ಅಂಕಣಪ್ರಚಲಿತ

ಅಧಿಕಾರದಲ್ಲಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಿದ ಸಿದ್ರಾಮಣ್ಣನಿಗೆ ಗಿಫ್ಟ್‌ಗಳ ಮಹಾಪೂರವೇ ಬರುತ್ತಿದೆ! ವಾಚ್ ಆಯ್ತು ಇದೀಗ ಕಾರು!

ಕರ್ನಾಟಕ ಈ ರೀತಿಯ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಪಡೆದುಕೊಂಡಿತ್ತು ಎಂದರೆ ನಿಜಕ್ಕೂ ನಾವು ದುರಾದೃಷಟವಂತರೇ ಸರಿ. ಸ್ವತಃ ತಮ್ಮ ಪಕ್ಷದ ನಾಯಕರಿಂದಲೇ ಅವಮಾನಿಸಿಕೊಂಡು, ಹೋದಲ್ಲೆಲ್ಲಾ ಮರ್ಯಾದೆ ಕಳೆದುಕೊಂಡು, ರಾಜ್ಯವನ್ನು ವಿನಾಶದತ್ತ ಕೊಂಡೊಯ್ದು ತಾನು‌ ಮಾತ್ರ ಹಾಯಾಗಿ ರಾಜಾರೋಷವಾಗಿ ಐಶಾರಾಮಿ ಜೀವನ‌ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಅವಧಿಯಲ್ಲಿ ಯಾವ ರೀತಿ ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಇಡೀ ರಾಜ್ಯವನ್ನೇ ಒಂದು ರೀತಿಯಲ್ಲಿ ನರಕದ ಕೂಪೆಯನ್ನಾಗಿ ಮಾಡಿದ್ದ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಲಾಭಕ್ಕಾಗಿ ತಮಗೆ ಬೇಕಾದವರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದು ಈಗ ಒಂದೊಂದೇ ಬಯಲಾಗುತ್ತಿದೆ. ಯಾಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅವರಿಗೊಂದು ವಿಶೇಷ ಗಿಫ್ಟ್ ಬಂದಿತ್ತು, ನೂರಲ್ಲ ಸಾವಿರ ಅಲ್ಲ, ಬರೋಬ್ಬರಿ ೭೦ ಲಕ್ಷದ ಹ್ಯೂಬ್ಲೋಟ್ ವಾಚ್ ಸಿದ್ದರಾಮಯ್ಯನವರ ಪಾಲಿಗೆ ಬಂದಿತ್ತು.‌ ತನ್ನ‌ ಅಧಿಕಾರದ ಬಲದಿಂದ ತನಗೆ ಬೇಕಾದವರಿಗೆ ಅವರಿಗೆ ಬೇಕಾದ ಕೆಲಸ ಮಾಡಿಸಿ ಕೊಟ್ಟಿದ್ದ ಸಿದ್ರಾಮಣ್ಣನಿಗೆ ಒಂದೊಂದೇ ಗಿಫ್ಟ್ ಬರಲಾರಂಭಿಸಿತ್ತು. ಇದು ಲಂಚದ ರೂಪವೇ ಎಂದು ಅದಾಗಲೇ ಹಲವಾರು ಪ್ರಶ್ನೆ ಅನುಮಾನಗಳು ಕೂಡ ವ್ಯಕ್ತವಾಗಿದ್ದವು.!

ವಾಚ್, ಕೂಲಿಂಗ್ ಗ್ಲಾಸ್ ಆಯ್ತು ಇದೀಗ ಬೆನ್ಜ್ ಬ್ರಾಂಡ್‌ ಕಾರು!

ಸಿದ್ದರಾಮಯ್ಯನವರು ಒಂಥರಾ ಬಿಂದಾಸ್ ಮನುಷ್ಯ, ರಾಜ್ಯದ ಜನರನ್ನು ರಾಜ್ಯವನ್ನು ಬರಪೀಡಿತ ರಾಜ್ಯವನ್ನಾಗಿ ಮಾಡಿದರೂ ಕೂಡ ತಮ್ಮ ಐಶಾರಾಮಿ ಜೀವನಕ್ಕೆ ಯಾವುದೇ ಅಡೆತಡೆ ಉಂಟಾಗಲಿಲ್ಲ. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರಿಗೆ ವಾಚ್ ಗಿಫ್ಟ್ ಬಂದಿತ್ತು ಅದು ಕೂಡ ೭೦ ಲಕ್ಷ ಬೆಲೆಬಾಳುವ ಕಂಪನಿಯದ್ದು, ಈ ವಾಚ್ ಎಲ್ಲಿಂದ ಬಂದು, ಯಾರು ಕೊಟ್ಟರು, ಯಾತಕ್ಕಾಗಿ ಕೊಟ್ಟರು ಎಂಬ ಪ್ರಶ್ನೆಯನ್ನು ಇಡೀ ರಾಜ್ಯವೇ ಎದ್ದು ನಿಂತು ಕೇಳಿದರು ಸಿದ್ದರಾಮಯ್ಯನವರ ಬಳಿ ಉತ್ತರ ಇರಲಿಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸಲಾಗದೆ ಮಾಧ್ಯಮಗಳಿಂದಲೂ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.‌ಅದಾಗಲೇ ಜನರಿಗೆ ಸ್ಪಷ್ಟವಾಗಿತ್ತು, ಇದು ಯಾರೋ ಸಿದ್ದರಾಮಯ್ಯನವರಿಂದ ಲಾಭ ಗಿಟ್ಟಿಸಿಕೊಂಡವರು ಅದರ ಪ್ರತಿಫಲವಾಗಿ ಈ ಗಿಫ್ಟ್ ನೀಡಿದ್ದರು ಎಂದು. ಇವತ್ತಿಗೂ ಆ ವಾಚ್ ಗಿಫ್ಟ್ ಬಂದಿರುವ ಬಗ್ಗೆ ಪ್ರಶ್ನೆ ಹಾಗೇ ಉಳಿದುಕೊಂಡಿದೆ. ಆ ನಂತರದಲ್ಲಿ ಮತ್ತೊಂದು ವಿವಾದ ಎದ್ದಿತ್ತು ಅದುವೇ ಸಿದ್ದರಾಮಯ್ಯನವರ ಮೂಗಿನ ಮೇಲಿರುವ ಕನ್ನಡಕ.‌ ನೋಡುವಾಗ ಸಿಂಪಲ್ ಆಗಿದ್ದ ಕನ್ನಡಕದ ಬೆಲೆ ಬರೋಬ್ಬರಿ ೨ ಲಕ್ಷ ರೂಪಾಯಿ. ಅಬ್ಬಬ್ಬಾ ಒಂದು ಕನ್ನಡಕದ ಬೆಲೆ ೨ ಲಕ್ಷ ಎಂದರೆ ನಮ್ ಜನ ಮೂಗಿನ ಮೇಲೆ ಕೈ ಇಟ್ಟು ಕೂರೋದು ಗ್ಯಾರಂಟಿ.!

ಇದೀಗ ಮತ್ತೊಂದು ಗಿಫ್ಟ್ ಬಂದಿದೆ ಅದುವೇ ಬೆನ್ಜ್ ಬ್ರಾಂಡ್‌ ಕಂಪನಿಯ ಐಶಾರಾಮಿ ಕಾರು. ‌ಕಾರು ಎಂದರೆ ಸಾಮಾನ್ಯ ಕಾರಲ್ಲ, ಬರೋಬ್ಬರಿ 1.5 ಕೋಟಿ ರೂಪಾಯಿ ಬೆಲೆ ಬಾಳುವ ಬ್ರಾಂಡೆಡ್ ಕಾರು. ನಾವೆಲ್ಲಾ ಸುಮ್ಮನೆ ಊಹಿಸಲು ಸಾಧ್ಯವಿಲ್ಲ, ಆದರೆ ಸಿದ್ದರಾಮಯ್ಯನವರಿಗೆ ಈ ಕಾರು ನಿನ್ನೆಯಷ್ಟೆ ಉಡುಗೊರೆಯಾಗಿ ಮನೆ ಬಾಗಿಲಿಗೆ ಬಂದು ನಿಂತಿದೆ. ಒಂದೊಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಸಿದ್ದರಾಮಯ್ಯನವರು ಗಿಫ್ಟ್ ಪಡೆದುಕೊಳ್ಳುವುದರ ಮೂಲಕ ಮತ್ತೊಂದು ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಜನ ಅದೇನೇ ಅನ್ನಲಿ, ರಾಜ್ಯಕ್ಕೆ ಅದ್ಯಾವ ಬರವೂ ಬರಲಿ, ನನಗೇನು ನಾನು ಬಿಂದಾಸ್ ಆಗಿರ್ತೀನಿ ಅನ್ನೋ ಕೆಟಗರಿ ನಮ್ ಸಿದ್ರಾಮಣ್ಣಂದು. ಅದೇನೇ ಇರಲಿ ಈ ರೀತಿ ಕೋಟಿ ಕೋಟಿ ಬೆಲೆ ಬಾಳುವ ಗಿಫ್ಟ್‌ಗಳು ಬರುತ್ತಿರುವ ಸತ್ಯಾಂಶ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಲಿ, ಸರಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂಬುದು ನಮ್ಮ ಆಗ್ರಹ..!

-ಅರ್ಜುನ್

Tags

Related Articles

FOR DAILY ALERTS
Close