ಪ್ರಚಲಿತ

ಎಚ್ಚರಿಕೆ!! ಕರ್ನಾಟಕಕ್ಕೂ ಕಾಲಿಡಬಹುದು ಈ ಮಹಾರೋಗ!! ನಿಫಾ ರೋಗದ ಲಕ್ಷಣಗಳೇನು ಗೊತ್ತಾ?!!

ಇದೀಗ ರಾಜ್ಯದೆಲೆಲ್ಲೆಡೆ ಹಠಾತ್ತಾಗಿ ಆಗಿ ಬಂದ ನಿಫಾ ವೈರಸ್‍ನಿಂದಾಗಿ ಜನರ ನಿದ್ದೆಗೆಡಿಸಿದೆ!! ಇದುವರೆಗೆ ಯಾರೂ ಕೇಳರಿಯದ ಈ ವೈರಸ್‍ನಿಂದಾಗಿ ಜನರು ಭಯಭೀತರಾಗುವ ರೀತಿಯಾಗಿದೆ!! ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ವೈರಸ್ ಸೋಂಕು ಹರಡಿರುವುದರಿಂದ ಇಡೀ ರಾಜ್ಯದ ಜನರು ಆತಂಕಗೊಂಡಿದ್ದಾರೆ. ನೂರಾರು ಜನರು ಸಮೀಪದ ಗ್ರಾಮಗಳಿಂದ ಆಸ್ಪತ್ರೆಗೆ ಆಗಮಿಸುತ್ತಿದ್ದು, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ರೋಗದ ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಈ ವರೆಗೆ ಒಟ್ಟು 10 ಜನರು ಈ ರೋಗದಿಂದ ಸಾವನ್ನಪ್ಪಿದ್ದು, 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 20 ಜನರನ್ನು ಪರಿವೀಕ್ಷಣೆಯಲ್ಲಿಡಲಾಗಿದೆ. ಚೆರುವನೂರು ಮತ್ತು ಪೆರಂಬ್ರಾ ಗ್ರಾಮದ 30 ಕುಟುಂಬಗಳು ಮತ್ತು 150 ಜನರನ್ನು ಸ್ಥಳಾಂತರಿಸಲಾಗಿದೆ. ಬಾಧಿತ ಪ್ರದೇಶಗಳ ಜನರು 2 ವಾರಗಳವರೆಗೆ ಎಲ್ಲಿಗೂ ಪ್ರಯಾಣಿಸದಂತೆ, ಯಾರನ್ನೂ ಸಂಪರ್ಕಿಸದಂತೆ ಸೂಚಿಸಲಾಗಿದೆ.

ನಿಫಾ ವೈರಸ್ ಎಂದರೇನು?

1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

ನಿಫಾ ವೈರಸ್‍ನ ಗುಣ-ಲಕ್ಷಣಗಳೇನು?

ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್, ಅನಂತರ ವೇಗವಾಗಿ ಹರಡುತ್ತದೆ. ಮಿದುಳು ಊತ, ಹಠಾತ್ ಜ್ವರ, ಉಸಿರು ಕಡಿಮೆ ಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಅಮಲು, ಶ್ವಾಸಕೋಶ ಸೋಂಕು, ಮಾನಸಿಕ ಗೊಂದಲ ಮುಂತಾದ ಗುಣಲಕ್ಷಣ ಕಾಣಿಸಿಕೊಳ್ಳುತ್ತದೆ. ರೋಗಿಯನ್ನು ವೆಂಟಿಲೇಟರ್‍ನಲ್ಲಿ ಇಡುವುದು ಅಗತ್ಯವಾಗುತ್ತದೆ. 24ರಿಂದ 48 ತಾಸುಗಳಲ್ಲಿ ರೋಗಿ ಕೋಮಾಗೂ ಹೋಗಬಹುದು.

ಹೇಗೆ ಹರಡುತ್ತದೆ?

ಪಕ್ಷಿಗಳು ತಿಂದು ಹಾಕಿರುವ ಹಣ್ಣುಗಳನ್ನು ಸೇವಿಸುವುದರಿಂದ ಅದರಲ್ಲೂ ಮುಖ್ಯವಾಗಿ ಬಾವಲಿ ತಿಂದು ಬಿಟ್ಟಿರುವ ಹಣ್ಣುಗಳನ್ನು ಸೇವಿಸುವುದರಿಂದ ಇದು ಹರಡುತ್ತದೆ. ಇದು ಪ್ರಾಣಿಗಳಲ್ಲೂ ಹರಡಲಿದ್ದು, ಅಂತಹ ಪ್ರಾಣಿಗಳ ದೇಹದಿಂದ ಹೊರಹೊಮ್ಮುವ ದ್ರವ (ಎಂಜಲು) ಮನುಷ್ಯನ ದೇಹ ಸೇರಿದರೆ ಆವರಿಗೂ ಬರುತ್ತದೆ. ಅಂತಹ ಮನುಷ್ಯನ ದೇಹದಿಂದ ಹೊರಹೊಮ್ಮುವ ದ್ರವ (ಎಂಜಲು, ಬೆವರು, ಕೆಮ್ಮು ಅಥವಾ ಸೀನಿದಾಗ) ದಿಂದ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ.

ಎಚ್ಚರಿಕೆ ಕ್ರಮಗಳೇನು?

ಪ್ರಾಣಿ ಮತ್ತು ಪಕ್ಷಿಗಳು ತಿಂದಿರುವ ಹಾಗೂ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ಸೇವಿಸಬಾರದು. ಆಹಾರ ಸೇವನೆಗೂ ಮುನ್ನ ಕೈಗಳ್ಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಜ್ವರ ಸೇರಿದಂತೆ ಯಾವುದೇ ರೋಗಿಯ ಸಂಪರ್ಕದಲ್ಲಿದ್ದಾಗಲೂ ಕೈಗಳ್ಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನೆಗಡಿ, ಕೆಮ್ಮು ಇರುವವರಿಂದ ದೂರ ಇರಬೇಕು. ರೋಗಿಗಳನ್ನು ಭೇಟಿ ಮಾಡುವ ಸಂದರ್ಭದಲ್ಲಿ ಮೂಗೂ ಮತ್ತು ಬಾಯಿಗೆ ಮಾಸ್ಕ್ ಧರಿಸುವುದು ಒಳ್ಳೆಯದು. ಬಾವಲಿಗಳು ಹೆಚ್ಚು ನೆಲೆಸಿರುವ ಪ್ರದೇಶಗಳಲ್ಲಿ ಸೇಂದಿ, ಹೆಂಡ ಇನ್ನಿತರೆ ಲೋಕಲ್ ಮದ್ಯ ಸೇವಿಸಬಾರದು.

ವಿಶಿಷ್ಟ ಪ್ರಭೇದದ ವೈರಸ್

ಪ್ಯಾರಾಮಿಕೊವಿರಿಡೆ ಪ್ರಭೇದದ ವೈರಸ್
ಈ ಹಿಂದೆ ಭಾರತದಲ್ಲಿ 2-3 ಬಾರಿ ಕಾಣಿಸಿಕೊಂಡಿದ್ದ ನಿಫಾ ವೈರಸ್
2001ರಲ್ಲಿ ಮೊದಲು ಬಾಂಗ್ಲಾದಲ್ಲಿ, ಅನಂತರ ಭಾರತದ ಸಿಲಿಗುರಿಯಲ್ಲಿ ವೈರಸ್ ಪತ್ತೆ

Image result for ನಿಪಾ

ಕೇರಳದಲ್ಲಿ ನಿಪಾ ವೈರಸ್‍ನಿಂದ ಹಲವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೇರಳದ ಗಡಿ ಕೊಡಗು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಹೇಳಿದ್ದಾರೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೇರಳದಿಂದ ಹೆಚ್ಚಿನ ಪ್ರವಾಸಿಗರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದೆ. ಮಧ್ಯಾಹ್ನ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಯಲಿದೆ. ಜಿಲ್ಲೆಯ ಡಿಎಚ್‍ಒ ರಾಜೇಶ್ ಪ್ರತಿಕ್ರಿಯಿಸಿ, ಜ್ವರ ಇದ್ದರೆ ಜನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಇದಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆದಿದ್ದೇವೆ. 7 ಬೆಡ್‍ನ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಶಂಕಿತ ಪ್ರಕರಣ ಪತ್ತೆಯಾಗಿಲ್ಲ. ಪ್ರಕರಣ ಕಂಡುಬಂದರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಜನ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ!! ಈಗಾಗಲೇ ಕೇರಳದಲ್ಲಿ ಈ ರೋಗ ಪಸರಿಸಿದ್ದು ಅನೇಕ ಜನ ಮೃತಪಟ್ಟಿದ್ದು ಕೆಲವರು ಸಾವು ನೋವುಗಳ ಜೊತೆ ಹೋರಾಟ ನಡೆಸುತ್ತಿದ್ದಾರೆ!! ಬಾರಿ ಜಾಗೃತೆಯನ್ನು ವಹಿಸಿ ಈ ರೋಗ ಬರದಂತೆ ಎಚ್ಚರವಹಿಸಿದರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ!!

source: https://postcard.news/everything-you-need-to-know-about-the-deadly-nipah-virus-devastating-lives-of-the-people/

vijayavani  udayavani

  • ಪವಿತ್ರ
Tags

Related Articles

Close