ಪ್ರಚಲಿತ

RSS ಬಗ್ಗೆ ನಿವೃತ್ತ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಹೇಳಿದ್ದೇನು ಗೊತ್ತಾ?

ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದ ಸಾಕಷ್ಟು ಜನರಿಗೆ ಉತ್ತಮವಾದ ಜೀವನ ಕ್ರಮವನ್ನು ಕಲಿಸಿಕೊಟ್ಟಿದೆ. ಬದುಕು ಸುಸಂಸ್ಕೃತವಾಗಿ ರೂಪಿಸಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಂಸ್ಕಾರಗಳನ್ನು ಒದಗಿಸಿ ಕೊಡುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತದೆ. ಸಂಘದ ವೈಶಾಲ್ಯತೆ ಏನು ಎಂಬುದು, ಅದರ ಶ್ರೇಷ್ಟತೆ ಏನೆಂಬುದರ ಅರಿವಾಗುತ್ತದೆ.

ದೇಶದಲ್ಲಿ ಯಾವ ಸಂಕಷ್ಟವೇ ಬರಲಿ, ಅದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ RSS ಗೆ ಇದೆ. ಭಾರತದ ಪ್ರಧಾನಿ ಮೋದಿ ಅವರಿಂದ ತೊಡಗಿ, ಈ ದೇಶದ ಹಲವಾರು ಮಹನೀಯರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಳದಿಂದಲೇ ಬಂದವರು ಎನ್ನುವುದು ಹೆಮ್ಮೆಯ ವಿಷಯ.

ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ಚಿತ್ತರಂಜನ್ ದಾಸ್ ಅವರು ಆರ್.ಎಸ್.ಎಸ್. ಬಗ್ಗೆ ಮಾತನಾಡಿದ್ದು, ತಾನೂ ಸಹ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ನಲ್ಲಿ ನ್ಯಾಯಾಧೀಶರು ಮತ್ತು ಬಾರ್ ಕೌನ್ಸಿಲ್ ಸದಸ್ಯರು ನಡೆಸಿಕೊಟ್ಟ ಬೀಳ್ಕೊಡುಗೆ ಸ ಸಮಾರಂಭದಲ್ಲಿ ಮಾತನಾಡಿದ ಅವರು, ತಾನು ಮತ್ತೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹಿಂದಿರುಗಲು ಸಿದ್ದ ಎಂದು ತಿಳಿಸಿದ್ದಾರೆ. ಯಾವುದೇ ಸಹಾಯಕ್ಕಾಗಿ ಸಂಘ ಕರೆದಲ್ಲಿ ತಾನು ಸಂಘಕ್ಕೆ ಹಿಂದಿರುಗಲು ಸಿದ್ದರಿರುವುದಾಗಿ ಸಂಘದ ಮೇಲಿನ ತಮ್ಮ ಗೌರವವನ್ನು ತೋರಿಸಿದ್ದಾರೆ.

ನಾನು ಸಂಘಕ್ಕೆ ಸಾಕಷ್ಟು ಋಣಿಯಾಗಿದ್ದೇನೆ. ನನ್ನ ಬಾಲ್ಯ ಮತ್ತು ಯೌವನದ ಉದ್ದಕ್ಕೂ ನಾನು ಸಂಘದಲ್ಲಿ ಇದ್ದೇನೆ. ಇಲ್ಲಿ ನಾನು ಧೈರ್ಯ, ನೇರವಾದ ನಡೆ ನುಡಿ, ಇತರರಿಗೆ ಸಮಾನವಾದ ದೃಷ್ಟಿಕೋನವನ್ನು ಹೊಂದುವ ನೀತಿಯನ್ನು ಮೈಗೂಡಿಸಿಕೊಂಡಿದ್ದೇನೆ. ಎಲ್ಲಕ್ಕೂ ಮಿಗಿಲಾಗಿ ದೇಶಭಕ್ತಿಯ ಭಾವನೆ ಮತ್ತು ಕೆಲಸದ ಬದ್ಧತೆ ಸಂಘದ ಮೂಲಕ ಹೊಂದಿದ್ದೇನೆ ಎಂದು ನುಡಿದಿದ್ದಾರೆ‌.

ಆದರೆ ತಾವು ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಸಲುವಾಗಿ ಮೂವತ್ತೇಳು ವರ್ಷಗಳ ಕಾಲ ಸಂಘದ ಆಂಗಳದಿಂದ ದೂರ ಇದ್ದುದಾಗಿ ಹೇಳಿದ್ದಾರೆ. ನನ್ನ ವೃತ್ತಿ ಜೀವನದ ಯಾವುದೇ ಪ್ರಗತಿಗೆ ಸಂಘದ ಸದಸ್ಯತ್ವ ಬಳಕೆ ಮಾಡಿಲ್ಲ. ಏಕೆಂದರೆ ಅದು ತತ್ವಗಳಿಗೆ ವಿರುದ್ಧವಾಗಿದೆ. ನಾನು ಎಲ್ಲರನ್ನೂ, ಎಲ್ಲಾ ಪಕ್ಷಗಳನ್ನೂ ಸಮಾನವಾಗಿ ಕಂಡಿದ್ದೇನೆ ಎಂದು ಅವರು ನುಡಿದಿದ್ದಾರೆ.

Tags

Related Articles

Close