ಪ್ರಚಲಿತ

2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಬಯಲು ಮಾಡಿದ ಮಾಜಿ ಪ್ರಧಾನಿ ನವಾಜ್ ಷರೀಫ್!! ಪಾಕ್‍ನ ಮತ್ತೊಂದು ಕರಾಳ ಮುಖ ಅನಾವರಣ!!

ನವೆಂಬರ್ 26 2008 ನೆನಪಿಸುವಾಗಲೇ ಮೈ ಜುಮ್ಮೆನ್ನುತ್ತೆ!! ಭಾರತದ ಸಾಂಪ್ರದಾಯಿಕ ಎದುರಾಳಿ, ಪಾಕಿಸ್ತಾನ ಭಾರತಕ್ಕೆ ಸದಾ ಕಿಟಲೆ ಕೊಡುತ್ತಲೇ ಬರುತ್ತಿದೆ. ಭಾರತದಲ್ಲಿ ನಡೆಯುವ ಅದೆಷ್ಟೋ ದಾಳಿಗಳಲ್ಲಿ ಪಾಕಿಸ್ತಾನದ ಕುಮ್ಮಕ್ಕು ಇರುವುದು ಸಾಬೀತಾಗಿದೆ. ಸದಾ ಭಾರತದ ವಿರುದ್ಧ ಕಾಲ್ಕೆರೆದು ಯುದ್ಧಕ್ಕೆ ಬರುವ ಪಾಕಿಸ್ತಾನದ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ!!ಇದೀಗ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ಸರ್ಕಾರ, ಸೈನ್ಯದ ನೀತಿಗಳನ್ನು ಟೀಕಿಸುವ ಆವೇಗದಲ್ಲಿ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

26/11ರ ದಾಳಿ ಪ್ರಕರಣವನ್ನು ಪಾಕಿಸ್ತಾನ ಏಕೆ ಪೂರ್ಣಗೊಳಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಷರೀಫ್ `ಪಾಕಿಸ್ತಾನದಲ್ಲಿ ಎರಡು ಮೂರು ಪರ್ಯಾಯ ಸರ್ಕಾರಗಳು ಆಡಳಿತ ನಡೆಸುವ ವ್ಯವಸ್ಥೆ ಸ್ಥಗಿತವಾಗಬೇಕು. ಇನ್ನು ಸರ್ಕಾರದಲ್ಲಿ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಆದರೂ ಉಗ್ರ ಸಂಘಟನೆಗಳನ್ನು ಭಾರತದ ಗಡಿ ದಾಟಿಸಿ ಮುಂಬೈನಲ್ಲಿ ದಾಳಿ ನಡೆಸಲು ಬಿಡಬೇಕಾಗಿತ್ತೇ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿಯೇ ಈ ರೀತಿಯ ಹೇಳಿಕೆ ನೀಡಿರುವುದು ಪಾಕಿಸ್ತಾನ ಮತ್ತು ಸೈನ್ಯಕ್ಕೆ ಭಾರಿ ಮುಜುಗರ ಉಂಟು ಮಾಡಿದ್ದು, ವಿಶ್ವದ ಎದುರು ಪಾಕಿಸ್ತಾನ ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡಿದೆ.

2008 ನವೆಂಬರ್ 26ರಂದು ಆಗಿದ್ದೇನು?

2008ರ ನವೆಂಬರ್ 26 ಭಾರತದ ಪಾಲಿಗೆ ಒಂದು ಕಪ್ಪುಚುಕ್ಕೆ. ಅದೇ ದಿನ ಪಾಕಿಸ್ತಾನ ಮೂಲದ ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸುಮಾರು 12 ಜನ ಉಗ್ರರು ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದಲ್ಲದೆ ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬು ಮತ್ತು ಗುಂಡಿನ ಮಳೆಗರೆದು ಸಾರ್ವಜನಿಕ ಜೀವನ ಹಾಗು ಅಪಾರ ಆಸ್ತಿ-ಪಾಸ್ತಿ ನಷ್ಟಗಳಿಗೆ ಕಾರಣರಾದರು. ಮುಂಬಯಿ ಮಹಾನಗರ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನ ಮಾಡಿತು. ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗು ದೇಶದ ಆಂತರಿಕ ಪೆÇಲೀಸ್ ಪಡೆ ಹತ್ಯೆ ಮಾಡಿತು. ಅದರಲ್ಲಿ ಒಬ್ಬ ಉಗ್ರ ಅಜ್ಮಲ್ ಕಸಬ್‍ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು.

2008ರ ನವೆಂಬರ್ 26ರಂದು ಆರಂಭವಾದ ದಾಳಿ 29ರ ಶನಿವಾರದವರೆಗೂ ಬಿರುಸಾಗಿ ನಡೆಯಿತು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬಯಿಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. ದಾಳಿಯ ಫಲವಾಗಿ ಸರ್ಕಾರಿ ಅಧಿಕಾರಿಗಳೂ, ಸಿಪಾಯಿಗಳು, ಸಾರ್ವಜನಿಕರೂ ಸೇರಿದಂತೆ 164 ಜನ ಪ್ರಾಣ ಕಳೆದುಕೊಂಡರು ಹಾಗೂ 400ಕ್ಕೂ ಮಿಗಿಲಾಗಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದರು. ಈ ಮಧ್ಯೆ ದಾಳಿಯ ಹೊಣೆಯನ್ನು ಲಷ್ಕರ್-ಎ-ತೊಯ್ಬಾ ತಾನೇ ಹೊತ್ತುಕೊಂಡಿತ್ತು!!

ದಕ್ಷಿಣ ಮುಂಬಯಿನ ಎಂಟು ವಿವಿಧ ಸ್ಥಳಗಳಲ್ಲಿ ದಾಳಿಗಳು ನಡೆದವು. ಮುಂಬಯಿ ಹೃದಯ ಭಾಗವಾದ ಛತ್ರಪತಿ ಶಿವಾಜಿ ಟರ್ಮಿನಸ್, ಗಣ್ಯರು ಹಾಗು ವಿದೇಶಿಗಳು ಹೆಚ್ಚಾಗಿ ಇರುವಂತಹ ಒಬೆರಾಯ್ ಟ್ರೈಡೆಂಟ್, ವಿಶ್ವ ವಿಖ್ಯಾತ ತಾಜ್ ಹೋಟೆಲ್, ಲಿಯೋಪೆÇಲ್ಡ್ ಕೆಫೆ, ಕಾಮಾ ಹಾಸ್ಪಿಟಲ್, ನಾರಿಮನ್ ಹೌಸ್, ಮೆಟ್ರೋ ಸಿನೆಮಾ, ಸೆಂಟ್ ಕ್ಸೇವಿಯರ್ ಕಾಲೇಜು ದಾಳಿಗೆ ಸಾಕ್ಷಿಯಾದ ಸ್ಥಳಗಳು. ಮೇಜ್‍ಗಾವ್‍ನಲ್ಲಿ ಒಂದು ಬಾಂಬನ್ನು ಸ್ಪೋಟಿಸಲಾಯಿತು. 28ರಂದು ದಾಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಮುಂಬಯಿ ಪೆÇಲೀಸರು ಹಾಗು ಸ್ಥಳದಲ್ಲಿ ಲಭ್ಯವಿದ್ದ ಸೇನಾ ಪಡೆ ತಾಜ್ ಹೋಟೆಲ್ ಒಂದನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು. ಆದರೆ ತಾಜ್ ಹೋಟೆಲ್ ಒಳಗೆ ಅವಿತುಕೊಂಡು ನಿರಂತರವಾಗಿ ದಾಳಿ ಮಾಡುತ್ತಿದ್ದ ಉಗ್ರರನ್ನು ಸೆದೆ ಬಡಿಯಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ದೇಶದ ಇತರ ಸ್ಥಳಗಳಿಂದ ಮುಂಬಯಿಗೆ ರಾಷ್ಟ್ರೀಯ ಭದ್ರತಾಪಡೆಗಳನ್ನ ರವಾನಿಸಲಾಯಿತು. ನವೆಂಬರ್ 29ರ ದಿನಾಂತ್ಯ ದಷ್ಟರಲ್ಲಿ ಎಲ್ಲ ದಾಳಿಕೋರರನ್ನು ಕೊಂದು ಅಜ್ಮಲ್ ಕಸಬ್‍ನನ್ನು ಸೆರೆ ಹಿಡಿಯುವಲ್ಲಿ ಭದ್ರತಾ ಪಡೆ ಸಫಲವಾಯಿತು. ಕೊನೆಗೆ ಈತನನ್ನು ಗಲ್ಲಿಗೇರಿಸಿ ಮುಗಿಸಲಾಯಿತು.

Related image

 

ಈ ಘಟನೆಯಲ್ಲಿ 166 ಮಂದಿ ಸಾವನ್ನಪ್ಪಿರುವುದು ಇಡೀ ದೇಶದ ಅಂತಃಕರಣವನ್ನೇ ಕಲಕಿ ಬಿಟ್ಟಿತು. ಆದರೆ ಈ ದಾಳಿಯಲ್ಲಿ ಇನ್ನಷ್ಟು ಮಂದಿ ಜೀವ ಹೋಗಬಹುದಿತ್ತು. ಸೈನಿಕರು ಹಾಗೂ ಪೆÇಲೀಸರು ಉಗ್ರರ ಗುಂಡಿಗೆ ಎದೆಯೊಡ್ಡಿ ಉಗ್ರರನ್ನು ಕೊಂದು ನಾಶಪಡಿಸಿ ನೂರಾರು ಮಂದಿಯ ಜೀವ ಉಳಿಸಲು ಹೇಗೆ ಕಾರಣರಾದರೋ ಅದೇ ರೀತಿ ಮಾನವನ ನಂಬಿಕಸ್ಥ ಪ್ರಾಣಿಯಾಗಿರುವ ಆ ಮಿಲಿಟರಿ ನಾಯಿಗಳೂ ಕೂಡಾ ನೂರಾರು ಮಂದಿಯ ಜೀವವನ್ನು ಉಳಿಸಲು ಕಾರಣವಾಯಿತು. ಹೌದು ಅದು ಕಥೆಯೇ ರೋಚಕ.!! ಇದೀಗ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.

– ಪವಿತ್ರ

Tags

Related Articles

Close