ಪ್ರಚಲಿತ

ದೇಶದ ಪ್ರತಿ ಹಳ್ಳಿ ಹಳ್ಳಿಗೂ ಬ್ಯಾಂಕಿಂಗ್ ಸೇವೆ!! ಕೇಂದ್ರದ ಹೊಸ ಕನಸನ್ನು ಬಿಚ್ಚಿಟ್ಟ ಪಿಯೂಶ್ ಗೋಯಲ್!!

ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲದೇ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜನ ಧನ ಯೋಜನೆಯನ್ನು ಜಾರಿಗೊಳಿಸಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿ ಗ್ರಾಮೀಣ ಭಾಗದ ಜನತೆಗೆ ಮತ್ತಷ್ಟು ಅನುಕೂಲಗಳನ್ನು ಮಾಡಿಕೊಡಲು ಮುಂದಾಗಿದೆ!!

ಕೊಂಚ ನಗರ ಪ್ರದೇಶಗಳಿಗೆ ಬಂದರೆ ಮಾತ್ರ ಬ್ಯಾಂಕ್ ಗಳಲ್ಲಿ ವ್ಯವಹರಿಸಲು ಸಾಧ್ಯ ಎಂದುಕೊಂಡವರ ಪಾಲಿಗೆ ಸುಲಭ ಸಾಧ್ಯವಾಗಲು, ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ವ್ಯವಸ್ಥೆಗಳು ಜಾರಿಯಾದರೆ ಅದೆಷ್ಟು ಸುಲಭ ಎಂದುಕೊಂಡವರಿಗೆ ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಭಾಗದ ಜನರ ಮೊಗದಲ್ಲಿ ಸಂತಸ ಮನೆಮಾಡುವಂತೆ ಮಾಡಲಿದೆ!! ಹಾಗಾಗಿ ಜನ ಧನ ಯೋಜನೆಯ ಮೂಲಕ ನಾಗರಿಕರು ಬ್ಯಾಂಕಿಂಗ್ ವ್ಯಾಪ್ತಿಯೊಳಗೆ ಬರುವಂತೆ ಮಾಡಿದ ಕೇಂದ್ರ ಸರ್ಕಾರವು, ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಮಂತ್ರಿ ಜನ ಧನ ಯೋಜನೆಯು ಯಶಸ್ವಿಯ ಉತ್ತುಂಗದಲ್ಲಿದ್ದು, ಗ್ರಾಮೀಣ ಮತ್ತು ಮಧ್ಯಮ ವರ್ಗದವರಿಗೆ ವರದಾನವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೇ, ಜನಧನ ಯೋಜನೆ ಅಡಿಯಲ್ಲಿ ದೇಶದ ಲಕ್ಷಾಂತರ ಜನ ಖಾತೆ ತೆರೆದು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದೇ ಇದೆ!! ಆದರೆ ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುವ ಕನಸನ್ನು ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯೆಲ್ ಬಿಚ್ಚಿಟ್ಟಿದ್ದಾರೆ!!

ಹೌದು… “ದೇಶದ ಗ್ರಾಮಗಳಲ್ಲಿನ ಸುಮಾರು 2,90,000 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್‍ಸಿ ) ಬ್ಯಾಂಕುಗಳ ಕೌಂಟರ್ ತೆರೆಯಲು ಉದ್ದೇಶಿಸಲಾಗಿದ್ದು, ಈ ಮೂಲಕ ಪ್ರತಿ ಹಳ್ಳಿಯ ಪ್ರತಿ ಮನೆಯ ಸಮೀಪದಲ್ಲೇ ಬ್ಯಾಂಕ್ ಸೇವೆ ಸಿಗುವಂತೆ ಮಾಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೇ, ದೂರ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಈ ಕೌಂಟರ್‍ಗಳಿಗೆ ವೈಫೈ ಸೌಲಭ್ಯ ಕಲ್ಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಇದಲ್ಲದೆ, ವಿದ್ಯುತ್ ಇಲಾಖೆಯ ಸಹಕಾರದೊಂದಿಗೆ ಹಳ್ಳಿಗಳ ಪ್ರತಿ ಮನೆಗೆ ಸೌರ ಫಲಕಗಳನ್ನು ಅಳವಡಿಸಿ, ಅವರಿಗೆ ಶಾಶ್ವತವಾಗಿ ಉಚಿತ ವಿದ್ಯುತ್ ನೀಡುವ ಆಲೋಚನೆಯೂ ಇದೆ” ಎಂದು ತಿಳಿಸಿದ್ದಾರೆ.

Image result for piyush goyal

ಕೇಂದ್ರದ ಹೊಸ ಕನಸನ್ನು ಹಂಚಿ ಕೊಂಡ ವಿತ್ತ ಸಚಿವ ಪಿಯೂಶ್ ಗೋಯಲ್ 2.9 ಲಕ್ಷ ಗ್ರಾಮಗಳ ಸಿಎಸ್‍ಸಿಗಳಲ್ಲಿ ಬ್ಯಾಂಕ್ ಕೌಂಟರ್‍ಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ!!

ಈಗಾಗಲೇ ಗ್ರಾಮೀಣ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರಕಾರವು, 2020ರ ವೇಳೆಗೆ ಎಲ್ಲ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗಿರುವ ವಿಚಾರ ತಿಳಿದೇ ಇದೆ. ಇದಕ್ಕಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ ಎಂ ಜಿ ಎಸ್ ವೈ)ಗೆ ಹೆಚ್ಚುವರಿಯಾಗಿ 90 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲು ಚಿಂತನೆ ನಡೆಸಿದೆ. ಆದರೆ ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿದಲ್ಲದೇ, ವೈಫೈ ಸೌಲಭ್ಯವನ್ನು ಕಲ್ಪಿಸಿಕೊಡುವ ಹೊಸ ಚಿಂತನೆಯೊಂದನ್ನು ಕೇಂದ್ರ ವಿತ್ತ ಸಚಿವ ಪಿಯೂಶ್ ಗೋಯೆಲ್ ಹೊರಹಾಕಿದ್ದಾರೆ.

ಒಟ್ಟಿನಲ್ಲಿ, 2014ರ ವರೆಗೆ ದೇಶದಲ್ಲಿ ಬಡವರು ಬಡವರಾಗಿಯೇ ಉಳಿದಿದ್ದರು. ಸರಕಾರದ ಯಾವುದೇ ಯೋಜನೆಗಳು ಜನರವರೆಗೆ ತಲುಪುತ್ತಿರಲಿಲ್ಲ. ಅದು ಕೇವಲ ಚುನಾವಣೆಯ ಸಂದರ್ಭ ಬಂದಾಗ ಮಾತ್ರ ತಲುಪುತ್ತಿದ್ದಲ್ಲದೇ ಕಾಂಗ್ರೆಸ್ ಗೆ ಮತ ನೀಡುವವರಿಗೆ ಮಾತ್ರ ಸರಕಾರದ ಯೋಜನೆಗಳು ಹಂಚಿಕೆಯಾಗುತ್ತಿದ್ದವು. ಆದರೆ ಈಗ ಎಲ್ಲವೂ ಬದಲಾಗಿದೆ. ಬಡವರು, ಮಧ್ಯಮ ವರ್ಗ ಸೇರಿದಂತೆ ದೇಶದ ನಾಗರಿಕರ ಜೀವನ ಮಟ್ಟ ಸುಧಾರಣೆಯಾಗಿರುವುದಂತೂ ಅಕ್ಷರಶಃ ನಿಜ.

ಈಗಾಗಲೇ ಆರೋಗ್ಯ ಕ್ಷೇತ್ರ, ಗ್ರಾಮೀಣ ಭಾಗದಲ್ಲಿ ರಸ್ತೆ, ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ, ಬ್ಯಾಂಕ್ ಖಾತೆ, ಡಿಜಿಟಲ್ ವ್ಯವಹಾರ, ಎಲ್‍ಪಿಜಿ ಸಂಪರ್ಕ ಇತ್ಯಾದಿ ಅಗತ್ಯ ಮೂಲಸೌಕರ್ಯಗಳನ್ನು ನೀಡುತ್ತಿರುವ ಕೇಂದ್ರ ಸರಕಾರವು ಜನ ಧನ ಯೋಜನೆಯ ಮೂಲಕ ನಾಗರಿಕರು ಬ್ಯಾಂಕಿಂಗ್ ವ್ಯಾಪ್ತಿಯೊಳಗೆ ಬರುವಂತೆ ಮಾಡಿದೆ!! ಆದರೆ ಇದೀಗ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ನಿರ್ಧರಿಸಿದೆ ಎಂದರೆ ಅದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿಲ್ಲ ಎಂದೆನಿಸುತ್ತದೆ!!

ಮೂಲ: http://www.thehindu.com/business/Industry/cscs-to-soon-offer-bank-services-goyal/article24138514.ece

  • ಅಲೋಖಾ
Tags

Related Articles

Close