ಪ್ರಚಲಿತ

ಲೋಕಸಭಾ ಚುನಾವಣೆಗೆ ರಾಜ್ಯದಿಂದಲೇ ರಣಕಹಳೆ ಮೊಳಗಿಸಲು ತಯಾರಾದ ಮೋದಿ-ಷಾ ಜೋಡಿ.! ಮಿಷನ್ ೩೦೦ ತಂತ್ರಕ್ಕೆ ಛಿದ್ರವಾಗುತ್ತಾ ಮಹಾಘಟ್‌ಬಂಧನ?

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಸರಕಾರ ರಚಿಸುವಷ್ಟು ಬಹುಮತ ಸಾಧಿಸಲು ಸಾಧ್ಯವಾಗದೆ , ಸರಕಾರ ರಚಿಸುವಲ್ಲಿ ವಿಫಲವಾಗಿತ್ತು.‌ ಇಡೀ ರಾಜ್ಯವೇ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ೧೦೪‌ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿತ್ತು, ಆದರೆ ಚುನಾವಣಾ ನಂತರದಲ್ಲಿ ಅಧಿಕಾರದ ಆಸೆಗೆ ಬಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಇದೀಗ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಮುಂದಿನ ಲೋಕಸಭಾ ಚುನಾವಣೆಗೂ ಇದೇ ರೀತಿ ಒಗ್ಗಟ್ಟು ಪ್ರದರ್ಶಿಸುವ ಮುನ್ಸೂಚನೆಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಸ್ಪಷ್ಟವಾಗಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳೆಲ್ಲಾ ಇದೀಗ ಒಟ್ಟಾಗಿದ್ದು, ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಳಿಸಲು ತಂತ್ರ ರೂಪಿಸಿದ್ದಾರೆ.‌ ಯಾಕೆಂದರೆ ದೇಶದ್ರೋಹಿಗಳ ಬೆಂಬಿಡದೆ ಕಾಡುತ್ತಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಯಾವುದೇ ಕಾರಣಕ್ಕೂ ದೇಶದ ಸಂಪತ್ತು ಲೂಟಿ ಮಾಡಿದವರಿಗೆ ಉಳಿಗಾಲವಿಲ್ಲ ಎಂಬುದು ಅರಿವಾಗಿದೆ. ಆದ್ದರಿಂದಲೇ ಹೇಗಾದರೂ ಮಾಡಿ ಮೋದಿಯನ್ನು ಸೋಲಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಆದರೆ ಇತ್ತ ಮೋದಿ ಸರಕಾರ ವಿರೋಧಿಗಳ ಯಾವ ಒಗ್ಗಟ್ಟಿಗೂ ಕ್ಯಾರೇ ಅನ್ನದೆ ದೇಶಕ್ಕೆ ಬೇಕಾದ ಅಭಿವೃದ್ಧಿಯ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ‌ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ ಇರುವುದರಿಂದ ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದೆಂಬ ನಿಟ್ಟಿನಲ್ಲಿ , ಬಿಜೆಪಿ ಚಾಣಕ್ಯ ಅಮಿತ್ ಷಾ ಭಾರೀ ಸೈನ್ಯವನ್ನು ಸಿದ್ಧಗೊಳಿಸಲು ತಯಾರಾಗಿದ್ದಾರೆ.!

ಕರ್ನಾಟಕದಿಂದಲೇ ರಣಕಹಳೆ ಮೊಳಗಿಸಲು ಕೇಂದ್ರ ಚಿಂತನೆ..!

ಕರ್ನಾಟಕದಲ್ಲಿ ಸರಕಾರ ರಚಿಸುವ ಮೂಲಕ ತಮ್ಮ ಬತ್ತಳಿಕೆಗೆ ಮತ್ತೊಂದು ರಾಜ್ಯ ಸೇರಿಸಿಕೊಳ್ಳಲು ತಯಾರಾಗಿದ್ದ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪ ಮಟ್ಟಿಗೆ ಎದುರೇಟು ನೀಡಿತ್ತು. ಆ ಕ್ಷಣಕ್ಕೆ ರಾಜ್ಯ ಬಿಜೆಪಿ ಕಂಗಾಲಾಗಿದ್ದರೂ ಕೂಡ ಕೇಂದ್ರ ಮಾತ್ರ ಯಾವುದೇ ಚಿಂತೆಯಿಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಗೆಲುವು ಸಾಧಿಸಿಬಹುದು ಎಂಬುದರ ಬಗ್ಗೆ ಈಗಿಂದಲೇ ಲೆಕ್ಕಾಚಾರ ಹಾಕಲು ಶುರು ಮಾಡಿದೆ. ಆದ್ದರಿಂದಲೇ ಬಿಜೆಪಿ ಚಾಣಕ್ಯ ಅಮಿತ್ ಷಾ ಇದೀಗ ರೂಪಿಸಿರುವ ತಂತ್ರಕ್ಕೆ ಅಕ್ಷರಶಃ ವಿರೋಧಿಗಳು ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಮುಂದಿನ ಲೋಕಸಭಾ ಚುನಾವಣೆಗೆ ವಿರೋಧಿಗಳು ಒಗ್ಗಟ್ಟು ಪ್ರದರ್ಶಿಸಿದ್ದ ಕರ್ನಾಟಕದಿಂದಲೇ ರಣಕಹಳೆ ಮೊಳಗಿಸಲು ಷಾ ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ವಿಧಾನಸಭಾ ಚುನಾವಣೆಗೆ ಸಾಕಷ್ಟು ರೀತಿಯ ತಯಾರಿಗಳು ನಡೆದಿತ್ತು, ಸಾಮಾಜಿಕ ಜಾಲತಾಣಗಳಲ್ಲಿ, ಕಾರ್ಯಕರ್ತರ ತಂಡಗಳು, ಮತ್ತು ಪೇಜ್ ಪ್ರಮುಖ್‌ಗಳ ಕಾರ್ಯದಿಂದಾಗಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದನ್ನೇ ಮುಂದುವರಿಸಿದರೆ ಬಿಜೆಪಿಗೆ ವರದಾನವಾಗಲಿದೆ. ಯಾಕೆಂದರೆ ಈಗಾಗಲೇ ಕಾರ್ಯಕರ್ತರ ಅತೀ ದೊಡ್ಡ ಪಡೆಯೇ ರಾಜ್ಯದಲ್ಲಿ ನಿರ್ಮಾಣವಾಗಿದೆ. ‌ಬಿಜೆಪಿ ಮುಖಂಡರಲ್ಲೂ ಚುನಾವಣೆಯ ಹುಮ್ಮಸ್ಸು ಕಡಿಮೆಯಾಗಿಲ್ಲ, ಪಕ್ಷಕ್ಕಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದವರಿಗೆ ಸರಕಾರ ರಚನೆಯಾಗದೆ ವಂಚಿತರಾದಾಗ ಭಾರೀ ಬೇಸರ ಉಂಟಾಗಿತ್ತು. ಆದ್ದರಿಂದಲೇ ಮುಂದಿನ ಲೋಕಸಭಾ ಚುನಾವಣೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ತಯಾರಿರದ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರದ ಯಾವುದೇ ಸೂಚನೆಗೂ ಇಲ್ಲ‌ ಎನ್ನುವುದಿಲ್ಲ. ಮೋದಿ ಮತ್ತು ಅಮಿತ್ ಷಾ ಈಗಾಗಲೇ ಈ ಬಗ್ಗೆ ಕರ್ನಾಟಕ ಬಿಜೆಪಿ ಐಟಿ ಸೆಲ್‌ಗೆ ಸೂಚನೆ ನೀಡಿದ್ದು, ಈಗಿಂದಲೇ ಪಕ್ಷದ ಎಲ್ಲಾ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜನರ ಬಳಿ ತಲುಪುವಂತೆ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.!

ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಜಾಗರೂಕತೆಯಿಂದ ಇರುವಂತೆ ಷಾ ಖಡಕ್ ಎಚ್ಚರಿಕೆ..!

ನರೇಂದ್ರ ಮೋದಿ ನೇತೃತ್ವದ ಪ್ರತಿಯೊಂದು ಜನಪರ ಯೋಜನೆಗಳನ್ನು ದೇಶದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು , ಸಂಸದರು ಮತ್ತು ಮುಖಂಡರು ಅತೀ ಹೆಚ್ಚು ನಿರತರಾಗಬೇಕು ಮತ್ತು ಯಾವುದೇ ನಕಲಿ ನ್ಯೂಸ್‌ಗಳನ್ನು ಹಂಚಿಕೊಂಡು ಪಕ್ಷಕ್ಕೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.‌ ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ಆರಂಭವಾಗಿದ್ದು, ಇವು ಬಿಜೆಪಿಗೆ ವಿರುದ್ಧವಾಗಿ ಸಂದೇಶಗಳನ್ನು ವಿನಿಮಯ ಮಾಡುತ್ತದೆ. ಆದ್ದರಿಂದ ಈ ಬಗ್ಗೆ ಕಾರ್ಯಕರ್ತರು ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಷಾ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ತೊಂದರೆಯಾಗದಂತೆ ಮುಖಂಡರು ಕೆಲಸ ಮಾಡಬೇಕು ಎಂದು ಆದೇಶಿಸಿರುವ ಷಾ, ೨೦೧೯ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈಗಿಂದಲೇ ಪಕ್ಷ ಬಲವರ್ಧನೆ ಆರಂಭಿಸಿದ್ದಾರೆ.

ಇತ್ತ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು , ವಿರೋಧಿ ಬಣಗಳಿಗೆ ನುಂಗಲಾರದ ತುತ್ತು ಎಂಬಂತಾಗಿದೆ.‌ ಭಾರತೀಯ ಜನತಾ ಪಕ್ಷವನ್ನು ಹೊರತುಪಡಿಸಿ ಉಳಿದ ಎಲ್ಲಾ ತೃತೀಯ ರಂಗದ ಪಕ್ಷಗಳು ಇದೀಗ ಪರಸ್ಪರ ಕೈಜೋಡಿಸಿಕೊಂಡಿದ್ದು ಒಟ್ಟಾಗಿ ಚುನಾವಣೆ ಎದುರಿಸಲು ಸಜ್ಜಾಗಿದೆ. ಅದಕ್ಕಾಗಿಯೇ ಬಿಜೆಪಿ ಚಾಣಕ್ಯ ಅಮಿತ್ ಷಾ ಭಾರೀ ತಯಾರಿ ನಡೆಸುತ್ತಿದ್ದು, ಮೋದಿ-ಷಾ ಜೋಡಿ ‘ಮಿಷನ್ ೩೦೦’ ನ್ನು ಯಶಸ್ವಿಯಾಗಿ ಗುರಿ ತಲುಪುತ್ತಾರೆ ಎಂಬ ನಂಬಿಕೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿದೆ…!

–ಸಾರ್ಥಕ್ ಶೆಟ್ಟಿ

Tags

Related Articles

Close