ಪ್ರಚಲಿತ

ಗಾಂಧಿ ಉಪನಾಮ ಬಳಕೆ ಕಾಂಗ್ರೆಸ್‌ನ ರಾಹುಲ್ ಕುಟುಂಬದ ಮೊದಲ ಹಗರಣ

ಇಂಡಿಯಾ ಹೆಸರನ್ನು ತೆಗೆದು ಹಾಕಿ ‘ಭಾರತ’ ಎಂಬುದಾಗಿಯೇ ನಮ್ಮ ದೇಶವನ್ನು ಪ್ರಪಂಚಕ್ಕೆ ಪರಿಚಯಿಸಲು ಹೊರಟ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವು ಕಾಂಗ್ರೆಸ್‌ಗೆ ಅರಗಿಸಿಕೊಳ್ಳಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಧಾನಿ ಮೋದಿ ಅವರ ಈ ನಿಲುವನ್ನು ಭಾರತದ ಹೆಚ್ಚಿನ ಜನರು ಮೆಚ್ಚಿ, ಸಮ್ಮತಿಸಿದ್ದಾರೆ. ಆದರೆ ಗುಲಾಮಿ ಕಾಂಗ್ರೆಸ್‌ನವರಿಗೆ ಮಾತ್ರ ಇದು ತಪ್ಪಾಗಿ ಕಂಡಿದ್ದು, ಪ್ರಧಾನಿ ಮೋದಿ ಅವರ ಈ ಕ್ರಮವನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ ಎನ್ನುವುದು ದುರಂತ.

ಕಾಂಗ್ರೆಸ್ ಪಕ್ಷದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಾತನಾಡಿದ್ದು, ನಕಲಿ ಗಾಂಧಿ ಕುಟುಂಬದಿಂದ ದೇಶಕ್ಕಾದ ಮೋಸ, ಹಗರಣಗಳ ಬಗ್ಗೆ ಕಿಡಿ ಕಾರಿದ್ದಾರೆ. ರಾಹುಲ್ ಗಾಂಧಿ ಕುಟುಂಬದ ಮೊದಲ ಹಗರಣ ‘ಗಾಂಧಿ’ ಉಪನಾಮವನ್ನು ತಮ್ಮ ಕುಟುಂಬಕ್ಕೆ ಸೇರಿಸಿರುವುದು. ಕಾಂಗ್ರೆಸ್ ಪಕ್ಷ ದೇಶವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ಸಂಸದ ರಾಹುಲ್ ಇನ್ನು ಮುಂದೆ ತಮ್ಮ ಹೆಸರಿನ ಮುಂದೆ ಗಾಂಧಿ ಹೆಸರನ್ನು ಬಳಕೆ ಮಾಡಬಾರದು. ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದಿರುವ ಅವರು, ನಕಲಿ ಗಾಂಧಿ ಕುಟುಂಬ ಹಲವಾರು ಹಗರಣಗಳನ್ನು ಮಾಡಿರುವುದಾಗಿಯೂ ತಿಳಿಸಿದ್ದಾರೆ.

ಗಾಂಧಿ ಪಟ್ಟದಿಂದಲೇ ಸೋನಿಯಾ ಸಂಸಾರ ತಮ್ಮ ಮೊದಲ ಹಗರಣವನ್ನು ಆರಂಭ ಮಾಡಿದೆ. ಭಾರತದ ಪರಿವಾರ ಮತ್ತು ದೇಶವನ್ನು ಒಡೆಯುವ ಕೆಲಸ ಮಾಡಿರುವ ರಾಹುಲ್ ಕುಟುಂಬ ಗಾಂಧಿ ಉಪನಾಮ ತ್ಯಜಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯದ ಇಪ್ಪತ್ತೈದು ಅಥವಾ ಐವತ್ತನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮ ಆಚರಿಸುವ ಮೂಲಕ ದೇಶದ ಜನರಿಗೆ ಸ್ವಾತಂತ್ರ್ಯದ ಸವಿಯನ್ನು ಅನುಭವಿಸುವ ಅವಕಾಶ ನೀಡಿದರು ಎಂಬುದಾಗಿ ಅವರು ಹೇಳಿದ್ದಾರೆ. ಪ್ರಧಾನಿ ಗಳ ಈ ನಿಲುವು ಪ್ರತಿಯೊಬ್ಬ ಭಾರತೀಯನಲ್ಲಿಯೂ ‘ನಾವು ಭಾರತೀಯರು’ ಎನ್ನುವ ಭಾವ ಜಾಗೃತವಾಗುವ ಹಾಗೆ ಮಾಡಿರುವುದಾಗಿಯೂ ಅವರು ಸಂತಸ ಹಂಚಿಕೊಂಡಿದ್ದಾರೆ.

ಮಹಾನ್ ಸುಧಾರಕ ಮಹಾ ಪುರುಷ ಶಂಕರ ದೇವ ಅವರು ಬಹಳಷ್ಟು ಹಿಂದೆಯೇ ಭರತ ಭೂಮಿಯ ಬಗ್ಗೆ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಭಾರತವನ್ನು ವಿಶ್ವಗುರುವನ್ನಾಗಿಸಲು ಹೊರಟಿದ್ದಾರೆ ಎಂದು ಬಿಸ್ವಾ ತಿಳಿಸಿದ್ದಾರೆ. ಸದ್ಯ ಭಾರತವನ್ನು ಮುನ್ನಡೆಸುವಲ್ಲಿ ಭಾರತೀಯ ಮಹಿಳೆಯರು ಮುಮಚೂಣಿಯಲ್ಲಿದ್ದಾರೆ. ಮಹಿಳಾ ಸಬಲೀಕರಣ, ನಾರೀ ಶಕ್ತಿಯ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ ಅಪೂರ್ವ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮ ದೇಶಕ್ಕೆ ಪ್ರಧಾನಿ ಮೋದಿ ಅವರಂತಹ ನಾಯಕನ ಅಗತ್ಯತೆ ಇದೆ. ಮುಂದಿನ ದಿನಗಳಲ್ಲಿಯೂ ಪ್ರಧಾನಿ ಮೋದಿ ಅವರೇ ಪ್ರಧಾನಿಯಾಗಿ ಭಾರತವನ್ನು ಮುನ್ನಡೆಸುವಂತಾಗಬೇಕು ಎಂದು ಅವರು ನುಡಿದಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರ ವಹಿಸಿ ಕೊಲ್ಲುವ ವಿಶ್ವಾಸವನ್ನು ಸಹ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಹಾಗೆಯೇ ದೆಹಲಿಯಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ಅಂಗೀಕರಿಸಲಾದ ‘ದೆಹಲಿ ಘೋಷಣೆ’ಗೆ ಸಂಬಂಧಿಸಿದಂತೆಯೂ ಪ್ರಧಾನಿ ಮೋದಿ ಅವರನ್ನು ಬಿಸ್ವಾ ಶರ್ಮಾ ಪ್ರಶಂಸಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ‌ ಅವರಿಂದ ಮಾತ್ರವೇ ರಷ್ಯಾ – ಉಕ್ರೇನ್ ಕದನದ ನಡುವೆಯೂ ‘ದೆಹಲಿ ಘೋಷಣೆ’ ಆಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತವು ಪ್ರಪಂಚದ ನಾಯಕರ ಜೊತೆ ಮಾತುಕತೆ ನಡೆಸಿದ ರೀತಿಯೇ ಭಾರತ ವಿಶ್ವ ಗುರುವಾಗುವತ್ತ ಸಾಗುತ್ತಿರುವುದನ್ನು ಸಾಕ್ಷೀಕರಿಸಿದಂತಿತ್ತು ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಭಾರತವನ್ನು ಭಾರತ ಎಂದು ಕರೆಯುವ ಉಪ ಕ್ರಮವನ್ನು ವಿರೋಧಿ ಸಾರುವ ಕಾಂಗ್ರೆಸ್ ನಾಯಕರಾದ ನಕಲಿ ಗಾಂಧಿ ಕುಟುಂಬವನ್ನು ಟೀಕಿಸುವ ಮೂಲಕ, ಇಂಡಿಯಾ ಭಾರತವಾಗಿ ಬದಲಾದಂತೆ, ಕಾಂಗ್ರೆಸ್‌ನ ನಕಲಿ ಗಾಂಧಿ ಪರಿವಾರದವರು ‘ಗಾಂಧಿ’ ಉಪನಾಮ ತೆಗೆದು ತಮ್ಮ ಹೆಸರನ್ನೂ ಬದಲಾಯಿಸಿಕೊಳ್ಳಬೇಕು ಎಂದು ಅವರು ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

Tags

Related Articles

Close