ್ಲಿ ಈವರೆಗೂ ಬಹುತೇಕ ಒಂದೇ ಹಂತದಲ್ಲಿ ಚುನಾವಣೆ ನಡೆಸಿಯೇ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಚುನಾವಣಾ ಆಯೋಗ ಈ ಬಾರಿಯೂ ಒಂದೇ ದಿನ ಚುನಾವಣೆಯನ್ನು ನಡೆಸಿ ಈ ಹಿಂದಿನ ದಾರಿಯನ್ನೇ ಅನುಸರಿಸಿಕೊಂಡು ಹೋಗುತ್ತಿದೆ. ರಾಜಕೀಯ ಪಕ್ಷಗಳ ಹಣ ಖರ್ಚುಗಳ ಮೇಲೂ ನಿಗಾ ಇಡುವ ಈ ಚುನಾವಣಾ ಆಯೋಗ ಇದಕ್ಕಾಗಿ ಕಠಿಣ ಯೋಜನೆಯನ್ನೇ ಜಾರಿಗೆ ತರುವ ನಿರೀಕ್ಷೆ ಇದೆ.

ಈ ಬಾರಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಮತದಾರರ ಪಟ್ಟಿಯೂ ಸಿದ್ದವಾಗಿದ್ದು, ಈ ಬಾರಿ 4.96 ಕೋಟಿ ಮತದಾರರು ಮತದಾನ ಮಾಡಲು ಅರ್ಹರಾಗಿದ್ದಾರೆ. ಶೇಕಡಾ 100ರಷ್ಟು ಫೋಟೋ ವೋಟರ್ಸ್ ಇದ್ದಾರೆ. ಪ್ರತಿ ಮತದಾರರಿಗೂ ಫೋಟೋ ವೋಟರ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಮತದಾರರ ಶೆಕಡಾವಾರು ಅನುಪಾತ 72 ಕ್ಕೆ ಏರಿಕೆಯಾಗಿದೆ. ಒಟ್ಟು ಮತಗಟ್ಟೆಗಳು 56690 ಇದ್ದು ಇದರಲ್ಲಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳನ್ನೂ ನಮೂದಿಸಲಾಗಿದೆ.

ಇನ್ನು ಮತದಾನಕ್ಕೆ ಇವಿಎಂ ಜೊತೆಗೆ ವಿವಿ ಪ್ಯಾಡನ್ನೂ ಬಳಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇಂದಿನಿಂದಲೇ ರಾಜ್ಯದಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.ರಾಜಕೀಯ ಪಕ್ಷಗಳು ಇನ್ನು ಮುಂದೆ ಚುನಾವಣಾ ಆಯೋಗ ಹೇಳಿದ ದಾರಿಯಲ್ಲೇ ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ದೆಹಲಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಓಪಿ ರಾವತ್ ಕರ್ನಾಟಕದಲ್ಲಿ ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಯ ದಿನಾಂಕ ಹಾಗೂ ವಿವಿಧ ಅಂಶಗಳನ್ನು ಬಹಿರಂಗಪಡಿಸಿದರು.

ಇನ್ನೂ ಆಗಿಲ್ಲ ಅಭ್ಯರ್ಥಿಗಳ ಆಯ್ಕೆ..!

ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಗಳಲ್ಲಿಯೇ ತೊಡಗಿದ್ದಾರೆ. ಆದರೆ ಯಾವ ಪಕ್ಷವೂ ಈವರೆಗೂ ತನ್ನ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಯ್ಕೆ ಮಾಡುವುದರಿಂದ ರಾಜ್ಯದ ಎಲ್ಲಾ ನಾಯಕರು ದೆಹಲಿಯತ್ತ ಬೆರಳು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜ್ಯದಲ್ಲೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಯಾರು ಅಭ್ಯರ್ಥಿ ಎಂಬ ವಿಚಾರ ಹೊರಬೀಳಲಿದೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಕೆಲವು ಭ್ರಷ್ಟಾಚಾರ ಹಾಗೂ ಗೂಂಡಾಗಿರಿಯ ಪ್ರಕರಣದ ನಡುವೆಯೂ ಭರ್ಜರಿಯಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದೆ. ಈಗಾಗಲೇ ಪ್ರತಿ ವಿಧಾನ ಸಭಾ ಕ್ಷೇತ್ರವನ್ನೂ ಕಾಂಗ್ರೆಸ್ ಪಕ್ಷ ಸುತ್ತಿದೆ. 5 ವರ್ಷ ತನ್ನ ಪಕ್ಷ ಮಾಡಿದ್ದ ಸಾಧನೆಯನ್ನು ಪ್ರಚುರ ಪಡಿಸುತ್ತಾ ಮತ್ತೆ ಪ್ರಚಾರ ಮಾಡಿಕೊಂಡಿದೆ. ಈ ಬಾರಿ ಟೆಂಪಲ್ ರನ್ ಜೋರಾಗಿದ್ದರೂ ಅಲ್ಪಸಂಖ್ಯಾತರನ್ನು ಒಲಿಸಲು ಮತ್ತೆ ಪ್ರಯತ್ನ ಪಡುತ್ತಿದೆ.

ಭಾರತೀಯ ಜನತಾ ಪಕ್ಷದ ನಾಯಕರೂ ಪರಿವರ್ತನಾ ಯಾತ್ರೆಯ ಮೂಲಕ ಪ್ರತಿ ವಿಧಾನ ಸಭಾ ಕ್ಷೇತ್ರವನ್ನು ತಲುಪಿದ್ದಾರೆ. ಈ ಮೂಲಕ ನಾವೂ ಏನು ಕಡಿಮೆ ಇಲ್ಲ ಎಂದು ಸಾರುತ್ತಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ರಾಜ್ಯದಲ್ಲಿ ಕೆಲವು ಹಂತದ ಭರ್ಜರಿ ಭಾಷಣವನ್ನು ನಡೆಸಿದ್ದಾರೆ. ಕಮಲ ಪಡೆಗಳಿಗೆ ಕೇಂದ್ರ ಮೋದಿ ಸರ್ಕಾರದ ಸಾಧನೆ ಹಾಗೂ ವಿವಿದ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳ ಸಾಧನೆಯೇ ಪ್ರಮುಖ ಅಂಶವಾಗಲಿದೆ.

ಇನ್ನು ದಳಪತಿಗಳೂ ಪ್ರಚಾರವನ್ನು ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ವಿಕಾಸ ಪರ್ವದ ಬಸ್ಸನ್ನೇರಿ ಕುಳಿತಿರುವ ಜೆಡಿಎಸ್ ನಾಯಕರು ತಾವು ಗೆಲ್ಲುವ ಕ್ಷೇತ್ರಗಳನ್ನು ಗುರಿಯಾಗಿಸಿ ಪ್ರಚಾರ ಮಾಡುತ್ತಿದೆ.

ಒಟ್ಟಿನಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆಯೂ ಇನ್ನು ವೇಗ ಪಡೆಯಲಿದೆ. ಮೇ8ಕ್ಕೆ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಕುತೂಹಲಗಳಿಗೆ ತೆರೆ ಬೀಳಲಿದೆ.

-ಸುನಿಲ್ ಪಣಪಿಲ

Tags

Related Articles

Close