ಅಂಕಣ

ಗಾಳಿಯಲ್ಲಿ ತೇಲುವ ಕಲ್ಲಿನ ಕಂಬಗಳು!! ಈ ಹಿಂದೂ ಮಂದಿರವೊಂದು ವಿಜ್ಞಾನಕ್ಕೂ ಸವಾಲಾದ ಬಗೆ ಹೇಗೆ ಗೊತ್ತೆ?!

ಭಾರತದಲ್ಲಿ ಕುತೂಹಲ ಕೆರಳಿಸುವಂತಹ ಹಾಗು ನಿಗೂಢವಾದ ಅನೇಕ ಸಂಗತಿಗಳು ಇನ್ನೂ ಹಾಗೇ ಉಳಿದಿವೆ, ಇದನ್ನು ಈಗಿನ ಯಾವ Modern Science ಆಗಲಿ ಅಥವಾ ವಿಜ್ಞಾನಿಗಳಾಗಲಿ ಭೇದಿಸಲು ಸಾಧ್ಯವಾಗಿಲ್ಲ & ಮುಂದೆಯೂ ಬಹುಶಃ ಭೇದಿಸಲು ಸಾಧ್ಯವಾಗುವುದಿಲ್ಲ ಅನಿಸುತ್ತೆ.

ಇಂತಹ ವಿಸ್ಮಯಗಳಲ್ಲಿ ಒಂದಾದ ಒಂದು ಕುತೂಹಲಕಾರಿಯಾಗಿರುವ ಆಂಧ್ರಪ್ರದೇಶದ ‘ಲೇಪಾಕ್ಷಿ’ ಹಿಂದೂ ಮಂದಿರದ ಬಗ್ಗೆ ತಿಳಿಯೋಣ ಬನ್ನಿ

ಲೇಪಾಕ್ಷಿ ಮಂದಿರವಿರೋದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ. ಈ ಮಂದಿರಕ್ಕೆ ದಕ್ಷಿಣ ಭಾರತದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ. ಈ ಮಂದಿರದ ಇತಿಹಾಸ ನಮಗೆ ಮೊದಲು ಕಂಡುಬರುವುದು ರಾಮಾಯಾಣ ಕಾಲಘಟ್ಟದಿಂದ. ಹೌದು. ಇದನ್ನ ವಿಜಯನಗರದ ಅರಸರು 15 ನೆಯ ಶತಮಾನದಲ್ಲಿ ಕಟ್ಟಿಸಿದ್ದು. ಇಲ್ಲಿನ ವಿಸ್ಮಯವೆಂದರೆ ಇಲ್ಲಿನ ಮಂದಿರದ ಕಂಭಗಳು ಗಾಳಿಯಲ್ಲಿ ತೇಲುತ್ತವೆ. ಇದು ಒಂದು ಪರ್ವತದ ಮೇಲೆ ಕಟ್ಟಿರುವ ಮಂದಿರವಾಗಿದ್ದು ಈ ಲೇಪಾಕ್ಷಿ ಮಂದಿರದ ವಿಸ್ಮಯಗಳಿಗೆ ರಾಮಾಯಣವೇ ಕಾರಣವೆಂಬುದು ಕೂಡ ಒಂದು ನಂಬಿಕೆಯಾಗಿದೆ.

ರಾವಣ ಸೀತಾಮಾತೆಯನ್ನ ಅಪಹರಿಸಿಕೊಂಡು ಶ್ರೀಲಂಕಾಗೆ ಹೋಗುತ್ತಿರುವ ಸಂದರ್ಭದಲ್ಲಿ ಪಕ್ಷಿರಾಜ ‘ಜಟಾಯು’ ಇದೇ ಜಾಗದಲ್ಲಿ ಅಂದರೆ ಈಗ ಲೇಪಾಕ್ಷಿ ಮಂದಿರವಿರೋ ಬೆಟ್ಟದಲ್ಲಿಯೇ ತಡೆದು ರಾವಣನ ಜೊತೆ ಕಾದಾಡಿದಾಗ ಜಟಾಯುವನ್ನ ರಾವಣ ಗಾಯಗೊಳಿಸಿದ್ದ. ಇದು ಕೇವಲ ಕಥೆಯಲ್ಲ ಇದರ ಬಗ್ಗೆ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲೂ ಉಲ್ಲೇಖವಿದೆ ಹಾಗು ಇಲ್ಲಿನ ಮಂದಿರದ ಕೆತ್ತನೆಗಳಲ್ಲೂ ನಾವು ಅದನ್ನ ಕಾಣಬಹುದು. ಇದೇ ಬೆಟ್ಟದಲ್ಲಿ ಪಾದದ ಆಕಾರವನ್ನ ಕೂಡ ನಾವು ಕಾಣಬಹುದಾಗಿದ್ದು ಅದರ ಬಗ್ಗೆ ಹಲವು ನಂಬಿಕೆಗಳಿವೆ. ಕೆಲವರು ಹೇಳ್ತಾರೆ ಈ ಪಾದದ ಗುರುತು ತಾಯಿ ದುರ್ಗಾ ಮಾತೆಯದ್ದಂತ, ಇನ್ನು ಕೆಲವರು ಹೇಳುವಂತೆ ಇದು ಪ್ರಭು ಶ್ರೀರಾಮಚಂದ್ರನದ್ದಂತ. ಆದರೆ ಮಂದಿರದ ಇತಿಹಾಸದ ಪ್ರಕಾರ ಇದು ಸೀತಾಮತೆಯ ಪಾದದ ಗುರುತು ಅಂತ ಹೇಳ್ತಾರೆ.

ರಾವಣನು ಜಟಾಯುವನ್ನ ಗಾಯಗೊಳಿಸಿದಾಗ ಸೀತಾಮಾತೆ ರಾವಣನಿಂದ ತಪ್ಪಿಸಿಕೊಂಡು ಬಂದು ಇಲ್ಲಿ ತನ್ನ ಪಾದದ ಗುರುತನ್ನು ಬಿಟ್ಟು ಶ್ರೀರಾಮಚಂದ್ರ ಪ್ರಭು ಇಲ್ಲಿಗೆ ತಲುಪುವವರೆಗೆ ಜಟಾಯು ಬದುಕುಳಿಯುವಂತೆ ಆಶೀರ್ವಾದ ಮಾಡಿ ಹೋಗಿರುತ್ತಾಳೆ. ಶ್ರೀರಾಮ ಈ ಜಾಗಕ್ಕೆ ತಲುಪಿದ ತಕ್ಷಣ ಜಟಾಯು ನಡೆದದ್ದೆಲ್ಲ ರಾಮನಿಗೆ ವಿವರಿಸಿ ರಾವಣನ ಕುಕೃತ್ಯವನ್ನ ತಿಳಿಸಿ ಅಸುನೀಗುತ್ತಾನೆ.

ಇದು ಒಂದು ಭಾಗವಾದರೆ ಇಲ್ಲಿ ನಾವು ಕಾಣಬಹುದಾದ ಅದ್ಭುತವಾದ ‘ರಾಮಲಿಂಗೇಶ್ವರ ಶಿವಲಿಂಗ’.

ಈ ಶಿವಲಿಂಗವನ್ನ ಶ್ರೀರಾಮಚಂದ್ರನು ಜಟಾಯುವಿನ ಅಂತ್ಯಸಂಸ್ಕಾರದ ನನೆನಪಿಗಾಗಿ ಇಲ್ಲಿ ಪ್ರತಿಷ್ಟಾಪಿಸಿದನಂತೆ. ಇದರ ಹತ್ತಿರವೇ ಇನ್ನೊಂದು ಶಿವಲಿಂಗವಿದ್ದು ಅದನ್ನ ‘ಹನುಮಲಿಂಗೇಶ್ವರ’ ಅಂತ ಕರೀತಾರೆ. ಹನುಮಂತನು ಶಿವನನ್ನ ಕುರಿತು ತಪಸ್ಸು ಮಾಡಿ ಈ ಶಿವಲಿಂಗವನ್ನ ಪ್ರತಿಷ್ಠಾಪನೆ ಮಾಡಿದ್ದನಂತೆ. ಇಲ್ಲಿ ನಂದಿಯ 27 ಅಡಿ ಉದ್ದದ ಹಾಗು 15 ಅಡಿ ಅಗಲದ ನಂದಿಯ ಮೂರ್ತಿಯೂ ಇದೆ. ಅಣತಿ ದೂರ ಕ್ರಮಿಸಿದರೆ ‘ಶೇಷನಾಗ’ ನ ಅದ್ಭುತವಾದ ಮೂರ್ತಿಯೂ ಸಿಗುತ್ತೆ.

ಇತಿಹಾಸದ ಪ್ರಕಾರ ಈ ಮೂರ್ತಿಯನ್ನ ಸುಮಾರು 500 ವರ್ಷಗಳ ಹಿಂದೆ ಕೆತ್ತಲಾಗಿದ್ದು ಇದು ವಿಜಯನಗರ ಕಾಲದ್ದು ಎಂದು ಹೇಳಲಾಗುತ್ತೆ. ಮಂದಿರದ ಮಧ್ಯಭಾಗದಲ್ಲಿ ನೃತ್ಯಮಂಟಪವಿದ್ದು ಇದರಲ್ಲಿ ಸುಮಾರು 70 ಕಂಭಗಳಿದ್ದು ಈಗಲೂ ವಿರೂಪಗೊಳ್ಳದೆ ಹಾಗೆಯೇ ನಿಂತಿವೆ. ಆದರೆ ಕಥೆಯಲ್ಲಿ ಟ್ವಿಸ್ಟ್ ಇರೋದು ಇಲ್ಲಿಯೇ, ವಿಸ್ಮಯ ಅಡಗಿರುವುದೂ ಇಲ್ಲಿಯೇ.

ಇಲ್ಲಿರುವ 70 ಕಂಭಗಳಲ್ಲಿ 69 ಕಂಭಗಳು ಸಾಮಾನ್ಯವಾಗಿದ್ದು ಒಂದು ಕಂಭ ಮಾತ್ರ ವಿಸ್ಮಯಕಾರಿ ರೀತಿಯಲ್ಲಿ ಗಾಳಿಯಲ್ಲಿ ತೇಲುತ್ತಿರೋ ಕಂಬವಾಗಿ ಈಗಲೂ ನಿಂತಿದೆ. ಇಲ್ಲಿಯವರೆಗೂ ಈ ಕಂಭ ಹೇಗೆ ಗಾಳಿಯಲ್ಲಿ ತೇಲುತ್ತ ನೆಲಕ್ಕೂ ತಾಕದೆ ಮೇಲೆಯೂ ಯಾವ ಆದರವೂ ಇಲ್ಲದೆ ಹೇಗೆ ನಿಂತಿದೆ ಅನ್ನುವುದು ಈಗಲೂ Modern Science ಗೆ ಅರ್ಥವಾಗದ ವಿಷಯವಾಗಿದೆ ಅಂದರೆ ನೀವು ನಂಬಲೇಬೇಕು. ಹಾಗು ಇನ್ನೊಂದು ಅಚ್ಚರಿಯ ವಿಷಯವೆಂದರೆ ನೀವು ಈ ಕಂಭದ ಕೆಳಭಾಗದಿಂದ ತೆಳುವಾದ ಬಟ್ಟೆಯನ್ನ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹಾಸಿ ನೋಡಬಹುದಾಗಿದೆ.

1902 ರಲ್ಲಿ ಬ್ರಿಟಿಷ್ ಇಂಜಿನಿಯರೊಬ್ಬ ಇದನ್ನು ಅಲುಗಾಡಿಸಲು ಪ್ರಯತ್ನಪಟ್ಟು ಇದು ಹೇಗೆ ಯಾವ ಆಧಾರವೂ ಇಲ್ಲದೆ ನಿಂತಿದೆ ಅಂತ ಪರೀಕ್ಷಿಸಲು ಮುಂದಾಗಿ ಈ ಕಂಭದ ಮೇಲೆ ಕೆಲ ಸಲಕರಣೆಗಳಿಂದ ಕುಟ್ಟಿ ಪುಡಿ ಮಾಡಲು ನೋಡಿದಾಗ ವಿಸ್ಮಯವೆನ್ನೋ ರೀತಿಯಲ್ಲಿ ಈ ಕಂಬಕ್ಕೆ ಎಳ್ಳಷ್ಟು ವಿರೂಪವಾಗದೆ 25 ಅಡಿ ದೂರದಲ್ಲಿರುವ ಉಳಿದ 69 ಕಂಭಗಳಲ್ಲಿಯೂ ಬಿರುಕು ಮೂಡಿದ್ದವಂತೆ. ಇದನ್ನು ನೋಡಿದ ಆ ಬ್ರಿಟಿಷ್ ಇಂಜಿನಿಯರ್ ಏನೂ ಅರ್ಥವಾಗದೇ ವಾಪಸ್ಸಾಗಿದ್ದನಂತೆ. ಇದರರ್ಥ ಈ ಮಂದಿರದ ಇಡೀ ಆಧಾರಸ್ಥಂಬವೇ ಈ ಒಂದು ಕಂಭವಾಗಿದ್ದು ಅದ್ಹೇಗೆ ಈ ಗಾಳಿಯಲ್ಲಿ ತೇಲುವ ಕಂಭದ ಮೇಲೆ ಮಂದಿರ ನಿಂತಿದೆ ಅನ್ನುವುದು ಈಗಿನ ವಿಜ್ಞಾನಿಗಳಿಗೂ ಅರ್ಥವಾಗದ ವಿಷಯವಾಗಿ ಉಳಿದಿದೆ.

ಪೌರಾಣಿಕ ಐತಿಹ್ಯಗಳ ಪ್ರಕಾರ ಇಲ್ಲಿರುವ ಮಂದಿರದ ಮಂಟಪದಲ್ಲಿಯೇ ಶಿವ ಪಾರ್ವತಿಯ ವಿವಾಹವಾಗಿದ್ದು. ಇದನ್ನರಿತ ವಿಜಯನಗರ ಅರಸರು ಈ ವಿವಾಹಮಂಟಪವನ್ನ ಕಟ್ಟಿಸಿದರಂತೆ. ಇದರ ವಿಶೇಷತೆಯತೆಂದರೆ ಈ ವಿವಾಹ ಮಂಟಪದ ಮೇಲ್ಭಾಗದಲ್ಲಿ ಅಂದರೆ ಛಾವಣಿಯಲ್ಲಿ 12 ತುಕಡಿಗಳಿದ್ದು
ಅದರಲ್ಲಿ 100 ಎಲೆಗಳಿದ್ದು ಅದರ ಮಧ್ಯದಲ್ಲಿ ಒಂದು ಕಮಲವಿದೆ. ಈ ಮಂಟಪದ ಪೂರ್ತಿ ಗುರುತ್ವಾಕರ್ಷಣ(gravity)ವು ಕಮಲದಲ್ಲಿದೆ ಎನ್ನುವುದು ವಿಜ್ಞಾನಿಗಳ ವಾದವಾಗಿದೆ. ವಿಜಯನಗರದ ಪತನದ ನಂತರ ಬಂದ ಅರಸರುಗಳು ಈ ಮಂದಿರದ ವೈಭವವನ್ನು ಕಂಡು ಇದನ್ನ ಕಟ್ಟಿದ್ದ ‘ವಿರುಪಣ್ಣ’ ಎಂಬ ಶಿಲ್ಪಿಯ ಕಣ್ಣು ತೆಗೆಸಲು ಆದೇಶ ನೀಡಿದ್ದನಂತೆ. ಇದರ ಪ್ರಕಾರ ವಿರುಪಣ್ಣನ ಕಣ್ಣುಗಳನ್ನೂ ಕೀಳಲಾಯಿತಂತೆ.

ಸ್ಥಳೀಯರ ಪ್ರಕಾರ ಇಲ್ಲಿರುವ ಬೆಟ್ಟಗಳಲ್ಲಿ ವಿರುಪಣ್ಣನ ಕಣ್ಣು ಕೀಳಿಸಿದಾಗಿನ ರಕ್ತದ ಕಲೆಗಳು ಇವೆಯಂತೆ. ಈ ಕಥೆಯನ್ನು ಕೇಳಿದ ಬ್ರಿಟಿಷರು 1914 ಇದನ್ನ ಕಟ್ಟುಕಥೆಯಂತ ನಂಬಿದ್ದರಂತೆ ಆದರೆ ಇದೇನಿದು ಇಲ್ಲಿನ ಜನ ಹೀಗೆ ಹೇಳ್ತಾರಲ್ಲ ಅಂತ ಕೆಲ ಬ್ರಿಟಿಷರು ಇದರ ಜಾಡು ಹಿಡಿದು ಬೆಟ್ಟಗಳಲ್ಲಿ ಹುಟುಕಾಡಿದಾಗ ಅವರು ಕೆಲಕ್ಷಣ ದಂಗುಬಡಿದಂತವರಾಗಿದ್ದರಂತೆ. ಅದಕ್ಕೆ ಕಾರಣ ಅವರಿಗೂ ವಿರುಪಣ್ಣನ ರಕ್ತದ ಕಲೆಗಳು ಸಿಕ್ಕಿದ್ದವಂತೆ ಹಾಗು ಅದು ಮನುಷ್ಯನ ರಕ್ತದ ಕಲೆಗಳೆ ಅಂತಲೂ ಬ್ರಿಟಿಷರು ಹೇಳಿದ್ದರಂತೆ. ಈ ಮಂದಿರಕ್ಕೆ ಸಂಬಂಧಿಸಿದಂತೆ ಇನ್ನೊಂದು ಪೌರಾಣಿಕ ಕಥೆಯೂ ಇದೆ.

ಒಂದು ಕಾಲದಲ್ಲಿ ವೈಷ್ಣವರು ಹಾಗು ಶೈವರ ನಡುವೆ ಯಾರು ಶ್ರೇಷ್ಟ ಎಂಬ ಕಾದಾಟವಿದ್ದ ಸಂದರ್ಭದಲ್ಲಿಇದನ್ನ ಅಂತ್ಯಗೊಳಿಸಲು ಇದೇ ಜಾಗದಲ್ಲಿ
‘ಅಗಸ್ತ್ಯ’ ಮುನಿಗಳು ತಪಸ್ಸು ಮಾಡಿ ಈ ಸಂಘರ್ಷವನ್ನ ಅಂತ್ಯಗೊಳಿಸದ್ದರಂತೆ. ಅಗಸ್ತ್ಯ ಮುನಿಗಳು ಶಿವ ಹಾಗು ವಿಷ್ಣು ಇಬ್ಬರೂ ಒಬ್ಬರಿಗೊಬ್ಬರು ಪೂರಕ ಹಾಗಾಗಿ ಯಾರೂ ಶ್ರೇಷ್ಟರಲ್ಲ ಯಾರೂ ನಿಕೃಷ್ಟರಲ್ಲ ಎಂಬ ತೀರ್ಪನ್ನಿತ್ತಿದ್ದರಂತೆ. ಇದನ್ನ ಪುಷ್ಟೀಕರಿಸಲು ಇಲ್ಲಿಯೇ ಸಮೀಪದಲ್ಲಿ ವಿಷ್ಣುವಿನ ಅದ್ಭುತವಾದ ‘ರಘುನಾಥೇಶ್ವರ’ ಪೀಠವಿದೆ. ಈ ವಿಷ್ಣುವಿನ ಪೀಠದಲ್ಲಿ ಶಿವ ಪ್ರತಿಷ್ಠಾಪಿನಾಗಿದ್ದರೆ ಶಿವನ ಪೀಠದಲ್ಲಿ ವಿಷ್ಣು ಪ್ರತಿಷ್ಠಪಿತನಾಗಿದ್ದಾನೆ.

ಈ ಮಂದಿರದ ವಿಸ್ಮಯಗಳ ಬಗ್ಗೆ ತಿಳಿಯಲು ಈಗಲೂ Modern Science ವಿಫಲವಾಗಿ ಈಗಲೂ ಅಚ್ಚರಿಯ ತಾಣವಾಗಿ ಈ ಮಂದಿರ ನಿಂತಿದೆ ಎಂದರೆ ನೀವು ನಂಬಲೇಬೇಕು.

– postcard team

Tags

Related Articles

Close