ಪ್ರಚಲಿತ

ತಮಿಳುನಾಡಿನ ಟ್ಯುಟಿಕೋರಿನ್ ಸ್ಟೆರ್ಲೈಟ್ ಕಾಪರ್ ಸ್ಮೆಲ್ಟಿಂಗ್ ಘಟಕದ ಅನುಮೋದನೆ ಹಿಂದೆ ಕಾಂಗ್ರೆಸ್ ಕೈವಾಡ ಬಯಲು!! 2007 ಮತ್ತು 2012 ರ ನಡುವೆ ಯೋಜನೆಗೆ ಅನುಮೋದನೆ ನೀಡಿದ್ದು ಯೂಪಿಎ ಸರಕಾರ!!

ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸುವುದು ಎಂದರೆ ಇದುವೆ. ತಾನು ಹಗರಣದ ಮೇಲೆ ಹಗರಣ ಮಾಡಿ, ಹಣ ಕೊಳ್ಳೆ ಹೊಡೆದು, ಇದ್ದ ಬದ್ದೋರಿಗೆಲ್ಲ ಸಾಲ ನೀಡಿ, ನಕಲಿ ಕಂಪನಿಗಳಿಗೆ ಅನುಮತಿ ನೀಡಿ ಈಗ ಸುಭಗರ ತರ ನಾಟಕವಾಡಿ ಎಲ್ಲಾದಕ್ಕೂ ಮೋದಿ ಮೇಲೆ ಗೂಬೆ ಹೊರಿಸುತ್ತಿರುವ ಕಾಂಗ್ರೆಸ್ ತಾನು ತೋಡಿದ ಖೆಡ್ಡಾಕ್ಕೆ ತಾನೆ ಬಿದ್ದಿದೆ. ತಮಿಳುನಾಡಿನ ಟ್ಯುಟಿಕಾರಿನ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ವೇದಾಂತ ಕಂಪನಿಯ ಅಂಗಸಂಸ್ಥೆ ಸ್ಟೆರ್ಲೈಟ್ ಕಾಪರ್ ಸ್ಮೆಲ್ಟಿಂಗ್ ಘಟಕದ ವಿಸ್ತರಣೆಯ ವಿರುದ್ದ ಚಳುವಳಿಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲೀಸರು ಗೋಲಿಬಾರ್ ನಡೆಸಿದ್ದು ಕನಿಷ್ಟ ಹದಿಮೂರು ಪ್ರತಿಭಟಕಾರರು ಸಾವನ್ನಪ್ಪಿದ್ದಾರೆ. ಈ ಗೋಲೀಬಾರ್ ಕೂಡಾ ಪೂರ್ವ ನಿಯೋಜಿತವೆಂದು ಹೇಳಲಾಗುತ್ತಿದೆ. ಕನಿಷ್ಟ ಒಬ್ಬ ವ್ಯಕ್ತಿಯಾದರೂ ಸಾಯಬೇಕು ಎಂದು ಪೋಲೀಸರಿಬ್ಬರು ಮಾತನಾಡಿದ ದೂರವಾಣಿ ಕರೆಯೊಂದು ಲಭ್ಯವಾಗಿದೆ ಎನ್ನಲಾಗುತ್ತಿದೆ.

ಮರದಿಂದ ಎಲೆ ಬಿದ್ದರೂ ಮೋದಿಯೆ ಜವಾಬ್ದಾರಿ ಎನ್ನುವ ಕಾಂಗ್ರೆಸ್ ಈ ಘಟನೆಯನ್ನೂ ಮೋದಿಯವರ ತಲೆಗೆ ಕಟ್ಟಲು ಪ್ರಯತ್ನ ಪಡುತ್ತಿದೆ. ಆದರೆ ರಿಪಬ್ಲಿಕ್ ಟಿವಿಗೆ ಲಭ್ಯವಾಗಿರುವ ದಾಖಲೆಗಳಲ್ಲಿ ಸ್ಥಾವರ ಸ್ಥಾಪನೆಯ ಹಿಂದೆ ಕಾಂಗ್ರೆಸ್ ನ ಕೈವಾಡದ ರಹಸ್ಯವನ್ನು ಬಯಲು ಮಾಡಿದೆ. 2007 ಮತ್ತು 2012 ರ ನಡುವೆ ಯುಪಿಎ ಸರಕಾರವೆ ಈ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿತ್ತು ಎನ್ನುವುದು ಈ ಕಡತಗಳಿಂದ ಸಾಬೀತಾಗಿದೆ. ಈ ಕೈಗಾರಿಕೆಗಳಿಂದ ಅಗಾಧ ಪ್ರಮಾಣದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಗೊತ್ತಿದ್ದೂ ಕಾರ್ಖಾನೆ ನಿರ್ಮಿಸಲು ಯೂಪಿಎ ಅನುಮತಿ ನೀಡಿದೆ. ಇದಕ್ಕಾಗಿ ಎಷ್ಟು ಸೂಟ್ ಕೇಸ್ ತಲುಪಿರಬಹುದು ಎನ್ನುವುದು ಅಂದಾಜು ಮಾಡಲೂ ಸಾಧ್ಯವಿಲ್ಲ!!

ರಿಪಬ್ಲಿಕ್ ಟಿವಿಯ ದಾಖಲೆಗಳ ಪ್ರಕಾರ ಆರು ಪ್ರತ್ಯೇಕ ಕಡತಗಳು 2007 ಮತ್ತು 2012 ರಲ್ಲಿ ಪುನರಾವರ್ತಿತ ಕಾಳಜಿಯ ಹೊರತಾಗಿಯೂ ಯೂಪಿಎ ಈ ಯೋಜನೆಗಳನ್ನು ಬೆಂಬಲಿಸಿದೆ ಎನ್ನುವುದನ್ನು ಸ್ಪಷ್ಟ ಪಡಿಸುತ್ತಿದೆ. ವಿದ್ಯುತ್ ಅಗತ್ಯವನ್ನು ಪೂರೈಸಲು 2×60 ಮೆವ್ಯಾ ಕಲ್ಲಿದ್ದಲು ಆಧಾರಿತ ಕ್ಯಾಪ್ಟಿವ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಮೊದಲನೆ ಪ್ರಸ್ತಾವನೆಗೆ ಮಾರ್ಚ್ 2007ರಲ್ಲಿ ಯುಪಿಎ ಪರಿಸರ ಸಚಿವಾಲಯವೆ ಹಸಿರು ನಿಶಾನೆ ತೋರಿದ್ದು. ತದನಂತರ 2007, 2009, 2010, 2012 ಕ್ರಮವಾಗಿ ನಾಲ್ಕು ಬಾರಿ ಅನುಮೋದನೆ ನೀಡುತ್ತಲೆ ಬಂದಿದೆ. 2010ರಲ್ಲಿ ಸದನದಲ್ಲಿಯೂ ಕೈಗಾರಿಕೆಯಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಪರಿಸರ ಸಚಿವಾಲಯದ ರಾಜ್ಯ ಮಂತ್ರಿಯಾಗಿದ್ದ ಜೈರಾಮ್ ರಮೇಶ್ ಅವರು ‘ಸ್ಟೆರ್ಲೈಟ್ ವಿರುದ್ಧ ಯಾವುದೇ ಗಂಭೀರ ಆರೋಪವನ್ನು ಎತ್ತಿಲ್ಲ’ ಎಂದು ಹೇಳಿಕೆ ನೀಡಿ ಸತ್ಯವನ್ನು ಮರೆಮಾಚಿದ್ದರು.

ಕಂಪನಿಯಿಂದ ಪರಿಸರಕ್ಕೆ ಯಾವುದೆ ಹಾನಿಯಿಲ್ಲ ಎಂದು ಹೇಳುತ್ತಲೆ ಮತ್ತೆ 2012ರಲ್ಲಿ ಘಟಕದ ವಿಸ್ತರಣೆಗೆ ಅನುಮೋದನೆ ನೀಡುತ್ತಲೆ ಬಂದಿತ್ತು ಯೂಪಿಎ ಸರಕಾರ. ಈಗ ತೂತುಕುಡಿಯಲ್ಲಿ ಘಟಕದ ವಿಸ್ತರಣೆ ವಿರುದ್ದ ಪ್ರತಿಭಟನೆ ನಡೆಯುತ್ತಿದ್ದರೆ ಅದನ್ನು ಮೋದಿ ಹೆಸರಿಗೆ ಮಸಿ ಬಳಿಯಲು ಉಪಯೋಗಿಸುವ ಕಾಂಗ್ರೆಸ್ ಟ್ಯುಟಿಕೋರಿನ್ ಸ್ಟೆರ್ಲೈಟ್ ಘಟಕ ಪರಿಸರವನ್ನು ಕಲುಷಿತಗೊಳಿಸುತ್ತದೆ ಎಂದು ತಿಳಿದೂ ಯೋಜನೆಯನ್ನು ವಿಸ್ತರಿಸಲು ಕಂಪನಿಗೆ 4 ಅನುಮತಿಗಳನ್ನು ಏಕೆ ನೀಡಿತ್ತು ಎನ್ನುವುದಕ್ಕೆ ಉತ್ತರ ಕೊಡಬಲ್ಲುದೆ? ಈ ಸ್ಥಾವರವನ್ನು ಮುಚ್ಚಲು ಹೈಕೋರ್ಟ್ ಆದೇಶ ನೀಡಿದ್ದರೂ, ಯೂಪಿಎ ಆದೇಶವನ್ನು ಗಾಳಿಗೆ ತೂರಿ ಸ್ಥಾವರಕ್ಕೆ ವಿಸ್ತರಣೆ ಮಾಡಲು ಅನುಮತಿ ನೀಡಿದ್ದು ಏಕೆ? ಯೂಪಿಎ ಸರಕಾರದ ಪರಿಸರ ಸಚಿವಾಲಯವೆ ಈ ಸ್ಥಾವರಕ್ಕೆ ಮೂರು ಬಾರಿ ಕ್ಲಿಯರೆನ್ಸ್ ಕೊಟ್ಟು ಸದನದಲ್ಲಿ ಸಮರ್ಥಿಸಿ ಈಗ ಮೋದಿ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯೆ?

ಮೋದಿ ಮತ್ತು ಆರ್.ಎಸ್.ಎಸ್ ಮೇಲೆ ಆರೋಪ ಹೊರಿಸುವ ರಾಹುಲ್ ಗಾಂಧಿಗೆ ಸ್ಥಾವರಕ್ಕೆ ತನ್ನದೆ ಪಕ್ಷದ ಸಚಿವ ಜೈ ರಾಮ್ ರಮೇಶ್ ಸದನದಲ್ಲಿ ಕ್ಲೀನ್ ಚಿಟ್ ನೀಡಿದ ಬಗ್ಗೆ ಗೊತ್ತಿಲ್ಲವೆ? ಯುಪಿಎ ಎರಡು ಸಂದರ್ಭಗಳಲ್ಲಿ ಸಾರ್ವಜನಿಕ ವಿಚಾರಣೆಯ ಬೇಡಿಕೆಯಿಲ್ಲ ಎಂದು ಹೇಳಿದ್ದು ಸಾರ್ವಜನಿಕರ ಅಭಿಪಾಯಕ್ಕೆ ಮನ್ನಣೆ ಕೊಡದಿದ್ದಕ್ಕೆಸಾಕ್ಷ್ಯವಲ್ಲವೆ? ಆಗ ಯಾಕೆ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಲಿಲ್ಲ? ಈಗ ಏಕೆ ಪ್ರತಿಭಟನೆ ನಡೆಸುವವರಿಗೆ ಕುಮ್ಮಕ್ಕು ನೀಡುತ್ತಿರುವುದು? ಯೂಪಿಎ ಸರಕಾರ ಆರು ಅನುಮೋದನೆಗಳನ್ನು ನೀಡಿದ್ದರೂ ಅದು ತಪ್ಪಲ್ಲ ಎನ್.ಡಿ.ಎ ಒಂದು ವಿಸ್ತರಣೆಗೆ ಅನುಮೋದನೆ ನೀಡಿದರೆ ಅದು ತಪ್ಪೆ? ಮೋದಿ ಏನು ಮಾದಿದರೂ ಅದರಲ್ಲಿ ತಪ್ಪು ಹುಡುಕುವುದು ಇವರೆಲ್ಲಾ “ಮೋದಿ ಫೋಬಿಯಾ”ಕ್ಕೆ ತುತ್ತಾಗಿರುವ ಲಕ್ಷಣವಲ್ಲದೆ ಬೇರೇನಲ್ಲ. ಮೋದಿಯನ್ನು ಖೆಡ್ಡಾಕ್ಕೆ ಬೀಳಿಸಬೇಕೆಂದು ತಿಪ್ಪರಲಾಗ ಹಾಕಿದರೂ ಅದರ ಕೈಯಲ್ಲಿ ಏನೂ ಕಿಸಿಯೋಕಾಗಲ್ಲ. ಆಕಾಶ ಭೂಮಿ ಒಂದು ಮಾಡಿದರೂ ಕಾಂಗ್ರೆಸ್ 2019 ರಲ್ಲಿ ಗದ್ದುಗೆ ಹಿಡಿಯುವುದಿಲ್ಲ, ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗುವುದಿಲ್ಲ ಇದು ಸತ್ಯ. ಕಾಂಗ್ರೆಸ್ ಮುಕ್ತ ಭಾರತ ಶತಸಿದ್ದ…

-ಶಾರ್ವರಿ

Tags

Related Articles

Close