ದೇಶಸಿನೆಮಾ

“ಉರಿ”ಯಲ್ಲಿದೆ ದೇಶದ್ರೋಹಿಗಳು ಉರಿಯುವಂತಹ ಘಟನೆ.! ಭಾರತೀಯ ಸೈನ್ಯದ ಶೌರ್ಯವನ್ನು ಬಿಂಬಿಸುವ ಅದ್ಭುತ ಚಿತ್ರ ಉರಿ…

ಭಾರತೀಯ ಯೋಧರು ಅತ್ಯಾಚಾರಿಗಳು, ಭಾರತೀಯ ಯೋಧರು ದರೋಡೆಕೋರರು, ಭಾರತೀಯ ಯೋಧರು ಅನಾಚಾರಿಗಳು… ಅಕಟಕಟಾ… ಸೈನಿಕರ ಶೌರ್ಯದ ನಯಾಪೈಸೆಯ ಅರಿವಿಲ್ಲದೆ ಎಸಿ ಕೋಣೆಯಲ್ಲಿ ನಿದ್ದೆಬಹೊಡೆದು ಐಶಾರಾಮಿ ಕಾರಿನಲ್ಲಿ ಸುತ್ತಾಡುವ ಸೋಗಲಾಡಿ ದೇಶದ್ರೋಹಿ ರಾಜಕೀಯ ಪಕ್ಷಗಳ ನಾಯಕರ ನಾಲಾಯಕ್ ಮಾತುಗಳಿವು. ಮಾತೆತ್ತಿದರೆ ಸೈನಿಕರನ್ನು ನಿಂದಿಸುವತ್ತಲೇ ತಮ್ಮ ನಾಲಗೆಯನ್ನು ಹೊರಳಿಸುವ ಈ ನಾಯಕರುಗಳು ತನ್ನ ದೇಶವನ್ನೂ ಮುಂದೊಂದು ದಿನ ನಾಲಾಯಕ್ ರಾಷ್ಟ್ರ ಎಂದರೆ ಖಂಡಿತವಾಗಿಯೂ ಅಚ್ಚರಿಯಿಲ್ಲ.

ನೋಡಲೇಬೇಕೊಮ್ಮ ಉರಿ-ದೇಶದ್ರೋಹಿಗಳಿಗಿದು ಸಖತ್ “ಉರಿ”.!

ಅಂದು ನಮ್ಮ ಭಾರತೀಯ ಸೈನಿಕರು ತಮ್ಮ ಕೆಲಸವನ್ನು ಮುಗಿಸಿಕೊಂಡು ಒಂದು ಡೇರೆಯೊಳಗೆ ಮಲಗಿದ್ದರು. ಈ ವೇಳೆ ಪಾಕ್ ರಾಕ್ಷಸರು ನಿದ್ದೆಗೆ ಜಾರಿದ್ದ ನಮ್ಮ ಸೈನಿಕರನ್ನು ನಿರ್ಧಯವಾಗಿ ಕೊಂದುಬಿಟ್ಟಿದ್ದರು. ಮೋದಿ ಸರ್ಕಾರದ ಅವಧಿಯಲ್ಲಿ ನಡೆಯಬಾರದ ಅತಿದೊಡ್ಡ ಅವಘಡವೊಂದು ಅಂದು ನಡೆದೇ ಬಿಟ್ಟಿತ್ತು. ಆದರೆ ಪಾಕಿಗಳ ಕ್ರೌರ್ಯಕ್ಕೆ ಕೈಕಟ್ಟಿಕೂರಲು ಇದು ರಿಮೋಟ್ ಕಂಟ್ರೋಲ್ ಸರ್ಕಾರ ಅಲ್ಲ, ದಕ್ಷ ಆಡಳಿತವನ್ನು ನೀಡಿ ಶತ್ರು ರಾಷ್ಟ್ರದ ಪಾಪಿಗಳ ಎದೆಯಲ್ಲಿ ನಗಾರಿ ಭಾರಿಸಲು ಹೊರಟಿರುವ ಮೋದಿ ಸರ್ಕಾರ ಅನ್ನೋದು ಅಂದು ದಿಟವಾಗಿತ್ತು.

ಅದೊಂದು ದಿನ ಭಾರತೀಯರು ಎಂದಿನಂತೆ ತಮ್ಮ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಕೇಂದ್ರದ ಮೋದಿ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿ ಬಿಟ್ಟಿತ್ತು. ಹಿಂದಿನ ರಾತ್ರಿ ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ನಮ್ಮ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸಿದದಾರೆಂಬ ಸುದ್ಧಿ ಅದಾಗಿತ್ತು. ಇದು ಕೇವಲ ಮಾತಿನ ಘೋಷಣೆಯಾಗದೆ ವಿಡಿಯೋ ಹಾಗೂ ಚಿತ್ರಗಳ ಸಮೇತ ದೇಶದ ಜನತೆಯ ಮುಂದೆ ಕೇಂದ್ರ ಸರ್ಕಾರ ಇದನ್ನು ಮುಂದಿಟ್ಟಿತ್ತು. ದೇಶಕ್ಕ ದೇಶವೇ ಭಾರತೀಯ ಸೈನಿಕರ ಯಶೋಗಾಥೆಗೆ ಜೈ ಎಂದಿತ್ತು. ಭಾರತೀಯ ಸೈನಿಕರ ಶೌರ್ಯದ ಗುಂಡಿಗೆ ಬಲಿಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಾಕಿಗಳ ಮೃತದೇಹ ಭಾರತೀಯ ಸೈನಿಕರ ಪರಾಕ್ರಮವನ್ನು ಬಿಂಬಿಸಿತ್ತು. ಸರ್ಜಿಕಲ್ ಸ್ಟ್ರೈಕ್ ಎಂಬ ಪದವೇ ಒಂದು ರೋಮಾಂಚನವನ್ನು ಹುಟ್ಟುಹಾಕಿದಂತಹಾ ಪದವಾಗಿ ವಿಜ್ರಂಭಿಸಿತ್ತು. ಶತ್ರು ರಾಷ್ಟ್ರದ ಕೋಟೆಯೊಳಗೆ ನುಗ್ಗಿ ಪಾಪಿಗಳನ್ನು ಮಟ್ಟಹಾಕಿದ ನಮ್ಮ ಸೈನ್ಯದ ಸಾಹಸ ಅಮರವಾಗಿತ್ತು.

ಇದೀಗ ಭಾರತೀಯ ಸೈನ್ಯದ ಈ ಸಾಹಸವನ್ನು ಬಿಂಬಿಸುವ “ಉರಿ” ಎಂಬ ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸವನ್ನು ನಿರ್ಮಿಸಿದ ಚಿತ್ರ ಇದಾಗಿದ್ದು ದೇಶದೆಲ್ಲೆಡೆ ಹೊಸ ಸಂಚಲನವನ್ನು ಸೃಷ್ಟಿಸಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹಿತ ಅನೇಕ ಸಚಿವರುಗಳು ಹಾಗೂ ರಾಜಕೀಯ ನೇತಾರರನ್ನೂ ಫಿದಾಗೊಳಿಸಿರುವ ಚಿತ್ರವಿದು.

ಉರಿ ಸಿನಿಮಾ ನೋಡಿದ ನಂತರ ನನಗನಿಸಿದ್ದು..,

* ಪಾಕಿಸ್ತಾನದ ಕೋಟೆಯನ್ನು ಮೀರಿ ಪಾಕ್ ಸೈನಿಕರನ್ನು ಹತ್ಯೆ ಮಾಡಿದ್ದಾರೆಂಬ ಪದವಷ್ಟೇ ಕೇಳಿದ ನಮಗೆ ಅದರ ಹಿಂದಿನ ಪೂರ್ವ ಯೋಜನೆಗಳ ರೋಚಕ ಯೋಜನೆಗಳ ಕಥೆ ಅರ್ಥವಾಯಿತು.

* ಭಾರತೀಯ ಸೈನಿಕರನ್ನು ಪಾಪಿಗಳು ಯಾವ ರೀತಿ ಹತ್ಯೆಗೈಯುತ್ತಾರೆ ಹಾಗೂ ಯಾವ ರೀತಿಯ ಶಂಡತನವನ್ನು ಮೆರೆಯುತ್ತಾರೆ ಎಂಬ ಕುತಂತ್ರ ಬುದ್ಧಿ ಅರಿವಾಯ್ತು.

* ಚಿತ್ರದಲ್ಲಿ ಪಾಕಿಗಳ ಕೋಟೆಯಲ್ಲಿ ಗುಂಡಿನ ಚಕಮಕಿ ನಡೆಯುತ್ತಿರುವಾಗ ಪಾಕ್ ಉಗ್ರನ ಸಣ್ಣ ಮಗನೋರ್ವ ಭಾರತೀಯ ಯೋಧರ ಕೈಗೆ ಸಿಕ್ಕಾಗ ಆ ಹುಡುಗನ ಮೇಲೆ ಯಾವುದೇ ದಾಳಿಯನ್ನು ನಡೆಸದೆ ನಾಜೂಕಾಗಿ ಕೋಣೆಯಲ್ಲಿ ಬಂಧಿಸಿಡುತ್ತಾರೆ. ಭಾರತೀಯ ಸೈನಿಕರು ಶತ್ರುಗಳ ಮೇಲೆ ಸವಾರಿ ಮಾಡುವ ಸಂದರ್ಭದಲ್ಲೂ ಯಾವ ರೀತಿಯ ಮಾನವೀಯತೆಯನ್ನು ಮರೆಯುತ್ತಾರೆಂಬ ಸತ್ಯವನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು.

* ಸೈನಿಕರನ್ನು ಪ್ರತಿಕ್ಷಣದಲ್ಲೂ ರಾಜಕೀಯಕ್ಕಾಗಿ ಹಿಯಾಳಿಸುವ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು, ಯುದ್ಧ ಮಾಡುವ ಸೈನಿಕರ ಒಂದೊಂದು ಕ್ಷಣವೂ ರೋಚಕವಾಗಿರುತ್ತದೆ. ಒಂದಿಂಚೂ ಎಚ್ಚರ ತಪ್ಪಿದರೂ ಶಿವನ ಪಾದ ಗ್ಯಾರಂಟಿ.

* ಇನ್ನು ಸರ್ಕಾರವೊಂದು ಸೈನಿಕರ ಉತ್ಸಾಹಕ್ಕೆ ಯಾವ ರೀತಿಯ ಸಹಕಾರವನ್ನು ನೀಡುತ್ತದೆ ಎಂಬುವುದನ್ನು ಈ ಸಿನಿಮಾ ನೋಡಿ ಕಲಿಯಬೇಕಾಗಿದೆ. ಮೋದಿ ಸರ್ಕಾರ ಅಧಿಕಾರ್ಕಕ್ಕೆ ಬಂದ ನಂತರ ದೇಶದಲ್ಲಿ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂಬುವುದನ್ನು ಈ ಸಿನಿಮಾ ಸರಿ ಸಾರಿ ಹೇಳುತ್ತದೆ.

* ಅನೇಕ ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗೂಢಾಚಾರಿಕೆ ಮಾಡಿ ಯಶಸ್ವಿಯಾಗಿದ್ದ ಪಾಕಿಸ್ತಾನಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಹಾಗೂ ಅವರ ತಂಡ ಯಾವ ರೀತಿಯ ಕೆಲಸವನ್ನು ನಿರ್ವಹಿಸಿದೆ ಎಂಬುವುದನ್ನು ವಿವರವಾಗಿ ಈ ಚಿತ್ರದಲ್ಲಿ ಕಾಣಬಹುದು.

* ಇನ್ನು ಪ್ರಧಾನಿ ನರೇಂದ್ರ ಮೋದಿ, ಅಂದಿನ ರಕ್ಷಣಾ ಸಚಿವ ಹಾಗೂ ಇಂದಿನ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಸಲಹೆ ಹಾಗೂ ಸರ್ಜಿಕಲ್ ಸ್ಟ್ರೈಕ್ ಮೇಲೆ ಅವರು ತಳೆದಿರುವ ಧೃಢ ನಿರ್ಧಾರ ನಿಜವಾಗಿಯೂ ಅದ್ಭುತ. ನಿಜ ಘಟನೆಯನ್ನು ನಾವು ನೋಡದಿದ್ದರೂ ಅದನ್ನು ಬೆಳ್ಳಿ ತೆರೆಯ ಮೂಲಕ ನೋಡುವ ಅವಕಾಶವನ್ನು ಉರಿ ಚಿತ್ರ ಕಲ್ಪಿಸಿಕೊಟ್ಟಿದೆ.

* ಸೈನ್ಯದಲ್ಲಿ ಮಹಿಳೆಯರು ಯಾವ ರೀತಿಯ ಕಾರ್ಯಚಟುವಟಿಕೆಯನ್ನು ಮಾಡುತ್ತಾರೆ, ದೇಶದ ರಕ್ಷಣಾ ಇಲಾಖೆಯಲ್ಲಿ ಮಹಿಳೆಯರ ಪಾಲೆಷ್ಟಿದೆ ಎಂಬುವುದನ್ನು ಈ ಚಿತ್ರ ಬಿಂಬಿಸಸಿದೆ.

* ಭಾರತೀಯ ಸೈನಿಕರನ್ನು ರೇಪಿಸ್ಟ್ ಗಳು ಹಾಗೂ ಕೆಲಸಕ್ಕೆ ಬಾರದವರು ಎಂಬ ಪದಗಳನ್ನು ಉಪಯೋಗಿಸಿದವರು ಈ ದೇಶದಲ್ಲಿ ಉಸಿರಾಡಲು ನಯಾಪೈಸೆಯ ಯೋಗ್ಯತೆ ಇಲ್ಲದವರು.!

* ಜೀವವನ್ನು ಕೈನಲ್ಲಿ ಹಿಡಿದುಕೊಂಡು ಶತ್ರು ರಾಷ್ಟ್ರದ ಎದೆಯ ಮೇಲೆ ನಗಾರಿ ಬಾರಿಸುವ ಭಾರತೀಯ ಸೈನಿಕರಿಗೆ ಈ ಹಿಂದಿನ ಸರ್ಕಾರ ಕೇವಲ ಗನ್ ಮಾತ್ರವೇ ನೀಡಿತ್ತು. ತನ್ನ ಎದೆಯ ಮೇಲೆ ಗುಂಡು ಹೊಕ್ಕರೂ ಶತ್ರುಗೆ ಗುಂಡು ಹೊಡೆಯಲು ದೊಣ್ಣೆ ನಾಯಕನ ಅಪ್ಪಣೆ ಬೇಕಿತ್ತು. ಆದರೆ ಈಗ ಸರ್ಕಾರದ ಸಂಪೂರ್ಣ ಬೆಂಬಲ ಹಾಗೂ ಸ್ವಾತಂತ್ರ್ಯ ಭಾರತೀಯ ಸೈನಿಕರಿಗಿದೆ.

ಚಿತ್ರದ ಸೌಂದರ್ಯಕ್ಕಾಗಿ ಕೊಂಚ ಬಣ್ಣ ಹಚ್ಚಿದರಾದರೂ ಹೆಚ್ಚಿನ ಭಾಗವೆಲ್ಲಾ ನೈಜತೆಯಿಂದ ಕೂಡಿದೆ. ಚಿತ್ರದ ಒಂದೊಂದು ಘಟನೆಯೂ ಮೈನವಿರೇಳಿಸುತ್ತದೆ. ಸೇನೆಯ ಶೌರ್ಯವನ್ನು ಜಗತ್ತಿಗೆ ಪರಿಚಯಿಸುತ್ತದೆ. ಒಂದು ಉತ್ತಮ ಸರ್ಕಾರ ಹಾಗೂ ದಕ್ಷ ಸೈನ್ಯ ಇದ್ದರೆ ರಾಷ್ಟ್ರವನ್ನು ಜಗತ್ತಿನ ತುತ್ತ ತುದಿಯಲ್ಲಿ ಕೊಂಡೊಯ್ದು ನಿಲ್ಲಿಸುತ್ತದೆ ಎಂಬುವುದಕ್ಕೆ ಇದೊಂದು ತಾಜಾ ಉದಾಹರಣೆ. “ಉರಿ” ಸಿನಿಮ ಪ್ರತಿಯೊಬ್ಬ ದೇಶಭಕ್ತನೂ ನೋಡಲೇಬೇಕಾದ ಸಿನಿಮಾವಂತು ಸತ್ಯ.

ಸುನಿಲ್ ಪಣಪಿಲ

Tags

Related Articles

FOR DAILY ALERTS
Close