ಪ್ರಚಲಿತ

ಸೌದಿ ಸೇರಿದರಾ ಪ್ರವೀಣ್ ಹಂತಕರು

ಕೊನೆಗೂ ಹಿಂದೂ ಯುವಕ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ ಜಿಹಾದಿ ಪಿಶಾಚಿಗಳಿಬ್ಬರ ಬಗ್ಗೆ ರಾಷ್ಟ್ರೀಯ ತನಿಖಾ ಆಯೋಗ (ಎನ್ ಐ ಎ) ಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳುವ ನೆಲೆಯಲ್ಲಿ ಸಂಸ್ಥೆ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಪ್ರವೀಣ್ ನೆಟ್ಟಾರು ಅವರು ತಮ್ಮ ಕೋಳಿ ಅಂಗಡಿ ಮುಚ್ಚಿ, ಮನೆಗೆ ಹೊರಡಲುನುವಾಗುತ್ತಿದ್ದ ಸಮಯದಲ್ಲಿ ಕೆಲ ಜಿ ಹಾದಿ ಮುಸ್ಲಿಂ ಪುಂಡರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಅವರನ್ನು ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಎನ್‌ಐಎ ಗೆ ಹಸ್ತಾಂತರಿಸುವ ಕೆಲಸವನ್ನು ಸಹ ರಾಜ್ಯ ಸರ್ಕಾರ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ವಿವಿಧ ಆಯಾಮದಲ್ಲಿ ನಡೆಸುತ್ತಿದ್ದ ಎನ್‌ಐ‌ಎ ಗೆ ಈ ಹತ್ಯೆಗೆ ಸಂಚು ರೂಪಿಸಿದ ಮಾಸ್ಟರ್ ಮೈಂಡ್‌ಗಳಿಬ್ಬರ ಬಗ್ಗೆ ಸುಳಿವು ಸಿಕ್ಕಿದೆ. ಈ ಇಬ್ಬರು ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ಸಹ ಘೋಷಿಸಲಾಗಿತ್ತು.

ಈ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್ ಮತ್ತು ಕೆ ಎ ಮಸೂದ್ ಎಂಬಿಬ್ಬರು ಹಂತಕರು ಸೌದಿ ಅರೇಬಿಯಾ‌ದಲ್ಲಿರುವುದಾಗಿ ಎನ್‌ಐ‌ಎ‌ ಗೆ ಮಾಹಿತಿ ದೊರಕಿದೆ. ಹಾಗೆಯೆ ಉಳಿದ ಕೆಲ ಆರೋಪಿಗಳಾದ ಮಹಮ್ಮದ್ ಮುಸ್ತಫಾ, ತುಫೈಲ್, ಉಮರ್ ಫರೂಕ್, ಅಬುಬ್ಬಕರ್ ಸಿದ್ದಿಕಿ ಎಂಬ ಹಂತಕರು ಅರಬ್ ದೇಶದಲ್ಲಿರುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳೆಲ್ಲರನ್ನೂ ವಶಕ್ಕೆ ಪಡೆಯುವುದಕ್ಕೆ ಬೇಕಾದ ಪೂರಕ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಈ ಆರೋಪಿಗಳು ಸೌದಿ ಅರೇಬಿಯಾ‌ದಲ್ಲಿ ಸೈಟ್ ಖರೀದಿ ಮಾಡಿದ್ದಾರೆ ಎನ್ನುವುದೂ ತಿಳಿದು ಬಂದಿದ್ದು, ಆರು ಆರೋಪಿಗಳ ಸುಳಿವು ನೀಡಿದವರಿಗೆ ಒಟ್ಟು ೨೪ ಲಕ್ಷ ಬಹುಮಾನ ಸಹ ಘೋಷಿಸಲಾಗಿತ್ತು.

ಪ್ರವೀಣ್ ಹತ್ಯೆಗೂ ಮೊದಲು ಹಂತಕರಿಗೆ ಬೆಳ್ಳಾರೆಯ ಮದರಸಾದಲ್ಲಿ, ಮಸೀದಿಯಲ್ಲಿ ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನಿರಿಸಲು ಸ್ಥಳಾವಕಾಶ ನೀಡಲಾಗಿತ್ತು. ಹತ್ಯೆಗೂ ಮುನ್ನ ಬೆಳ್ಳಾರೆ, ಸುಳ್ಯ ಮಸೀದಿಯಲ್ಲೇ ಪ್ಲ್ಯಾನ್ ಸಿದ್ಧವಾಗಿತ್ತು ಎನ್ನುವ ಮಾಹಿತಿ ಸಹ ಎನ್‌ಐಎಗೆ ಲಭ್ಯವಾಗಿದೆ.

Tags

Related Articles

Close