ಪ್ರಚಲಿತ

ಭಯೋತ್ಪಾದನೆ ನಿರ್ಮೂಲನೆಯೇ ನಮ್ಮ ಧ್ಯೇಯ: ಮತ್ತೆ ಗುಡುಗಿದ ಮೋಟಾ ಭಾಯಿ!

ಭಾರತ ಸ್ವಾವಲಂಬಿ ದೇಶವಾಗಿದ್ದು, ಇಲ್ಲಿ ಹಿಂಸಾಚಾರ, ಎಡ ಉಗ್ರವಾದಗಳಿಗೆ ಸ್ಥಾನವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಎಡಪಂಥೀಯ ಉಗ್ರವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಸಂಸದೀಯ ಸಲಹಾ ಸಭೆಯ ಅಧ್ಯಕ್ಷತೆ ವಹಿಸಿ ಶಾ ಮಾತನಾಡಿದ್ದು, ಎಡ ಉಗ್ರವಾದ, ಹಿಂಸಾಚಾರ ತಡೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಎಡಪಂಥೀಯ ಉಗ್ರವಾದದ ವಿರುದ್ಧ ಕೇಂದ್ರ ಸರ್ಕಾರ ಮೂರು ನೆಲೆಗಳಲ್ಲಿ ಕ್ರಮ ತೆಗೆದುಕೊಂಡಿದೆ. ನಿರ್ಣಯ ವಿಧಾನವನ್ನು ಅನುಸರಿಸಿ ಉಗ್ರವಾದ ನಿಗ್ರಹಕ್ಕೆ ಕ್ರಮ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮರ್ಪಕ ಸಮನ್ವಯ ಸಾಧಿಸುವುದು, ಅಭಿವೃದ್ಧಿ ಕಾರ್ಯಗಳಲ್ಲಿ ಸಾರ್ವಜನಿಕ ಸಹಭಾಗಿತ್ವ ಸಾಧಿಸುವುದರ ಮೂಲಕ ಎಡ ಉಗ್ರವಾದ ದಮನಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸರ್ಕಾರ ಭಾರತದ ಆಡಳಿತ ಚುಕ್ಕಾಣಿ ಹಿಡಿದ ಕಳೆದ ಎಂಟು ವರ್ಷಗಳಲ್ಲಿ ಎಡ ಉಗ್ರವಾದದ ವಿರುದ್ಧ ಐತಿಹಾಸಿಕ ಯಶಸ್ಸನ್ನು ಕಂಡಿರುವುದಾಗಿ ಶಾ ತಿಳಿಸಿದ್ದಾರೆ. ೨೦೨೨ ರಲ್ಲಿ ಎಡ ಉಗ್ರವಾದದ ಕಾರಣಕ್ಕೆ ಬಲಿಯಾಗುತ್ತಿರುವ ಭದ್ರತಾ ಪಡೆಗಳು ಮತ್ತು ಸಾಮಾನ್ಯ ಜನರ ಸಂಖ್ಯೆ ೧೦೦ ಕ್ಕಿಂತ ಕಡಿಮೆಯಾಗಿದೆ. ೨೦೧೦ ಕ್ಕೆ ಹೋಲಿಕೆ ಮಾಡಿದಲ್ಲಿ ಎಡ ಉಗ್ರವಾದದ ಸಂಖ್ಯೆ ೭೬% ಗಳಷ್ಟು ಕಡಿಮೆಯಾಗಿದೆ. ಭಾರತ ಸರ್ಕಾರ ಉಗ್ರರಿಗೆ ನೆರವಾಗುತ್ತಿದ್ದ ಆರ್ಥಿಕ ಮೂಲಗಳನ್ನು ನಾಶ ಮಾಡುವ ಮೂಲಕ ಉಗ್ರಗಾಮಿಗಳ ಬೇರನ್ನೇ ತುಂಡರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಉಗ್ರವಾದ, ಉಗ್ರಗಾಮಿಗಳ ಧಮನಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೇಶಕ್ಕೆ, ದೇಶವಾಸಿಗಳಿಗೆ ಕಂಟಕಪ್ರಾಯವಾದ ಉಗ್ರವಾದದ ಮೂಲವನ್ನೇ ಕಿತ್ತು ಹಾಕುವ ಮೂಲಕ ದೇಶವನ್ನು ಸುಭದ್ರಗೊಳಿಸಲು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ನಡೆಗಳು ಗಮನಾರ್ಹ, ಪ್ರಶಂಸನೀಯ.

Tags

Related Articles

Close