ಪ್ರಚಲಿತ

ಅಧ್ಯಾಯ ೫:ಕಡೆಗೂ‌ ಹಿಂದೂಗಳ ಘೋರ ಅವನತಿಗೆ ಮೂಕ ಸಾಕ್ಷಿಯಾಯಿತು ಭಾರತದ ಮುಕುಟ.! ಹೆಜ್ಜೆ ಹೆಜ್ಜೆಗೂ ನೆಲೆವೂರಿತ್ತು ಇಸ್ಲಾಂ ಛಾಯೆ!

ಅಧ್ಯಾಯ ೫:
      ಸ್ಲಾಮ್ ಧರ್ಮದ ಕುರುಡು ನಂಬಿಕೆಗಳಿಗೆ ಬಲಿಯಾಗದಿದ್ದ  ಕಾಶ್ಮೀರಿ ಹಿಂದೂಗಳಗೆ ಕಿರುಕುಳ ನೀಡಲು ಮತ್ತು ಹತ್ಯಾಕಾಂಡ ನಡೆಸಲು ಮಿರ್ ಅಲಿ ಅಹಮದಾನಿಯು ಜಾಖಿರತುಲ್ಮಾಲುಕ್ ಹೊಸ ಕಾರ್ಯಸೂಚಿಯೊಂದನ್ನು ರೂಪಿಸಿದರು…ಈ ಪುಸ್ತಕದಲ್ಲಿ ಅತ್ಯಂತ ವಿಧ್ವಂಸಕಾರೀ ಅಂಶಗಳಿದ್ದು ಕಾಶ್ಮೀರಿ ಹಿಂದೂಗಳ ಸಾಮಾಜಿಕ ಮತ್ತು ಧಾರ್ಮಿಕ ನೀತಿಗಳನ್ನು ನಾಶಗೊಳಿಸುವ ಮತ್ತು ಬುಡಸಮೇತ ಕಿತ್ತು ಹಾಕುವ ಉದ್ದೇಶ ಹೊಂದಿರುವ ಹಿಂಸೆ,ಗಲಭೆ,ಅನಾಚಾರ ಮತ್ತು ಅರಾಜಕತೆಯನ್ನು  ನಡೆಸಲು ಸೂಚಿಸುತ್ತದೆ.ಮುಸ್ಲಿಮರ ಧಾರ್ಮಿಕ ಅಸಹಿಷ್ಣುತೆ ಮತ್ತು ಧರ್ಮಾಂಧತೆಗೆ ಸಾಕ್ಷಿಯಾಗಿರುವ ಈ ಪುಸ್ತಕವು ಹಿಂದೂಗಳ ಮೇಲೆ ಅನಾಚಾರ ನಡೆಸಲು ಮತ್ತು ಹತ್ಯಾಕಾಂಡಗಳನ್ನು ನಡೆಸಲು ಬಹಿರಂಗವಾಗಿಯೇ ಕರೆನೀಡುತ್ತದೆ.ಮಿರ್ ಅಲಿ ಅಹಮದಾನಿ ಕಾಶ್ಮೀರದ ಇತಿಹಾಸದ ಲೇಖಕರಾಗಿದ್ದರು.ಪ್ರಸಿದ್ಧ ಕಾಳಿಶ್ರೀ ದೇವಾಲಯವನ್ನು ಅಪವಿತ್ರಗೊಳಿಸಿ ಒಡೆದುಹಾಕಿ ದೇವಾಲಯದ ಸ್ಥಂಭದಲ್ಲಿ ಮಸೀದಿಯನ್ನು ನಿರ್ಮಿಸಿದ ಕಾರ್ಯದ ಜವಾಬ್ದಾರಿಯನ್ನವರು ತೆಗೆದುಕೊಂಡಿದ್ದರು.ಹಿಂದೂಗಳ ಧಾರ್ಮಿಕ ಜೀವನದಲ್ಲಿ ನಿರ್ದಯವಾದ ಹಸ್ತಕ್ಷೇಪ ನಡೆಸಿ ದೇವಾಲಯಗಳನ್ನು ಕಿತ್ತುಹಾಕುವ ಮೂಲಕ ಮುಸ್ಲಿಮರು ಹಿಂದೂಗಳ ಧಾರ್ಮಿಕ ಪೂಜಾ ಸ್ಥಳಗಳನ್ನು ಕಿತ್ತುಕೊಂಡರು..ಹೀಗೆ ನಿರ್ಮಿಸಲ್ಪಟ್ಟ ಮಸೀದಿಯು ಹಿಂದೂ ಮುಸ್ಲಿಂ ಕಲಹದ ಮೂಲವಾಗಿದ್ದು ಅನೇಕ ಧಾರ್ಮಿಕ ಕಲಹಗಳಿಗೆ ಕಾರಣವಾಗಿದೆ.ಹೀಗೆ ದೇವಾಲಯಗಳನ್ನು ನಾಶಪಡಿಸುವುದನ್ನು ನೋಡಿ ಕೋಪಗೊಂಡ ಸಿಖ್ ಜನರಲ್ ಫುಲಾ ಸಿಂಗ್ ಮುಸ್ಲಿಮರ ವಿರುದ್ಧ ತನ್ನ ಸಹಚರರಿಗೆ ತರಬೇತಿಯನ್ನೂ ನೀಡಿದ್ದರು.
 ಮೀರ್ ಅಲಿ ಅಹಮದಾನಿ ಕಾಶ್ಮೀರದಲ್ಲಿ ಇಸ್ಲಾಂ ಧರ್ಮದ ಶಾಂತಿಯುತ ಉಪದೇಶವನ್ನು ನಡೆಸುತ್ತಿದ್ದಷ್ಟೂ ಕಾಲ ಅವರು ಇಸ್ಲಾಂ ಧರ್ಮಕ್ಕೆ ಹಿಂದೂಗಳನ್ನು ಮತಾಂತರಿಸಲು ವಿಫಲರಾದರು.ಕ್ರಿಸ್ತ ಶಕ ೧೩೭೨ ರಲ್ಲಿ ತನ್ನ ಮೊದಲ ಭೇಟಿಯ ನಂತರ ಕಾಶ್ಮೀರವನ್ನು ತೊರೆದಾಗ,ಯಾರೂ ಮಂತಾಂತರಗೊಂಡಿರಲಿಲ್ಲ..ಆದರೆ ಕ್ರಿಸ್ತ ಶಕ ೧೩೮೭ ಮತ್ತು ೧೩೭೯ ರ ಎರಡು ಭೇಟಿಗಳ ಬಳಿಕ ಅವರು ಸುಮಾರು ೩೭,೦೦೦ ಕ್ಕೂ ಹೆಚ್ಚು ಹಿಂದೂಗಳನ್ನು ಇಸ್ಲಾಂ ಗೆ ಮತಾಂತರಿಸಿದರು ಎಂದು ಹೇಳಲಾಗುತ್ತದೆ.ಸೂಫಿಗಳ ಆದೇಶದಂತೆ ಇಸ್ಲಾಂ ಧರ್ಮವನ್ನು ಬೋಧಿಸಿಯೂ ಮತಾಂತರಗಳು ನಿರೀಕ್ಷಿತ ಸಂಖ್ಯೆಯಲ್ಲಿ ನಡೆಯದ ಕಾರಣ ೫೦೦೦ ವರ್ಷಗಳ ಹಳೆಯ ಸಂಸ್ಕೃತಿ ಮತ್ತು ನಾಗರೀಕತೆಯ ಧರ್ಮವನ್ನು ಅವರು ನಾಶಪಡಿಸಲು ಬೇರೆ ದಾರಿಗಳನ್ನು ಹಿಡಿದರು. ರಾಜರ ನೆರವು ಮತ್ತು ರಾಜ್ಯಶಕ್ತಿಯ ಬಲದಿಂದ ಸಯ್ಯದ್ಗಳು ಹಿಂದೂಗಳ ವಿರುದ್ಧ ಬಲ ಪ್ರಯೋಗ,ಬಲಾತ್ಕಾರ,ಕಿರುಕುಳ ಮತ್ತು ಹತ್ಯಾಕಾಂಡಗಳನ್ನು ನಡೆಸಿದ್ದರು.
 ಇವುಗಳ ಹಿನ್ನಲೆಯಲ್ಲಿ ಕಾಶ್ಮೀರಿ ಹಿಂದೂಗಳ ಮೇಲಿನ ದಬ್ಬಾಳಿಕೆಯು ಹೊಸದೊಂದು ತಿರುವನ್ನು ಪಡೆದುಕೊಂಡಿತು.ಏಕೆಂದರೆ ಶಿರ್ಹಾಬ್ ಉದ್ ದೀನ್ ನ ನಂತರದ ಕುತುಬ್ ಉದ್ ದೀನ್ ಆಡಳಿತಗಾರ ಮೀರ್ ಅಲಿ ಹಮದಾನಿ ನೀಡಿದ ಸಲಹೆಯನ್ನು ಪಾಲಿಸಲು ಪ್ರಾರಂಭಿಸಿದ್ದ..ಈಗ ಅಹಿಂಸೆಯನ್ನೇ ಪರಮಧರ್ಮ ಎಂದು ಜೀವಿಸುತ್ತಿದ್ದ ಹಿಂದೂಗಳಿಗೆ ಮತಾಂಧ ಮುಸ್ಲಿಮರು ಕಿರುಕುಳ ನೀಡುವ ಅಭಿಯಾನವನ್ನೇ ಪ್ರಾರಂಭಿಸಿದ್ದರು..ದೇವಾಲಯಗಳಿಗೆ ಹೋಗುವ ಮೂಲಕ ಹಿಂದೂಗಳು ಮತಾಂತರಕ್ಕೆ ಅಡ್ಡಿಯಾಗುತ್ತಿದ್ದಾರೆಂದು ಆರೋಪಿಸಲಾಯಿತು,ಬದಲಾಗಿ ದೇವಾಲಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾ ಪಿತೂರಿಯನ್ನು ಮುಸ್ಲಿಮರು ಪ್ರಾರಂಭಿಸಿದಾಗ ಮತಾಂತರ ನಡೆಸುತ್ತಿದ್ದಾರೆಂದು ಪ್ರತಿಭಟಿಸಿದ ಹಿಂದೂಗಳನ್ನು ದಂಗೆ ಎದ್ದಿದ್ದಾರೆ ಎಂದು ಆರೋಪಿಸಿ ಶಿಹಾಬ್ ಉದ್ ದೀನ್ ಹಿಂದೂ ದೇವಾಲಯಗಳನ್ನು ಲೂಟಿಗೈದು ಧ್ವಂಸಗೊಳಿಸಿ ನೆಲಸಮ ಮಾಡಲು ಆದೇಶಿಸಿದನು.ಮುಸ್ಲಿಂ ಚರಿತ್ರೆಕಾರ ಹಾಸನ್ ರ ದಾಖಲೆಗಳ ಪ್ರಕಾರ ಶ್ರೀನಗರದ ಎಲ್ಲಾ ದೇವಾಲಯಗಳು ಮತ್ತು ಪ್ರಸಿದ್ಧ ಬಿಜ್ಜೆಹರ ದೇವಾಲಯಗಳನ್ನು ಲೂಟಿಮಾಡಿ ನಾಶಪಡಿಸಲಾಗಿತ್ತು.ಕಾಶ್ಮೀರದಲ್ಲಿ ಇಸ್ಲಾಮ್ ಧರ್ಮವನ್ನು ಎತ್ತಿ ಹಿಡಿಯಬೇಕಾದರೆ ಹಿಂದೂ ಧರ್ಮವನ್ನು ಮತ್ತು ಹಿಂದೂ ರಕ್ಜಕಾರಣವನ್ನು ಸಂಪೂರ್ಣವಾಸುಗಿ ನಾಶಗೊಳಿಸಬೇಕೆಂದು ಸಯ್ಯದ್ ಗಳು ಅಧಿಕಾರಿ ವರ್ಗದ ಮುಸ್ಲಿಂ ಜನರಿಗೆ ಸಂಪೂರ್ಣವಾಗಿ ಮನದಟ್ಟಾಗಿಸಿದ್ದರು.
  ಮಿರ್ ಅಲಿ ಹಮದಾನಿಯ ಪುತ್ರ ಮಿರ್ ಮೊಹಮ್ಮದ್ ಹಮದಾನಿಯ ಆಗಮನದಿಂದ ಕಾಶ್ಮೀರಿ ಹಿಂದೂಗಳ ಪರಿಸ್ಥಿತಿ ಇನ್ನೂ ಹೆಚ್ಚಾಗಿ ವಿಷಮಿಸಿತು.ಈ ಸಮಯದಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರ ಮತ್ತು ಚಿತ್ರಹಿಂಸೆಗಳು ಉತ್ತುಂಗಕ್ಕೇರಿತ್ತು.ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲು ಮತ್ತು ಕಾಶ್ಮೀರ ರಾಜ್ಯದಿಂದ ಹಿಂದೂ ಧರ್ಮವನ್ನೇ ಹೊರಗಟ್ಟಲು ವ್ಯಾಪಕವಾದ ಯೋಜನೆಗಳನ್ನು ರೂಪಿಸಲಾಯಿತು.ನಿರ್ದಯ ಮತ್ತು ಮತಾಂಧರಾದ ಮುಸ್ಲಿಮರು ಹಿಂದೂಗಳನ್ನು ದಮನಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದರು.ಕಾಶ್ಮೀರದ ಮುಸ್ಲಿಂ ಮತಪ್ರಚಾರಕರು ಕಾಶ್ಮೀರವನ್ನು ಮುಸ್ಲಿಂ ಶಕ್ತಿನೆಲೆಯನ್ನಾಗಿಸುವ ಕಾರ್ಯಕ್ಕೆ ಒತ್ತು ನೀಡಿದ್ದರು ಇದರೊಂದಿಗೆ ಹಿಂದೂಗಳ ನರಮೇಧ ಪ್ರಾರಂಭವಾಯಿತು..ಇಸ್ಲಾಂ ಗೆ ಹೊಸದಾಗಿ ಮತಾಂತರಗೊಂಡ ಮಲಿಕ್ ಸೈಫ್-ಉ-ದೀನ್ ಮೂಲ ಮುಸ್ಲಿಮರಿಗಿಂತಲೂ ಕ್ರೂರವಾಗಿ ವರ್ತಿಸುತ್ತಿದ್ದ..ಮೀರ್ ಮುಹಮ್ಮದ್ ರ ಪ್ರೇರಣೆಯಿಂದ ಮತಾಂತರಗೊಂಡ ಮಲಿಕ್ ಸೈಫ್ ಮಿರ್ ಮೊಹಮ್ಮದರ ಪ್ರೇರಣೆಯಿಂದಲೇ ಹತ್ಯಾಕಾಂಡಗಳನ್ನು ನಡೆಸುತ್ತಿದ್ದ.

Chapter1:https://postcardkannada.in/the-heaven-on-earth-and-motherland-goddess-sharade-in-kashmir/

Chapter2:https://postcardkannada.in/how-kashmir-became-the-crown-of-sharada-mata/

Chapter 3:https://postcardkannada.in/know-the-history-of-hindus-in-kashmir/

Chapter 4:https://postcardkannada.in/do-you-know-what-were-the-conditions-put-on-hindus-in-kashmir/

 

-Deepashree M
Tags

Related Articles

FOR DAILY ALERTS
Close